Daily Horoscope: ಈ ರಾಶಿಗಿಂದು ಆಸ್ತಿ ಖರೀದಿ ಯೋಗ

Published : Apr 05, 2022, 08:06 AM IST
Daily Horoscope: ಈ ರಾಶಿಗಿಂದು ಆಸ್ತಿ ಖರೀದಿ ಯೋಗ

ಸಾರಾಂಶ

5 ಏಪ್ರಿಲ್ 2022, ಮಂಗಳವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಮಕರಕ್ಕೆ ಸೋಮಾರಿತನದಿಂದ ಸೋಲು

ಮೇಷ(Aries): ಎಲ್ಲ ವಿಷಯಕ್ಕೂ ನಿಮ್ಮ ಅಭಿಪ್ರಾಯ ಹೇಳಲೇಬೇಕಿಲ್ಲ. ಅನವಶ್ಯಕ ಕಚೇರಿ ರಾಜಕೀಯ, ಕೌಟುಂಬಿಕ ಕಲಹಗಳಲ್ಲಿ ಮಧ್ಯೆ ಬಾಯಿ ಹಾಕಬೇಡಿ. ನಿಮ್ಮ ಪಾಡಿಗೆ ನಿಮ್ಮನ್ನು ಉತ್ತಮಗೊಳಿಸಿಕೊಳ್ಳುವತ್ತ ಗಮನ ಹರಿಸಿ. ಆಂಜನೇಯ ಸ್ಮರಣೆ ಮಾಡಿ. 

ವೃಷಭ(Taurus): ಸ್ವಂತ ಸಾಮರ್ಥ್ಯದ ಮೇಲೆ ನಂಬಿಕೆ ಇರಿಸಿ ಕೆಲಸ ಕಾರ್ಯಗಳನ್ನು ಯಶಸ್ಸಿನ ನಡೆಯಲ್ಲಿ ತೆಗೆದುಕೊಂಡು ಹೋಗುವ ಸಂಕಲ್ಪದೊಂದಿಗೆ ಮುನ್ನುಗ್ಗಿ. ಒಳ್ಳೆಯ ದಿನಗಳು ಬರುವುವು. ಸಂಗಾತಿಯ ವಿಷಯದಲ್ಲಿ ಸಣ್ಣಪುಟ್ಟದ್ದಕ್ಕೂ ಸಿಡುಕುತನ ಸಲ್ಲದು. ಅದರಿಂದ ಯಾರಿಗೂ ನೆಮ್ಮದಿ ಇಲ್ಲ. ಆಂಜನೇಯನಿಗೆ ಕುಂಕುಮ ಅರ್ಪಿಸಿ. 

ಮಿಥುನ(Gemini): ವೃತ್ತಿರಂಗದಲ್ಲಿ ಅಧಿಕಾರಿ ವರ್ಗದವರ ಪ್ರಶಂಸೆ ದೊರಕುವುದು. ವಿದ್ಯಾರ್ಥಿ ವರ್ಗದವರಿಗೆ ಪ್ರಗತಿ ಇರಲಿದೆ. ಸಾಮಾಜಿಕವಾಗಿ ಗೌರವಕ್ಕೆ ಪಾತ್ರರಾಗಲಿರುವಿರಿ. ಪ್ರೇಮ ವ್ಯವಹಾರಗಳು ಮನೆಯವರ ಗಮನಕ್ಕೆ ಬರುವುವು. ವೈವಾಹಿಕ ಜೀವನದಲ್ಲಿ ನೆಮ್ಮದಿ ಇದೆ. ಕುಲದೇವರ ಆರಾಧನೆ ಮಾಡಿ. 

ಕಟಕ(Cancer): ವೃತ್ತಿರಂಗದಲ್ಲಿ ಮಾನಸಿಕ ಕಿರಿಕಿರಿ ಹೆಚ್ಚಿರಬಹುದು. ಹಾಗಂಥ ಕೆಲಸ ಬಿಡುವ ಯೋಚನೆ ಸಧ್ಯಕ್ಕೆ ಬೇಡ. ಪತ್ನಿ ಪೀಡಕರಾಗಿದ್ದಲ್ಲಿ ಸೆರೆಮನೆ ವಾಸಕ್ಕೆ ಸಿದ್ಧರಾಗಿ. ಸಂಗಾತಿಯ ಮನಸ್ಸನ್ನು ನೋಯಿಸಿ ನೀವು ಸುಖವಾಗಿರುವುದು ಸಾಧ್ಯವೇ ಇಲ್ಲ ಎಂಬುದು ತಿಳಿದಿರಲಿ. ಮನೆ ದೇವರನ್ನು ಸ್ಮರಿಸಿಕೊಳ್ಳಿ. 

