ಇದು ಹೃದಯಗಳ ವಿಷಯ, ಎಲ್ಲ ಸಂಬಂಧಗಳಿಗೂ ಹ್ಯಾಪಿ ಎಂಡಿಂಗ್ ಇರುವುದಿಲ್ಲ. ಕೆಲವು ಬ್ರೇಕ್‌ಅಪ್ ಹಂತವನ್ನೂ ತಲುಪುತ್ತದೆ. ಆದರೆ, ಹೀಗೆ ಬ್ರೇಕ್‌ಅಪ್ ಮಾಡಿಕೊಂಡವರು ನಿಜವಾಗಿಯೂ ಆ ನೋವನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆಯೇ ಎಂಬುದು ಪ್ರಶ್ನೆ. ಇಲ್ಲಿ ಇಂತಹ ಸಂದರ್ಭವನ್ನು ನಿಭಾಯಿಸಲು ರಾಶಿ ಚಕ್ರದ ಬಲವೂ ಇರಬೇಕಾಗುತ್ತದೆ. ಕೆಲವು ರಾಶಿಯವರು ಇಂತಹ ನೋವಿನಿಂದ ಬಹುಬೇಗ ಹೊರಬಂದರೆ ಮತ್ತೆ ಕೆಲವು ರಾಶಿಯವರಿಗೆ ಎಷ್ಟೇ ಪ್ರಯತ್ನಪಟ್ಟರೂ ಇದು ಸಾಧ್ಯವಾಗದು. ಹಾಗಾದರೆ, ಇಂಥ ನೋವನ್ನು ಎದುರಿಸಲಾಗದ ರಾಶಿಯವರು ಯಾರು ಎಂಬುದರ ಬಗ್ಗೆ ನೋಡೋಣ…
ಪ್ರೀತಿ, ಪ್ರೇಮ ಎಂಬುದು ಜೀವನದ ಒಂದು ಭಾಗ. ಇವು ಇಲ್ಲದಿದ್ದರೆ ಜೀವನಕ್ಕೆ ಅರ್ಥ ಎಂಬುದು ಇರುವುದಿಲ್ಲ. ಅದು ಅಪ್ಪ-ಅಮ್ಮನ ಪ್ರೀತಿ ಇರಬಹುದು, ಸಹೋದರ, ಸಹೋದರಿಯ, ಸ್ನೇಹಿತ/ಸ್ನೇಹಿತೆಯ ಪ್ರೀತಿ ಹೀಗೆ ಯಾವುದೇ ರೂಪದಲ್ಲಿರಬಹುದು. ಆದರೆ, ಈಗ ಹೇಳಲು ಹೊರಟಿರುವುದು ಪ್ರೇಮಿಗಳ ವಿಷಯ. ಯುವಕ-ಯುವತಿ ಯೌವನಾವಸ್ಥೆಗೆ ಬಂದರೆಂದರೆ ಸಾಕು ವಿರುದ್ಧ ಲಿಂಗಿಗಳಿಂದ ಆಕರ್ಷಿತರಾಗಿ ಲವ್‌ನಲ್ಲಿ ಬಿದ್ದುಬಿಟ್ಟಿರುತ್ತಾರೆ. ಆದರೆ, ಒಮ್ಮೆ ಲವ್ ಮಾಡಿದ ಮೇಲೆ ಬ್ರೇಕ್‌ಅಪ್ ಆದರೆ…?
ಹೌದು. ಈ ಪ್ರೀತಿ-ಪ್ರೇಮ ಮಾಡೋ ಹುಡುಗ, ಹುಡುಗಿಯರು ಬ್ರೇಕ್‌ಅಪ್ ಬಗ್ಗೆ ಮೊದಲೇನೂ ಅಷ್ಟು ತಲೆಕೆಡಿಸಿಕೊಂಡಿರುವುದಿಲ್ಲ. ಆದರೆ, ಪ್ರೀತಿಯ ಗಾಢತೆಗೆ ಬಿದ್ದ ಬಳಿಕ ಇಂಥದ್ದೇನಾದರೂ ಎಡವಟ್ಟಾದರೆ ಅವರಿಗೆ ನೋವನ್ನು ತಡೆದುಕೊಳ್ಳಲು ಆಗುವುದಿಲ್ಲ. ಕೆಲವರು ಹೇಗೋ ಆ ನೋವಿನಿಂದ ಆಚೆ ಬಂದು ಹೊಸ ಜೀವನವನ್ನು ಕಟ್ಟಿಕೊಳ್ಳಲು ಪ್ರಯತ್ನಿಸುವವರಾದರೂ, ಮತ್ತೆ ಕೆಲವರು ಹಳೇ ನೆನಪುಗಳನ್ನೇ ನೆನೆಯುತ್ತಾ ಡಿಪ್ರೆಶನ್ ಗೂ ಹೋಗಿ ಬಿಡುತ್ತಾರೆ.
