ರುದ್ರಾಕ್ಷಿಯ ವಿಶೇಷ ಮಹತ್ವಗಳನ್ನು ಪುರಾಣಗಳಲ್ಲಿ ಉಲ್ಲೇಖಿಸಿದ್ದಾರೆ. ರುದ್ರಾಕ್ಷಿಯನ್ನು ಧರಿಸುವುದು ಶುಭವಾಗಿದ್ದು, ಎಲ್ಲರೂ ರುದ್ರಾಕ್ಷಿಯನ್ನು ಧಾರಣೆ ಮಾಡಬಹುದಾಗಿದೆ. ಇದಕ್ಕೆ ಯಾವುದೇ ಲಿಂಗ ಮತ್ತು ವರ್ಣಗಳ ಭೇದವಿರುವುದಿಲ್ಲ. ರುದ್ರಾಕ್ಷಿಯನ್ನು ಧರಿಸಿದವರ ಮೇಲೆ ಶಿವನ ಕೃಪೆ ಸದಾ ಇರುತ್ತದೆ ಎಂಬ ನಂಬಿಕೆ ಇದೆ. ರುದ್ರಾಕ್ಷಿ ಧಾರಣೆಯಿಂದ ಆರೋಗ್ಯವು ವೃದ್ಧಿಸುತ್ತದೆ. ರುದ್ರಾಕ್ಷಿಯಲ್ಲಿ ಹದಿನಾಲ್ಕು ಪ್ರಕಾರಗಳಿವೆ. ಯಾವ ಪ್ರಕಾರದ ರುದ್ರಾಕ್ಷಿಯನ್ನು ಧರಿಸಿದರೆ ಯಾವ ರೀತಿಯ ಲಾಭಗಳನ್ನು ಪಡೆಯಬಹುದು ಎಂಬುದರ ಬಗ್ಗೆ ತಿಳಿಯೋಣ..
ಹಿಂದೂಧರ್ಮದಲ್ಲಿ ರುದ್ರಾಕ್ಷಿಗೆ ವಿಶೇಷವಾದ ಮಹತ್ವವಿದೆ. ಶಿವನ ಕಣ್ಣೀರಿನಿಂದ ಬಿದ್ದ ಬಿಂದುವಿನಿಂದ ರುದ್ರಾಕ್ಷಿ ಉದ್ಭವಾಯಿತೆಂಬ ನಂಬಿಕೆಯಿದೆ. ಹಲವು ರೀತಿಯ ಸಮಸ್ಯೆಗಳನ್ನು ದೂರ ಮಾಡುವ ಶಕ್ತಿ ರುದ್ರಾಕ್ಷಿಗಿದೆ. ರುದ್ರಾಕ್ಷಿ ಧಾರಣೆ ಸಕಾರಾತ್ಮಕ ಶಕ್ತಿಯ ಸಂಚಾರವನ್ನು ಹೆಚ್ಚಿಸುವುದಲ್ಲದೇ, ಆರೋಗ್ಯವನ್ನು ನೀಡುತ್ತದೆ.
ರುದ್ರಾಕ್ಷಿ ಮತ್ತು ಅದನ್ನು ಧರಿಸುವುದರಿಂದಾಗುವ ಲಾಭದ ಬಗ್ಗೆ ಹಲವು ಪುರಾಣಗಳಲ್ಲಿ ಉಲ್ಲೇಖಿಸಿದ್ದಾರೆ. ಶಿವ ಪುರಾಣ, ಸ್ಕಂದ ಪುರಾಣ, ಲಿಂಗ ಪುರಾಣ ಹೀಗೆ ಇನ್ನೂ ಹಲವು ಪುರಾಣಗಳಲ್ಲಿ ರುದ್ರಾಕ್ಷಿಯ ಮಹತ್ವದ ಬಗ್ಗೆ ತಿಳಿಸಿದ್ದಾರೆ. ಹದಿನಾಲ್ಕು ಪ್ರಕಾರದ ರುದ್ರಾಕ್ಷಿ ಇರುವುದಾಗಿ ಶಿವ ಪುರಾಣದ ವಿಘ್ನೇಶ್ವರ ಸಂಹಿತೆಯಲ್ಲಿ ಉಲ್ಲೇಖಿಸಿದ್ದಾರೆ. ಹದಿನಾಲ್ಕು ಪ್ರಕಾರದ ರುದ್ರಾಕ್ಷಿಗಳಲ್ಲಿ ಯಾವ ಪ್ರಕಾರದ ರುದ್ರಾಕ್ಷಿ ಧಾರಣೆಯಿಂದ ಯಾವ ರೀತಿಯ ಲಾಭ ಎಂಬುದನ್ನು ತಿಳಿಯೋಣ.
