ಸಂಸಾರದಲ್ಲಿ ಕಾಣಿಸಿಕೊಳ್ಳುವ ಹಲವು ಸಮಸ್ಯೆಗಳಿಗೆ ಒಂದಲ್ಲ ಒಂದು ವಾಸ್ತು ದೋಷವೇ ಕಾರಣವೆಂದು ಜನರು ನಂಬಿರುತ್ತಾರೆ. ಆದರೆ, ಪ್ರತಿಯೊಂದೂ ಸಮಸ್ಯೆಗೆ ಪರಿಹಾರವೂ ಲಭ್ಯ. ಮದುವೆ ವಿಳಂಬವಾಗುವು ಸಮಸ್ಯೆಗೆ ಇಲ್ಲಿವೆ ಪರಿಹಾರ...
ಕೇವಲ ಮನೆ ಕಟ್ಟಲು, ಉತ್ತಮ ಉದ್ಯೋಗ ದೊರೆಯಲು ಹಾಗೂ ಸಂಪತ್ತು ವೃದ್ಧಿಯಾಗಲು ಮಾತ್ರ ವಾಸ್ತು ನೋಡೋದಲ್ಲ. ಕೆಲವೊಂದು ಮುಖ್ಯವಾದ ವಿಚಾರಕ್ಕೂ ವಾಸ್ತು ಶಾಸ್ತ್ರ ಬೇಕಾಗುತ್ತದೆ. ಮದುವೆಯಂಥ ವಿಷಯಕ್ಕೂ ವಾಸ್ತು ಬೇಕು. ಅದರಲ್ಲೂ ಬೇಗ ಮದುವೆಯಾಗಲು ಕೆಲವೊಂದು ವಾಸ್ತು ನಿಯಮಗಳನ್ನು ಪಾಲಿಸಬೇಕು.