ನಿಮ್ಮ ಜನ್ಮರಾಶಿಗೆ ಅನುಗುಣವಾಗಿ ನಿಮ್ಮ ಹಿಂದಿನ ಜನ್ಮದಲ್ಲಿ ನೀವು ಮನುಷ್ಯನಾಗಿದ್ದಿರೋ ಇಲ್ಲವೋ, ಇಲ್ಲದಿದ್ದರೆ ಯಾವ ಪ್ರಾಣಿಯಾಗಿದ್ದಿರಿ ಎಂಬುದನ್ನು ಕೂಡ ತಿಳಿದುಕೊಳ್ಳಬಹುದು.
ಮೇಷ ರಾಶಿ
ನೀವು ಹಿಂದಿನ ಜನ್ಮದಲ್ಲಿ ಎರಡು ಕಾಲಿನಲ್ಲಿ ನಡೆಯುವ ಜೀವವಾಗಿ ಹುಟ್ಟಿರುತ್ತೀರಿ. ಅದು ಮನುಷ್ಯನಾಗಿರಬಹುದು, ಗೊರಿಲ್ಲಾ ಆಗಿರಬಹುದು. ಆ ಜನ್ಮದ ನೆನಪುಗಳು ನಿಮ್ಮನ್ನು ಆಗಾಗ ಬಾಧಿಸುತ್ತಿರಬಹುದು. ಕೆಲವೊಮ್ಮೆ ಕನಸಿನಲ್ಲಿ ಕೋತಿ ಅಥವಾ ನಿಮಗೆ ಗುರುತು ಪರಿಚಯವೇ ಇಲ್ಲದ ಆದಿಮಾನವರಂಥ ಮನುಷ್ಯರು ಕಾಣಿಸಿಕೊಳ್ಳಬಹುದು. ಅಪರಿಚಿತ ಊರುಗಳು, ಅಪರಿಚಿತ ಮನುಷ್ಯರು ವಿವರವಾಗಿ ಕನಸಿನಲ್ಲಿ ಕಾಣಿಸಿಕೊಂಡರೆ ಅದು ನಿಮ್ಮ ಪೂರ್ವ ಜನ್ಮ ಎಂದೇ ತಿಳಿಯಬಹುದು.
ವೃಷಭ ರಾಶಿ
ನೀವು ಹಿಂದಿನ ಜನ್ಮದಲ್ಲಿ ತಿಳಿನೀರಿನಲ್ಲಿ ವಾಸಿಸುವ ಜೀವಿಯಾಗಿದ್ದಿರಿ. ಅದು ಮೀನಾಗಿರಬಹುದು, ಆಮೆಯಾಗಿರಬಹುದು ಅಥವಾ ಮೊಸಳೆಯಾಗಿರಬಹುದು. ನೀವು ಕನಸಿನಲ್ಲಿ ಪದೇ ಪದೇ ಕ್ರೂರ ಮೊಸಳೆ ಅಥವಾ ಶಾರ್ಕ್‌ನಿಂದ ಬೇಟೆಯಾಗುತ್ತಿರುವಂತೆ ಕನಸು ಕಂಡರೆ ನೀವು ಸಣ್ಣ ಮೀನು ಅಥವಾ ತಿಮಿಂಗಿಲವಾಗಿದ್ದಿರಬಹುದು. ಅಥವಾ ಆಮೆ, ಕಪ್ಪೆಯಾಗಿರುವ ಸಾಧ್ಯತೆಯೂ ಇದೆ. ಈಜುವುದೆಂದರೆ ನಿಮಗೆ ತುಂಬಾ ಇಷ್ಟವಾಗಬಹುದು.
ಮಿಥುನ ರಾಶಿ
ನೀವು ಆಕಾಶದಲ್ಲಿ ಸಂಚರಿಸುವ ಜೀವಿಯಾಗಿ ಇದ್ದಿರಬೇಕೆಂದು ನಿಮ್ಮ ರಾಶಿ ಹೇಳುತ್ತದೆ. ಆಕಾಶ ಜೀವಿ ಎಂದರೆ ಹಕ್ಕಿಗಳಲ್ಲಿ ಯಾವುದಾದರೂ ಒಂದಾಗಿರಬಹುದು. ನಿಮ್ಮ ಕನಸ್ಸಿನಲ್ಲಿ ನಿಮಗೆ ರೆಕ್ಕೆಗಳು ಮೂಡಿದಂತೆ ಕನಸು ಬೀಳುವ ಸಾಧ್ಯತೆಗಳು ಹೆಚ್ಚಿವೆ. ವಿಮಾನದಲ್ಲಿ ಸಂಚರಿಸುವುದು ಅಂದರೆ ನಿಮಗೆ ತುಂಬಾ ಇಷ್ಟವಿರಬಹುದು. ಆಗಾಗ ವಿದೇಶ ಪ್ರಯಾಣ ಮಾಡುವ ಯೋಗ ಇರಬಹುದು.