ಏಕ ಮುಖಿ ರುದ್ರಾಕ್ಷಿ
ಒಂದು ಮುಖವನ್ನು ಹೊಂದಿರುವ ರುದ್ರಾಕ್ಷಿಯು ಸಾಕ್ಷಾತ್ ಶಿವ ಸ್ವರೂಪ ಎಂಬ ನಂಬಿಕೆ ಇದೆ. ಈ ರುದ್ರಾಕ್ಷಿಯನ್ನು ಧರಿಸಿದ ವ್ಯಕ್ತಿಯು ಜ್ಞಾನವಂತನಾಗುತ್ತಾನೆ, ಭಗವಂತನಲ್ಲಿ ಭಕ್ತಿ ಮತ್ತು ಶ್ರದ್ಧೆ ಹೆಚ್ಚುತ್ತದೆ. ಆಧ್ಯಾತ್ಮದ ಬಗ್ಗೆ ಒಲವನ್ನು ಹೊಂದುತ್ತಾನೆ.
ಇದನ್ನು ಓದಿ:
ದ್ವಿಮುಖಿ ರುದ್ರಾಕ್ಷಿ :
ಎರಡು ಮುಖವನ್ನು ಹೊಂದಿರುವ ಈ ರುದ್ರಾಕ್ಷಿಯು ಶಿವ ಮತ್ತು ಪಾರ್ವತಿಯ ಸಂಯೋಗ ಸ್ವರೂಪವಾಗಿದೆ. ಈ ರುದ್ರಾಕ್ಷಿಯನ್ನು ಧರಿಸುವುದರಿಂದ ಶಿವಪಾರ್ವತಿಯ ಕೃಪೆಯನ್ನು ಪಡೆಯಬಹುದಾಗಿದೆ. ವೈವಾಹಿಕ ಜೀವನದಲ್ಲಿ ಸಂತೋಷವನ್ನು ಮತ್ತು ಸುಖವನ್ನು ಈ ರುದ್ರಾಕ್ಷಿ ಧಾರಣೆಯಿಂದ ಪಡೆಯಬಹುದಾಗಿದೆ.
ತ್ರಿಮುಖಿ ರುದ್ರಾಕ್ಷಿ :
ಮೂರು ಮುಖವನ್ನು ಹೊಂದಿರುವ ರುದ್ರಾಕ್ಷಿಯು ಅಗ್ನಿಯ ಸ್ವರೂಪವಾಗಿದೆ. ಇದನ್ನು ಧರಿಸುವುದರಿಂದ ತೇಜಸ್ಸು ಮತ್ತು ಶಕ್ತಿ ವೃದ್ಧಿಸುತ್ತದೆ. ಸಂಚಿತ ಪಾಪಕರ್ಮಗಳನ್ನು ನಾಶಗೊಳಿಸುವ ಶಕ್ತಿ ಈ ರುದ್ರಾಕ್ಷಿಗಿದೆ. ಮಂಗಳ ಗ್ರಹದ ದೋಷವು ತ್ರಿಮುಖಿ ರುದ್ರಾಕ್ಷಿಯನ್ನು ಧರಿಸುವುದರಿಂದ ನಿವಾರಣೆಯಾಗುವುದಲ್ಲದೇ, ಅಗ್ನಿ ದೇವನ ಪ್ರಸನ್ನತೆಗೂ ಪಾತ್ರರಾಗಬಹುದಾಗಿದೆ.
undefined
ಸಂಭೋಗದ ಸಮಯದಲ್ಲಿ ರುದ್ರಾಕ್ಷಿ ಧರಿಸಿದರೆ ಏನಾಗುತ್ತೆ?
