ಪುರಾಣಗಳ ಈ 8 ಪಾತ್ರಗಳು ಇಂದಿಗೂ ಜೀವಂತವಾಗಿದ್ದಾರೆ!

By Suvarna News  |  First Published May 4, 2022, 2:16 PM IST

ಅಶ್ವತ್ಥಾಮ ಬಲಿರ್ವ್ಯಾಸೋ ಹನುಮಾಂಶಚ ವಿಭೀಷಣಃ |
ಕೃಪಃ ಪರಶುರಾಮಶ್ಚ ಸಪ್ತೈತೆ ಚಿರಜೀವಿನಃ ||

ಈ ಎಂಟು ಮಂದಿಗೂ ಇಂದಿಗೂ ನಮ್ಮ ನಡುವೆ ಬದುಕಿದ್ದಾರೆ. ಅವರು ಗೋಚರರಾಗುತ್ತಾರೋ, ಅಗೋಚರವಾಗಿದ್ದಾರೋ ಎಂಬ ಬಗ್ಗೆ ಸಾಕಷ್ಟು ಊಹಾಪೋಹಾಗಳಿವೆ. 


ಹಿಂದೂ ಪುರಾಣಗಳ ಪ್ರಕಾರ, ಕಲಿಯುಗ(Kaliyuga)ಕ್ಕೂ ಒಂದು ಅಂತ್ಯವಿದೆ. ಜಗತ್ತಿನಲ್ಲಿ ಪಾಪಕಾರ್ಯಗಳು ಮಿತಿ ಮೀರಿದಾಗ ವಿಷ್ಣುವು ಕಲ್ಕಿಯ ಅವತಾರವೆತ್ತಿ ಬರುತ್ತಾನೆ. ಕಲ್ಕಿ ಅವತಾರವು ಕೆಟ್ಟವರನ್ನು ಮುಗಿಸಿ ಯುಗವನ್ನು ಸತ್ಯಯುಗಕ್ಕೆ ಬದಲಿಸುತ್ತದೆ. ಕಲಿಯುಗದಲ್ಲಿ ಕಲ್ಕಿಗೆ ಸಹಾಯ ಮಾಡಲು ನಿಲ್ಲಲು ಯಾವ ಮನುಷ್ಯರಿಂದಲೂ ಸಾಧ್ಯವಾಗುವುದಿಲ್ಲ. ಆತನ ಸಹಾಯಕ್ಕೆ ನಿಲ್ಲುವವರು ಚಿರಂಜೀವಿಗಳಷ್ಟೇ. ಹೌದು, ಹಿಂದೂ ಪುರಾಣಗಳ ಪ್ರಕಾರ, ಎಂಟು ಜನ ಚಿರಂಜೀವಿಗಳಿದ್ದಾರೆ. ಅವರಿಗೆ ಎಂದಿಗೂ ಸಾವಿಲ್ಲ. ಅವರ ಬಗ್ಗೆ ಪುರಾಣದ ಕತೆಗಳನ್ನು ನಾವೆಲ್ಲರೂ ಕೇಳಿರುತ್ತೇವೆ. ಅವರು ಈಗಲೂ ಇದ್ದಾರೆ. ಆದರೆ ಯಾರಿಗೂ ತಿಳಿಯದಂತೆ ಬದುಕುತ್ತಾರೆ. ಇಂಥ ಎಂಟು ಮಂದಿ ಚಿರಂಜೀವಿಗಳು ಯಾರೆಲ್ಲ?

