ಶನಿಗ್ರಹವನ್ನು ಪಾಪ ಗ್ರಹ, ಛಾಯಾ ಗ್ರಹ ಎಂದೇ ಕರೆಯಲಾಗುತ್ತದೆ. ಇದೇ ಏಪ್ರಿಲ್ ನಲ್ಲಿ ಮೀನರಾಶಿಗೆ ಶನಿಯ ಸಾಡೇ ಸಾತ್ ನ ಮೊದಲ ಚರಣ ಆರಂಭ ವಾಗಲಿದೆ. ಮಕರ ಕುಂಭ ಮತ್ತು ಮೀನ ರಾಶಿಗಳ ಶನಿ ಸಾಡೇ ಸಾತ್ ಮತ್ತು ಅರ್ಧಾಷ್ಟಮದ ಬಗ್ಗೆ ತಿಳಿಯೋಣ....
ಗ್ರಹಗಳ (Planet) ಗೋಚಾರ (Transit) ಹೊಸತೇನಲ್ಲ. ಪ್ರತಿ ಗ್ರಹಕ್ಕೂ ಅದರದ್ದೇ ಆದ ಚಲನೆಯ ಅವಧಿ ಇರುತ್ತದೆ. ಆದರೆ ಈ ಬಾರಿ ಅಂದರೆ ಇದೇ ಏಪ್ರಿಲ್‌ನಲ್ಲಿ ಒಂಭತ್ತೂ ಗ್ರಹಗಳು ತಮ್ಮ ರಾಶಿ (Zodiac) ಬದಲಾವಣೆ ಮಾಡಲಿವೆ. ಸೂರ್ಯ (Sun), ಬುಧ (Mercury) ಮತ್ತು ಶುಕ್ರ (Venus) ಗ್ರಹಗಳ ಗೋಚಾರಕ್ಕೆ ಒಂದು ತಿಂಗಳು ತೆಗೆದುಕೊಳ್ಳುತ್ತವೆ. ಅದೇ ಮಂಗಳ (Mars) ಗ್ರಹವು ನಲವತ್ತೈದು ದಿನಗಳಿಗೊಮ್ಮೆ ರಾಶಿ ಬದಲಾವಣೆ ಮಾಡುತ್ತದೆ. ಅದೇ ಚಂದ್ರಗ್ರಹವು ಅರ್ಧ ದಿನಕ್ಕೆ ಒಮ್ಮೆ ರಾಶಿ ಬದಲಾವಣೆ ಮಾಡುತ್ತದೆ. ರಾಹು ಕೇತು ಶನಿ ಮತ್ತು ಗುರು ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಹೋಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ.
ಗುರುಗ್ರಹವು (Jupiter) ಒಂದೇ ರಾಶಿಯಲ್ಲಿ ಹನ್ನೆರಡು ತಿಂಗಳು ಇರುತ್ತದೆ. ರಾಹು ಕೇತು ಒಂದೇ ಮನೆಯಲ್ಲಿ ಹದಿನೆಂಟು ತಿಂಗಳು ಇರುತ್ತವೆ. ಶನಿಗ್ರಹವು ಒಂದೇ ರಾಶಿಯಲ್ಲಿ ಮೂವತ್ತು ತಿಂಗಳು ಇರುತ್ತದೆ.
ಇದನ್ನು ಓದಿ:Astrology Tips: ಮನಶ್ಶಾಂತಿ ಬೇಕಿದ್ದರೆ ಜ್ಯೋತಿಷ್ಯದ ಈ ಸೂತ್ರ ಪಾಲಿಸಿ!
ಶನಿಗ್ರಹವು (Saturn) ನ್ಯಾಯ ನೀಡುವ ಗ್ರಹವಾಗಿದೆ. ಕರ್ಮಕ್ಕೆ ತಕ್ಕ ಫಲವನ್ನು ನೀಡುವ ದೇವ ಶನಿದೇವ ಆಗಿದ್ದಾನೆ. ವ್ಯಕ್ತಿಯ ಕರ್ಮಗಳಿಗೆ ತಕ್ಕಂತೆ ಶುಭ ಮತ್ತು ಅಶುಭ ಫಲಗಳನ್ನು ನೀಡುತ್ತಾನೆ. ನ್ಯಾಯವಾಗಿ ಧರ್ಮದ ದಾರಿಯಲ್ಲಿ ನಡೆದು ಅವರಿಗೆ ಶುಭ ಪರಿಣಾಮಗಳು (Effects) ಉಂಟಾಗುತ್ತವೆ. ಜಾತಕದಲ್ಲಿ ಶನಿ ಗ್ರಹವು ಶುಭ ಭಾವದಲ್ಲಿದ್ದರೆ ಅಂತಹ ವ್ಯಕ್ತಿಗಳಿಗೆ ಶುಭ ಫಲಗಳು ಉಂಟಾಗುತ್ತವೆ. ಅದೇ ಶನಿ ಗ್ರಹವು ಅಶುಭ ಭಾವದಲ್ಲಿ ಸ್ಥಿತವಾಗಿದ್ದರೆ ಅಂಥ ವ್ಯಕ್ತಿಗಳಿಗೆ ಅನೇಕ ತೊಂದರೆ ತಾಪತ್ರಯಗಳ ಕಷ್ಟಗಳು (Difficulties) ಎದುರಾಗುತ್ತವೆ. ಹಾಗಾಗಿ ಇದರಿಂದ ಪಾರಾಗಲು ಶನಿಯ ಮಂತ್ರಗಳನ್ನು ಜಪಿಸುವುದು ಶನಿ ದೇವರ ಆರಾಧನೆ ಮಾಡುವುದು ಒಳ್ಳೆಯದು.