ಚತುರ್ಮುಖಿ ರುದ್ರಾಕ್ಷಿ :
ನಾಲ್ಕು ಮುಖವುಳ್ಳ ಈ ರುದ್ರಾಕ್ಷಿಯನ್ನು ಬ್ರಹ್ಮನ ಸ್ವರೂಪವೆಂದು ಹೇಳಲಾಗುತ್ತದೆ. ಧನ ಸಂಪತ್ತು ಮತ್ತು ವೈಭವಯುತ ಜೀವನಕ್ಕೆ ಈ ರುದ್ರಾಕ್ಷಿಯನ್ನು ಧಾರಣೆ ಮಾಡಬಹುದಾಗಿದೆ. ಚತುರ್ಮುಖಿ ರುದ್ರಾಕ್ಷಿಯು ಸ್ವಾಸ್ಥ್ಯ ಸಂರಕ್ಷಣೆ ಮತ್ತು ಬುದ್ಧಿಮತ್ತೆಯನ್ನು ಹೆಚ್ಚಿಸುತ್ತದೆ ಎಂದು ದೇವಿಭಾಗವತ ಪುರಾಣದಲ್ಲಿ ಉಲ್ಲೇಖಿಸಿದ್ದಾರೆ.
ಪಂಚಮುಖಿ ರುದ್ರಾಕ್ಷಿ :
ಐದು ಮುಖವುಳ್ಳ ರುದ್ರಾಕ್ಷಿಯನ್ನು ಪಂಚಮುಖಿ ರುದ್ರಾಕ್ಷಿ ಎನ್ನುತ್ತಾರೆ. ಈ ರುದ್ರಾಕ್ಷಿಯು ಬ್ರಹ್ಮನ ಸ್ವರೂಪವೆಂದೇ ಹೇಳಲಾಗುತ್ತದೆ. ಪಂಚಮುಖಿ ರುದ್ರಾಕ್ಷಿಯನ್ನು ಧರಿಸುವುದರಿಂದ ಜ್ಞಾನವು ವೃದ್ಧಿಸುವುದಲ್ಲದೇ, ಆಧ್ಯಾತ್ಮಿಕ ಭಾವನೆಯ ಹೆಚ್ಚುತ್ತದೆ. ಮುಖ್ಯವಾಗಿ ಜಪ ಮಾಡಲು ಈ ರುದ್ರಾಕ್ಷಿಯನ್ನು ಬಳಸುವುದರಿಂದ ಹೃದಯಕ್ಕೆ ಬಲ ಬರುವುದಲ್ಲದೇ ಪಾಪದಿಂದ ಮುಕ್ತಿ ಪಡೆಯಬಹುದಾಗಿದೆ.
ಷಷ್ಠಮುಖಿ ರುದ್ರಾಕ್ಷಿ :
ಈ ರುದ್ರಾಕ್ಷಿಯನ್ನು ಕಾರ್ತಿಕೇಯನ ಸ್ವರೂಪವೆಂದು ಹೇಳಲಾಗುತ್ತದೆ. ಷಷ್ಠಮುಖಿ ರುದ್ರಾಕ್ಷಿಯನ್ನು ಧರಿಸುವುದರಿಂದ ಶಕ್ತಿ ಮತ್ತು ವೀರ್ಯ ವೃದ್ಧಿಸುತ್ತದೆ. ಅಕಾಲ ಮೃತ್ಯು ಮತ್ತು ದುರ್ಘಟನೆಗಳಿಂದ ಸಹ ಕಾಪಾಡುತ್ತದೆ ಈ ರುದ್ರಾಕ್ಷಿ. ಶತ್ರುಬಾಧೆಯಿಂದ ಬಳಲುತ್ತಿದ್ದವರು ಈ ರುದ್ರಾಕ್ಷಿ ಧರಿಸಿದರೆ ಶತ್ರುಕಾಟದಿಂದ ಪಾರಾಗಬಹುದಾಗಿದೆ.
