
ಶನಿವಾರ ಅಂದರೆ ಶನೀಶ್ವರನ ಅಧಿಪತ್ಯ ಇರುವ ದಿನ. ಅಂದು ನೀವು ಶನಿ ದೇವಾಲಯಕ್ಕೆ ಹೋಗಿ ಎಳ್ಳೆಣ್ಣೆ ದೀಪ ಅರ್ಪಿಸುವ ರೂಢಿ ಇಟ್ಟುಕೊಂಡಿರಬಹುದು. ಇದು ಒಳ್ಳೆಯದೇ. ಒಂದು ವೇಳೆ ಇದನ್ನು ಮಾಡಲು ನಿಮಗೆ ಸಮಯ ಆಗಲಿಲ್ಲ ಎಂದಿಟ್ಟುಕೊಳ್ಳಿ. ಆಗ ಶುಭವಾಗಲಿ ಎಂದು ಏನು ಮಾಡಬಹುದು? ಅದಕ್ಕೂ ಜ್ಯೋತಿಷ್ಯದಲ್ಲಿ ನಿವೃತ್ತಿಯಿದೆ. ಕಠೋರ ದೇವರಾದ ಶನಿ ದೇವನನ್ನು ಮೆಚ್ಚಿಸಲು ಜನ ವಿವಿಧ ಕ್ರಮಗಳನ್ನು ಹಾಗೂ ಪೂಜೆಗಳನ್ನು ಮಾಡುತ್ತಾರೆ. ಧರ್ಮರಾಜ ಎಂದು ಕರೆಯಲಾಗುವ ಶನಿ ದೇವರು ವ್ಯಕ್ತಿಯ ಕೆಟ್ಟ ಮತ್ತು ಒಳ್ಳೆಯ ಕಾರ್ಯಗಳಿಗೆ ಅನುಗುಣವಾಗಿ ಫಲನ್ನು ನೀಡುತ್ತಾನೆ. ಈ ಕಾರಣಕ್ಕಾಗಿ ನಾವು ಯಾವಾಗಲೂ ಒಳ್ಳೆಯ ಕೆಲಸಗಳನ್ನು ಮಾಡಬೇಕು. ನೀವು ಶನಿವಾರದಂದು ಈ 6 ವಸ್ತುಗಳಗಳನ್ನು ನೋಡಿದರೆ ಶೀಘ್ರದಲ್ಲೇ ಶನಿದೇವr ಆಶೀರ್ವಾದವು ನಿಮ್ಮ ಮೇಲೆ ಪ್ರಸನ್ನವಗುತ್ತದೆ. ಶನಿವಾರದಂದು ಈ ವಸ್ತುಗಳನ್ನು ನೋಡುವುದು ಅತ್ಯಂತ ಮಂಗಳಕರ.
1) ಎಳ್ಳು
ಕಪ್ಪು ಎಳ್ಳನ್ನು ಶನಿವಾರ ಬೆಳಗ್ಗೆ ನೋಡುವುದು ಶ್ರೇಯಸ್ಕರ. ಇದು ನಿಮ್ಮ ಅಡುಗೆ ಮನೆಯಲ್ಲೇ ಇರುವುದರಿಂದ ಇದನ್ನು ಪಾಲಿಸಲು ಹೆಚ್ಚಿನ ಕಷ್ಟವಿಲ್ಲ. ಎಳ್ಳು ಶ್ರದ್ಧಾಭ್ತಿಯ ಕಾರ್ಯಗಳಲ್ಲಿ ಪಿತೃಗಳಿಗೆ ಪ್ರಿಯವಾದ ಸಂಗತಿಯಾದರೂ, ಶನೀಶ್ವರನಿಗೂ ಅಷ್ಟೇ ಪ್ರಿಯ. ಅದಕ್ಕೇ ಆತನಿಗೆ ಎಳ್ಳೆಣ್ಣೆ ಅರ್ಪಿಸುವುದು.
2) ಕಾಗೆ
ಶನಿದೇವನ ವಾಹನ ಕಾಗೆ. ನೀವು ಶನಿವಾರದಂದು ಮುಂಜಾನೆ ಎದ್ದಾಕ್ಷಣ ಕಪ್ಪು ಕಾಗೆಯನ್ನು ನೋಡಿದರೆ, ನೀವು ತುಂಬಾ ಅದೃಷ್ಟವಂತರು ಎಂಬುದನ್ನು ಅರ್ಥಮಾಡಿಕೊಳ್ಳಿ. ಕಾಗೆಯನ್ನು ನೋಡುವುದು ಎಂದರೆ ಶನಿದೇವನು ನಿಮ್ಮ ಮೇಲೆ ಸಂತೋಷಗೊಂಡಿದ್ದಾನೆ ಎಂಬುದಾಗಿದೆ ಮತ್ತು ಶೀಘ್ರದಲ್ಲೇ ನಿಮಗೆ ಒಳ್ಳೆಯ ಸುದ್ದಿ ಸಿಗಬಹುದು.
