ವಾಸ್ತು ಹೀಗಿದ್ದರೆ ಕಾಸು ಬರೋದಲ್ಲದೇ, ದುಡ್ಡು ದುಪ್ಪಟ್ಟಾಗತ್ತೆ…!

By Suvarna NewsFirst Published Sep 16, 2020, 6:34 PM IST
Highlights

ಕೆಲವೊಮ್ಮೆ ಮನೆಯ ದಿಕ್ಕುಗಳು ವಾಸ್ತು ಪ್ರಕಾರವಿದ್ದರೂ, ಹಣ ಮಾತ್ರ ವ್ಯಯವಾಗುತ್ತಲೇ ಇರುತ್ತವೆ. ಇದಕ್ಕೆ ನೀವೇ ಮನೆಯಲ್ಲಿ ಮಾಡಿಕೊಂಡ ಸಣ್ಣಪುಟ್ಟ ದೋಷಗಳೂ ಕಾರಣವಾಗಿರಬಹುದು. ಕೆಲವು ವಸ್ತುಗಳನ್ನು ಇಂಥ ದಿಕ್ಕಿಗೆ ಇಡಬಾರದು, ಇಡಬೇಕು ಎಂಬ ಬಗ್ಗೆಯೂ ವಾಸ್ತು ಶಾಸ್ತ್ರ ಹೇಳುತ್ತದೆ. ಹೀಗಾಗಿ ಈ ಬಗ್ಗೆಯೂ ಗಮನಹರಿಸುವುದು ಉತ್ತಮ. ಹೀಗಾಗಿ ವಾಸ್ತು ಪ್ರಕಾರ ಏನು ಎಂಬ ಬಗ್ಗೆ ಗಮನಿಸೋಣ…

ವಾಸ್ತು ಎಂಬುದು ಬಹಳ ಪ್ರಾಮುಖ್ಯತೆ ಪಡೆಯುತ್ತದೆ. ಹಿಂದಿನ ಕಾಲದಲ್ಲಿ ಬಹುತೇಕರು ಮನೆಗಳನ್ನು ವಾಸ್ತು ಪ್ರಕಾರವೇ ಕಟ್ಟಿಸುತ್ತಿದ್ದರು. ಮಲಗುವ ಕೋಣೆಗಳಿಂದ ಹಿಡಿದು, ದೇವರ ಕೋಣೆ, ಅಡುಗೆ ಮನೆ, ಅಗ್ನಿ ಉರಿಯುವ ಜಾಗ, ಬಚ್ಚಲು ಮನೆ ಹೀಗೆ ಪ್ರತಿಯೊಂದೂ ಇಂಥದ್ದೇ ಜಾಗದಲ್ಲಿ ಬರಬೇಕು ಎಂಬುದನ್ನು ನಿಗಾ ವಹಿಸಿ ಕಟ್ಟಿಸುತ್ತಿದ್ದರು. ಆದರೆ, ಬದಲಾದ ಕಾಲಪರ್ವದಲ್ಲಿ ಜಾಗವಿದ್ದರೆ ಸಾಕು, ಮನೆ ಕಟ್ಟಿಸಿದರಾಯಿತು. ವಾಸ್ತುಗಳ ಗೋಜಿಗೆ ಹೋಗುವುದೇಕೆ ಎಂಬ ತಾತ್ಸಾರವೂ ಕೆಲವರಲ್ಲಿದೆ. ಇಂಥ ಮನೆಗಳಲ್ಲಿ ವಾಸ ಮಾಡುವವವರಿಗೆ ಹಣ ವ್ಯಯ ಸೇರಿ ಕೆಲವು ಕೆಟ್ಟ ಪರಿಣಾಮಗಳಾಗುತ್ತವೆ.

ಮನೆಯ ವಾಸ್ತು ಸರಿಯಾಗಿಲ್ಲದಿದ್ದರೆ ಹಣ ಕಳೆದುಕೊಳ್ಳುವುದರ ಜೊತೆಗೆ ಮನಸ್ಸಿನ ನೆಮ್ಮದಿಯನ್ನೂ ಕಳೆದುಕೊಳ್ಳುತ್ತಾರೆ. ಉದಾಹರಿಸಿ ಹೇಳುವುದಾದರೆ ಕೈತುಂಬಾ ಹಣ ಗಳಿಸಿದರೂ ಆ ದುಡ್ಡು ಬಂದಷ್ಟೇ ವೇಗವಾಗಿ ಖಾಲಿಯಾಗುತ್ತಿದೆ ಎಂದರೆ ಅದಕ್ಕೆ ವಾಸ್ತು ದೋಷವೂ ಕಾರಣ ಇರಬಹುದು ಎಂಬುದನ್ನು ಅರಿಯಬೇಕು. ಹೀಗಾಗಿ ನಾವೇನು ಮಾಡಬಹುದು..? ಇದಕ್ಕೆ ಯಾವ ರೀತಿ ಪರಿಹಾರವನ್ನು ಕಂಡುಕೊಳ್ಳಬಹುದು ಎಂಬ ಬಗ್ಗೆ ಗಮನಿಸೋಣ…

