ಈ ರಾಶಿಯವರ ಜತೆ ಹುಷಾರಾಗಿರಿ; ಗಾಸಿಪ್‌ ಮಾಡುವುದೇ ಇವರ ಚಾಳಿ

Published : Jun 20, 2023, 05:32 PM IST
ಈ ರಾಶಿಯವರ ಜತೆ ಹುಷಾರಾಗಿರಿ; ಗಾಸಿಪ್‌ ಮಾಡುವುದೇ ಇವರ ಚಾಳಿ

ಸಾರಾಂಶ

ಕೆಲವರಿಗೆ ಗಾಸಿಪ್ ಹರಡಿಸುವುದರ ಬಗ್ಗೆ ಹೆಚ್ಚು ಆಸಕ್ತಿ ಇರುತ್ತದೆ. ಇಂತವರಿಗೆ ಬೇರೆಯವರ ಲವ್, ಸೆಕ್ಸ್ ಸೇರಿ ಬೇರೆ ಖಾಸಗೀ ವಿಚಾರಗಳ ಬಗ್ಗೆ ಇನ್ನೊಬ್ಬರಿಗೆ ತಿಳಿಸದೇ ಇದ್ದರೆ ಏನೋ ಕಸಿವಿಸಿ. ಇಂತಹ ಗುಣವಿರುವವರು ಯಾವ ರಾಶಿಯವರು ಎಂಬ ಮಾಹಿತಿ ಇಲ್ಲಿದೆ.

ಕೆಲವರಿಗೆ ಗಾಸಿಪ್  (Gossip) ಹರಡಿಸುವುದರ ಬಗ್ಗೆ ಹೆಚ್ಚು ಆಸಕ್ತಿ ಇರುತ್ತದೆ. ಇಂತವರಿಗೆ ಬೇರೆಯವರ ಲವ್, ಸೆಕ್ಸ್ ಸೇರಿ ಬೇರೆ ಖಾಸಗೀ ವಿಚಾರಗಳ ಬಗ್ಗೆ ಇನ್ನೊಬ್ಬರಿಗೆ ತಿಳಿಸದೇ ಇದ್ದರೆ ಏನೋ ಕಸಿವಿಸಿ. ಇಂತಹ ಗುಣವಿರುವವರು ಯಾವ ರಾಶಿಯವರು ಎಂಬ ಮಾಹಿತಿ ಇಲ್ಲಿದೆ.

ನಮ್ಮಲ್ಲಿ ಎಲ್ಲಾ ರೀತಿಯ ಜನರಿದ್ದಾರೆ. ಕೆಲವರು ಮೌನ (silence) ವಾಗಿರುತ್ತಾರೆ, ಕೆಲವರು ಸರಿಯಾದ ಸಮಯಕ್ಕಾಗಿ ಕಾಯುತ್ತಾರೆ, ಅನೇಕರು ಕಾಳಜಿ (concern)  ವಹಿಸುವುದಿಲ್ಲ. ಇದರ ನಡುವೆ ಗಾಸಿಪ್  ಇಷ್ಟಪಡುವ ಜನರ ವರ್ಗವಿದೆ. ಅದು ಅವರ ಸ್ವಭಾವ. ರಾಶಿಚಕ್ರ (Zodiac) ದ ಚಿಹ್ನೆಗಳ ಆಧಾರದ ಮೇಲೆ ಕೆಲವರು ಗಾಸಿಪ್ ಮಾಡುವುದರಲ್ಲಿ ಕುಖ್ಯಾತರಾಗಿದ್ದಾರೆ.

ಮಿಥುನ ರಾಶಿ (Gemini) 

ಇವರು ಸಂವಹನ ಮತ್ತು ಸಾಮಾಜಿಕತೆಯ ಪ್ರೀತಿ (love) ಗೆ ಹೆಸರುವಾಸಿ. ಇವರು ಸ್ವಾಭಾವಿಕವಾಗಿ ಎಲ್ಲದರ ಬಗ್ಗೆ ತುಂಬಾ ಕುತೂಹಲ (curiosity)  ಹೊಂದಿರುತ್ತಾರೆ. ಮತ್ತು ಮಾಹಿತಿಯನ್ನು ಸಂಗ್ರಹಿಸುವ ಬಯಕೆಯನ್ನು ಹೊಂದಿರುತ್ತಾರೆ. ಇದು ಕೆಲವೊಮ್ಮೆ ಗಾಸಿಪ್‌ನಲ್ಲಿ ಹರಡಿಸಲು ಕಾರಣ ಆಗಬಹುದು. ಏಕೆಂದರೆ ಇವರು ಇತರರೊಂದಿಗೆ ಕಥೆ (story) ಗಳು ಮತ್ತು ವಿವರಗಳನ್ನು ಹಂಚಿಕೊಳ್ಳುವುದಕ್ಕೆ ಇಷ್ಟಪಡುತ್ತಾರೆ. ಈ ರಾಶಿಚಕ್ರವು ನಿಮ್ಮ ಬಗ್ಗೆ ಆಸಕ್ತಿ ಹೊಂದಿದ್ದರೆ, ಅವರು ನಿಮ್ಮ ಬಗ್ಗೆ ತಿಳಿದುಕೊಳ್ಳಬೇಕಾದ ಎಲ್ಲವನ್ನೂ ಕೆಲವೇ ದಿನಗಳಲ್ಲಿ ಕಂಡುಕೊಳ್ಳುತ್ತಾರೆ. ಇವರು ಹೆಚ್ಚಿನ ನೆನಪಿನ ಶಕ್ತಿಯನ್ನು ಹೊಂದಿದ್ದು, ವದಂತಿ (Rumor) ಯನ್ನು ಮರೆಯಲ್ಲ.

