Vastu Tips: ಜೀವನದಲ್ಲಿ ಯಶಸ್ಸುಬೇಕೆಂದ್ರೆ ಗಡಿಯಾರವನ್ನು ಇಲ್ಲಿಡಿ

By Suvarna News  |  First Published May 4, 2022, 3:54 PM IST

Vastu Shastra Tips in Kannada: ಮದುವೆ, ಗೃಹ ಪ್ರವೇಶ ಸೇರಿದಂತೆ ಯಾವುದೇ ಕಾರ್ಯಕ್ರಮದಲ್ಲಿ ಗಿಫ್ಟ್ ರೂಪದಲ್ಲಿ ಸಾಕಷ್ಟು ಗಡಿಯಾರ ಬಂದಿರುತ್ತದೆ. ಅವಶ್ಯಕತೆ ಇರಲಿ, ಬಿಡಲಿ ಮನೆಯ ಮೂರ್ನಾಲ್ಕು ಕಡೆ ಗಡಿಯಾರ ಹಾಕಿರ್ತೇವೆ. ಆದ್ರೆ ಅವು ನಮ್ಮ ಜೀವನದಲ್ಲಿ ಸಮಸ್ಯೆ ತರಬಹುದು ಎಂಬುದು ನಮಗೆ ಗೊತ್ತಿರೋದೆ ಇಲ್ಲ. 
 


ವಾಸ್ತು ಶಾಸ್ತ್ರದ (Architecture ) ಪ್ರಕಾರ ಮನೆ (Home) ಯಲ್ಲಿರುವ ಪ್ರತಿಯೊಂದು ವಸ್ತುವೂ ಮಹತ್ವ ಪಡೆಯುತ್ತದೆ. ಹಾಳಾದ, ಒಡೆದ ವಸ್ತುಗಳನ್ನು ಮನೆಯಲ್ಲಿ ಇಡಬಾರದು. ಬಾತ್ ರೂಮ್, ಅಡುಗೆ ಮನೆ, ದೇವರ ಮನೆ ಸೂಕ್ತ ದಿಕ್ಕಿನಲ್ಲಿರಬೇಕು. ಮಲಗುವ ದಿಕ್ಕಿನಿಂದ ಹಿಡಿದು ಮಲಗುವ ವಿಧಾನ ಕೂಡ ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಹಾಗೆಯೇ ಮನೆಯಲ್ಲಿರುವ ಗಿಡ,ಹೂಗಳು ಮನುಷ್ಯರ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ವಾಸ್ತ್ರು ಶಾಸ್ತ್ರದಲ್ಲಿ ಹೇಳಲಾಗಿದೆ. ಇತ್ತೀಚಿನ ದಿನಗಳಲ್ಲಿ, ಮೊಬೈಲ್, ಸ್ಮಾರ್ಟ್ ವಾಚ್, ಲ್ಯಾಪ್ ಟಾಪ್ ನಲ್ಲಿಯೇ ಜನರು ಗಂಟೆ ನೋಡ್ತಾರೆ. ಆದ್ರೆ ಇವೆಲ್ಲ ಇದ್ದರೂ ಮನೆಯಲ್ಲೊಂದು ಗೋಡೆ ಗಡಿಯಾರ (wall clock ) ಇರ್ಲೇಬೇಕು. ಟೈಂ ನೋಡುವ ಜೊತೆಗೆ ಇದು ವೆರೈಟಿ – ವೆರೈಟಿಯಾಗಿರುವ ಕಾರಣ ಗೋಡೆ ಸೌಂದರ್ಯ (Beauty) ವನ್ನು ಹೆಚ್ಚಿಸುತ್ತದೆ. ಆದ್ರೆ ಮನೆಯಲ್ಲಿರುವ ಗಡಿಯಾರವೂ ವಾಸ್ತು ದೋಷವನ್ನುಂಟು ಮಾಡುತ್ತದೆ. ಮನೆಯ ಎಲ್ಲ ವಸ್ತುಗಳನ್ನು ಸರಿಯಾದ ದಿಕ್ಕಿ (Direction) ನಲ್ಲಿ ಇಡುವಂತೆ ಗಡಿಯಾರವನ್ನು ಕೂಡ ಸರಿಯಾದ ದಿಕ್ಕಿನಲ್ಲಿ ಇಡಬೇಕು. ಇದ್ರಿಂದ ಮನೆಯಲ್ಲಿ ಸಕಾರಾತ್ಮಕತೆ (Positivity ) ಹೆಚ್ಚಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಮನೆಯ ಗೋಡೆಗಳ ಮೇಲಿರುವ ಗಡಿಯಾರದ ಬಗ್ಗೆಯೂ ಕೆಲವು ನಿಯಮಗಳನ್ನು ಹೇಳಲಾಗಿದೆ.

