ಈ ಐದು ರಾಶಿಯವರಿಗೆ ಈ ಸೆಕ್ಸ್‌ ಲೈಫ್‌ ಎಂಜಾಯ್‌ ಮಾಡುವ ಸಮಯ. ಯಾವುದಕ್ಕೆ ಸಮಯ ಇಲ್ದಿದ್ರೂ ಇದಕ್ಕಂತೂ ಸಮಯ ಮಾಡಿಕೊಳ್ಳಬಹುದು.

ವೃಷಭ
ಕೊಂಚ ಹೆಚ್ಚೇ ಆಕ್ರಮಣಕಾರಿ ಸೆಕ್ಸ್ ಸ್ಟೈಲ್ ನಿಮ್ಮದು. ಇದು ಎಲ್ಲಾ ಟೈಮ್ನಲ್ಲೂ ನಿಮ್ಮ ಸಂಗಾತಿಗೆ ಇಷ್ಟ ಆಗುತ್ತಾ ಇಲ್ವಾ ಅನ್ನೋದಿಲ್ಲಿ ಮುಖ್ಯ ಅಲ್ಲ. ನೀವಂತೂ ಸಖತ್ ಎಂಜಾಯ್ ಮಾಡ್ತೀರ. ಎಲ್ಲದರಲ್ಲೂ ಹೊಸತನ ಬಯಸೋ ನೀವು ಈ ವಿಚಾರದಲ್ಲೂ ಹೊಸ ಹೊಸ ಪ್ರಯೋಗಕ್ಕೆ ಮುಂದಾಗ್ತೀರ. ಈ ಮೂಲಕ ನಿಮ್ಮ ಆಸಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗೋದ್ರಲ್ಲಿ ನೀವು ಪಂಟರು.

ಮಿಥುನ
ನಿಮ್ಮ ಸೆಕ್ಸ್ ಲೈಫ್‌ ಒಂಥರಾ ಕಾಮಿಡಿ ಅನ್ನಬಹುದು. ಅದರಲ್ಲಿ ಸಹಜತೆಗಿಂತ ನಾಟಕೀಯತೆಯೇ ಹೆಚ್ಚಿರುತ್ತದೆ. ಆದರೆ ನೀವು ನಂಬ್ತಿರೋ ಬಿಡ್ತೀರೋ, ನಿಮ್ಮ ಈ ಬಗೆಯ ಸ್ವಭಾವದಿಂದ ಕಾಮಾಸಕ್ತಿ ಹೆಚ್ಚುತ್ತಾ ಹೋಗುತ್ತದೆ. ಯಾವ ಲೆವೆಲ್‌ಗೆ ಅಂದರೆ ಆಫೀಸ್‌ನಲ್ಲಿ ಕೆಲಸ ಮಾಡ್ತಾ ಇರುವ ಹೊತ್ತಿಗೇ ನಿಮಗೆ ಮೂಡ್ ಬರಬಹುದು, ಸೆಕ್ಸ್ ವೇಳೆಗೂ ಹೆಚ್ಚು ಕಾಲ ಇದರಲ್ಲಿ ತೊಡಗಿಕೊಳ್ಳೋದು ಸಾಧ್ಯವಾಗುತ್ತೆ. ಸದ್ಯಕ್ಕೆ ನಿಮ್ಮ ನಿರಾತಂಕ, ಮೋಸ್ಟ್ ಎಂಜಾಯೇಬಲ್ ಸೆಕ್ಸ್ ಲೈಫ್ ಸಖತ್ ಕ್ರೇಜಿ ಆಗಿರುತ್ತೆ. ಇದನ್ನೇ ಮೈಂಟೇನ್ ಮಾಡಲು ಟ್ರೈ ಮಾಡಿ. ಸಂಗಾತಿಯ ಬಯಕೆಗಳನ್ನೂ ಪೂರೈಸಿ.

ದಾಂಪತ್ಯದಲ್ಲಿ ಮಾಧುರ್ಯ ಹೆಚ್ಚಿಸಬೇಕೆ? ಹೀಗೆ ಮಾಡಿ

ಕನ್ಯಾ
ಲೈಫ್‌ನಲ್ಲಾದ್ರೂ ಅಷ್ಟೇ, ಸೆಕ್ಸ್‌ನಲ್ಲಾದ್ರೂ ಅಷ್ಟೇ, ನೀವು ಕಾದು ನೋಡಿ ಮುನ್ನುಗ್ಗುವ ಚಾಲಾಕಿಗಳು. ನಿಮ್ಮ ಸುಖಕ್ಕೆ ಎಲ್ಲೂ ಅಡ್ಡಿಯಾಗದಂಥಾ ಎಚ್ಚರಿಕೆ ಯಾವಾಗಲೂ ನಿಮ್ಮಲ್ಲಿರುತ್ತದೆ. ಆದರೆ ಕೆಲವೊಮ್ಮೆ ಈ ಅತಿ ಜಾಗರೂಕತೆಯೇ ನಿಮ್ಮನ್ನು ಹೆಚ್ಚಿನ ಸಂತೋಷ ಸಿಗದಂತೆ ಮಾಡಬಹುದು. ಯಾವುದಾದರೂ ಅತಿಯಾದರೆ ಹಾಳು ತಾನೇ? ಈ ಎಚ್ಚರ ಇರಲಿ. ನಿಮ್ಮ ಸಂಯಮ, ಸಮಾಧಾನ, ಎಚ್ಚರಿಕೆಯಿಂದ ಮುಂದಡಿ ಇಡುವ ಪ್ರವೃತ್ತಿ ಉತ್ತಮವೇ ಆದರೂ, ಇದನ್ನು ಸಡಿಲಿಸಿದರೂ ಹಾನಿಯೇನಿಲ್ಲ. ಬದಲಿಗೆ ಖುಷಿ ಹೆಚ್ಚಾಗಲಿದೆ.