ಋಷಿ ಮಾರ್ಕಂಡೇಯ(Rishi Markandeya)
ಋಷಿ ಮಾರ್ಕಂಡೇಯನು ಶಿವನು ತನ್ನ ತಾಯಿ ಮತ್ತು ತಂದೆಗೆ ನೀಡಿದ ವರದ ಪರಿಣಾಮವಾಗಿ ಜನಿಸಿದನು. ದೀರ್ಘಾಯುಷ್ಯ ಮತ್ತು ಸರಾಸರಿ ಬುದ್ದಿವಂತಿಕೆ ಇರುವ ಮಗು ಬೇಕೋ ಅಥವಾ ಅಲ್ಪಾಯುಷ್ಯವಿರುವ ಬುದ್ದಿವಂತ ಮಗು ಬೇಕೋ ಎಂದು ಶಿವನು ಷರತ್ತು ವಿಧಿಸಿದನು. ರಿಷಿ ಮಾರ್ಕಂಡೇಯನ ಪೋಷಕರು ಅಲ್ಪಾವಧಿಯ ಬುದ್ಧಿವಂತ ಮಗು(intelligent child)ವನ್ನು ಕೇಳಿದರು.
ಈ ವರದ ಕಾರಣದಿಂದಾಗಿ ಋಷಿ ಮಾರ್ಕಂಡೇಯರು ಬಹಳ ಬುದ್ಧಿವಂತನಾಗಿದ್ದರು ಮತ್ತು 12ನೇ ವಯಸ್ಸಿನವರೆಗೆ ಅವರು ಎಲ್ಲ ವೇದಗಳು ಮತ್ತು ಶಾಸ್ತ್ರಗಳ ಜ್ಞಾನವನ್ನು ಪಡೆದರು. ಅವರ ಮರಣವನ್ನು 16ನೇ ವಯಸ್ಸಿನಲ್ಲಿ ನಿಗದಿಪಡಿಸಲಾಗಿತ್ತು. ಆದರೆ ಅವರು ಮಹಾ ಮೃತ್ಯುಂಜಯ ಮಂತ್ರವನ್ನು ರಚಿಸಿದರು ಮತ್ತು ಅವರು ಸಾಯುವ ದಿನದಂದು ಭಗವಾನ್ ಶಿವ(Lord Shiva)ನನ್ನು ಪೂಜಿಸಲು ಪ್ರಾರಂಭಿಸಿದರು. ಯಮರಾಜನು ಮಾರ್ಕಂಡೇಯರ ಪ್ರಾಣವನ್ನು ತೆಗೆಯಲು ಬಂದಾಗ ಶಿವನು ಕಾಣಿಸಿಕೊಂಡನು ಮತ್ತು ಋಷಿ ಮಾರ್ಕಂಡೇಯರನ್ನು ಉಳಿಸಲು ಯಮರಾಜನೊಂದಿಗೆ ಹೋರಾಡಿದನು. ಆ ಬಳಿಕ ಮಾರ್ಕಂಡೇಯರು ಚಿರಂಜೀವಿಯಾಗುವ ವರ ಪಡೆದರು.

Tap to resize

Latest Videos

2. ಚಕ್ರವರ್ತಿ ಬಲಿ(Chakravarthi Bali)
ಮಹಾಬಲಿ ಎಂದೂ ಕರೆಯಲ್ಪಡುವ ಅವನು ರಾಕ್ಷಸ ರಾಜ (ಅಸುರ) ಮತ್ತು ಪ್ರಹ್ಲಾದನ ಮೊಮ್ಮಗ.  ಧಾರ್ಮಿಕ ಮನೋಭಾವದ ಬಲಿಯು ಉತ್ತಮ ರಾಜ ಎನಿಸಿಕೊಂಡಿದ್ದನು. ತನ್ನ ಶಕ್ತಿ ಮತ್ತು ಬುದ್ಧಿವಂತಿಕೆಯಿಂದ ಅವನು ಸ್ವರ್ಗ, ಪಾತಾಳ ಮತ್ತು ಭೂಮಿ- ಮೂರು ಲೋಕಗಳನ್ನು ವಶಪಡಿಸಿಕೊಂಡನು. ಆದರೆ ಇದರಿಂದ ದೇವತೆಗಳಿಗೆ ಕೋಪ ಬಂದಿತು. ಅವರು ಸ್ವರ್ಗವನ್ನು ಮರಳಿ ಪಡೆಯಲು ಭಗವಾನ್ ವಿಷ್ಣುವಿನ ಸಹಾಯವನ್ನು ಪಡೆದರು. ಆಗ ವಿಷ್ಣುವು ಬ್ರಾಹ್ಮಣನ ಅವತಾರವನ್ನು ತೆಗೆದುಕೊಂಡು ರಾಜ ಬಲಿಗೆ ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಕೇಳಿದನು. ಬಲಿಯು ಮೂರು ಹೆಜ್ಜೆ ಭೂಮಿ ಕೊಡಲು ಒಪ್ಪಿದಾಗ, ಬ್ರಾಹ್ಮಣನು ಅಗಾಧವಾಗಿ ಎತ್ತರವಾದನು ಮತ್ತು ಎಲ್ಲ ಮೂರು ಲೋಕಗಳನ್ನು ಎರಡು ಹೆಜ್ಜೆಗಳಲ್ಲಿಯೇ ಆವರಿಸಿದನು. ಹೀಗಾಗಿ ಕೊನೆಯ ಹೆಜ್ಜೆಗೆ ಬಲಿ ತನ್ನನ್ನು ಅರ್ಪಿಸಿಕೊಂಡನು ಮತ್ತು ಭಗವಾನ್ ವಿಷ್ಣುವು ತನ್ನ ಮೂರನೇ ಹೆಜ್ಜೆಯನ್ನು ಅವನ ತಲೆಯ ಮೇಲೆ ಇಟ್ಟನು. ಆದರೆ ಮಹಾಬಲಿ ಮತ್ತು ಪ್ರಹ್ಲಾದನ ವಿಷ್ಣುವಿನ ಮೇಲಿನ ಭಕ್ತಿ ಮತ್ತು ಅವರ ಒಳ್ಳೆಯ ಕಾರ್ಯಗಳಿಂದಾಗಿ ಅವನನ್ನು ಸ್ವರ್ಗಕ್ಕೆ ಕಳುಹಿಸಲಾಯಿತು ಮತ್ತು ಅಮರತ್ವವನ್ನು ಸಹ ನೀಡಲಾಯಿತು. ಪ್ರತಿ ವರ್ಷ ಒಮ್ಮೆ ಅವನ ರಾಜ್ಯವನ್ನು ಭೇಟಿ ಮಾಡಲು ಅವಕಾಶ ನೀಡಲಾಯಿತು. ಈಗಲೂ ಪ್ರತಿ ವರ್ಷ ಬಲಿ ಚಕ್ರವರ್ತಿಯು ಓಣಂನಂದು ತನ್ನ ರಾಜ್ಯ ಕೇರಳಕ್ಕೆ ಬರುತ್ತಾನೆ ಎಂಬ ನಂಬಿಕೆ ಇದೆ. 

