Zodiac Sign: ಈ ರಾಶಿಗಳ ಯುವತಿಯರು ಬೆಸ್ಟ್ ಗರ್ಲ್ ಫ್ರೆಂಡ್ ಆಗ್ತಾರೆ!

Published : Jun 20, 2023, 05:27 PM IST
Zodiac Sign: ಈ ರಾಶಿಗಳ ಯುವತಿಯರು ಬೆಸ್ಟ್ ಗರ್ಲ್ ಫ್ರೆಂಡ್ ಆಗ್ತಾರೆ!

ಸಾರಾಂಶ

ಗರ್ಲ್ ಫ್ರೆಂಡ್ ಚೆನ್ನಾಗಿರಬೇಕು, ಪ್ರತಿ ಹೆಜ್ಜೆಯಲ್ಲೂ ತಮ್ಮನ್ನು ಕಾಳಜಿ ಮಾಡಬೇಕು, ಪ್ರೀತಿ ತೋರಬೇಕು, ರೋಮ್ಯಾಂಟಿಕ್ ಜೀವನ ತಮ್ಮದಾಗಿರಬೇಕು ಎಂದೆಲ್ಲ ಎಲ್ಲ ಪುರುಷರೂ ಕನಸು ಕಾಣುತ್ತಾರೆ. ಆದರೆ, ಉತ್ತಮ ಗರ್ಲ್ ಫ್ರೆಂಡ್ ಗಳು ಈ ಕೆಲವೇ ರಾಶಿಗಳಲ್ಲಿ ಸಿಗುತ್ತಾರೆ.   

ತಮ್ಮ ಗರ್ಲ್ ಫ್ರೆಂಡ್ ಚೆನ್ನಾಗಿರಬೇಕು ಎನ್ನುವುದು ಎಲ್ಲ ಪುರುಷರ ಆಸೆ. ಇಲ್ಲಿ ಚೆನ್ನಾಗಿರಬೇಕು ಎಂದರೆ ಕೇವಲ ಬಾಹ್ಯ ಸೌಂದರ್ಯ ಮಾತ್ರವಲ್ಲ, ಆಂತರಿಕವಾಗಿಯೂ ಉತ್ತಮವಾಗಿರಬೇಕು, ಗರ್ಲ್ ಫ್ರೆಂಡ್ ಆಗಿ ಯೌವನದ ದಿನಗಳ ಸೊಬಗನ್ನು ಹೆಚ್ಚಿಸುವಂತಿರಬೇಕು ಎಂದು ಎಲ್ಲರೂ ಬಯಸುವುದು ಸಹಜ. ಆದರೆ, ಉತ್ತಮ ಗರ್ಲ್ ಫ್ರೆಂಡ್ ಆಗಲು ಎಲ್ಲರಿಗೂ ಸಾಧ್ಯವಿಲ್ಲ. ಕೆಲ ಯುವತಿಯರು ತಮ್ಮ ಬಾಯ್ ಫ್ರೆಂಡ್ ಅನ್ನು ಅಮ್ಮನಂತೆ ಕಾಳಜಿ ಮಾಡಬಹುದು, ಕೆಲವರು ಅವರ ಮೇಲೆ ಡಾಮಿನೇಟ್ ಮಾಡಬಹುದು, ಮತ್ತೆ ಕೆಲವರು ಪ್ರೀತಿಸಿಯೂ ಅಷ್ಟೊಂದೆಲ್ಲ ಆತ್ಮೀಯತೆ ತೋರದೆ ಇರಬಹುದು. ಅತ್ಯುತ್ತಮ ಗರ್ಲ್ ಫ್ರೆಂಡ್ ಆಗುವಲ್ಲಿ ರಾಶಿಚಕ್ರದ ಪ್ರಭಾವವೂ ಕಂಡುಬರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಐದು ರಾಶಿಗಳಲ್ಲಿ ಅತ್ಯುತ್ತಮ ಗರ್ಲ್ ಫ್ರೆಂಡ್ ಆಗುವ ಗುಣಸ್ವಭಾವ ಕಂಡುಬರುತ್ತದೆ. ಸಂಬಂಧ ಚೆನ್ನಾಗಿರಲು ಭಾವನಾತ್ಮಕ ಬಾಂಧವ್ಯ ಗಾಢವಾಗಿರಬೇಕು. ಈ ಐದು ರಾಶಿಗಳೂ ವಿಭಿನ್ನವಾಗಿ ಸಂಬಂಧಗಳನ್ನು ಪೊರೆಯುವ ಗುಣ ಹೊಂದಿವೆ. ಹೀಗಾಗಿ, ಈ ರಾಶಿಗಳ ಜನ ಉತ್ತಮ ರೋಮ್ಯಾಂಟಿಕ್ ಸಂಗಾತಿಯಾಗಬಲ್ಲರು.

