ಚಕ್ರಗಳು ನಮ್ಮ ದೇಹದ ಶಕ್ತಿಯ ಮೂಲಗಳು(energy centres). ಭಾವನೆಗಳನ್ನು ನಿಯಂತ್ರಿಸುವ ಕೆಲಸ ಮಾಡುತ್ತವೆ. ಇವು ಎಲ್ಲಿರುತ್ತವೆ, ಏನಿವುಗಳ ಕೆಲಸ ನೋಡೋಣ.
ಯೋಗ, ಧ್ಯಾನ ಅಭ್ಯಸಿಸುವವರು, ಆಧ್ಯಾತ್ಮದ ಕಡೆ ವಾಲಿರುವವರ ಮಾತುಗಳಲ್ಲಿ ಚಕ್ರದ ಬಗ್ಗೆ ವಿಷಯಗಳು ಪ್ರಸ್ತಾಪವಾಗುತ್ತಲೇ ಇರುತ್ತವೆ. ದೇಹದಲ್ಲಿ ಏಳು ಚಕ್ರಗಳಿವೆ ಎಂಬುದನ್ನು ನಾವೆಲ್ಲ ಕೇಳಿಯೇ ಇರುತ್ತೇವೆ. ಹಾಗಿದ್ದರೆ ಚಕ್ರಗಳೆಂದಕರೇನು, ಅವು ಎಲ್ಲಿರುತ್ತವೆ, ಅವುಗಳ ಕೆಲಸವೇನು ನೋಡೋಣ ಬನ್ನಿ.
ಈ ಚಕ್ರಗಳು ನಮ್ಮ ದೇಹದ ಶಕ್ತಿಯ ಮೂಲಗಳು(energy centres). ಭಾವನೆಗಳನ್ನು ನಿಯಂತ್ರಿಸುವ ಕೆಲಸ ಮಾಡುತ್ತವೆ. ಚಕ್ರಗಳು ಹಾಗೂ ಅವುಗಳ ಕೆಲಸದ ಬಗ್ಗೆ ಹಿಂದೂ ಹಾಗೂ ಬೌದ್ಧ ಧರ್ಮ(Buddhism)ಗಳಲ್ಲಿ ಬಹಳಷ್ಟು ಉಲ್ಲೇಖಗಳಿವೆ. ದೇಹ ಮತ್ತು ಮನಸನ್ನು ಆರೋಗ್ಯವಾಗಿಡುವ ಜೊತೆಗೆ, ವ್ಯಕ್ತಿತ್ವ ವಿಕಸನ ಕೂಡಾ ಈ ಚಕ್ರಗಳನ್ನು ಆ್ಯಕ್ಟಿವೇಟ್ ಮಾಡುವುದರ ಮೂಲಕ ಸಾಧ್ಯವಾಗುತ್ತದೆ. ಚಕ್ರಗಳನ್ನು ಬ್ಯಾಲೆನ್ಸ್ ಮಾಡುವ ಮೂಲಕ ದೇಹ, ಮನಸ್ಸು ಹಾಗೂ ಆರೋಗ್ಯ(health)ವನ್ನು ಕೂಡಾ ಬ್ಯಾಲೆನ್ಸ್ ಮಾಡಬಹುದು. ಇದರಿಂದ ದೇಹದಲ್ಲಿ ಎನರ್ಜಿ ಸರಾಗವಾಗಿ ಓಡಾಡುತ್ತದೆ.
ಚಕ್ರಗಳ ನಡುವೆ ಸಮನ್ವಯ ಇಲ್ಲದೆ ಹೋದಾಗ ಅವು ನಮ್ಮ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತವೆ.