ಕಟಕ ರಾಶಿ
ಹಿಂದಿನ ಯಾವುದೋ ಜನ್ಮದಲ್ಲಿ ನೀವು ಬಿಲ ಕೊರೆಯುವ ಯಾವುದೋ ಪ್ರಾಣಿಯಾಗಿದ್ದಿರೆಂದು ಈ ರಾಶಿ ಹೇಳುತ್ತಿದೆ. ಅಂದರೆ ಇಲಿ, ಮುಂಗುಸಿ, ಏಡಿ, ಮುಂತಾದ ಅದೇ ಜಾತಿಯ ಇತರ ಪ್ರಾಣಿ ಯಾವುದಾದರೂ ಆಗಿರಬಹುದು. ನೆಲದ ಜೊತೆಗೆ ನಿಮ್ಮ ಸಂಬಂಧ ಬಹಳ ಚೆನ್ನಾಗಿರುತ್ತದೆ. ನೀವು ಉತ್ತಮ ಕೃಷಿಕರಾಗಬಲ್ಲಿರಿ. ಯಾಕೆಂದರೆ ನೆಲವನ್ನು ಉತ್ತು ಬಿತ್ತಿ ನಿಮಗೆ ಪೂರ್ವಜನ್ಮದಲ್ಲೇ ಅನುಭವ ಇರುತ್ತದಲ್ಲಾ!
ಸಿಂಹ ರಾಶಿ
ನಿಮ್ಮ ರಾಶಿಯ ಹೆಸರು ಸಿಂಹ ಆದರೂ, ಹಿಂದಿನ ಜನ್ಮದಲ್ಲಿ ನೀವು ತಲೆಯ ಮೇಲೆ ಕೊಂಬು ಇರುವ ಪ್ರಾಣಿಯಾಗಿದ್ದಿರುವ ಸಾಧ್ಯತೆ ಹೆಚ್ಚು. ಅಂದರೆ ದನ, ಎಮ್ಮೆ, ಜಿಂಕೆ ಇಂಥ ಪ್ರಾಣಿಗಳು. ನೀವು ಹೆಚ್ಚಾಗಿ ಸಸ್ಯಾಹಾರಿಗಳು. ಮಾಂಸಾಹಾರ ಕಡಿಮೆ ಇಷ್ಟಪಡುವವರು. ಕ್ರೂರ ಪ್ರಾಣಿಗಳನ್ನು ಕಂಡರೆ ನಿಮಗೆ ಭಯವಿರುವ ಸಾಧ್ಯತೆ ಇದೆ. ಕನಸಿನಲ್ಲಿ ನೀವು ಕ್ರೂರ ಮೃಗಗಳಿಂದ ಬೇಟೆಯಾಗುತ್ತಿರುವಂತೆ ಕಾಣಬರುತ್ತಿರಲೂ ಬಹುದು.
ಕನ್ಯಾ ರಾಶಿ
ನೀವು ಉಗ್ರವಾದ ಹಲ್ಲು ಹಾಗೂ ಕೂರುಗುರುಗಳನ್ನು ಹೊಂದಿರುವ ಯಾವುದೋ ಪ್ರಾಣಿ ಆಗಿದ್ದಿರುವ ಸಂಭವ ಇದೆ. ಸಿಂಹ, ಹುಲಿ, ಚಿರತೆ, ಇಂತಹುದೇ ಪ್ರಾಣಿಯಾಗಿದ್ದರೆ ನಿಮಗೆ ನಿಮ್ಮ ಹಿಂಸಾತ್ಮಕ ಜನ್ಮದ ಹಿನ್ನೆಲೆಯ ನೆನಪುಗಳು ಅಪರೂಪಕ್ಕಾದರೂ ಒಮ್ಮೊಮ್ಮೆ ಕನಸಿನಲ್ಲಿ ಬರುತ್ತಿರಬಹುದು. ನೀವು ಈ ಪ್ರಾಣಿಗಳ ಫೋಟೋಗ್ರಾಫಿ ಮಾಡುವುದು, ವೀಕ್ಷಣೆ ಮಾಡುವುದನ್ನು ಇಷ್ಟಪಡುತ್ತಿರುತ್ತೀರಿ.