ಇದೇ ಏಪ್ರಿಲ್ ತಿಂಗಳಿನಲ್ಲಿ ಈ ಎಲ್ಲಾ ಗ್ರಹಗಳು ರಾಶಿ ಬದಲಾವಣೆ ಮಾಡಲಿವೆ. ಶನಿ ಸಾಡೆ ಸಾತಿಯು ಧನು ರಾಶಿಗೆ ಮುಕ್ತಿ ನೀಡಲಿದ್ದು. ಮೀನ (Pisces ) ರಾಶಿಯಲ್ಲಿ ಪ್ರಾರಂಭ ವಾಗಲಿದೆ. ಏಪ್ರಿಲ್ 29ರಂದು ಶನಿಗ್ರಹವು ಕುಂಭ (Aquarius) ರಾಶಿಗೆ ಪ್ರವೇಶಿಸಲಿದೆ. ಶನಿಗ್ರಹದ ರಾಶಿ ಪರಿವರ್ತನೆ ಜತೆಗೆ ಮಿಥುನ ಮತ್ತು ತುಲಾ ರಾಶಿಗೆ ಶನಿ ಅರ್ಧಾಷ್ಟಮ ಮುಗಿಯಲಿದೆ. ಕರ್ಕಾಟಕ ಮತ್ತು ವೃಶ್ಚಿಕ ರಾಶಿಗೆ ಶನಿಯ ಅರ್ಧಾಷ್ಟಮ ಆರಂಭವಾಗಲಿದೆ.
ಶನಿ ಸಾಡೇಸಾತಿಯ ಪ್ರಭಾವ ಮಕರ, ಕುಂಭ ಮತ್ತು ಮೀನ ರಾಶಿಯ ಮೇಲೆ ಆಗುತ್ತದೆ. ಕುಂಭ ರಾಶಿಗೆ ಶನಿ ಸಾಡೇಸಾತಿಯ ಎರಡನೇ ಚರಣ , ಮಕರ ರಾಶಿಗೆ ಮೂರನೇ ಚರಣ ಮತ್ತು ಮೀನ ರಾಶಿಗೆ ಮೊದಲ ಚರಣ ಆರಂಭ ವಾಗಲಿದೆ. ಶನಿಗ್ರಹದ ರಾಶಿ ಪರಿವರ್ತನೆಯಿಂದಾಗಿ ಕೆಲವು ರಾಶಿಯವರಿಗೆ ಸಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ. ಮೇಷ ತುಲಾ ವೃಷಭ ಮತ್ತು ಧನು ರಾಶಿ ವ್ಯಕ್ತಿಗಳಿಗೆ ಶನಿ ರಾಶಿ ಪರಿವರ್ತನೆಯಿಂದಾಗಿ ಶುಭ ಪರಿಣಾಮಗಳು ಉಂಟಾಗುತ್ತವೆ. ಅರ್ಧಕ್ಕೆ ನಿಂತ ಕೆಲಸಗಳು ಪೂರ್ಣಗೊಳ್ಳುತ್ತವೆ, ಉದ್ಯೋಗದಲ್ಲಿ ಬಡ್ತಿ ಸಿಗುವುದಲ್ಲದೆ ಆದಾಯದಲ್ಲಿ ವೃದ್ಧಿ ಕಾಣಬಹುದಾಗಿದೆ. ಕುಟುಂಬದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗುತ್ತದೆ.
ಇದನ್ನು ಓದಿ: Astrology Prediction: ರಸ್ತೆಯಲ್ಲಿ ದುಡ್ಡು ಸಿಕ್ಕರೆ ಏನರ್ಥ?! ಇದರಿಂದ ಒಳ್ಳೇದಾಗತ್ತಾ ಅಥವಾ ಕೆಟ್ಟದ್ದಾ?
ಪಾರಾಗಲು ಹೀಗೆ ಮಾಡಿ
ಶನಿಗ್ರಹದ ತೊಂದರೆಗಳಿಂದ ಪಾರಾಗಲು ಶನಿಮಂದಿರಕ್ಕೆ ತೆರಳುವುದು ಎಣ್ಣೆ, ಕಪ್ಪು ಎಳ್ಳು, ಕಪ್ಪು ಉದ್ದು, ಸಾಸಿವೆ ಎಣ್ಣೆ ಮುಂತಾದ ವಸ್ತುಗಳನ್ನು ದಾನವಾಗಿ ನೀಡುವುದು. ಅಷ್ಟೇ ಅಲ್ಲದೆ ನಿರ್ಗತಿಕರಿಗೆ ಕಪ್ಪು ವಸ್ತ್ರವನ್ನು ಕಪ್ಪುಬಣ್ಣದ ಅವಶ್ಯಕವಾದ ವಸ್ತುಗಳನ್ನು ದಾನವಾಗಿ ನೀಡುವುದರಿಂದ ಶನಿಗ್ರಹದ ಕೃಪೆಗೆ ಪಾತ್ರರಾಗಬಹುದು.
ಶನಿ ಮಂತ್ರ ಪಠಿಸಿ
ಶನಿ ಮಂತ್ರಗಳನ್ನು ಪಠಿಸುವುದು ಮತ್ತು ಶನಿಶಾಂತಿ ಹೋಮ ಹವನಗಳನ್ನು ಮಾಡಿಸುವುದರಿಂದ ಶನಿಯ ಅಶುಭ ಪ್ರಭಾವಗಳಿಂದ ಪಾರಾಗಬಹುದಾಗಿದೆ.