ಮೂಲಾಧಾರ ಚಕ್ರ(The root chakra)
ಮೂಲಾಧಾರ ಚಕ್ರವು ಬೆನ್ನುಹುರಿ(spine)ಯ ಕೆಳಭಾಗದಲ್ಲಿದೆ. ಇದರ ಮುಖ್ಯ ಕೆಲಸವೆಂದರೆ ಭೂಮಿಯೊಂದಿಗೆ ದೇಹ, ಮನಸ್ಸು ಹಾಗೂ ಆತ್ಮಕ್ಕೆ ಸಂಪರ್ಕವೇರ್ಪಡಿಸುವುದು. ಹೆಣ್ಣಿನ ಸ್ವಭಾವ ಹೊಂದಿರುವ ಇದು ನಮ್ಮನ್ನು ವಿದೇಯರನ್ನಾಗಿಸುವ ಜೊತೆಗೆ, ಭೂಮಿಯ ಶಕ್ತಿಯೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಈ ಚಕ್ರ ಸಕ್ರಿಯವಾದಾಗ ವ್ಯಕ್ತಿಯು ಜೀವನದಲ್ಲಿ ಹೆಚ್ಚು ಉತ್ಸಾಹ ಅನುಭವಿಸುತ್ತಾನೆ. ಚಕ್ರ ಜಡವಾಗಿದ್ದರೆ ವ್ಯಕ್ತಿಯೂ ಜಡವಾಗಿರುತ್ತಾನೆ. ಇದರ ಬಣ್ಣ ಕೆಂಪು.
ಮಕ್ಕಳ ಏಕಾಗ್ರತೆ ಹೆಚ್ಚಿಸಲು Vaastu tips
ಸ್ವಾದಿಷ್ಠಾನ ಚಕ್ರ(The sacral chakra)
ಇದು ನಾಭಿ(belly button)ಯಿಂದ ಮೂರು ಇಂಚು ಕೆಳಗೆ ಇರುತ್ತದೆ. ಈ ಚಕ್ರವು ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ ಸಂಬಂಧ ಪಟ್ಟಿದುದಾಗಿದೆ. ಸೃಜನಶೀಲತೆ ಹಾಗೂ ಪ್ರಣಯದ ವಿಷಯಗಳಿಗೆ ಕೂಡಾ ಇದು ನಿಮ್ಮನ್ನು ಪ್ರಕಟ ಪಡಿಸುತ್ತದೆ. ನೀರಿನೊಂದಿಗೆ ಸಂಪರ್ಕ ಹೊಂದಿರುವ ಇದು ಆರೇಂಜ್ ಬಣ್ಣದಲ್ಲಿರುತ್ತದೆ.
undefined
Success Mantras For Children: ಮಕ್ಕಳ ಯಶಸ್ಸಿಗೆ ಹೀಗ್ ಮಾಡಿ ಅನ್ನುತ್ತೆ ಜ್ಯೋತಿಷ್ಯ
ಮಣಿಪುರ ಚಕ್ರ(The solar plexus chakra)
ಇದು ಹೊಕ್ಕಳ ಹಿಂದೆ ಇರುತ್ತದೆ. ಇದು ನಮ್ಮ ಆತ್ಮವಿಶ್ವಾಸ(self-confidence), ಜ್ಞಾನ, ಅಸೂಯೆ, ದುರಾಸೆ ಭಾವನೆಗಳಿಗೆ ಕಾರಣವಾಗುತ್ತದೆ. ಕೆಲವೊಂದು ವಿಷಯಗಳ ಬಗ್ಗೆ ಏನೋ ಸರಿಯಿಲ್ಲ ಎನಿಸುತ್ತದಲ್ಲ- ಗಟ್ ಫೀಲಿಂಗ್- ಅದಕ್ಕೆ ಇದೇ ಚಕ್ರ ಕಾರಣವಾಗಿದೆ. ಈ ಚಕ್ರದ ಬಣ್ಣ ಹಳದಿ.
ಅನಾಹತ ಚಕ್ರ(The heart chakra)
ಈ ಚಕ್ರವು ಹೃದಯ ಭಾಗದಲ್ಲಿದ್ದು, ಪ್ರೀತಿ ಹಾಗೂ ಕರುಣೆಯ ಭಾವನೆಗಳಿಗೆ ಕಾರಣವಾಗಿದೆ. ಎದೆ ಮಧ್ಯಭಾಗದಲ್ಲಿರುವ ಈ ಚಕ್ರವು ಮಾನಸಿಕ ಆರೋಗ್ಯ ಹಾಗೂ ಭಾವನಾತ್ಮಕ ಚೈತನ್ಯಕ್ಕೆ ಕಾರಣವಾಗಿದೆ. ಇದರ ಬಣ್ಣ ಹಸಿರು.