ಇದನ್ನು ಓದಿ: ಗಣೇಶ ರುದ್ರಾಕ್ಷಿ ಧರಿಸಿದರೆ ನಿಮ್ಮ ಅದೃಷ್ಟವೇ ಬದಲಾಗತ್ತೆ…! 

ಈ ಎಲ್ಲ ಉಪಾಯಗಳನ್ನು ಮಾಡಿ…

• ಮನೆಯಲ್ಲಿ ಹಣ ಇಡುವ ಲಾಕರ್ ಇಲ್ಲವೇ ಪೆಟ್ಟಿಗೆಯನ್ನು ಉತ್ತರ ದಿಕ್ಕಿಗೆ ಮುಖ ಮಾಡಿ ಇಡಬೇಕು. ಹೀಗೆ ಉತ್ತರ ದಿಕ್ಕಿಗೆ ಇಡುವುದರಿಂದ ಲಾಭವಾಗುತ್ತದೆ. ಜೊತೆಗೆ ಹಣವೂ ಕೈಯಲ್ಲಿ ನಿಲ್ಲುತ್ತದೆ. ಆದರೆ, ಈ ವಿಷಯವನ್ನು ಚೆನ್ನಾಗಿ ನೆನಪಿನಲ್ಲಿಟ್ಟುಕೊಳ್ಳಿ, ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿನಲ್ಲಿ ಹಣವನ್ನು ಇಡಬಾರದು. ಇದರಿಂದ ನಷ್ಟವೇ ಹೆಚ್ಚು. 



• ಮಲಗುವ ಕೋಣೆಯ ಗೋಡೆಯ ಮೂಲೆಯಲ್ಲಿ ಮೆಟಲ್ ಇಲ್ಲವೇ ಯಾವುದಾದರೂ ಲೋಹದಂತಹ ವಸ್ತುಗಳು ಇರಕೂಡದು. ಅಲ್ಲದೆ, ಬೆಡ್ ರೂಂನ ಮೂಲೆಯಲ್ಲಿಯೂ ಸಹ ಯಾವುದೇ ರೀತಿಯ ಬಿರುಕು ಬಿಟ್ಟಿರಕೂಡದು. ಹೀಗಿದ್ದರೆ ಆರ್ಥಿಕ ನಷ್ಟ ತಲೆದೋರುತ್ತದೆ.

• ಮನೆಯ ಒಳಗಿನಿಂದ ಹೊರಗೆ ಹೋಗುವ ನೀರು ಸರಿಯಾದ ದಿಕ್ಕಿನಲ್ಲಿ ಹೋಗದಿದ್ದರೂ ಸಹ ಹಣದ ಹರಿವಿನ ಪ್ರಮಾಣ ತಗ್ಗಿ, ಕೊರತೆಯುಂಟಾಗುತ್ತದೆ. ಇದರಿಂದ ಆರ್ಥಿಕ ತೊಂದರೆಗಳು ಪ್ರಾರಂಭವಾಗುತ್ತವೆ. 

• ಮನೆಯಿಂದ ಹೊರ ಹೋಗುವ ನೀರು ಪಶ್ಚಿಮ ಮತ್ತು ದಕ್ಷಿಣ ದಿಕ್ಕಿನ ಕಡೆ ಹೋಗಬಾರದು. ಇದು ಯಾವಾಗಲೂ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಹೋಗಬೇಕು. ಹೀಗೆ ಹೋದರೆ ಶುಭಫಲ ಸಿಗುವುದಲ್ಲದೆ, ಯಾವುದೇ ಕಾರಣಕ್ಕೂ ದುಡ್ಡಿನ ಕೊರತೆ ಉಂಟಾಗುವುದಿಲ್ಲ ಎಂದು ನಂಬಲಾಗಿದೆ. 

ಇದನ್ನು ಓದಿ: ರಾಹು ರಾಶಿ ಪರಿವರ್ತನೆಯಿಂದ ಸಮಸ್ಯೆ ಎದುರಿಸುವವರಿಗಿಲ್ಲಿದೆ ಪರಿಹಾರ..! 