ಸಿಂಹ(Leo): ಕಾರ್ಯಕ್ಷೇತ್ರದಲ್ಲಿ ಸ್ವಂತ ಶ್ರಮ ಪ್ರಯತ್ನಬಲದಿಂದಲೇ ನೀವಿಂದು ಯಶಸ್ಸಿನ ಹಾದಿಯಲ್ಲಿರುವುದನ್ನು ಮರೆಯಬೇಡಿ. ಇದನ್ನೇ ಸ್ಪೂರ್ತಿಯಾಗಿ ತೆಗೆದುಕೊಂಡು ಎದುರಾಗುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಿ. ಹೊಸ ಯೋಜನೆಗೆ ಕುಟುಂಬ ಸದಸ್ಯರ ಸಹಕಾರ ದೊರೆಯುವುದು. ಹನುಮಾನ್ ಚಾಲೀಸಾ ಹೇಳಿಕೊಳ್ಳಿ. 

ಹುಟ್ಟಿದ ರಾಶಿಗೂ ಲೈಂಗಿಕ ವಾಂಛೆಗೂ ಇದ್ಯಾ ನಂಟು? ಈ ರಾಶಿಯವರಲ್ಲಿ Sex Drive ಹೆಚ್ಚು

ಕನ್ಯಾ(Virgo): ಹತಾಶೆ, ಖಿನ್ನತೆಯಿಂದ ಯಾವುದೇ ಪ್ರಯೋಜನವಿಲ್ಲ. ನಿಮ್ಮಲ್ಲಿ ನೀವೇ ಸ್ಪೂರ್ತಿ ತುಂಬಿಕೊಳ್ಳಬೇಕು. ಹೊಸ ದಿನವನ್ನು ಹೊಸ ಚೈತನ್ಯದೊಂದಿಗೆ ಕಳೆವ ಸಂಕಲ್ಪ ಮಾಡಿ. ಮನೆಯವರ ಸಹಕಾರ ಸಿಗಲಿದೆ. ಆರೋಗ್ಯದ ಬಗ್ಗೆ ಜಾಗ್ರತೆ ಅಗತ್ಯ. ದುರ್ಗಾ ಶ್ಲೋಕ ಪಠಣ ಮಾಡಿ. 

ತುಲಾ(Libra): ಉದ್ಯೋಗದಲ್ಲಿ ಬದಲಾವಣೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ದೊರೆಯುವುದು. ಧೈರ್ಯದಿಂದಲೇ ಜಯ ಸಿಗುವುದು. ನಿಮ್ಮ ಕೀಳರಿಮೆಗಳನ್ನು ಬದಿಗಿರಿಸುವತ್ತ ಗಮನ ಹರಿಸಿ. ಅವಿವಾಹಿತರಿಗೆ ಸಂಬಂಧ ಕೂಡಿ ಬರಲಿದೆ. ಬೆನ್ನು ನೋವು, ಆತಂಕ ಕಾಡಲಿವೆ. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

ವೃಶ್ಚಿಕ(Scorpio): ಆಸೆಗಳ ಮೇಲೆ ನಿಗಾ ಇರಲಿ. ಅವು ದುರಾಸೆಯಾಗಲು ಬಿಡದಿರಿ. ಮನಸ್ಸಲ್ಲೇ ಮಂಡಿಗೆ ತಿಂದರೆ ಪ್ರಯೋಜನವಿಲ್ಲ. ಮನಸ್ಸಲ್ಲಾಗುವುದನ್ನು ಬಾಯಿ ಬಿಟ್ಟು ಹೇಳುವುದರಿಂದ ಲಾಭ ಕಂಡೀರಿ. ದೂರ ಪ್ರಯಾಣ ಸಾಧ್ಯತೆ ಇದೆ. ಕೆಂಪು ಧಾನ್ಯ ದಾನ ಮಾಡಿ.  

