Cat's Eye: ಕೇತು ಸಮಸ್ಯೆ ತಂದೊಡ್ಡುತ್ತಿದ್ದರೆ ಈ ಹರಳನ್ನು ಧರಿಸಿ ಸಾಕು!

By Suvarna News  |  First Published Apr 5, 2022, 12:02 PM IST

ಕೇತುವಿನಿಂದ ನಿಮಗೆ ಸಮಸ್ಯೆಯಾಗುತ್ತಿದ್ದರೆ ರತ್ನ ಶಾಸ್ತ್ರದ ಪ್ರಕಾರ ಯಾವ ರತ್ನ ಧರಿಸಬೇಕು ಗೊತ್ತಾ?


ಶೀಮಂತಿಕೆಗೆ ಹೆಸರಾದ ಬಂಗಾರ, ಮುತ್ತು, ರತ್ನ, ಹವಳ, ವಜ್ರ ವೈಢೂರ್ಯಗಳೆಲ್ಲವಕ್ಕೂ ರತ್ನ ಶಾಸ್ತ್ರ(Gemology)ದಲ್ಲಿ ಬೆಲೆಯ ಹೊರತಾಗಿ ಬೇರೆಯದೇ ಪ್ರಾಮುಖ್ಯತೆ ಇದೆ. ರತ್ನ ಶಾಸ್ತ್ರದಲ್ಲಿ ಇವುಗಳನ್ನು ಗ್ರಹ ದೋಷ ನಿವಾರಕಗಳಾಗಿ ಕಾಣಲಾಗುತ್ತದೆ. ಪ್ರತಿಯೊಂದು ಗ್ರಹದ ಕೆಟ್ಟ ಪರಿಣಾಮ(malefic effects)ಗಳನ್ನು ತಡೆಯುವಲ್ಲಿ ಒಂದೊಂದು ರತ್ನ ಪ್ರಮುಖ ಪಾತ್ರ ವಹಿಸುತ್ತದೆ. ಒಟ್ಟು 9 ರತ್ನಗಳು ಮತ್ತು 84 ಉಪರತ್ನಗಳಿದ್ದು, ಇವುಗಳೇ ಜೀವನದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತವೆ ಎಂಬ ನಂಬಿಕೆ ಇದೆ. 

ಸಾಮಾನ್ಯವಾಗಿ ಜಾತಕದಲ್ಲಿ ಯಾವುದಾದರೂ ಗ್ರಹ(Planet) ದುರ್ಬಲವಾದಾಗ ಅಥವಾ ದೋಷ ಸ್ಥಾನದಲ್ಲಿದ್ದಾಗ ಅದಕ್ಕೆ ಸಂಬಂಧಿಸಿದ ರತ್ನವನ್ನು ಧರಿಸಲು ಜ್ಯೋತಿಷ್ಯಿಗಳು ಸಲಹೆ ನೀಡುತ್ತಾರೆ. ಇದರಿಂದ ಬಹಳಷ್ಟು ಸಮಸ್ಯೆಗಳು ತಗ್ಗಿ ಅದೃಷ್ಟ(Luck) ಮತ್ತು ಯಶಸ್ಸು(success) ನಮ್ಮ ಹಾದಿಯಲ್ಲಿ ದಕ್ಕುತ್ತವೆ. ಇಂದು ಕೇತುವು ದೋಷ ಸ್ಥಾನದಲ್ಲಿದ್ದಾಗ ಅದರ ಬಲ ಗಳಿಸಲು ಯಾವ ರತ್ನ ಧರಿಸಬೇಕು ನೋಡೋಣ. 

