ಬ್ರೇಕಪ್ ನೋವು ತಡೆದುಕೊಳ್ಳುವುದು ಎಲ್ಲರಿಗೂ ಕಷ್ಟವೇ. ಹಳೆ ಪ್ರೇಮಿಯು ಎಷ್ಟೇ ಜಗಳವಾಡಿರಲಿ, ದೂರವಾದ ಮೇಲೆ ಅವರೊಂದಿಗೆ ಕಳೆದ ಒಳ್ಳೆಯ ಸಮಯವು ಕಾಡಲಾರಂಭಿಸುತ್ತದೆ. ಈ ಐದು ರಾಶಿಗಳಿಗೆ ಬ್ರೇಕಪ್ ನೋವು ತಡೆದುಕೊಳ್ಳುವುದು ಉಳಿದವರಿಗಿಂತ ಕಷ್ಟ.
ಪ್ರೀತಿಯಲ್ಲಿ ಬೀಳೋದು ಅನನ್ಯ ಅನುಭವ. ಅದೊಂದು ಹೊಸ ಜಗತ್ತೇ ಆಗಿರುತ್ತದೆ. ಆದರೆ, ಬ್ರೇಕಪ್ ಆದಾಗ ಮಾತ್ರ ಆ ಜಗತ್ತೇ ಕುಸಿದು ಹೋದ ನೋವು. ಬದುಕಲು ಭರವಸೆಯೇ ಇಲ್ಲದಂಥಾಗುವುದು. ಜೀವನದಲ್ಲಿ ಅದ್ಬುತ ನೆನಪುಗಳನ್ನು ಕೊಟ್ಟ, ಅನುಭವಗಳನ್ನು ಕೊಟ್ಟ ಆ ಪ್ರೀತಿಯ ಸಂದರ್ಭಗಳನ್ನು ತೊರೆಯುವುದು ಎಷ್ಟು ಕಷ್ಟವೋ, ಮರೆಯುವುದು ಇನ್ನೂ ಕಷ್ಟ. ಕೆಲವರು ಕೆಲವೇ ದಿನಗಳಲ್ಲಿ ಅದರಿಂದ ಹೊರ ಬರುವ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ನೋವು ಇಲ್ಲವೆಂದಲ್ಲ, ಅದನ್ನು ಮೀರುವ ಪ್ರಯತ್ನಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದರೆ, ಮತ್ತೆ ಕೆಲವರಿಗೆ ಈ ಬ್ರೇಕಪ್ ನೋವನ್ನು, ಹಳೆಯ ಪ್ರೀತಿಯನ್ನು ಮರೆಯುವುದು ಸುಲಭವಲ್ಲ. ಹೀಗೆ, ಹಳೆಯ ಪ್ರೇಮಿಯನ್ನು ಮರೆಯಲು ಬಹಳ ಕಷ್ಟ ಪಡುವ, ಮರೆಯುವುದು ಸಾಧ್ಯವೇ ಇಲ್ಲ ಎನ್ನುವ ರಾಶಿಗಳು ಯಾವುವು ಗೊತ್ತಾ?
ವೃಶ್ಚಿಕ ರಾಶಿ(Scorpio)
ವೃಶ್ಚಿಕ ರಾಶಿಯವರು ಸಂಬಂಧಗಳ(relationships) ಬಗ್ಗೆ ತುಂಬಾ ಉತ್ಸುಕರಾಗಿರುತ್ತಾರೆ. ಆದ್ದರಿಂದ, ಅವರು ಯಾರಿಗಾದರೂ ಮನಸ್ಸು ನೀಡಿದರೆ, ಅವರು ಜೀವನಪೂರ್ತಿ ತಮ್ಮ ಸಂಗಾತಿಯಾಗಿ ಜೊತೆಯಲ್ಲಿ ಇರಬೇಕೆಂದು ನಿರೀಕ್ಷಿಸುತ್ತಾರೆ. ಅಂಥ ಸಂದರ್ಭದಲ್ಲಿ ಆ ಸಂಬಂಧವು ಹಳಸಿ, ಬ್ರೇಕಪ್‌ಗೆ ತಿರುಗಿದಾಗ ಅವರು ದುಃಖ ಮತ್ತು ನಿರಾಶೆಯ ಆಳವಾದ ಕಂದಕಕ್ಕೆ ಬೀಳುತ್ತಾರೆ. ಅವರು ತಮ್ಮ ಕೋಣೆಯಲ್ಲಿ ಏಕಾಂಗಿಯಾಗಿ ಹೆಚ್ಚಿನ ಸಮಯ ಅಳುತ್ತಾ ಕಳೆಯುತ್ತಾರೆ. ತಮ್ಮ ಭಾವನೆಗಳನ್ನು ಗುಟ್ಟಿನಂತೆ ಕಾಪಾಡಿಕೊಳ್ಳುವ ಇವರು, ಒಳಗೊಳಗೇ ಬಹಳಷ್ಟು ವರ್ಷಗಳ ಕಾಲ ಈ ಬಗ್ಗೆ ಕೊರಗುತ್ತಾರೆ.
addictions ಬಿಡೋಕ್ ಆಗ್ತಿಲ್ವಾ? ಹೀಗ್ಮಾಡಿ..