•    ಮೇಷ (Aries)
ಅಗ್ನಿಯಂತೆ (Fiery) ಉರಿಯುವ, ಸಾಹಸಮಯ ಸ್ವಭಾವದಿಂದಾಗಿ ಮೇಷ ರಾಶಿಯ ಯುವತಿಯರು ರೋಮಾಂಚಕ (Exiting) ಗರ್ಲ್ ಫ್ರೆಂಡ್ (Girl Friend) ಆಗಿರುತ್ತಾರೆ. ಸಂಬಂಧದಲ್ಲೂ (Relationship) ಅತ್ಯುತ್ಸಾಹದಿಂದ ಇರುತ್ತಾರೆ. ಇವರ ಎನರ್ಜಿ (Energy) ಮಟ್ಟ ಅಧಿಕವಾಗಿರುತ್ತದೆ. ಮೇಷ ರಾಶಿಯ ಯುವತಿಯರು ಅಗತ್ಯವಿರುವಾಗ ಲೀಡ್ (Lead) ಮಾಡಲು ಹಿಂದೇಟು ಹಾಕುವುದಿಲ್ಲ. ಹೊಸ ಅನುಭವಗಳಿಗೆ ಉತ್ಸಾಹಿತರಾಗಿರುತ್ತಾರೆ. ಹಠಾತ್ ಪ್ರವೃತ್ತಿ ಹಾಗೂ ದೃಢವಾದ ನಿಲುವು, ಸ್ವತಂತ್ರ ಧೋರಣೆ ಹೊಂದಿದ್ದು, ಇವರನ್ನು ಸಂಗಾತಿಯಾಗಿ ಪಡೆದವರು ಸಾಮರಸ್ಯದ ಸಂಬಂಧಕ್ಕಾಗಿ ಇಬ್ಬರ ಅಗತ್ಯಗಳನ್ನು ಸಮತೋಲನಗೊಳಿಸಿಕೊಳ್ಳಬೇಕಾಗುತ್ತದೆ. 

ಸಂಗಾತಿಯ ಸಕ್ಸಸ್ ಕಂಡ್ರೆ ‘ಈ ರಾಶಿ’ಯವರಿಗೆ ಹೊಟ್ಟೆ ಉರಿ

•    ವೃಷಭ (Taurus)
ಸಂಗಾತಿಯ (Partner) ಮೇಲೆ ಅವಲಂಬಿತರಾಗಿದ್ದು, ಸಂವೇದನಾಶೀಲತೆ (Sensible) ಹೊಂದಿರುತ್ತಾರೆ. ಸಂಬಂಧವನ್ನು ಆರೈಕೆ ಮಾಡುವ ಸ್ಥಿರವಾದ ಧೋರಣೆ ಹೊಂದಿರುತ್ತಾರೆ. ಉತ್ತಮ ಕೇಳುಗರಾಗಿದ್ದು, ಸಹಾಯಕ್ಕೆ (Help) ಸಿದ್ಧವಾಗಿರುತ್ತಾರೆ. ಬದ್ಧತೆ, ನಂಬಿಕಸ್ಥ ಗುಣದೊಂದಿಗೆ ರೋಮ್ಯಾಂಟಿಕ್ (Romantic) ಸ್ವಭಾವ ಹೊಂದಿರುತ್ತಾರೆ. ಕೆಲವೊಮ್ಮೆ ಹಠಮಾರಿತನದಿಂದ ವರ್ತಿಸುತ್ತಾರೆ. ಸೂಕ್ತ ಮಾತುಕತೆ ಮತ್ತು ಹೊಂದಾಣಿಕೆಯ ಮೂಲಕ ಇವರೊಂದಿಗೆ ಅತ್ಯುತ್ತಮ ಸಂಬಂಧ ಹೊಂದಲು ಸಾಧ್ಯ.

•    ಕರ್ಕಾಟಕ (Cancer)
ಬೆಚ್ಚಗಿನ ಆರೈಕೆ, ಕಾಳಜಿಗೆ (Care) ಇವರನ್ನು ಬಿಟ್ಟರೆ ಬೇರೆ ಯಾರೂ ಇಲ್ಲ. ಸಂಗಾತಿಗಾಗಿ ಪ್ರೀತಿಭರಿತ ವಾತಾವರಣ ನಿರ್ಮಿಸುತ್ತಾರೆ. ಪ್ರೀತಿಪಾತ್ರರ (Lover) ಬಗ್ಗೆ ಆಳವಾದ ಭಾವನೆ ಹೊಂದಿದ್ದು, ಮುಖ್ಯವಾದ ದಿನಾಂಕಗಳನ್ನು ನೆನಪಿಟ್ಟುಕೊಳ್ಳುವ ಮೂಲಕ ಅಚ್ಚರಿಪಡಿಸುತ್ತಾರೆ. ಕಷ್ಟದ ಸನ್ನಿವೇಶಗಳಲ್ಲಿ ಹೆಗಲು ನೀಡುತ್ತಾರೆ. ಸೂಕ್ಷ್ಮತೆ (Sensitivity) ಹೊಂದಿರುವ ಕರ್ಕಾಟಕ ರಾಶಿಯ ಯುವತಿಯರಿಗೆ ಭಾವನಾತ್ಮಕ ಬೆಂಬಲ (Support) ನೀಡುವುದು ಮುಖ್ಯ.