ಈ ಐದು ರಾಶಿಗಳಿಗೆ ಹಳೆಯ ಪ್ರೇಮಿಯನ್ನು ಮರೆಯೋದು ಸುಲಭವಲ್ಲ!

3. ಭಗವಾನ್ ಹನುಮಾನ್(Lord Hanuman)
ಭಗವಾನ್ ಹನುಮಂತನು ಭಗವಾನ್ ರಾಮ ಮತ್ತು ಮಾತೆ ಸೀತೆಯ ಭಕ್ತನಾಗಿದ್ದನು. ರಾವಣನೊಂದಿಗಿನ ಯುದ್ಧದಲ್ಲಿ ರಾಮನಿಗೆ ಸಹಾಯ ಮಾಡಿದನು. ರಾಮ ಮತ್ತು ಮಾತೆ ಸೀತೆ ಹನುಮಂತನನ್ನು ತಮ್ಮ ಮಗನಂತೆ ಪ್ರೀತಿಸುತ್ತಿದ್ದರು. ಕಲಿಯುಗದಲ್ಲಿ ಭಕ್ತರಿಗೆ ಸಹಾಯ ಮಾಡಲು ಮಾತಾ ಸೀತೆಯಿಂದ ಹನುಮಂತನಿಗೆ ಅಮರತ್ವವನ್ನು ನೀಡಲಾಯಿತು. ರಾಮಾಯಣದ ನಂತರ ನಡೆದ ವಿವಿಧ ಪುರಾತನ ಗ್ರಂಥಗಳಲ್ಲಿ ಹನುಮಂತನ ಉಪಸ್ಥಿತಿಯನ್ನು ನಾವು ಕಾಣಬಹುದು. ಎಲ್ಲಿಯವರೆಗೆ ಜಗತ್ತಿನಲ್ಲಿ ರಾಮನನ್ನು ಪೂಜಿಸಲಾಗುತ್ತದೆಯೋ ಅಲ್ಲಿಯವರೆಗೂ ಹನುಮ ಭೂಮಿಯ ಮೇಲಿರುತ್ತಾನೆ. 