ಇದನ್ನು ಓದಿ: ಇವರು ಹಣ ವ್ಯಯಿಸಿದರೆ, ಅವರು ಉಳಿಸುತ್ತಾರೆ, ನಿಮ್ಮ ರಾಶಿ ತತ್ವ ಯಾವುದು?
ಹೀಗೆ ಬ್ರೇಕ್‌ಅಪ್‌ನಂತಹ ನೋವನ್ನು ಸಹಿಸಿಕೊಳ್ಳುವ ತಾಕತ್ತು ಎಲ್ಲರಿಗೂ ಇರುವುದಿಲ್ಲ ಎಂಬುದಂತೂ ಸ್ಪಷ್ಟ. ಇನ್ನು ರಾಶಿಗಳಿಗನುಗುಣವಾಗಿಯೂ ಇವುಗಳನ್ನು ಸಹಿಸಿಕೊಳ್ಳುವ, ಇಲ್ಲವೇ ನೋವನ್ನು ಪಡುವ ಮನೋಭಾವದವರು ಇರುತ್ತಾರೆ. ಹಾಗಾದರೆ, ಯಾವ ರಾಶಿಯವರಿಗೆ ನೋವನ್ನು ಮರೆಯುವುದು ಕಷ್ಟ ಎಂಬ ಬಗ್ಗೆ ನೋಡೋಣ.
ಕರ್ಕಾಟಕ ರಾಶಿ
ಬ್ರೇಕ್‌ಅಪ್ ನಲ್ಲಿ ನೋವು ಅನುಭವಿಸುವವರ ಪಟ್ಟಿಯಲ್ಲಿ ಇವರೇ ಮೊದಲಿಗರು. ಇವರು ಬಹಳ ಭಾವನಾತ್ಮಕ ಜೀವಿಯಾಗಿದ್ದು, ಬಹುಬೇಗ ಲವ್‌ಗೆ ಕಮಿಟ್ ಆಗುತ್ತಾರೆ. ಜೊತೆಗೆ ಸೂಕ್ಷ್ಮ ಮನಸ್ಸುಳ್ಳವರಾಗಿರುವ ಇವರು ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು. ಯಾರನ್ನು ಪ್ರೀತಿಸುತ್ತಾರೋ ಅವರನ್ನು ತುಂಬವೇ ಹಚ್ಚಿಕೊಳ್ಳುವ ಇವರು, ಬ್ರೇಕ್‌ಅಪ್ ಎಂದು ಪ್ರೇಮಿ ಹೇಳಿದರೆ, ಅದನ್ನು ಸ್ವೀಕರಿಸುವುದೇ ಇವರಿಗೆ ದೊಡ್ಡ ಸವಾಲಾಗಿರುತ್ತದೆ. ಆ ನೋವಿನಿಂದ ಹೊರಬರಲು ಇವರಿಗೆ ಬಹಳವೇ ಕಷ್ಟವಾಗುತ್ತದೆ.
ಇದನ್ನು ಓದಿ: ಉದ್ಯೋಗದಲ್ಲಿ ಪ್ರಮೋಶನ್‌ಗೆ ಹೀಗೆ ಮಾಡಿ ಯಶಸ್ಸನ್ನು ನಿಮ್ಮದಾಗಿಸಿಕೊಳ್ಳಿ..!
