
ರಾಶಿಚಕ್ರಗಳು ವ್ಯಕ್ತಿಯ ಬದುಕಿನಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತವೆ. ಅವು ಒಬ್ಬ ವ್ಯಕ್ತಿಯ ಸ್ವಭಾವ, ಯೋಚನೆಗಳು ಎಲ್ಲವನ್ನೂ ನಿರ್ಧರಿಸಬಲ್ಲವು. ಅಂತೆಯೇ ರಾಶಿಗಳ ಆಧಾರದ ಮೇಲೆ ಯಾವ ರಾಶಿಯ ಪುರುಷ ಸಂಗಾತಿಯಿಂದ ಅತಿ ಮುಖ್ಯವಾಗಿ ಬಯಸುವುದು ಏನನ್ನು ಎಂದು ಇಲ್ಲಿ ಹೇಳಲಾಗಿದೆ.
ಮೇಷ(Aries): ನಿಮ್ಮ ಪ್ರಾಮಾಣಿಕತೆ ಹೊರತು ಮತ್ತೇನೂ ಇವರು ಬಯಸುವುದಿಲ್ಲ. ಮೇಷ ರಾಶಿಯ ಪುರುಷರಿಗೆ ನಂಬಿಕೆಯ ಸಂಗಾತಿ ಸಿಕ್ಕರೆ ಚಿನ್ನ ಸಿಕ್ಕಂತೆ. ನೀವೆಂದೂ ಮೋಸ ಮಾಡದಿದ್ದರೆ ಅವರಿಗಷ್ಟೇ ಸಾಕು. ನೆಮ್ಮದಿಯಾಗಿ ಜೊತೆಗಿರುವರು.
ವೃಷಭ(Taurus): ಇರುವೆ ಹೋಗಿದ್ದರಿಂದ ಹಿಡಿದು ರಾಜಕೀಯದವರೆಗೆ- ಏನು ಬೇಕಾದರೂ ಮಾತನಾಡಬಹುದಾದ, ಎಲ್ಲವನ್ನೂ ಮಾತನಾಡಬಹುದಾದ ಸಂಗಾತಿಯನ್ನು ಬಯಸುತ್ತಾರೆ ವೃಷಭ ರಾಶಿಯ ಪುರುಷರು. ಸಂಗಾತಿಯೊಂದಿಗೆ ಯಾವುದೇ ಗುಟ್ಟಿಲ್ಲದೆ, ಮಾತಾಡಿಕೊಂಡಿರುವುದು ಇವರಿಗೆ ಸಂಬಂಧದಲ್ಲಿ ಮುಖ್ಯವೆನಿಸುತ್ತದೆ.
ಮಿಥುನ(Gemini): ಮಿಥುನ ರಾಶಿಯ ಪುರುಷರಿಗೆ ಗೌರವ(respect)ವೇ ಎಲ್ಲ. ಸಂಗಾತಿಯು ತನಗೆ ಗೌರವ ಕೊಡಬೇಕು, ಸದಾ ತನ್ನನ್ನು ಗೌರವದಿಂದ ನಡೆಸಿಕೊಳ್ಳಬೇಕೆಂದು ಇವರು ಬಯಸುತ್ತಾರೆ. ಅಷ್ಟೇ ಅಲ್ಲ, ಗೌರವ ಪಡೆದ ಮೇಲೆ ಗೌರವ ಕೊಡುವುದನ್ನೂ ಇವರು ಚೆನ್ನಾಗಿ ಅರಿತಿದ್ದಾರೆ.
Vastu For Career: ವೃತ್ತಿಯಲ್ಲಿ ಹಿಂದೆಂದೂ ಕಂಡಿರದ ಏಳ್ಗೆ ಬೇಕಂದ್ರೆ ಈ ಟಿಪ್ಸ್ ಫಾಲೋ ಮಾಡಿ..
