Vastu Tips : ವಿದೇಶದಲ್ಲಿ ಬಾಡಿಗೆ ಮನೆಯಿದ್ರೆ ಈ ವಾಸ್ತು ಪಾಲಿಸಿ

Published : May 16, 2023, 02:41 PM IST
Vastu Tips : ವಿದೇಶದಲ್ಲಿ ಬಾಡಿಗೆ ಮನೆಯಿದ್ರೆ ಈ ವಾಸ್ತು ಪಾಲಿಸಿ

ಸಾರಾಂಶ

ಪ್ರತಿ ಮನೆಯಲ್ಲಿ ಸುಖ – ಶಾಂತಿ ನೆಲೆಸಬೇಕು ಅಂದ್ರೆ ವಾಸ್ತು ಬಹಳ ಮುಖ್ಯ. ಮನೆಯ ಮುಖ್ಯ ಬಾಗಿಲು ಪ್ರಮುಖ ಪಾತ್ರವಹಿಸುತ್ತದೆ. ಸಕಾರಾತ್ಮಕ ಶಕ್ತಿಯಿರಲಿ ಇಲ್ಲ ನಕಾರಾತ್ಮಕ ಶಕ್ತಿಯಿರಲಿ ಇದೇ ಬಾಗಿಲಿನಿಂದ ಮನೆ ಪ್ರವೇಶ ಮಾಡುವ ಕಾರಣ ಮುಖ್ಯ ಬಾಗಿಲಿನ ಬಗ್ಗೆ ವಿಶೇಷ ಗಮನ ಹರಿಸಬೇಕು.  

ನಮ್ಮ ನೆಲದಲ್ಲೇ ಮನೆ ಕಟ್ಟಿದಾಗ ಅಥವಾ ಮನೆಯನ್ನು ಬಾಡಿಗೆಗೆ ಪಡೆದಾಗ ಅದ್ರ ವಾಸ್ತು ಬಗ್ಗೆ ಮಾಹಿತಿ ಪಡೆಯೋದು ಸುಲಭ. ಇಲ್ಲಿರುವ ತಜ್ಞರಿಂದ ಸಲಹೆ ಪಡೆದು ಸಮಸ್ಯೆಯಾಗದಂತೆ ನಾವು ನೋಡಿಕೊಳ್ಳಬಹುದು. ಆದ್ರೆ ವಿದೇಶದಕ್ಕೆ ಹೋದಾಗ ಇದು ಸ್ವಲ್ಪ ಕಷ್ವವಾಗುತ್ತದೆ. ಕೆಲವೊಮ್ಮೆ ಉದ್ಯೋಗಕ್ಕಾಗಿ, ಕೆಲವೊಮ್ಮೆ ಅಧ್ಯಯನಕ್ಕಾಗಿ ಜನರು ವಿದೇಶಕ್ಕೆ ಹೋಗ್ತಾರೆ. ಕೆಲಸ ಯಾವುದೇ ಇರಲಿ, ಅಲ್ಲಿ ವಾಸಕ್ಕೊಂದು ಮನೆ ಇರಲೇಬೇಕು. ವಿದೇಶದಲ್ಲಿ ಬಾಡಿಗೆ ಮನೆ ಖರೀದಿಸುವ ವೇಳೆ ಬಾಡಿಗೆ ಎಷ್ಟು, ನೀರಿನ ಸೌಲಭ್ಯ ಹೇಗಿದೆ, ಮಾರುಕಟ್ಟೆ ಎಷ್ಟು ದೂರದಲ್ಲಿದೆ, ಸಾರಿಗೆ ಹೀಗೆ ನಾನಾ ವಿಷ್ಯಗಳನ್ನು ಗಮನಿಸುತ್ತೇವೆ. ಜೀವನದಲ್ಲಿ ಸಮೃದ್ಧಿ ಬಯಸುತ್ತೇವೆ. ಆದ್ರೆ ವಾಸ್ತು ಬಗ್ಗೆ ಕೆಲವರು ನಿರ್ಲಕ್ಷ್ಯ ಮಾಡ್ತಾರೆ. ನೀವು ವಿದೇಶದಲ್ಲಿ ಬಾಡಿಗೆ ಮನೆ ಖರೀದಿ ಮಾಡಿದ್ದು, ವಾಸ್ತು ಬಗ್ಗೆ ನಂಬಿಕೆ ಹೊಂದಿದ್ದೀರಿ ಎಂದಾದ್ರೆ ವಾಸ್ತು ಬಗ್ಗೆ ಕೆಲ ಟಿಪ್ಸ್ ಫಾಲೋ ಮಾಡಿ. 