ವೃಷಭ ರಾಶಿ
ಈ ರಾಶಿಯವರು ಪ್ರೀತಿಯಲ್ಲಿ ಬೀಳುವ ಮೊದಲು ಆ ವ್ಯಕ್ತಿಯನ್ನು ಅರ್ಥ ಮಾಡಿಕೊಳ್ಳಲು ಬಹಳವೇ ಸಮಯಾವಕಾಶವನ್ನು ತೆಗೆದುಕೊಳ್ಳುತ್ತಾರೆ. ಅವರ ಬಳಗ ಸಣ್ಣದಿದ್ದರೂ ಯಾರನ್ನಾದರೂ ಪ್ರೀತಿಸುತ್ತಿದ್ದಾರೆಂದರೆ ಅವರ ಮೇಲೆ ಅಷ್ಟೇ ಅಪಾರ ನಂಬಿಕೆ ಇಟ್ಟಿದ್ದಾರೆಂದು ಅರ್ಥ. ಇಂತಹ ಪರಿಸ್ಥಿತಿಯಲ್ಲಿ ಈ ಜೋಡಿಗಳು ಪ್ರತ್ಯೇಕವಾಗಬೇಕು ಎಂದರೆ ಅದನ್ನು ಈ ರಾಶಿಯ ಸಂಗಾತಿ ಎದುರಿಸುವುದು ಬಹಳವೇ ಕಷ್ಟ. ಇಂತಹ ವಿಷಯ ಕೇಳಿ ಮನಸ್ಸು ತುಂಬಾ ಗೊಂದಲಗಳಿಗೆ ಸಿಲುಕಲಿದ್ದು, ಸಾಕಷ್ಟು ನೋವನ್ನು ಅನುಭವಿಸುತ್ತಾರೆ.
ಸಿಂಹ ರಾಶಿ
ಇವರದ್ದು ಬಹಳ ಪ್ರಭಾವಿ ಸ್ವಭಾವ. ತಾವು ಹೇಳಿದ್ದೇ ಆಗಬೇಕು, ತಮಗೆ ವಿರುದ್ಧವಾಗಿ ಯಾರೂ ನಿಲ್ಲಬಾರದು ಹಾಗೂ ಮಾತನಾಡಬಾರದು ಎಂಬುದು ಇವರ ಮನೋಸ್ಥಿತಿ. ಇಂತಹ ರಾಶಿಯ ವ್ಯಕ್ತಿಗಳು ಪ್ರೀತಿಯಲ್ಲಿ ಬಿದ್ದು ಸಂಗಾತಿ ಬಾಯಿಂದ ಪ್ರತ್ಯೇಕವಾಗುವ ಮಾತು ಕೇಳಿಬಂದರೆ ದೊಡ್ಡ ರಾದ್ದಾಂತವೇ ನಡೆದುಹೋಗುತ್ತದೆ. ಇದು ಒಂದು ಕಣ್ಣೀರಿನಿಂದ ಮುಗಿಯುವ ಬ್ರೇಕ್‌ಅಪ್ ಆಗಲು ಸಾಧ್ಯವೇ ಇಲ್ಲ. ಬಹಳ ದೊಡ್ಡ ಮಟ್ಟದ ಗಲಾಟೆ ಇಲ್ಲಾಗುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.
ಇದನ್ನು ಓದಿ: ವಾಸ್ತು ದೋಷ ನಿವಾರಣೆಗೆ ಹೀಗೆ ಗಣಪತಿ ಪೂಜೆ ಮಾಡಿ..
ಮಕರ ರಾಶಿ
ಈ ರಾಶಿಯವರು ಪ್ರೀತಿಯಲ್ಲೇನೋ ಬಿದ್ದಿರುತ್ತಾರೆ. ಕೆಲವೊಂದು ಸನ್ನಿವೇಶದಲ್ಲಿ ಬ್ರೇಕಪ್ ಪರಿಸ್ಥಿತಿ ಉಂಟಾದರೂ ಸಹ ಆ ನೋವಿನಿಂದ ಹೊರಬರಲು ಬಹಳವೇ ಪ್ರಯತ್ನ ಪಡುತ್ತಾಋಎ. ಒಂದು ಹಂತದಲ್ಲಿ ಯಶಸ್ವಿಯಾದರು ಎಂದು ಅನ್ನಿಸಿದರೂ ಕೊನೇ ಕ್ಷಣದಲ್ಲಿ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ಎದುರಿನಿಂದ ಇವರನ್ನು ಗಮನಿಸಿದರೆ ಬಹಳ ಸದೃಢರೆಂದು ಅನ್ನಿಸಿದರೂ ಸಂಬಂಧದ ವಿಷಯಕ್ಕೆ ಬಂದಾಗ ಇವರು ಬಹಳ ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ. ಇವರು ತಮ್ಮೆಲ್ಲ ಸಂಬಂಧಗಳನ್ನು ಕಡಿದುಕೊಂಡರು ಅದರ ಸಣ್ಣ ನೋವಂತೂ ಇದ್ದೇ ಇರುತ್ತದೆ.