ಇದನ್ನು ಓದಿ: ಈ ರಾಶಿಯವರಿಗೆ ಬ್ರೇಕ್‌ಅಪ್ ಆದ್ರೆ ಒಪ್ಪಿಕೊಳ್ಳೋದು ತುಂಬಾ ಕಷ್ಟ; ನಿಮ್ಮದು ಯಾವ ರಾಶಿ..?
ಸಪ್ತಮುಖಿ ರುದ್ರಾಕ್ಷಿ :
ಸಪ್ತಮುಖಿ ರುದ್ರಾಕ್ಷಿಯು ಸಪ್ತಋಷಿಗಳ ಸ್ವರೂಪವೆಂದು ನಂಬಲಾಗಿದೆ. ಈ ರುದ್ರಾಕ್ಷಿ ಧರಿಸಿದವರ ಮೇಲೆ ಲಕ್ಷ್ಮೀದೇವಿಯ ಕೃಪೆ ಸದಾ ಇರುತ್ತದೆ. ವ್ಯಕ್ತಿಯು ಧನಸಂಪತ್ತನ್ನು ಹೊಂದುವುದಲ್ಲದೇ, ಸಮಾಜದಲ್ಲಿ ಗೌರವವನ್ನು ಪಡೆಯುತ್ತಾನೆ. ಆರೋಗ್ಯ ರಕ್ಷಣೆಗೂ ಸಹ ಈ ರುದ್ರಾಕ್ಷಿ ಲಾಭದಾಯಕವಾಗಿದೆ.
ಅಷ್ಠಮುಖಿ ರುದ್ರಾಕ್ಷಿ :
ಎಂಟು ಮುಖವುಳ್ಳ ಈ ರುದ್ರಾಕ್ಷಿಯು ಅಷ್ಟಾವಸುಗಳ ಸ್ವರೂಪವಾಗಿದೆ. ಅಷ್ಠಮುಖಿ ರುದ್ರಾಕ್ಷಿ ಧರಿಸುವುದರಿಂದ ಶನಿಯ ಅಶುಭ ಪ್ರಭಾವದಿಂದ ಮುಕ್ತಿ ಪಡೆಯಬಹುದಾಗಿದೆ. ವ್ಯಕ್ತಿಯ ಭೌತಿಕ ಇಚ್ಛೆಗಳ ಪೂರೈಕೆಗೆ ಮತ್ತು ಅಪಘಾತಗಳಿಂದ ರಕ್ಷಣೆಗೆ ಈ ರುದ್ರಾಕ್ಷಿ ಧಾರಣೆ ಸಹಕಾರಿಯಾಗಿದೆ.
ನವಮುಖಿ ರುದ್ರಾಕ್ಷಿ :
ಒಂಭತ್ತು ಮುಖವುಳ್ಳ ರುದ್ರಾಕ್ಷಿಯನ್ನು ನವಮುಖಿ ರುದ್ರಾಕ್ಷಿ ಎಂದು ಕರೆಯುತ್ತಾರೆ. ಈ ರುದ್ರಾಕ್ಷಿಯು ಯಮರಾಜನ ಸ್ವರೂಪವಾಗಿದ್ದು, ಇದನ್ನು ಧರಿಸಿದರೆ ಮೃತ್ಯು ಭಯ ದೂರವಾಗುತ್ತದೆ. ಭಾಗ್ಯವೃದ್ಧಿಗೆ ಈ ರುದ್ರಾಕ್ಷಿಯನ್ನು ಧರಿಸುವುದು ಉತ್ತಮ.