3) ಭಿಕ್ಷುಕ
ನೀವು ಶನಿವಾರದಂದು ಭಿಕ್ಷುಕನನ್ನು ನೋಡಿದ್ದರೆ ಅಥವಾ ಭಿಕ್ಷುಕ ಬಂದು ನಿಮ್ಮ ಬಳಿ ಏನನ್ನಾದರೂ ಕೇಳಿದ್ದರೆ, ಖಂಡಿತವಾಗಿಯೂ ಅವನಿಗೆ ಏನನ್ನಾದರೂ ನೀಡಿ. ಹೀಗೆ ಮಾಡುವುದರಿಂದ ಶನಿದೇವನು ನಿಮ್ಮಿಂದ ಪ್ರಸನ್ನನಾಗುತ್ತಾನೆ ಮತ್ತು ನಿಮ್ಮ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾನೆ.
4) ಕಪ್ಪು ನಾಯಿ
ಶನಿವಾರದ ದಿನದಂದು ಕಪ್ಪು ನಾಯಿಯನ್ನು ನೋಡುವುದು ಶುಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ನೀವೂ ಕೂಡ ಕಪ್ಪು ನಾಯಿಯನ್ನು ನೋಡಿದ್ದರೆ ಅದಕ್ಕೆ ಏನಾದರೂ ಆಹಾರವನ್ನು ನೀಡಿ. ಇದು ಕೇತು ದೋಷದಿಂದ ಪರಿಹಾರವನ್ನು ನೀಡುವುದಲ್ಲದೆ ಶನಿ ದೇವರ ಆಶೀರ್ವಾದವನ್ನು ಸಹ ನಿಮ್ಮ ಮೇಲೆ ಇರುವಂತೆ ಮಾಡುತ್ತದೆ.
ಹಕ್ಕಿಗಳ ಕೂಗಿನ ಶಕುನ: ಯಾವ ಹಕ್ಕಿ ಮನೆ ಬಳಿ ಕೂಗಿದರೆ ಏನು ಫಲ?
5) ಕಪ್ಪು ಹಸು
ಶನಿವಾರದಂದು ಕಪ್ಪು ಹಸುವನ್ನು ನೋಡುವುದರಿಂದ ನೀವು ಪ್ರತಿ ಕೆಲಸದಲ್ಲಿ ಯಶಸ್ಸನ್ನು ಪಡೆಯಲಿದ್ದೀರಿ ಎಂದರ್ಥ. ಶನಿವಾರದಂದು ಕಪ್ಪು ಹಸುವಿನ ದರ್ಶನವು ಶುಭ ಸಂಕೇತವಾಗಿದೆ.
6) ಕೋತಿ
ಕೋತಿ ಎಂದರೆ ಆಂಜನೇಯನ ಸಂಕೇತ ಎಂದು ಭಾವಿಸಬೇಕು. ಹನುಮಾನ್ ಚಾಲೀಸಾ ಪಠಿಸುವುದು ಶನಿದೋಷದಿಂದ ಫಾರಾಗುವ ವಿಧಾನಗಳಲ್ಲೊಂದು ಎಂಬುದು ನಿಮಗೆ ಗೊತ್ತಿದೆ. ಹಾಗೇ ಶನಿವಾರ ಕೋತಿಯನ್ನು ನೋಡುವುದು ಶ್ರೇಯಸ್ಕರ. ಇದು ಶನಿದೋಷಗಳನ್ನು ಆ ವಾರದ ಮಟ್ಟಿಗೆ ನಿವಾರಿಸುತ್ತದೆ.
ಶನಿವಾರದ ದಿನದಂದು ನೀವು ಈ 6 ವಸ್ತುಗಳನ್ನು ನೋಡುವುದು ಶುಭ ಸೂಚನೆ. ನಿಮಗೆ ಇವು ಶುಭ ಫಲಗಳನ್ನು ನೀಡುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.
ಪುರುಷರಿಗೆ ಮಾತ್ರ ಅಲ್ಲ ಮಹಿಳೆಯರನ್ನೂ ಕಾಡುತ್ತೆ ಪಿತೃ ದೋಷ?