ತುಲಾ ರಾಶಿ
ನೀವು ಮರದಲ್ಲಿ ಜೀವಿಸುವ ಸಸ್ತನಿಯಾಗಿದ್ದಿರುವ ಸಾಧ್ಯತೆ ಹೆಚ್ಚು. ಅಂದರೆ ಕೋತಿ, ಪಂಡಾ, ಗೋರಿಲ್ಲಾ, ಚಿಂಪಾಂಜಿ, ಇಂಥ ಪ್ರಾಣಿ ಆಗಿದ್ದಿರಬಹುದು. ನಿಮಗೆ ಸಸ್ಯಾಹಾರ ಅಂದರೆ ತುಂಬಾ ಇಷ್ಟ. ಅದರಲ್ಲೂ ಬಾಳೆಹಣ್ಣು ತುಂಬಾ ಇಷ್ಟವಿರಬಹುದು. ನೀವು ಹಂಚಿಕೊಂಡು ಆಹಾರ ಸೇವಿಸುವುದನ್ನು ಇಷ್ಟಪಡುತ್ತೀರಿ. ಗುಂಪಿನಲ್ಲಿ ವಾಸಿಸುವುದನ್ನು ಇಷ್ಟಪಡುತ್ತೀರಿ. ಅನ್ಯರ ಕಾಲೆಳೆಯುವುದನ್ನು ಇಷ್ಟಪಡಬಹುದು. ವಿನೋದ ಪ್ರವೃತ್ತಿ ನಿಮ್ಮದಾಗಿರಬಹುದು.
ಈ ಐದು ರಾಶಿಯವರ ಸೆಕ್ಸ್ ಲೈಫ್ ಸೂಪರ್ರೋ ಸೂಪರು!
ವೃಶ್ಚಿಕ ರಾಶಿ
ನೀವು ಮಣ್ಣಿನೊಳಗೆ ವಾಸಿಸುವ ಎರೆಹುಳದಂಥ ಕ್ರಿಮಿ ಅಥವಾ ಮರಗಳ ಕಾಂಡಗಳ ಒಳಗೆ ಕಾಂಡವನ್ನು ಕೊರೆದು ಜೀವಿಸುವ ಪುಟ್ಟ ಪುಟ್ಟ ಕ್ರಿಮಿಯಾಗಿ ಹುಟ್ಟಿ ಜೀವಿತ ಕಳೆದಿರುವ ಸಾಧ್ಯತೆ ಇದೆ. ಇದಲ್ಲದೇ ಹೋದರೆ ನೀವು ಸಣ್ಣ ಕಪ್ಪೆಯ ಜಾತಿಯಲ್ಲಿಯೂ ಇದ್ದಿರಬಹುದು. ಈ ಜನ್ಮಗಳಲ್ಲಿ ನೀವು ಪರರಿಗೆ ಯಾವ ಕಷ್ಟವನ್ನೂ ಕೊಡದೆ ಸಾಧುಗಳಾಗಿದ್ದಿರುವುದರಿಂದ ನಿಮಗೆ ಉತ್ತಮ ಮನುಷ್ಯ ಜನ್ಮ ಪ್ರಾಪ್ತವಾಗಿದೆ. ಸೋ, ಈ ಜನ್ಮವನ್ನು ಉತ್ತಮ ಕೆಲಸಗಳಲ್ಲಿ ಕಳೆಯಬೇಕು ಎಂಬ ಸಂದೇಶ.
ಧನು ರಾಶಿ
ನೆಲದ ಮೇಲೆ ಓಡಾಡುವ, ರೆಕ್ಕೆಗಳು ಬಲವಾಗಿಲ್ಲದ ಹಾಗೂ ತುಂಬ ಎತ್ತರಕ್ಕೆ ಏರಲಾಗದ ಕೆಲವು ಬಗೆಯ ಹಕ್ಕಿಯಾಗಿ ನೀವು ಹುಟ್ಟಿರುವ ಸಾಧ್ಯತೆಯಿದೆ. ಉದಾಹರಣೆಗೆ ಕೋಳಿ, ನವಿಲು, ಉಷ್ಟ್ರಪಕ್ಷಿ, ಎಮು ಇತ್ಯಾದಿ. ನೀವು ಗುಂಪಿನಲ್ಲಿ ಇರುವುದನ್ನು ಅಷ್ಟೊಂದು ಇಷ್ಪಪಡುವವರಲ್ಲ. ದೊಡ್ಡ ಮಾಂಸಾಹಾರಿ ಪಕ್ಷಿಗಳನ್ನು ಕಂಡರೆ ಈಗಲೂ ನಿಮಗೆ ಭಯ ಇರಬಹುದು. ಉದಾಹರಣೆಗೆ ಗಿಡುಗ, ಹದ್ದು ಇತ್ಯಾದಿ.