•     ತುಲಾ (Libra)
ವರ್ಚಸ್ಸು (Charm), ತಂತ್ರ ಮತ್ತು ಸಾಮರಸ್ಯಕ್ಕೆ (Harmony) ತುಲಾ ರಾಶಿಯ ಯುವತಿಯರು ಎತ್ತಿದ ಕೈ. ಸಂಬಂಧವನ್ನು (Relation) ನ್ಯಾಯಯುತ ಮತ್ತು ಸಮತೋಲನವಾಗಿ (Balanced) ನಿಭಾಯಿಸುವ ಗುಣ ಹೊಂದಿರುವುದರಿಂದ ಕಷ್ಟದ ಸನ್ನಿವೇಶಗಳನ್ನು ಎದುರಿಸುವಾಗ ಅತ್ಯುತ್ತಮ ಸಂಗಾತಿ ಎನಿಸುತ್ತಾರೆ. ಅತ್ಯಂತ ದೃಢವಾದ ನ್ಯಾಯದ ಪರಿಕಲ್ಪನೆ ಹೊಂದಿದ್ದು, ಶಾಂತಿಯುತ (Peaceful) ಮತ್ತು ಸಾಮರಸ್ಯದ ವಾತಾವರಣ ನಿರ್ಮಿಸಲು ಶ್ರಮಿಸುತ್ತಾರೆ. ಸಂವಹನ ಕೌಶಲ ಚೆನ್ನಾಗಿರುತ್ತದೆ, ಯಾವುದೇ ಸನ್ನಿವೇಶವನ್ನು ವಿಭಿನ್ನವಾಗಿ ನೋಡುವಲ್ಲಿ ಮುಂದಿರುತ್ತಾರೆ. ಆದರೆ, ನಿರ್ಧಾರ ಕೈಗೊಳ್ಳಲು ಹಿಂದೇಟು ಹಾಕುತ್ತಾರೆ, ಯಾವುದೇ ನಿರ್ಧಾರ ಕೈಗೊಳ್ಳದೆ ಉಳಿದಬಿಡಬಹುದು.

ಇವರು ರೊಮ್ಯಾಂಟಿಕ್ ಹೆಸರಿನಲ್ಲಿ ತುಂಬಾ ಅಂಟಿಕೊಳ್ಳುತ್ತಾರೆ…

•    ಮೀನ (Pisces)
ಸಹಾನುಭೂತಿಯಿಂದ ಕೂಡಿದ, ಅಂತಃಪ್ರಜ್ಞೆಯುಳ್ಳ (Intuitive) ಲವರ್ ಎನಿಸುತ್ತಾರೆ ಮೀನ ರಾಶಿಯ ಯುವತಿಯರು. ಸಂಗಾತಿಯ ಅಗತ್ಯಗಳ ಬಗ್ಗೆ ಸಾಕಷ್ಟು ಪ್ರಜ್ಞೆ ಹೊಂದಿರುತ್ತಾರೆ. ಆಳವಾದ ಕರುಣೆ ಇವರಲ್ಲಿರುತ್ತದೆ. ಮೀನ ರಾಶಿಯ ಗರ್ಲ್ ಫ್ರೆಂಡ್ ಗಳು ಬಹಳಷ್ಟು ಕನಸುಗಾರ್ತಿಯರಾಗಿರುತ್ತಾರೆ. ರೋಮ್ಯಾಂಟಿಕ್ ಸಂಗಾತಿ ಎನಿಸುತ್ತಾರೆ. ಕೆಲವೊಮ್ಮೆ ಪಲಾಯನವಾದಿ ಎನಿಸಿಕೊಳ್ಳುತ್ತಾರೆ, ಅತಿ ಸೂಕ್ಷ್ಮತೆಯಿಂದ ಬಳಲಬಹುದು. ಸೂಕ್ತ ಮಾತುಕತೆ ಮೂಲಕ ಇವರಲ್ಲಿ ಸುರಕ್ಷಿತ (Secured) ಭಾವನೆ ಮೂಡಿಸುವುದು ಅಗತ್ಯ.
 

PREV
Read more Articles on
click me!

Recommended Stories

ಇಂದು ಬುಧವಾರ ಈ ರಾಶಿಗೆ ಶುಭ, ಅದೃಷ್ಟ
Baba Vanga Prediction 2026: ಯಂತ್ರಗಳು ಮನುಷ್ಯರನ್ನು ತಿನ್ನುತ್ತವೆ! ಬಾಬಾ ವಂಗಾ ಭಯಂಕರ ಭವಿಷ್ಯವಾಣಿ!