ಹಕ್ಕಿಗಳಿಗೆ ಆಹಾರ ನೀಡಿ ಅದೃಷ್ಟ ಹೆಚ್ಚಿಸ್ಕೊಳೋದು ಹೇಗೆ?

ಧನುಸ್ಸು(Sagittarius): ಮನೆಗಾಗಿ ದುಂದು ವೆಚ್ಚ ಮಾಡಲಿರುವಿರಿ. ಮನೆಯಲ್ಲಿ ಶುಭ ಕಾರ್ಯ ನಡೆಯುವುದು. ಅಣ್ಣ ತಮ್ಮಂದಿರ ತಕರಾರು ಅಂತ್ಯ ಕಾಣುವುದು. ಮನೆ ಹಿರಿಯರನ್ನು ಚೆನ್ನಾಗಿ ನೋಡಿಕೊಳ್ಳಿ. ಸಹೋದರರ ಸಹಕಾರ ಸಿಗಲಿದೆ. ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ. 

ಮಕರ(Capricorn): ಸೋಮಾರಿತನದಿಂದ ಸೋಲು ಎದುರಿಸಬೇಕಾಗಬಹುದು. ನೋವಿನ ಸುದ್ದಿ ಕೇಳಬೇಕಾಗಿ ಬರುವುದು. ಉದರ ಸಂಬಂಧಿ ಸಮಸ್ಯೆಗಳು, ಮಲಬದ್ಧತೆ ಬಾಧಿಸಬಹುದು. ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ ಫಲ, ಹೂಡಿಕೆ ಮಾಡಬೇಡಿ. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

ಕುಂಭ(Aquarius): ತಾಳ್ಮೆ ವಹಿಸಿಕೊಂಡರೆ ಸಂಸಾರದಲ್ಲಿ ನೆಮ್ಮದಿ ಸಾಧಿಸಬಹುದು. ಗೃಹ, ವಾಹನಾದಿ ಖರೀದಿ ಯೋಗವಿದೆ. ಮಕ್ಕಳ ವಿಷಯದಲ್ಲಿ ಚಿಂತಿತರಾಗುವಿರಿ. ಮನಸ್ಸಲ್ಲಿ ಸಣ್ಣ ಪುಟ್ಟ ಕೊರಗುಗಳು ಬಾಧಿಸುವವು. ಎಲ್ಲ ಇದ್ದೂ ಯಾರೂ ಇಲ್ಲ ಎನಿಸಬಹುದು. ಹನುಮಾನ್ ಚಾಲೀಸಾ ಹೇಳಿಕೊಳ್ಳಿ. 

ಮೀನ(Pisces): ಆಸ್ತಿ ಖರೀದಿ ಯೋಗವಿದೆ. ಕಾರ್ಯ ಕ್ಷೇತ್ರದಲ್ಲಿ ಉನ್ನತಾಧಿಕಾರಿಗಳಿಂದ ಪ್ರಶಂಸೆ ಇರಲಿದೆ. ದೇವತಾ ಕಾರ್ಯಗಳಲ್ಲಿ ಭಾಗಿ. ನೆಂಟರಿಷ್ಟರ ಭೇಟಿ, ದೂರ ಪ್ರಯಾಣದಿಂದ ಕಾರ್ಯ ಸಿದ್ಧಿ. ಸಂಗಾತಿಯ ಸಂಪೂರ್ಣ ಸಹಕಾರ ಸಿಗಲಿದೆ. ದುರ್ಗಾ ಅಷ್ಟೋತ್ತರ ಹೇಳಿಕೊಳ್ಳಿ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

PREV
Read more Articles on
click me!

Recommended Stories

ಗಜಕೇಸರಿ ರಾಜಯೋಗದಿಂದ ಈ ರಾಶಿಗೆ ಸಂಪತ್ತು, ಚಿನ್ನದಂತಾ ಅದೃಷ್ಟ
ಜನವರಿ 2026 ರಲ್ಲಿ ಐದು ಅಪರೂಪದ ರಾಜಯೋಗ, ಈ 3 ರಾಶಿಗೆ ಬಂಪರ್ ಅದೃಷ್ಟ