ಕಟಕ(Cancer): ಕಟಕ ರಾಶಿಯ ಹುಡುಗ ಫ್ಯಾಮಿಲಿ ಮ್ಯಾನ್. ಆತನಿಗೆ ಎಲ್ಲರೂ ಬೇಕು. ಗೆಳೆಯರು, ಬಂಧುಗಳು, ಮನೆಯವರು. ತನ್ನನ್ನು ವಿವಾಹವಾಗಿ ಬರುವವಳು ಇವರೆಲ್ಲರೊಂದಿಗೂ ಚೆನ್ನಾಗಿ ಹೊಂದಿಕೊಂಡು ಹೋಗಬೇಕು ಎಂಬುದು ಇವರ ಆಸೆ. ಪತ್ನಿ ತನ್ನವರೊಂದಿಗೆ ಹೇಗೆ ನಡೆದುಕೊಳ್ಳುತ್ತಾಳೆ ಎಂಬುದನ್ನು ಗಮನಿಸುತ್ತಿರುತ್ತಾನೆ ಈತ.
ಸಿಂಹ(Leo): ನೀವು ಸಂಬಂಧ(relationship) ಚೆನ್ನಾಗಿರಲು ಹಾಕುವ ಪ್ರಯತ್ನ, ಅದನ್ನು ಉಳಿಸಿಕೊಳ್ಳಲು ಮಾಡುವ ಪಡಿಪಾಟಲು ಇವೆಲ್ಲವನ್ನೂ ಗಮನಿಸುತ್ತಾರೆ ಸಿಂಹ ರಾಶಿಯ ಪುರುಷರು. ನೀವು ಈ ಸಂಬಂಧಕ್ಕೆ ಕೊಡುವ ಬೆಲೆಯೇ ಅವರಿಗೆ ಎಲ್ಲಕ್ಕಿಂತ ಮುಖ್ಯವಾದುದು. ಇದರಿಂದ ನಿಮಗೆ ಈ ಸಂಬಂಧ ಎಷ್ಟು ಮುಖ್ಯವೆಂಬುದು ಅವರಿಗೆ ಅರ್ಥವಾಗಿ ಪ್ರೀತಿ ಹೆಚ್ಚಲಿದೆ.
ಕನ್ಯಾ(Virgo): ತನ್ನ ಪತ್ನಿಯಾದವಳು ಎಲ್ಲ ಭಾವನೆಗಳನ್ನೂ ತನ್ನೆದುರು ಬಿಚ್ಚಿಡುತ್ತಿದ್ದಾಳೆ, ಯಾವುದೇ ಗುಟ್ಟು ಮಾಡುತ್ತಿಲ್ಲ ಎಂದರೆ ಸಾಕು, ಕನ್ಯಾ ರಾಶಿಯ ಪುರುಷ ನೆಮ್ಮದಿಯಿಂದಿರುತ್ತಾನೆ. ಗುಟ್ಟು(secret)ಗಳಿದ್ದರೆ ನಂಬಿಕೆಯಾದರೂ ಹುಟ್ಟುವುದು ಹೇಗೆ?
Hindu Festivals: ನಾವೇಕೆ ಮಕರ ಸಂಕ್ರಾಂತಿ ಆಚರಿಸಲೇಬೇಕು ಎಂಬುದಕ್ಕೆ 5 ಕಾರಣಗಳು..
ತುಲಾ(Libra): ಪತ್ನಿಯ ನೈತಿಕತೆ, ರೂಢಿಸಿಕೊಂಡಿರುವ ಆದರ್ಶಗಳು(moral values) ತುಲಾ ರಾಶಿಯ ಪುರುಷನಿಗೆ ಇಷ್ಟವಾಗುತ್ತದೆ. ಆದರ್ಶಗಳಿಲ್ಲದ ಮಹಿಳೆ ಆತನಿಗೆ ಇಷ್ಟವಾಗುವುದಿಲ್ಲ. ಪ್ರತಿ ವಿಷಯಕ್ಕೂ ನೈತಿಕತೆ ಪ್ರದರ್ಶನವು ಪತ್ನಿಯ ಪ್ರಬುದ್ಧತೆಯ ಅಳತೆಗೋಲು ಎಂಬುದು ಈತನಿಗೆ ಗೊತ್ತು.
