ತಮ್ಮ ಮಕ್ಕಳು ಚೆನ್ನಾಗಿ ಓದಿ ಬುದ್ಧಿವಂತರಾಗಲಿ ಎನ್ನುವುದು ಪ್ರತಿಯೊಬ್ಬ ಪೋಷಕರ ಆಶಯವೂ ಹೌದು. ಆದರೆ, ಕೆಲವೊಮ್ಮೆ ಏನೇ ಮಾಡಿದರೂ ಈ ವಿದ್ಯೆ ಎನ್ನುವುದು ಕೆಲವು ಮಕ್ಕಳಿಗೆ ಹತ್ತುವುದೇ ಇಲ್ಲ. ಅಂಥವರಿಗೆ ಇಲ್ಲಿವೆ ಟಿಪ್ಸ್...
ಪ್ರತಿಯೊಬ್ಬರೂ ತಮ್ಮ ಕರಿಯರ್ ಬಗ್ಗೆ ಏನಾದರೊಂದು ಕನಸು ಕಾಣುತ್ತಿರುತ್ತಾರೆ. ಕೆಲವರಿಗೆ ಸುಲಭವಾಗಿ ಜಯ ಪ್ರಾಪ್ತಿಯಾದರೆ, ಇನ್ನು ಕೆಲವರಿಗೆ ಎಷ್ಟು ಶ್ರಮಿಸಿದರೂ ಸಫಲತೆ ಸಿಗುವುದೇ ಇಲ್ಲ. ಎಲ್ಲಿ ತಮ್ಮ ಕರಿಯರ್ ರೂಪಿಸಲು ತಯಾರಿ ನಡೆಸುತ್ತಾರೋ, ಅಲ್ಲಿ ನೆಗೆಟಿವ್ ಎನರ್ಜಿ ಇರುವುದರಿಂದ ಈ ರೀತಿಯ ಹಿನ್ನಡೆ ಕಾಡುತ್ತದೆ. ಕರಿಯರ್ ನಲ್ಲಿ ಯಶಸ್ಸು ಸಾಧಿಸಲು ಸರಸ್ವತಿಗೆ ಸಂಬಂಧಿಸಿದ ಈ ವಸ್ತುಗಳು ಮನೆಯಲ್ಲಿರಲಿ....
ವೀಣೆ: ವೀಣೆ ಸರಸ್ವತಿ ದೇವಿಯ ಪ್ರಿಯವಾದ ಸಂಗೀತ ಸಾಧನ. ಪವಿತ್ರವೆಂದೇ ಭಾವಿಸುವ ವೀಣೆಯನ್ನು ಮನೆಯಲ್ಲಿಟ್ಟರೆ ಸುಖ ಶಾಂತಿ ಲಭಿಸಿ, ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ.
undefined
ಹಂಸದ ಫೋಟೋ ಅಥವಾ ಶೋ ಪೀಸ್: ಹಂಸ ಸರಸ್ವತಿ ದೇವಿಯ ವಾಹನ. ಆದುದರಿಂದ ಇದು ಶುಭ. ಹಂಸದ ಫೋಟೋ ಮತ್ತು ಶೂ ಪೀಸ್ ಮನೆಯಲ್ಲಿದ್ದು, ಎಲ್ಲರ ದೃಷ್ಟಿ ಅದರ ಮೇಲೆ ಬೀಳುವಂತಿರಲಿ. ಇದರಿಂದ ಮನಸ್ಸು ಶಾಂತವಾಗಿರುತ್ತದೆ ಹಾಗೂ ಫೋಕಸ್ ಮಾಡಲು ಸಾಧ್ಯ.
ನವಿಲುಗರಿ: ನವಿಲುಗರಿ ದೇವ-ದೇವತೆಗಳಿಗೆ ಸಂಬಂಧಿಸಿದ್ದು, ಇದನ್ನು ಮನೆಯಲ್ಲಿಡುವುದು ಉತ್ತಮ. ಇದನ್ನು ದೇವರ ಕೋಣೆಯಲ್ಲಿ ಅಥವಾ ಮಕ್ಕಳ ರೂಮಿನಲ್ಲಿಟ್ಟರೆ ಉತ್ತಮ.
ತಾವರೆ ಹೂ: ಪ್ರತಿದಿನ ಪೂಜೆಗೆ ಇತರೆ ಹೂವುಗಳೊಂದಿಗೆ ತಾವರೆ ಹೂವನ್ನಿಡಿ. ಇದರಿಂದ ಮನೆಯಲ್ಲಿ ಖುಷಿ ಮತ್ತು ಸಂತೋಷ ಇರುತ್ತದೆ. ಆದರೆ ಫ್ರೆಶ್ ತಾವರೆ ಇರಲಿ.
ಸರಸ್ವತಿ ಮೂರ್ತಿ: ಸರಸ್ವತಿ ದೇವಿಯನ್ನು ವಿದ್ಯಾ ದೇವಿ ಎನ್ನುತ್ತಾರೆ. ಈ ಮೂರ್ತಿಯನ್ನು ಮನೆಯಲ್ಲಿಟ್ಟರೆ ಜೀವನದಲ್ಲಿ ಸಫಲತೆ ಸಿಗುತ್ತದೆ.