ವೃಶ್ಚಿಕ
ಇಷ್ಟು ಕಾಲ ಸೆಕ್ಸ್ ಅಂದ್ರೆ ಕನಸಾಗಿರಬಹುದು, ಆದರೆ ಈಗ ಆ ಬಯಕೆಗಳೆಲ್ಲ ಈಡೇರಿ ನೀವು ಮನಸಾರೆ ಆನಂದ ಅನುಭವಿಸುವ ಕಾಲ. ಇಷ್ಟು ದಿನ ಸೆಕ್ಸ್ ಅನ್ನೋದು ನಿಮಗೆ ಸಿಕ್ಕಿಯೂ ಸಿಕ್ಕದ ಮರೀಚಿಕೆಯಂತಿತ್ತು. ಆದರೆ ಇನ್ನು ಮೇಲೆ ನಿಮ್ಮದೇ ಆಟ. ನಿಮ್ಮ ರಾಶಿಯ ಇನ್ನೊಂದು ವಿಶೇಷ ಅಂದರೆ ನೀವು ಬಯಸಿದವರ ಜೊತೆಗೇ ಸುಖಿಸುವ ಅವಕಾಶ ನಿಮಗೆ ಸಿಗುವುದು. ಯಾವುದು ನಿಮಗೆ ದುರ್ಲಭ ಅಂದುಕೊಂಡಿರುತ್ತೀರೋ ಅದೀಗ ನಿಮ್ಮ ಮುಂದೆ ಶರಣಾಗಿದೆ. ಬಾಲ್ ನಿಮ್ಮ ಅಂಕಣದಲ್ಲೇ ಇದೆ. ಕರೆಕ್ಟಾಗಿಯೇ ಮೂವ್ ಮಾಡುವ ಸಾಮರ್ಥ್ಯವೂ ನಿಮಗಿದೆ.

#Feelfree: ಈ ವಯಸ್ಸಲ್ಲಿ ನಿಂಗೆ ಇದೆಲ್ಲ ಬೇಕಾ ಅಂತ ಕೇಳೋರಿಗೆ... 

ಧನುಸ್ಸು
ನಿಮ್ಮ ಗ್ರಹಗತಿ ಕಳೆದೆರಡು ತಿಂಗಳಿನಿಂದ ಬದಲಾದದ್ದು ನಿಮ್ಮ ಗಮನಕ್ಕೆ ಬಂದಿರಬಹುದು. ನಿಮ್ಮ ಆತ್ಮವಿಶ್ವಾಸ ಈಗ ವೃದ್ಧಿಸಿದೆ. ಜೊತೆಗೆ ಸೆಕ್ಸ್ ಲೈಫ್‌ ನೀವು ಅಂದುಕೊಂಡದ್ದಕ್ಕಿಂತಲೂ ಹೆಚ್ಚು ಉತ್ತಮವಾಗಲಿದೆ. ಹೊಸ ಸರ್ಪೈಸ್‌ಗಳು ನಿಮ್ಮ ಆಸಕ್ತಿಯನ್ನು ಹೆಚ್ಚಿಸಲಿವೆ. ಕೆಲವೊಮ್ಮೆ ನಿಮಗೇ ಮೂಡ್ ಬರದೇ ಹೋಗಬಹುದು, ಆ ಟೈಮ್‌ನಲ್ಲಿ ಕಾಲುಗಳಲ್ಲಿ ನಡುಕ ಉಂಟಾದಂತೆ ಆಗಬಹುದು, ಇದು ಕ್ಷಣಿಕವಷ್ಟೇ. ಇಂಥಾ ಸಣ್ಣಪುಟ್ಟ ಸಮಸ್ಯೆಗಳಿಂದ ಪಾರಾಗುವುದು ಕಷ್ಟವೇನಲ್ಲ. ಅಹಂಕಾರ ತುಸು ಬದಿಗಿಟ್ಟರೂ ಕೆಲವೊಂದು ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇನ್ನೊಂದು ವಿಶೇಷತೆ ಅಂದರೆ ನೀವು ಬಹಳ ಪ್ರೀತಿಸುವವರ ಜೊತೆಗೆ ಸೆಕ್ಸ್‌ಲೈಫ್‌ ಸಾಧ್ಯವಾಗುವ ಕಾರಣ ಹೆಚ್ಚಿನ ಆನಂದ, ಸಂತೋಷ ನಿಮ್ಮದಾಗಲಿದೆ.

#Feelfree: ಆಂಟಿ ಬಾ ಅಂತಾಳೆ, ಓದಿನ ಮೇಲೆ ಮನಸು ನಿಲ್ತಿಲ್ಲ!