• ಮನೆಯ ಒಳಗೆ ಇಲ್ಲವೇ ಗೋಡೌನ್ ನಲ್ಲಿ ಒಡೆದುಹೋದ ಪಾತ್ರೆಗಳಿದ್ದರೆ ತಕ್ಷಣ ಹೊರಗೆ ಹಾಕಬೇಕು. ಯಾವಾಗಲೂ ಮನೆಯಲ್ಲಿ ಮುರಿದ ಮಂಚ, ಬಳಸದ ಕಪಾಟುಗಳು ಅಥವಾ ಇತರೆ ಮರದ ವಸ್ತುಗಳು ಮನೆಯಲ್ಲೇ ಬಿದ್ದಿರುತ್ತವೆ. ಇದರಿಂದ ಆರ್ಥಿಕ ತೊಂದರೆ ಎದುರಾಗುವುದಲ್ಲದೆ, ಖರ್ಚುಗಳೂ ಹೆಚ್ಚಾಗುತ್ತವೆ. 

• ಮನೆಯಲ್ಲಿ ನಲ್ಲಿಯಿಂದ ನೀರು ತೊಟ್ಟಿಕ್ಕುತ್ತಿದ್ದರೆ ಇಲ್ಲವೇ ಸಣ್ಣ ಪ್ರಮಾಣದಲ್ಲಿ ನೀರು ಸೋರುತ್ತಲೇ ಇದ್ದರೆ ವಾಸ್ತುದೋಷವುಂಟಾಗುತ್ತದೆ. ಜೊತೆಗೆ ಗಂಭೀರ ಪ್ರಮಾಣದ ನಷ್ಟವಾಗುವುದಲ್ಲದೆ, ಭಾರಿ ಪ್ರಮಾಣದ ಧನಹಾನಿಯೂ ಆಗುತ್ತದೆ. ನಲ್ಲಿಯಿಂದ ಹೀಗೆ ಒಂದೊಂದೇ ಹನಿ ಬೀಳುವುದು ಎಂದರೆ ನಿಧಾನವಾಗಿ ಹಣ ಖರ್ಚಾಗುತ್ತದೆ ಎಂಬ ಅರ್ಥ ಬರುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.

• ಮನೆಯ ಮುಖ್ಯದ್ವಾರಕ್ಕೂ ಹಣಕ್ಕೂ ನೇರಾನೇರ ಸಂಬಂಧ ಇದೆ. ಇದರಲ್ಲಿ ದೋಷವಾದರೆ ವಾಸ್ತುದೋಷವಾದಂತೆಯೇ ಲೆಕ್ಕ. ಮನೆಯ ಮುಖ್ಯದ್ವಾರ ದಕ್ಷಿಣ ದಿಕ್ಕಿಗೆ ಇದ್ದರೆ ಸದಾ ಆರ್ಥಿಕ ತೊಂದರೆ ಇದ್ದೇ ಇರುತ್ತದೆ. ಅಲ್ಲದೆ, ಮುಖ್ಯದ್ವಾರದಲ್ಲಿ ಬಿರುಕು ಕಾಣಿಸಿಕೊಂಡಿದ್ದರೆ, ಸಮರ್ಪಕವಾಗಿ ತೆರೆದುಕೊಳ್ಳದಿದ್ದರೂ ಧನಹಾನಿಯಾಗುತ್ತದೆ. 

ಇದನ್ನು ಓದಿ:

• ಪಶ್ಚಿಮ ದಿಕ್ಕಿನಲ್ಲಿ ಅಡುಗೆ ಕೋಣೆ ಇದ್ದರೆ ಹಣ ತುಂಬ ಬರುತ್ತದೆ. ಆದರೆ, ಬಂದ ಹಣ ಕೈಯಲ್ಲಿ ನಿಲ್ಲದೆ ಖರ್ಚಾಗುತ್ತದೆ.

• ಶೋಕೇಸ್ ನಲ್ಲಿಡಲು ಇಲ್ಲವೇ ಮನೆ ಸಿಂಗಾರಕ್ಕೆಂದು ತಂದ ಪ್ಲಾಸ್ಟಿಕ್ ವಸ್ತುಗಳಾದ ಹೂವು, ಗಿಡಗಳು ನಕಾರಾತ್ಮಕತೆಯನ್ನು ಹೆಚ್ಚಿಸುತ್ತವೆ. ಇದರ ಜೊತೆಗೆ ಮನೆಯ ಒಳಗೆ ಬಾಡಿದ ಹೂವುಗಳನ್ನೂ ಇಟ್ಟುಕೊಳ್ಳಬೇಡಿ.

click me!