ವೃಶ್ಚಿಕ(Scorpio): ಪತ್ನಿಯಾದವಳು ಮೊದಲು ಸ್ನೇಹಿತೆ(friend)ಯಾಗಿರಬೇಕು ಎಂದು ಬಯಸುವವ ಈತ. ನೀವು ಈತನ ಸ್ನೇಹಿತೆಯಾಗದಿದ್ದರೆ, ಸಂಬಂಧವನ್ನು ಮುಂದೆ ತೆಗೆದುಕೊಂಡು ಹೋಗುವುದು ಈತನಿಗೆ ಕಷ್ಟವೆನಿಸುತ್ತದೆ.
ಧನುಸ್ಸು(Sagittarius): ಧನಸ್ಸಿನ ಪುರುಷನಿಗೆ ಲಿಬಿಡೋ(Libido) ಹೆಚ್ಚು. ಲೈಂಗಿಕ ಕಾಮನೆಗಳಲ್ಲಿ ಆಸಕ್ತಿ ಜಾಸ್ತಿ. ಪತ್ನಿಯಾಗಿ ಬಂದವಳು ಸಂಪೂರ್ಣ ಸಹಕಾರ ನೀಡಿದರೆ ಈತ ನೆಮ್ಮದಿಯಾಗಿಯೂ, ಸಂತೋಷವಾಗಿಯೂ ಇದ್ದು ಬಿಡಬಲ್ಲ. ಅವಳನ್ನು ಹೆಚ್ಚು ಪ್ರೀತಿಸಬಲ್ಲ.
ಮಕರ(Capricorn): ಯಾವುದೇ ವಿಷಯದ ಬಗ್ಗೆ ಬುದ್ಧಿವಂತಿಕೆ(intelligent)ಯಿಂದ ಮಾತಾಡಬಲ್ಲ ಪತ್ನಿ ಈತನಿಗಿಷ್ಟ. ತನಗಿರುವ ಜ್ಞಾನಕ್ಕೆ ಸರಿ ಸಮನಾಗಿ ತಿಳಿದುಕೊಂಡಿರುವವಳು, ಆ ಬಗ್ಗೆ ಮಾತನ್ನು ಎಷ್ಟು ಬೇಕಾದರೂ ಬೆಳೆಸಬಲ್ಲವಳೆಂದರೆ ಮಕರದ ಹುಡುಗನಿಗಿಷ್ಟ.
ಕುಂಭ(Aquarius): ಯಾವುದೇ ವಿಷಯವಾಗಲಿ, ಕಷ್ಟವಿರಲಿ, ಸುಖವಿರಲಿ- ಈತನ ಬೆನ್ನಿಗೆ ನಿಂತು ಸಹಕರಿಸುವ ಪತ್ನಿ ಇದ್ದರೆ ಸ್ವರ್ಗಕ್ಕೇ ಕಿಚ್ಚು ಹಚ್ಚು ಎನ್ನುವವನು ಈತ.
ಮೀನ(Pisces): ನಿಮ್ಮ ಹಾಸ್ಯಪ್ರಜ್ಞೆ(sense of humour) ಚೆನ್ನಾಗಿದ್ದರೆ, ಕಾಮಿಡಿ ಟೈಮಿಂಗ್ ಕೂಡಾ ಸೂಪರಾಗಿದ್ದರೆ ಮೀನ ರಾಶಿಯ ಪತಿಗೆ ನೀವೇ ಸೂಪರ್ ಪತ್ನಿ. ಪತ್ನಿಗೆ ಉತ್ತಮ ಹಾಸ್ಯಪ್ರಜ್ಞೆ ಇರಬೇಕು, ಆಕೆ ತನ್ನನ್ನು ನಕ್ಕು ನಗಿಸುತ್ತಿರಬೇಕು ಎನ್ನುವವ ಈತ.