ವಿಶುದ್ಧಿ ಚಕ್ರ(The throat chakra)
ನಮ್ಮ ಭಾವನೆಗಳನ್ನು ಮಾತಿನ ಮೂಲಕ ಹೊರಹಾಕುವುದಕ್ಕೆ ಹಾಗೂ ಕ್ರಿಯಾತ್ಮಕತೆಗೆ ಈ ಚಕ್ರ ಸಂಬಂಧಿಸಿದೆ. ಗಂಟಲ ಬಳಿ ಇರುವ ಇದು ನಮ್ಮ ಅಭಿಪ್ರಾಯ ಹಂಚಿಕೊಳ್ಳಲು ಹಾಗೂ ಸತ್ಯ ಹೇಳಲು ಕಾರಣವಾಗಿದೆ. ಇದರ ಬಣ್ಣ ನೀಲಿ(Blue).
ಆಜ್ಞಾ ಚಕ್ರ(The third eye chakra)
ಹಣೆಯ ಮಧ್ಯೆ, ಶಿವನ ಮೂರನೇ ಕಣ್ಣಿದ್ದಲ್ಲಿ ಈ ಚಕ್ರ ಇರುತ್ತದೆ. ಕೋಪ, ಅರಿವು ಹಾಗೂ ಜಾಗರೂಕತೆಯ ವಿಷಯದಲ್ಲಿ ಇದು ಪ್ರಕಟವಾಗುತ್ತದೆ. ನಮ್ಮ ಬಗ್ಗೆ ಈ ಜಗತ್ತಿನ ಹೊರತಾಗಿ ಅರಿವು ಮೂಡಿಸಿಕೊಳ್ಳುವಂಥ ಜ್ಞಾನಕ್ಕೆ ಇದು ಕಾರಣವಾಗುತ್ತದೆ. ಜ್ಞಾನೋದಯವಾಗಲು ಕೂಡಾ ಈ ಚಕ್ರ ಸಕ್ರಿಯವಾಗಿರಬೇಕು. ಇದರ ಬಣ್ಣ ಇಂಡಿಗೋ.
ಸಹಸ್ರ ಚಕ್ರ(The crown chakra)
ಸಹಸ್ರ ಚಕ್ರವು ಆನಂದವನ್ನು ಪ್ರತಿನಿಧಿಸುತ್ತದೆ. ಈ ಚಕ್ರ ಸಕ್ರಿಯವಾದ ವ್ಯಕ್ತಿಯು ಅಪರಿಮಿತ ಆನಂದ ಅನುಭವಿಸುತ್ತಾನೆ. ಇದು ತಲೆಯ ಮೇಲಿದ್ದು, ನಿರ್ವಾಣ ಹೊಂದಲು ಸಹಾಯಕವಾಗಿದೆ. ಈ ಚಕ್ರವನ್ನು ಸಕ್ರಿಯವಾಗಿಸಿದರೆ ನಿಮ್ಮ ಬಗ್ಗೆ ತಿಳಿವು ಮೂಡುವ ಜೊತೆಗೆ ಇತರೆ ಚಕ್ರಗಳನ್ನು ಬ್ಯಾಲೆನ್ಸ್ ಮಾಡುವುದನ್ನೂ ಕಲಿಯಬಹುದಾಗಿದೆ. ಯಾವ ಮನುಷ್ಯನಿಗೂ ಈ ಚಕ್ರವನ್ನು ಸಂಪೂರ್ಣ ಬ್ಯಾಲೆನ್ಸ್ ಮಾಡಲು ಸಾಧ್ಯವಾಗುವುದಿಲ್ಲ. ಇದರ ಬಣ್ಣ ನೇರಳೆ(Violet).