ವಾಸ್ತು ನಿಯಮಗಳ ಪ್ರಕಾರ, ಗಡಿಯಾರವನ್ನು ತಪ್ಪಾಗಿ ಬಳಸಿದರೆ, ಅದು ಮನೆಯಲ್ಲಿ ಅನೇಕ ಸಮಸ್ಯೆಗೆ  ಕಾರಣವಾಗುತ್ತದೆ. ಗಡಿಯಾರವು ಜೀವನದ ಮೇಲೆ ಪರಿಣಾಮ ಬೀರುತ್ತದೆ. ಮನೆಯಲ್ಲಿ ಗಡಿಯಾರ ನಿಲ್ಲದಂತೆ ನೋಡಿಕೊಳ್ಳಬೇಕು. ಗಡಿಯಾರ ನಿಂತರೆ ನಕಾರಾತ್ಮಕ ಶಕ್ತಿ ಹರಡುತ್ತದೆ.  ಮನೆಯೂ ಗಡಿಯಾರದಂತೆ ನಿರ್ಜೀವವಾಗುತ್ತದೆ. ಗಡಿಯಾರದ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ಏನೆಲ್ಲ ಹೇಳಲಾಗಿದೆ ಎಂಬುದನ್ನು ಇಂದು ಹೇಳ್ತೇವೆ. 

Tap to resize

Latest Videos

ಗಡಿಯಾರದ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ಏನಿದೆ? :  ವಾಸ್ತು ಶಾಸ್ತ್ರಜ್ಞರ ಪ್ರಕಾರ, ಮೊದಲೇ ಹೇಳಿದಂತೆ ಗಡಿಯಾರ ನಿಂತ ತಕ್ಷಣ ಅದನ್ನು ರಿಪೇರಿ ಮಾಡಿಸಬೇಕು. ಗಡಿಯಾರ ನಿಂತರೆ ಸಮಸ್ಯೆ ಶುರುವಾಗುತ್ತದೆ.  ನಿಂತ ಗಡಿಯಾರವು ಅಶುಭ ಸೂಚಕವಾಗಿದೆ. ಗಡಿಯಾರ ನಡೆಯದೆ, ನಿಂತಿದ್ದರೆ ಮನೆಯಲ್ಲಿ ರೋಗಗಳು ಶುರುವಾಗುತ್ತವೆ. ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಸಂಚಾರ ಹೆಚ್ಚಾಗುತ್ತದೆ. ಹಾಗಾಗಿ ಮನೆಯಲ್ಲಿ ನಿಂತ ಗಡಿಯಾರವನ್ನು ಎಂದಿಗೂ ಇಡಬೇಡಿ. ಕೆಲವರು ಫ್ರೇಮ್ ಚೆನ್ನಾಗಿದೆ ಎನ್ನುವ ಕಾರಣಕ್ಕೆ ಶೋಕೇಸಿನಲ್ಲಿ ನಿಂತ ಗಡಿಯಾರವನ್ನು ಇಡ್ತಾರೆ. ಇದು ಒಳ್ಳೆಯದಲ್ಲ.