ಸಿಂಹ(Leo)
ಇವರು ನೋಡಲು ಎಷ್ಟೇ ಆತ್ಮವಿಶ್ವಾಸದಿಂದ ಕಾಣಬಹುದು, ಆದರೆ ಬ್ರೇಕಪ್(breakup) ಬಳಿಕ ಸಿಂಹ ರಾಶಿಯವರು ದುಃಖದಿಂದ ತೊಳಲಾಡುತ್ತಾರೆ. ಪ್ರೀತಿಸಿದವರನ್ನು ಮರೆಯುವುದು ಇವರಿಗೆ ತುಂಬಾ ಕಷ್ಟ. ಸದಾ ಅವರ ನೆನಪು ಕಾಡುತ್ತಲೇ ಇರುತ್ತದೆ. ಕೆಲವೊಮ್ಮೆ ಪ್ರೇಮಿಯು ತಮ್ಮನ್ನು ತೊರೆದ ಕಾರಣಗಳಿಗೆ ಸವಾಲಾಗಿ ಹೆಚ್ಚು ಬೆಳೆದು ತೋರಿಸಲು ಬಯಸುತ್ತಾರೆ. ಸಾಕಷ್ಟನ್ನು ಸಾಧಿಸುತ್ತಾರೆ. ಆದರೂ, ಕಡೆಗೆ ಆ ಯಶಸ್ಸಿನಲ್ಲೂ ಪ್ರೇಮಿ ಜೊತೆಗಿರಬೇಕಿತ್ತು ಎಂಬ ನೋವು ಉಳಿದೇ ಇರುತ್ತದೆ.
ವೃಷಭ(Taurus)
ಈ ಅಂಶಕ್ಕೆ ಬಂದಾಗ ಅವರು ತುಂಬಾ ಹಠಮಾರಿಗಳಾಗಿರಬಹುದು. ಒಮ್ಮೆ ಅವರು ತಮ್ಮ ಮನಸ್ಸನ್ನು ಯಾರಿಗಾದರೂ ಕೊಟ್ಟರೆ ಮತ್ತೆ ಅವರನ್ನು ಮರೆಯುವುದು ಇವರಿಗೆ ಕಷ್ಟ. ಬ್ರೇಕಪ್ ನಂತರವೂ ದಿನವಿಡೀ ಅವರು ತಮ್ಮ ಮಾಜಿ ಪ್ರೇಮಿ ಬಗ್ಗೆ ಯೋಚಿಸುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ಇದಕ್ಕಾಗಿ ಚಟಗಳನ್ನು ಅಂಟಿಸಿಕೊಳ್ಳಲೂಬಹುದು. ಬ್ರೇಕಪ್ ನೋವು ಇವರಿಗೆ ನುಂಗಲಾರದ ಉಗುಳಲಾರದ ಬಿಸಿ ತುಪ್ಪವಾಗಿ ಕಾಡುತ್ತದೆ.
ಮೇಷ(Aries)
ಇವರು ಮಾಜಿ ಪ್ರೇಮಿಯೊಂದಿಗಿನ ಎಲ್ಲ ಒಳ್ಳೆಯ ನೆನಪುಗಳನ್ನು ಹೃದಯದಲ್ಲಿಟ್ಟುಕೊಂಡು ಕಾಪಾಡಲು ಬಯಸುತ್ತಾರೆ. ಮಾಜಿಯ ಜೊತೆ ಕಳೆದ ಎಲ್ಲ ಒಳ್ಳೆಯ ನೆನಪುಗಳು ಇವರನ್ನು ಆನಂದಿಸುವ ಸಮಯದಲ್ಲೇ ಕಳೆದುಕೊಂಡ ದುಃಖವೂ ಆವರಿಸುತ್ತದೆ. ನೋಡಲು ಸ್ಟ್ರಾಂಗ್ ಆಗಿ ಕಾಣಿಸುವ ಇವರ ಪ್ರೀತಿಯ ವಿಷಯದಲ್ಲಿ ಬಹಳ ಮೆತ್ತಗಾಗಿ ಬಿಡುತ್ತಾರೆ.
Numerology: ಈ ದಿನಾಂಕದಲ್ಲಿ ಜನಿಸಿದ ಜನರು ಖ್ಯಾತರಾಗುತ್ತಾರೆ!
ಮಿಥುನ(Gemini)
ಬ್ರೇಕಪ್ ಬಳಿಕ ಮಾಜಿ ಪ್ರೇಮಿಯನ್ನು ಮರೆಯಲು ಸಾಕಷ್ಟು ಜನರೊಂದಿಗೆ ಬೆರೆಯುತ್ತಾರೆ, ಪಾರ್ಟಿಗಳಿಗೆ ಹೋಗುತ್ತಾರೆ.. ಸಾಧ್ಯವಾದ ಎಲ್ಲವನ್ನೂ ಮಾಡುತ್ತಾರೆ. ಆದರೂ, ಇವರಿಂದ ಮಾಜಿಯನ್ನು ಮರೆಯಲು ಸಾಧ್ಯವಾಗುವುದಿಲ್ಲ. ಇದರ ನೋವಿಂದ ತಪ್ಪಿಸಿಕೊಳ್ಳಲು ಸುತ್ತಾಟ ಹೆಚ್ಚಿಸುತ್ತಾರೆ, ಕುಡಿತ ಅಂಟಿಸಿಕೊಳ್ಳುತ್ತಾರೆ. ಆದರೂ, ಇವರಿಂದ ಹಳೆ ಪ್ರೇಮಿಯನ್ನು ಮರೆಯುವುದು ಸಾಧ್ಯವಾಗುವುದಿಲ್ಲ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.