ಮಕರ ರಾಶಿ
ನೀವು ನೆಲದಲ್ಲಿ ಹರಿದಾಡುವ ಸರೀಸೃಪವಾಗಿ ಜನಿಸಿದ್ದಿರುವ ಸಾಧ್ಯತೆಯೇ ಹೆಚ್ಚು. ಸರೀಸೃಪ ಎಂದರೆ ಹಾವಿನ ಜಾತಿಯ ಜಂತುಗಳು. ಹಾವು, ಹಲ್ಲಿ, ಹರಣೆ, ಓತಿಕ್ಯಾತ, ಊಸರವಳ್ಳಿ ಇತ್ಯಾದಿ ಇದೇ ಜಾತಿಗೆ ಸೇರುತ್ತವೆ. ನೀವು ಮಾಂಸಾಹಾರವನ್ನೇ ಹೆಚ್ಚಾಗಿ ಇಷ್ಟಪಡುತ್ತೀರಿ.
ಭಾರತೀಯ ಪುರಾಣದಲ್ಲಿ ದುರ್ಗಾ ದೇವಿ ಕಾಳಿ ರೂಪ ತಾಳುವುದೇಕೆ?
ಕುಂಭ ರಾಶಿ
ನೀವು ಹಿಂದಿನ ಜನ್ಮದಲ್ಲಿ ದೈತ್ಯಾಕಾರದ ಪ್ರಾಣಿಯಾಗಿದ್ದಿರಬಹುದು, ಆದರೆ ಸಸ್ಯಾಹಾರಿಯೇ ಆಗಿರುತ್ತೀರಿ. ಅಂದರೆ ಆನೆ, ಒಂಟೆ, ಜಿರಾಫೆ, ಜೀಬ್ರಾ, ಕುದುರೆ ಇಂಥ ಪ್ರಾಣಿ ಯಾವುದಾದರೂ ಆಗಿರಬಹುದು. ನೀವು ಒಂಟಿಯಾಗಿ ಇರುವುದನ್ನು ಇಷ್ಟಪಡುತ್ತೀರಿ. ಆದರೆ ಬಲಶಾಲಿಯಾಗಿರುತ್ತೀರಿ. ಯಾರೂ ನಿಮ್ಮನ್ನು ದುರ್ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ನಿಮಗೆ ನೀವೇ ಒಂದು ಸೈನ್ಯ.
ಮೀನ ರಾಶಿ
ಸಮುದ್ರದ ಪ್ರಾಣಿಯಾಗಿರುವ ಸಾದ್ಯತೆ ನಿಮ್ಮಲ್ಲಿ ಕಾಣಿಸುತ್ತಿದೆ. ಅದು ಸಣ್ಣ ಮೀನಿನಿಂದ ಹಿಡಿದು ದೊಡ್ಡ ತಿಮಿಂಗಿಲದವರೆಗೆ, ಸಣ್ಣ ಆಕ್ಟೋಪಸ್‌ನಿಂದ ಹಿಡಿದು ದೊಡ್ಡ ಶಾರ್ಕ್‌ವರೆಗೆ ಯಾವುದೂ ಆಗಿರಬಹುದು. ನೀರಿನ ಬಗ್ಗೆ ನಿಮಗೆ ತುಂಬಾ ಇಷ್ಟವಿರಬಹುದು. ಆದರೆ ಮೀನಿನ ಮಾಂಸವನ್ನು ನೀವು ಇಷ್ಟಪಡುವುದಿಲ್ಲ.
ಈ ರುದ್ರಾಕ್ಷಿ ಧರಿಸಿದರೆ ಶೈಕ್ಷಣಿಕ ಯಶಸ್ಸು ಕಟ್ಟಿಟ್ಟ ಬುತ್ತಿ....