Tap to resize

Latest Videos

ವೈಢೂರ್ಯ(cat's eye)
ರತ್ನ ಶಾಸ್ತ್ರದ ಪ್ರಕಾರ, ಕೇತುವಿನ ರತ್ನ ವೈಢೂರ್ಯವಾಗಿದೆ. ಹಳದಿ(yellow) ಬಣ್ಣದಲ್ಲಿ ಇಲ್ಲವೇ ಬೂದು ಬಣ್ಣದಲ್ಲಿ ಹೊಳೆವ ಇದಕ್ಕೆ ಕ್ಯಾಟ್ಸ್ ಐ ಎಂದೂ ಹೇಳಲಾಗುತ್ತದೆ. ಕೇತುವು ಹಾವಿ(snake)ನ ತಲೆಯ ಹೊರತಾದ ಭಾಗವಾಗಿ ಗುರುತಿಸಿಕೊಂಡಿದೆ. ಅತ್ಯಂತ್ರ ಕ್ಷುದ್ರ ಗ್ರಹವೆಂಬ ಅಪಖ್ಯಾತಿಗೆ ಪಾತ್ರವಾಗಿದೆ. ಕೇತುವಿನ ಕೆಟ್ಟ ದೃಷ್ಟಿ ಬಿದ್ದಾಗ ವ್ಯಕ್ತಿಯು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆರ್ಥಿಕ ಸಮಸ್ಯೆಗಳು, ತೊಂದರೆ ಹೆಚ್ಚುತ್ತವೆ. ಮನಃಶಾಂತಿ ಮರೆಯಾಗುತ್ತದೆ. ಕೇತು ದಶಗಲ್ಲಿ ಸಡನ್ನಾಗಿ ಕೆಟ್ಟ ಪರಿಣಾಮಗಳು ಎದುರಾಗುತ್ತವೆ. ಕೇತು ಉತ್ತಮ ಸ್ಥಳದಲ್ಲಿದ್ದಾಗ ಆಧ್ಯಾತ್ಮಿಕವಾಗಿ ವ್ಯಕ್ತಿ ಎಚ್ಚರಗೊಳ್ಳುವವನಲ್ಲದೆ, ಜಗತ್ತಿನ ಎಲ್ಲ ಆಸೆ ಆಕಾಂಕ್ಷೆಗಳನ್ನು ಕಳಚಿಕೊಳ್ಳುತ್ತಾನೆ. 

ಕೇತುವು ಸಮಸ್ಯೆಯ ಸ್ಥಾನದಲ್ಲಿದ್ದಾಗ, ಭೂತ ದೆವ್ವದ ಸಮಸ್ಯೆ ಎಂದುಕೊಳ್ಳುತ್ತೇವೆ, ಕೆಟ್ಟ ಕನಸುಗಳು ಪದೇ ಪದೆ ಬೀಳುತ್ತವೆ. ಕಾಳಸರ್ಪ ದೋಷ, ಸರ್ಪ ದೋಷಗಳು ಉಂಟಾಗುತ್ತವೆ. ವ್ಯರ್ಥ ತಿರುಗಾಟಗಳು ಹೆಚ್ಚುತ್ತವೆ. ಉದ್ಯಮ ಇದ್ದಕ್ಕಿದ್ದಂತೆ ಬಂದ್ ಮಾಡಬೇಕಾಗುತ್ತದೆ. ಕೇತುವು ಜಾತಕದಲ್ಲಿ ಕೆಟ್ಟ ಸ್ಥಾನದಲ್ಲಿದ್ದಾಗ ಜ್ಯೋತಿಷಿಗಳು ವೈಢೂರ್ಯ ಧರಿಸಲು ಹೇಳುತ್ತಾರೆ. ಹಾಗಂಥ ಎಲ್ಲ ರಾಶಿಯವರಿಗೂ ಇದು ಆಗಿ ಬರುವುದಿಲ್ಲ.

Vastu tips: ಮರೆತೂ ಈ ಹೂವುಗಳನ್ನು ದೇವರ ಪೂಜೆಗೆ ಬಳಸಬೇಡಿ!