ಮೇ ತಿಂಗಳಲ್ಲಿ ಜನಿಸಿದ ಮಕ್ಕಳು ಈ ವಿಷಯಗಳಲ್ಲಿ ವಿಭಿನ್ನವಾಗಿರುತ್ತಾರೆ

ಗಡಿಯಾರವನ್ನು ದಕ್ಷಿಣ ದಿಕ್ಕಿನಲ್ಲಿ ಇಡಬೇಡಿ : ವಾಸ್ತು ಪ್ರಕಾರ, ಮನೆಯ ದಕ್ಷಿಣ ದಿಕ್ಕು ನಿಶ್ಚಲತೆಯ ದಿಕ್ಕು. ಈ ದಿಕ್ಕಿನಲ್ಲಿ ಗಡಿಯಾರವನ್ನು ಹಾಕುವುದರಿಂದ ನಿಮ್ಮ ಪ್ರಗತಿ ನಿಲ್ಲುತ್ತದೆ. ಇದರೊಂದಿಗೆ ಈ ದಿಕ್ಕಿಗೆ ಗಡಿಯಾರ ಹಾಕುವುದರಿಂದ ಮನೆಯ ಯಜಮಾನನ ಆರೋಗ್ಯ ಹದಗೆಡುತ್ತದೆ ಎಂಬ ನಂಬಿಕೆಯೂ ಇದೆ. ಅಲ್ಲದೆ ದುಂದುವೆಚ್ಚವೂ ಹೆಚ್ಚಾಗುತ್ತದೆ. ಇದರಿಂದ ಮನೆಯಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ. ನಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ. ಮನೆಯ ದಕ್ಷಿಣ ದಿಕ್ಕನ್ನು ಯಮನ ದಿಕ್ಕು ಎಂದು ಕರೆಯುತ್ತಾರೆ. ಆದ್ದರಿಂದ ಈ ಮೂಲೆಯಲ್ಲಿ ಗಡಿಯಾರವನ್ನು ಇಡುವುದರಿಂದ ಕುಟುಂಬದ ಸದಸ್ಯರಲ್ಲಿ ಸಮಸ್ಯೆ ಉಲ್ಬಣಿಸುತ್ತದೆ.

addictions ಬಿಡೋಕ್ ಆಗ್ತಿಲ್ವಾ? ಹೀಗ್ಮಾಡಿ..

ಬಾಗಿಲಿನ ಮೇಲೆ ಗಡಿಯಾರವನ್ನು ಇಡಬೇಡಿ : ಕೆಲವರು ಮನೆಯ ಬಾಗಿಲಿನ ಮೇಲೆ ಗಡಿಯಾರವನ್ನು ಹಾಕಿರ್ತಾರೆ. ಸಮಯವನ್ನು ಸುಲಭವಾಗಿ ತಿಳಿಯಬಹುದು ಎನ್ನುವ ಕಾರಣಕ್ಕೆ ಅಥವಾ ಜಾಗದ ಅಭಾವಕ್ಕೆ ಗಡಿಯಾರವನ್ನು ಬಾಗಿಲ ಮೇಲೆ ಹಾಕಿರ್ತಾರೆ.  ಆದ್ರೆ ಇದು ಒಳ್ಳೆಯದಲ್ಲ. ಇದರಿಂದ ಒತ್ತಡ ಹೆಚ್ಚಾಗುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಬಾಗಿಲಿನ ಮೇಲೆ ಗಡಿಯಾರ ಹಾಕುವುದ್ರಿಂದ ಅನೇಕ ರೀತಿಯ ರೋಗಗಳನ್ನು ಎದುರಿಸಬೇಕಾಗಬಹುದು.  ವಾಸ್ತು ಪ್ರಕಾರ ಎಂದೂ ಬಾಗಿಲಿನ ಮೇಲೆ ಗಡಿಯಾರವನ್ನು ಹಾಕಬಾರದು. ಇದನ್ನು ಅಶುಭವೆಂದು ಪರಿಗಣಿಸಲಾಗಿದೆ.

click me!