4. ಅಶ್ವತ್ಥಾಮ(Ashwatthama)
ಗುರು ದ್ರೋಣರ ಮಗ ಮತ್ತು ಹನ್ನೊಂದು ರುದ್ರರಲ್ಲಿ ಒಬ್ಬರ ಅವತಾರವಾದ ಅಶ್ವತ್ಥಾಮನು ಮಹಾಭಾರತ ಯುದ್ಧದಲ್ಲಿ ಕೌರವರ ಕಡೆಯಿಂದ ಹೋರಾಡಿದ. ಕುರುಕ್ಷೇತ್ರ ಯುದ್ಧದ ಕೊನೆಯಲ್ಲೂ ಬದುಕುಳಿದ. ಗುರು ದ್ರೋಣರನ್ನು ಶಸ್ತ್ರಸಜ್ಜಿತವಾಗಿ ಕೊಲ್ಲುವುದು ಅಸಾಧ್ಯವಾಗಿತ್ತು, ಆದ್ದರಿಂದ ಪಾಂಡವರು ಅಶ್ವತ್ಥಾಮನ ಮರಣದ ಬಗ್ಗೆ ವದಂತಿಗಳನ್ನು ಹರಡಿದರು. ಇದನ್ನು ಕೇಳಿದ ಗುರು ದ್ರೋಣರು ತಮ್ಮ ಆಯುಧಗಳನ್ನು ಎಸೆದಾಗ ದೃಷ್ಟದ್ಯುಮ್ನನಿಂದ ಕೊಲ್ಲಲ್ಪಟ್ಟರು. ಅಶ್ವತ್ಥಾಮನು ತನ್ನ ತಂದೆಯ ಮರಣದ ಸೇಡು ತೀರಿಸಿಕೊಳ್ಳಲು ರಾತ್ರಿಯಲ್ಲಿ ದೃಷ್ಟದ್ಯುಮ್ನ ಮತ್ತು ಇತರ ಪುತ್ರರ ಪಾಂಡವರನ್ನು ಅವರ ಶಿಬಿರದಲ್ಲಿ ಕೊಂದನು, ಹೀಗೆ ಕೊಲ್ಲುವುದು ಅಧರ್ಮವಾಗಿತ್ತು. ಆದುದರಿಂದ ಭಗವಾನ್ ಕೃಷ್ಣನು ಅಶ್ವತ್ಥಾಮನನ್ನು 3000 ವರ್ಷಗಳ ಕಾಲ ವಸತಿ ಮತ್ತು ಅತಿಥಿ ಸತ್ಕಾರವಿಲ್ಲದೆ ಬದುಕಲಿ. ಅವನ ಗಾಯಗಳಿಂದ ಕೀವು ಮತ್ತು ರಕ್ತವನ್ನು ಸ್ರವಿಸುತ್ತಲೇ ಇರಲಿ ಎಂದು ಶಪಿಸಿದನು. ಇಂದಿಗೂ ಅಶ್ವತ್ಥಾಮನು ಕಾಡುಮೇಡುಗಳಲ್ಲಿ ನೋವಿನಿಂದ ನರಳುತ್ತಾ, ಸಾವಿಗಾಗಿ ಹಂಬಲಿಸುತ್ತಾ ಅಲೆದಾಡುತ್ತಿದ್ದಾನೆ ಎಂದು ನಂಬಲಾಗಿದೆ. 

ಮೇ ತಿಂಗಳಲ್ಲಿ ಜನಿಸಿದ ಮಕ್ಕಳು ಈ ವಿಷಯಗಳಲ್ಲಿ ವಿಭಿನ್ನವಾಗಿರುತ್ತಾರೆ

5. ವೇದವ್ಯಾಸ ಮುನಿ(Rishi Ved Vyas)
ಋಷಿ ಪರಾಶರ ಮತ್ತು ಮೀನುಗಾರ್ತಿ ಸತ್ಯವತಿಯ ಪುತ್ರ ವೇದವ್ಯಾಸ ಮುನಿಗಳು. ಬ್ರಹ್ಮಜ್ಞಾನಿಗಳಾದ ವೇದವ್ಯಾಸರು ಮಹಾಭಾರತದಲ್ಲಿ ಪಾತ್ರವಾಗಿದ್ದು, ಮುಗಿದ ಬಳಿಕ ಗಣೇಶನ ಜೊತೆ ಕುಳಿತು ಮಹಾಭಾರತವನ್ನು ಬರೆದಿಟ್ಟಿದ್ದಾರೆ. ವೇದಗಳನ್ನು ವಿಂಗಡಣೆ ಮಾಡಿದ ಹೆಗ್ಗಳಿಕೆ ಇರುವ ವೇದವ್ಯಾಸರು ಚಿರಂಜೀವತ್ವವನ್ನು ಹೊಂದಿದ್ದಾರೆ. 