ವಿದೇಶ (Abroad) ದಲ್ಲಿ ಈ ವಾಸ್ತು (Vastu) ಟಿಪ್ಸ್ ಅನುಸರಿಸಿ :

ಮುಖ್ಯ ಬಾಗಿಲಿನ ಮುಂದೆ ಈ ಕೆಲಸ ಮಾಡಿ : ವಿದೇಶದಲ್ಲಿ ಹೊಸ ಮನೆಯನ್ನು ಬಾಡಿಗೆ (Rent) ಗೆ ತೆಗೆದುಕೊಳ್ಳಲು ನಿರ್ಧರಿಸಿದ್ದರೆ ನೀವು ಮುಖ್ಯ ದ್ವಾರದಲ್ಲಿ ಹೂವಿನ ಗಿಡಗಳನ್ನು ನೆಡಬೇಕು. ಮುಖ್ಯ ದ್ವಾರದಲ್ಲಿ ಗುಲಾಬಿ ಹೂವಿನ ಸಸ್ಯಗಳನ್ನು ನೆಡಲು ಪ್ರಯತ್ನಿಸಿ. ಅದು ನಿಮ್ಮ ಜೀವನದಲ್ಲಿ ಸಮೃದ್ಧಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮುಖ್ಯ ಬಾಗಿಲಿನ ಮುಂದೆ ಅಪ್ಪಿತಪ್ಪಿಯೂ ಮುಳ್ಳಿನ ಗಿಡಗಳನ್ನು ನೆಡಬಾರದು. ಇವುಗಳು ನಿಮ್ಮ ಮನೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ವಿದೇಶದಲ್ಲಿರುವಾಗಲೂ ನೀವು ಈ ವಾಸ್ತು ನಿಯಮಗಳನ್ನು ಅನುಸರಿಸಬೇಕು. ಮನೆ ಮುಂದೆ ಜಾಗವಿಲ್ಲವೆಂದ್ರೂ ಸಣ್ಣ ಪಾಟ್ ನಲ್ಲಿ ನೀವು ಗುಲಾಬಿ ಗಿಡ ಬೆಳಸಿ. ಈ ಹೂವಿನ ಗಿಡಗಳು ಸಮೃದ್ಧಿಯ ಬಾಗಿಲು ತೆರೆಯಲು ಸಹಾಯ ಮಾಡುತ್ತದೆ.

SHANI JAYANTI 2023: ಶನಿಗೂ ಸೂರ್ಯನಿಗೂ ಮುನಿಸೇಕೆ? ಶನಿಯ ಜನ್ಮವೃತ್ತಾಂತ ಬಲ್ಲಿರಾ?