ಸಿಂಹ ರಾಶಿ (Leo)

ಇವರು ಆತ್ಮವಿಶ್ವಾಸ (Confidence) ಮತ್ತು ವರ್ಚಸ್ವಿ ವ್ಯಕ್ತಿಗಳಾಗಿದ್ದು, ಇವರು ನೇರವಾಗಿ ಗಾಸಿಪ್‌ನಲ್ಲಿ ತೊಡಗಿಸಿಕೊಳ್ಳಲ್ಲ. ಆದರೆ ತಮ್ಮ ಪರವಾಗಿ ಗಾಸಿಪ್ ಮಾಡಬಹುದಾದ ಸ್ನೇಹಿತ (friend) ರ ವಲಯವನ್ನು ಹೊಂದಿರುತ್ತಾರೆ.

 

ತುಲಾ ರಾಶಿ (Libra) 

ಇವರು ತಮ್ಮ ಸಂಬಂಧ (relationship) ಗಳಲ್ಲಿ ಸಾಮರಸ್ಯವನ್ನು ಗೌರವಿಸುವ ವ್ಯಕ್ತಿಗಳು. ಇವರು ಇತರರನ್ನು ಮೆಚ್ಚಿಸಲು (impress)  ಮತ್ತು ಜಗಳ ತಪ್ಪಿಸುವ ಗುಣ ಹೊಂದಿದ್ದಾರೆ. ಶಾಂತಿಗಾಗಿ ಇತರರ ಬಗ್ಗೆ ಮಾಹಿತಿಯನ್ನು ಪಡೆಯಲು ಗಾಸಿಪ್’ಗೆ ಒಳಗಾಗಬಹುದು.

ವೃಶ್ಚಿಕ ರಾಶಿ (Scorpio) 

ಇವರು ಸ್ವಭಾವತಃ ರಹಸ್ಯ (secret) ಗಳನ್ನು ಕೇಳು ಇಷ್ಟ ಪಡುತ್ತಾರೆ. ಈ ಕುತೂಹಲ (curiosity) ವು ಇತರರ ವೈಯಕ್ತಿಕ ಜೀವನಕ್ಕೂ ವಿಸ್ತರಿಸಬಹುದು. ವೃಶ್ಚಿಕ ರಾಶಿಯವರು ತಮ್ಮ ಜ್ಞಾನದ ಅಗತ್ಯವನ್ನು ಪೂರೈಸಲು ಮತ್ತು ಶಕ್ತಿ ಅಥವಾ ನಿಯಂತ್ರಣ (Control) ದ ಅರ್ಥವನ್ನು ಪಡೆಯಲು ಗಾಸಿಪ್‌ನಲ್ಲಿ ತೊಡಗಬಹುದು.

ಸಂಗಾತಿಯ ಸಕ್ಸಸ್ ಕಂಡ್ರೆ ‘ಈ ರಾಶಿ’ಯವರಿಗೆ ಹೊಟ್ಟೆ ಉರಿ

 

ಮೀನ ರಾಶಿ (Pisces)

ಇವರು ಸಹಾನುಭೂತಿ  (Sympathy) ಮತ್ತು ಸೂಕ್ಷ್ಮ ವ್ಯಕ್ತಿಗಳು. ಅವರು ಇತರರ ಭಾವನೆಗಳಿಗೆ ಹೆಚ್ಚು ಹೊಂದಿಕೊಳ್ಳುತ್ತಾರೆ. ಅವರು ಗಾಸಿಪ್‌ನಲ್ಲಿ ಸಕ್ರಿಯ (Active) ವಾಗಿ ಭಾಗವಹಿಸದಿದ್ದರೂ, ಇವರ ಸ್ವಭಾವವು ಕೆಲವೊಮ್ಮೆ ಇತರರು ಹಂಚಿಕೊಳ್ಳುವ ಗಾಸಿಪ್‌ ಕೇಳುವಂತೆ ಮಾಡುತ್ತದೆ. ಇವರು ತಮ್ಮ ಸ್ನೇಹಿತರು ಮತ್ತು ಶತ್ರು (enemy) ಗಳ ಡೇಟಿಂಗ್ ಜೀವನ ಮತ್ತು ದುಸ್ಸಾಹಸಗಳ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ಬಯಸುತ್ತಾರೆ.

ಮೇಷ (Aries) , ವೃಷಭ, ಕರ್ಕ, ಕನ್ಯಾ (Virgo) , ಧನು ಮತ್ತು ಕುಂಭ ರಾಶಿ (Aquarius) ಯವರು ಕೆಲವೊಮ್ಮೆ ಗಾಸಿಪ್ ಮಾಡಬಹುದು. ಆದರೆ ಅವರು ಅದರಲ್ಲಿ ಮುಂದುವರೆಯಲ್ಲ.

PREV
Read more Articles on
click me!

Recommended Stories

Baba Vanga Prediction 2026: ಯಂತ್ರಗಳು ಮನುಷ್ಯರನ್ನು ತಿನ್ನುತ್ತವೆ! ಬಾಬಾ ವಂಗಾ ಭಯಂಕರ ಭವಿಷ್ಯವಾಣಿ!
ವೃಶ್ಚಿಕ ರಾಶಿಯಲ್ಲಿ ಡಬಲ್ ರಾಜಯೋಗ, ಈ 3 ರಾಶಿಗೆ ಅದೃಷ್ಟ ಚಿನ್ನದಂತೆ, ಫುಲ್‌ ಜಾಕ್‌ಪಾಟ್‌