ಜಪಮಾಲೆ ರಕ್ತದೊತ್ತಡ ನಿಯಂತ್ರಣಕ್ಕೂ ಮದ್ದು...

By Web DeskFirst Published Mar 1, 2019, 4:21 PM IST
Highlights

ಕೆಲವೊಂದು ನಂಬಿಕೆಗಳಿಗೆ ತನ್ನದೇ ಆದ ಕಾರಣಗಳಿವೆ. ಅದರಲ್ಲಿಯೂ ಹಳೆಯ ಆಚಾರಗಳಿಗೆ, ಹೊಸ ವಿಚಾರಗಳಿವೆ. ಜಪ ಮಾಡುವಾಗ ಜಪಮಾಲೆ ಬಳಸುವುದು ಏಕೆ? ಇಲ್ಲಿದೆ ರೀಸನ್ಸ್....

ಪ್ರಾರ್ಥಿಸಲು ವಿಭಿನ್ನ ವಿಧಾನಗಳಿವೆ. ಮಂತ್ರ ಜಪಿಸುವುದು ಪ್ರಭಾವಶಾಲಿಯೂ ಹೌದು. ಇದು ಮನಸ್ಸನ್ನು ಬೇಗ ನಿಯಂತ್ರಿಸುತ್ತದೆ. ಬೇರೆ ಬೇರೆ ಮಂತ್ರಗಳನ್ನು ಜಪಿಸುವುದರಿಂದ ಬೇರೆ ಬೇರೆ ರೀತಿಯ ಲಾಭಗಳಿವೆ. ಮಂತ್ರ ಜಪಿಸುವಾಗ ಮಾಲೆಯನ್ನು ಹಿಡಿಯುತ್ತಾರೆ. ಬೇರೆ ಬೇರೆ ರೀತಿಯ ಮಾಲೆಗಳನ್ನೂ ಹಿಡಿಯುತ್ತಾರೆ. ಈ ಮಾಲೆಯ ಮಹತ್ವವೇನು? 

ರುದ್ರಾಕ್ಷಿ: ಈ ಮಾಲೆಯನ್ನು ಹಿಡಿದು ಎಲ್ಲಾ ಮಂತ್ರಗಳನ್ನೂ ಸುಲಭವಾಗಿ ಜಪಿಸಬಹುದು. ಇನ್ನು ಶಿವನಿಗೆ ರುದ್ರಾಕ್ಷಿ ಪ್ರಿಯ. ಆದುದರಿಂದ ಮಹಾಮೃತ್ಯುಂಜಯ ಮಂತ್ರ ಜಪಿಸಲು ರುದ್ರಾಕ್ಷಿ ಮಾಲೆ ಬಳಸಲಾಗುತ್ತದೆ. ಜತೆಗೆ ಬೇರೆ ದೇವರ ಮಂತ್ರವನ್ನೂ ಈ ಮಾಲೆ ಬಳಸಿ ಪಠಿಸಬಹುದು. 

ಹಳದಿ: ಹಳದಿ ಬಣ್ಣದ ಮಾಲೆ ಹಿಡಿದು, ಜಪಿಸಿದರೆ ಮನಸ್ಸಿನ ಇಚ್ಛೆ ಪೂರ್ತಿಯಾಗುತ್ತದೆ. ಬೃಹಸ್ಪತಿ ಮತ್ತು ಬಾಗಲಾಮುಖಿ ದೇವಿ ಮಂತ್ರ ಜಪಿಸುವಾಗಲೂ ಈ ಮಾಲೆ ಬಳಸಬೇಕು. ಹಳದಿ ಮಾಲೆಯಿಂದ ವಿದ್ಯೆ, ಸಂತಾನ ಮತ್ತು ಜ್ಞಾನ ಪ್ರಾಪ್ತಿಯಾಗುತ್ತದೆ. 

ಸ್ಫಟಿಕ: ಸ್ಪಟಿಕ ಮಾಲೆಯ ಪ್ರಯೋಗದಿಂದ ಧನ ಪ್ರಾಪ್ತಿಯಾಗುತ್ತದೆ. ಜೊತೆಗೆ ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ. ಲಕ್ಷ್ಮಿ ದೇವಿಯನ್ನು ಜಪಿಸಲು ಈ ಮಾಲೆ ಬಳಸಲಾಗುತ್ತದೆ. ಅಧಿಕ ರಕ್ತದೊತ್ತಡ ಇರವವರು ಈ ಮಾಲೆ ಬಳಸಬೇಕು. 

ಚಂದನ: ದುರ್ಗಾ ದೇವಿಯ ಮಂತ್ರ ಜಪಿಸಲು ಕೆಂಪು ಚಂದನ ಹಾಗೂ ಕೃಷ್ಣಾ ಮಂತ್ರ ಜಪಿಸಲು ಬಿಳಿ ಚಂದನ ಬಳಸುತ್ತಾರೆ. 

ತುಳಸಿ : ತುಳಸಿ ಮಾಲೆ ದೇವಿ ಮತ್ತು ಶಿವನ ಮಂತ್ರ ಜಪಿಸಲು ಬಳಕೆಯಾಗುತ್ತದೆ. ತುಳಸಿ ಮಾಲೆ ಧರಿಸಿದರೆ ಜೀವನ ಸುಖಮಯವಾಗುತ್ತದೆ ಎಂಬ ನಂಬಿಕೆ ಇದೆ.

click me!