ಮುಖ್ಯ ದ್ವಾರಕ್ಕೆ ಸೂರ್ಯನ ಕಿರಣ ಬರುವಂತೆ ನೋಡ್ಕೊಳ್ಳಿ : ವಿದೇಶದಲ್ಲಿ ಮನೆಯನ್ನು ಬಾಡಿಗೆಗೆ ತೆಗೆದುಕೊಳ್ಳುವ ಮುನ್ನ ನೀವು ಗಾಳಿ, ಬೆಳಕಿನ ಬಗ್ಗೆಯೂ ಗಮನ ಹರಿಸಿ. ಮುಖ್ಯ ಬಾಗಿಲಿಗೆ ಬೆಳಿಗ್ಗೆ ಸಾಕಷ್ಟು ಸೂರ್ಯನ ಬೆಳಕು ಬೀಳುವಂತೆ ನೋಡಿಕೊಳ್ಳಿ. ಸೂರ್ಯನ ಕಿರಣ ಮನೆಯ ಮುಖ್ಯ ಬಾಗಿಲಿಗೆ ಬಿದ್ರೆ ಅದನ್ನು ತುಂಬ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಪ್ರವೇಶಕ್ಕೆ ಉತ್ತರ ಮತ್ತು ಪೂರ್ವ ದಿಕ್ಕು ಉತ್ತಮವಾಗಿದೆ.  ಮನೆ ಬಾಡಿಗೆಗೆ ಪಡೆಯುವ ಮುನ್ನ ಮನೆಯ ಮುಖ್ಯ ದ್ವಾರ ಯಾವ ದಿಕ್ಕಿಗಿದೆ ಎಂಬುದನ್ನು ಗಮನಿಸಿ. ಒಂದ್ವೇಳೆ ಈ ದಿಕ್ಕಿಗೆ ಮುಖ್ಯ ಬಾಗಿಲು ಇಲ್ಲವೆಂದಾದ್ರೆ ನೀವು ವಾಸ್ತು ದೋಷ ನಿವಾರಣೆಗೆ ಮನೆಯ ಮುಂದೆ ನೀರು ತುಂಬಿದ ಪಾತ್ರೆಯನ್ನು ಇಡಿ. ಇದ್ರಿಂದ ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡೋದಿಲ್ಲ.

ಬೆಳಕಿಗೆ ಮಹತ್ವ ನೀಡಿ : ಮನೆಯ ಮುಖ್ಯ ದ್ವಾರಕ್ಕೆ ಯಾವಾಗ್ಲೂ ಬೆಳಕು ಬೀಳ್ತಿರಬೇಕು. ರಾತ್ರಿ ಸಮಯದಲ್ಲೂ ನೀವು ಬೆಳಕು ಇರುವಂತೆ ನೋಡಿಕೊಳ್ಳಿ. ಮುಖ್ಯ ಬಾಗಿಲಿನ ಮೇಲೆ ಬಲ್ಬ್ ಒಂದನ್ನು ಹಾಕಿ ಅದನ್ನು ಸದಾ ಉರಿಸುತ್ತಿರಿ. ಕೆಂಪು ಬಣ್ಣದ ದೀಪವನ್ನು ಇಲ್ಲಿ ಹಾಕಬೇಡಿ. ವಾಸ್ತು ನಿಯಮಗಳ ಪ್ರಕಾರ, ಸಂಜೆ ಮನೆ ಮುಂದೆ ದೀಪ ಬೆಳಗಿಸಲು ಮರೆಯಬೇಡಿ. ಇದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.

Chanakya Niti: ಮನುಷ್ಯನನ್ನು ಎಲ್ಲಾ ತೊಂದರೆಗಳಿಂದ ದೂರ ಮಾಡೋ ಅಸ್ತ್ರ ಯಾವುದು ಗೊತ್ತಾ?

ಮುಖ್ಯ ದ್ವಾರದ ಮುಂದೆ ಕಸ ಇಡಬೇಡಿ : ಕಸದ ಡಬ್ಬಿ ಯಾವಾಗ್ಲೂ ಮನೆಯ ಹಿಂದೆ ಇರಬೇಕು. ಯಾರ ಕಣ್ಣಿಗೂ ಕಾಣದ ಸ್ಥಳದಲ್ಲಿ ಅದನ್ನು ಇಡಬೇಕು. ಮುಖ್ಯ ದ್ವಾರದಲ್ಲಿ ಡಸ್ಟ್ ಬಿನ್ ಇಟ್ಟರೆ ಅದು ನಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತದೆ. ಮುಖ್ಯ ಬಾಗಿಲಿಗೆ ವಿಂಡ್ ಚೈಮ್ ಹಾಕಿ.  
 

PREV
Read more Articles on
click me!

Recommended Stories

Vastu for Wealth: ಈ 5 ವಸ್ತು ನಿಮ್ಮ ಮನೆಯಲ್ಲಿದ್ದರೆ ಸದಾ ತಿಜೋರಿ ತುಂಬಿರುತ್ತೆ
Financial success by date of birth: ನಿಮ್ಮ ಜನ್ಮಸಂಖ್ಯೆ ನಿಮ್ಮ ಸಂಪತ್ತಿನ ರಹಸ್ಯವೇ?