ದಶಮುಖಿ ರುದ್ರಾಕ್ಷಿ, ಏಕಾದಶಮುಖಿ ರುದ್ರಾಕ್ಷಿ ಮತ್ತು ತ್ರಯೋದಶಮುಖಿ ರುದ್ರಾಕ್ಷಿ :
ಈ ಮೂರು ವಿಧದ ರುದ್ರಾಕ್ಷಿಯನ್ನು ಶುಭ ಮತ್ತು ಉತ್ತಮ ಫಲ ನೀಡುವ ರುದ್ರಾಕ್ಷಿಗಳೆಂದು ಹೇಳಲಾಗುತ್ತದೆ. ದಶಮುಖಿ ರುದ್ರಾಕ್ಷಿಯನ್ನು ದಿಕ್ಪಾಲಕರ ಸ್ವರೂಪವೆಂದು, ಏಕಾದಶಮುಖಿ ರುದ್ರಾಕ್ಷಿಯನ್ನು ರುದ್ರ ಸ್ವರೂಪವೆಂದು ಮತ್ತು ತ್ರಯೋದಶಮುಖಿ ರುದ್ರಾಕ್ಷಿಯನ್ನು ಕಾಮದೇವನ ಸ್ವರೂಪವೆಂದು ಹೇಳಲಾಗುತ್ತದೆ. ಈ ರುದ್ರಾಕ್ಷಿಗಳನ್ನು ಧರಿಸುವುದರಿಂದ ಮನೋಕಾಮನೆಗಳು ಪೂರ್ಣಗೊಳ್ಳುವುದಲ್ಲದೇ, ಪ್ರೀತಿಯಲ್ಲಿ ಮತ್ತು ದಾಂಪತ್ಯ ಜೀವನದಲ್ಲಿ ಸುಖವನ್ನು ಕಾಣಬಹುದಾಗಿದೆ.
ಇದನ್ನು ಓದಿ: ಉದ್ಯೋಗದಲ್ಲಿ ಪ್ರಮೋಶನ್‌ಗೆ ಹೀಗೆ ಮಾಡಿ ಯಶಸ್ಸನ್ನು ನಿಮ್ಮದಾಗಿಸಿಕೊಳ್ಳಿ..!
ದ್ವಾದಶಮುಖಿ ರುದ್ರಾಕ್ಷಿ ಮತ್ತು ಚತುರ್ದಶಮುಖಿ ರುದ್ರಾಕ್ಷಿ :
ಹನ್ನೆರಡು ಮುಖವುಳ್ಳ ರುದ್ರಾಕ್ಷಿಯನ್ನು ದ್ವಾದಶಮುಖಿ ಎನ್ನುತ್ತಾರೆ ಹಾಗೂ ಹದಿನಾಲ್ಕು ಮುಖವುಳ್ಳ ರುದ್ರಾಕ್ಷಿಯನ್ನು ಚತುರ್ದಶಮುಖಿ ರುದ್ರಾಕ್ಷಿ ಎನ್ನುತ್ತಾರೆ. ಈ ಎರಡು ವಿಧದ ರುದ್ರಾಕ್ಷಿಯನ್ನು ಸಾಕ್ಷಾತ್ ಶಿವನ ಸ್ವರೂಪವೆಂದು ನಂಬಲಾಗಿದೆ. ಈ ರುದ್ರಾಕ್ಷಿಗಳನ್ನು ಧರಿಸುವುದರಿಂದ ಧನ-ಧಾನ್ಯ ವೃದ್ಧಿಸುವುದಲ್ಲದೇ, ಧಾರ್ಮಿಕ ಕಾರ್ಯಗಳು ಮನೆಯಲ್ಲಿ ಜರುಗುವುತ್ತವೆ. ಸಾತ್ವಿಕ ವಿಚಾರಗಳು ಮೂಡುವುದಲ್ಲದೇ, ಈ ರುದ್ರಾಕ್ಷಿಯನ್ನು ಧರಿಸಿದವರು ಸದಾ ಆರೋಗ್ಯವಾಗಿರುತ್ತಾರೆ.