6. ವಿಭೀಷಣ(King Vibhishan)
ರಾವಣನ ಸಹೋದರನಾದ ವಿಭೀಷಣನು ರಾಮ ರಾವಣರ ಯುದ್ಧದಲ್ಲಿ ರಾಮನಿಗೆ ಸಹಾಯ ಮಾಡುತ್ತಾನೆ. ಸೀತೆಯನ್ನು ಅಪಹರಿಸಿದ ವಿಷಯವಾಗಿ ವಿಭೀಷಣನು ಅಣ್ಣನನ್ನು ವಿರೋಧಿಸುತ್ತಾನೆ. ಬಳಿಕ ಯುದ್ಧ ಸಂದರ್ಭದಲ್ಲಿ ರಾವಣನನ್ನು ಸಾಯಿಸುವ ಗುಟ್ಟನ್ನು ರಾಮನಿಗೆ ಹೇಳಿಕೊಡುತ್ತಾನೆ. ಈ ಒಳ್ಳೆಯ ಕೆಲಸಗಳಿಂದಾಗಿ ವಿಭೀಷಣನಿಗೆ ಚಿರಂಜೀವಿಯಾಗಿರುವ ವರವನ್ನು ರಾಮ ಕರುಣಿಸುತ್ತಾನೆ. 

7. ಪರಶುರಾಮ(Lord Parshuram)
ವಿಷ್ಣುವಿನ ಆರನೇ ಅವತಾರವಾದ ಪರಶುರಾಮನು ರೇಣುಕ ಹಾಗೂ ಸಪ್ತರ್ಶಿಗಳಲ್ಲಿ ಒಬ್ಬರಾದ ಜಮದಗ್ನಿಯ ಪುತ್ರ. ಶಿವನನ್ನು ಧ್ಯಾನಿಸಿ ತಪಸ್ಸು ಮಾಡಿ ಕೊಡಲಿ ಪಡೆದಿರುತ್ತಾನೆ. ಇದರೊಂದಿಗೆ ಶಿವನಿಂದ ಕಳರಿಪಯಟ್ಟುವನ್ನೂ ಅಭ್ಯಸಿಸಿರುತ್ತಾನೆ. ಕ್ಷತ್ರಿಯರಿಂದ ಬರೋಬ್ಬರಿ 21 ಬಾರಿ ಪರಶುರಾಮನು ಇಡೀ ಜಗತ್ತನ್ನು ಗೆದ್ದಿರುತ್ತಾನೆ. ಆತನು ಚಿರಂಜೀವಿಯಾಗಿದ್ದು, ಕಲಿಯುಗದಲ್ಲಿ ಕಲ್ಕಿ ಅವತಾರಕ್ಕೆ ಮಾರ್ಗದರ್ಶನ ತೋರುತ್ತಾನೆ. 

addictions ಬಿಡೋಕ್ ಆಗ್ತಿಲ್ವಾ? ಹೀಗ್ಮಾಡಿ..

8. ಕೃಪಾಚಾರ್ಯ(Rishi Kripacharya)
ಜನಪದಿ ಮತ್ತು ಶರ್ದ್ವಾನರ ಪುತ್ರರಾದ ಕೃಪಾಚಾರ್ಯರು ಮಹಾಭಾರತದಲ್ಲಿ ಕೌರವರು ಮತ್ತು ಪಾಂಡವರಿಗೆ ಶಿಕ್ಷಕರಾಗಿದ್ದವರು. ತಮ್ಮ ವಿದ್ಯಾರ್ಥಿಗಳ ವಿಷಯದಲ್ಲಿ ನಿಷ್ಪಕ್ಷಪಾತವಾಗಿದ್ದ ಅವರ ನಡೆಯಿಂದಾಗಿ ಚಿರಂಜೀವಿಯಾಗಿರುವ ವರ ಪಡೆದರು. ಏಕಕಾಲದಲ್ಲಿ 60,000 ಸೈನಿಕರೊಂದಿಗೆ ಹೋರಾಡಬಲ್ಲ ಮಹಾರಥಿ ಎಂಬ ಬಿರುದನ್ನು ಭೀಷ್ಮರು ಕೃಪಾಚಾರ್ಯರಿಗೆ ನೀಡಿದ್ದಾರೆ. 
 

click me!