ಯಾವ ರಾಶಿಯವರು ವೈಢೂರ್ಯ ಧರಿಸಬಹುದು?
ಜ್ಯೋತಿಷ್ಯ ಮತ್ತು ರತ್ನಶಾಸ್ತ್ರದ ಪ್ರಕಾರ, ಮಕರ(Capricorn), ಕುಂಭ(Aquarius) ಮತ್ತು ಮಿಥುನ ರಾಶಿ(Gemini)ಯ ಜನರು ವೈಢೂರ್ಯ(Cat's Eye gemstone) ಧರಿಸಬಹುದು.  ಇವರಲ್ಲದೆ, ಕುದುರೆ ರೇಸ್, ಯಾವುದೇ ರೀತಿಯ ಅದೃಷ್ಟದ ಆಟ ಆಡುವವರು ಕೂಡಾ ಇದನ್ನು ಧರಿಸಬಹುದು. ವೈಢೂರ್ಯ ಧಾರಣೆಯಿಂದ ನಷ್ಟ ಲಕ್ಷ್ಮಿ ಅಂದರೆ, ಕಳೆದುಕೊಂಡ ಸಂಪತ್ತನ್ನು ಪುನಾ ಗಳಿಸಬಹುದು. ಹಾಗಂಥ ವೈಢೂರ್ಯವನ್ನು ಜೀವನಪರ್ಯಂತ ಧರಿಸಲು ಸಲಹೆ ಮಾಡುವುದಿಲ್ಲ,. ಸಾಮಾನ್ಯವಾಗಿ ದೋಷಪೂರಿತ ಸಮಯದಲ್ಲಿ ಇದರ ಧಾರಣೆ ಮಾಡಿದರೆ ಸಾಕು ಎನ್ನಲಾಗುತ್ತದೆ. 

ಸಂಖ್ಯೆ 9ರ ಸ್ವಾರಸ್ಯ; ಆಂಜನೇಯನನ್ನು ನಂಬಿದ್ರೆ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ

ವೈಢೂರ್ಯ ಧಾರಣೆ ಪ್ರಯೋಜನಗಳು
ವೈಢೂರ್ಯ ಧಾರಣೆಯಿಂದ, ಅಪಾಯಕಾರಿ ಹೂಡಿಕೆಗಳನ್ನು ಸುಲಭವಾಗಿ ಮಾಡಬಹುದು. ಯಾರದ್ದಾದರೂ ಹಣವು ವ್ಯವಹಾರದಲ್ಲಿ ಸಿಲುಕಿಕೊಂಡರೆ, ಆ ಹಣ ಸಲೀಸಾಗಿ ಹಿಂದಿರುಗುತ್ತದೆ. 
ಸವಾಲಿನ ಸಂದರ್ಭದಲ್ಲೂ ವ್ಯಕ್ತಿಯನ್ನು ಸಂತೋಷದಿಂದಿಡುತ್ತದೆ. ವ್ಯಕ್ತಿಯಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ವ್ಯಕ್ತಿಗೆ ಆಧ್ಯಾತ್ಮಿಕ ಆನಂದ ತರುತ್ತದೆ.
ಗಂಭೀರ ಕಾಯಿಲೆಗಳಿಂದ ಬಳಲುವವರಿಗೆ ಚೇತರಿಕೆ ನೀಡುತ್ತದೆ. 

ಧರಿಸುವ ವಿಧಾನ
ವೈಢೂರ್ಯವನ್ನು ಗಂಗಾಜಲದಿಂದ ಶುದ್ಧೀಕರಿಸಿದ ನಂತರ ಕೇತುಮಂತ್ರವನ್ನು ಪಠಿಸಿ ಧರಿಸಬೇಕು. ಪೂಜೆಯ ಸಮಯದಲ್ಲಿ ಮೊಸರನ್ನು ನೈವೇದ್ಯವಾಗಿ ನೀಡಬೇಕು. ಎಳ್ಳು ಅಥವಾ ಅಕ್ಕಿಯನ್ನು ಬಡವರಿಗೆ ದಾನ ಮಾಡಬೇಕು.
 

click me!