Hanuman Mantra: ರಾಶಿ ಪ್ರಕಾರ ಜಪಿಸಿ ಹನುಮ ಮಂತ್ರ; ಗ್ರಹಬಲದ ಜೊತೆ ಸಿಗಲಿದೆ ಆಂಜನೇಯನ ಅನುಗ್ರಹ

By Suvarna NewsFirst Published May 16, 2023, 12:51 PM IST
Highlights

ಆಂಜನೇಯನಿಗೆ ಜಗತ್ತಿನಾದ್ಯಂತ ಭಕ್ತರಿದ್ದಾರೆ. ಭಕ್ತರಿಗೆ ಬೇಗ ಒಲಿವಾತ ಹನುಮ. ಮಂಗಳವಾರ ವಿಶೇಷವಾಗಿ ಆಂಜನೇಯನ ಪೂಜೆಗೆ ಮೀಸಲಾಗಿದೆ. ಈ ದಿನ ನೀವು ನಿಮ್ಮ ರಾಶಿಗೆ ಅನುಗುಣವಾಗಿ ಹನುಮಾನ್ ಮಂತ್ರ ಜಪಿಸಿದರೆ ಹೆಚ್ಚು ಫಲ ಪಡೆಯುವಿರಿ. 

ಮಂಗಳವಾರ ಆಂಜನೇಯನಿಗೆ ಮೀಸಲಾಗಿದೆ. ಈ ದಿನ ಅವನನ್ನು ಆರಾಧಿಸುವುದರಿಂದ ವಿಶೇಷ ಫಲಗಳು ನಿಮ್ಮದಾಗುತ್ತವೆ. ಭಜರಂಗ ಬಲಿಯ ಆಶೀರ್ವಾದ ಪಡೆಯಲು, ನೀವು ಅವನ ಮಂತ್ರಗಳನ್ನು ಪಠಿಸಬೇಕು. ಹಾಗೆ ಜಪಿಸುವಾಗ ರಾಶಿಚಕ್ರದ ಪ್ರಕಾರ ಮಂತ್ರವನ್ನು ಜಪಿಸಿದರೆ ಮತ್ತಷ್ಟು ವಿಶೇಷ ಫಲಿತಾಂಶಗಳನ್ನು ಪಡೆಯುತ್ತೀರಿ ಎಂಬುದನ್ನು ನೆನಪಿನಲ್ಲಿಡಿ.  ಹಾಗಾದರೆ, ನಿಮ್ಮ ರಾಶಿಯವರು ಆಂಜನೇಯನಿಗೆ ಯಾವ ಮಂತ್ರ ಪಠಿಸಬೇಕು ಎಂಬ ವಿವರ ತಿಳಿಸುತ್ತೇವೆ. 

ಮೇಷ ಮತ್ತು ವೃಶ್ಚಿಕ (Aries and Scorpio)
ಮೇಷ ಮತ್ತು ವೃಶ್ಚಿಕ ರಾಶಿಯ ಅಧಿಪತಿ ಮಂಗಳ. ಆಂಜನೇಯ ದಿನವೂ ಮಂಗಳವಾರವೇ ಆಗಿದೆ. ಹಾಗಾಗಿ, ಈ ಎರಡು ರಾಶಿಗಳ ಜನರು ಶುಭ ಫಲಿತಾಂಶಗಳನ್ನು ಪಡೆಯಲು ಆಂಜನೇಯನ ದಿವ್ಯ ಮಂತ್ರ 'ಮನೋಜವಂ ಮಾರುತ ತುಲ್ಯವೇಗಂ, ಜಿತೇಂದ್ರಿಯಂ ಬುದ್ಧಿಮತಾಂ ಶ್ರೇಷ್ಠಂ
ವಾತಾತ್ಮಜಂ ವಾನರಯೂತ ಮುಖ್ಯಂ, ಶ್ರೀರಾಮದೂತಂ ಶರಣಂ ಪ್ರಪದ್ಯೇ ॥'
ಜಪ ಮಾಡಿ.

Latest Videos

ವೃಷಭ ಮತ್ತು ತುಲಾ ರಾಶಿ (Taurus and Libra)
ವೃಷಭ ಮತ್ತು ತುಲಾ ರಾಶಿಯ ಅಧಿಪತಿ ಶುಕ್ರ. ಈ ಎರಡೂ ರಾಶಿಗಳ ಜನರು ಹನುಮನ ಆಶೀರ್ವಾದವನ್ನು ಪಡೆಯಲು 'ಓಂ ಹನ್ ಹನುಮತೇ ನಮಃ' ಎಂಬ ಮಂತ್ರವನ್ನು ಪಠಿಸಬೇಕು. ಇದನ್ನು ಮಾಡುವುದರಿಂದ ಆಂಜನೇಯನ ಆಶೀರ್ವಾದವು ಯಾವಾಗಲೂ ನಿಮ್ಮ ಮೇಲೆ ಉಳಿಯುತ್ತದೆ.

ಮ.ಪ್ರ. ಸರ್ಕಾರದಿಂದ ಲವ- ಕುಶ ದೇಗುಲ ನಿರ್ಮಾಣ ಘೋಷಣೆ; ಲವ ಕುಶರ ಕತೆ ನಿಮಗೆ ಗೊತ್ತಾ?

ಮಿಥುನ ಮತ್ತು ಕನ್ಯಾ ರಾಶಿ (Gemini and Virgo)
ಮಿಥುನ ರಾಶಿ ಮತ್ತು ಕನ್ಯಾ ರಾಶಿಯ ಅಧಿಪತಿ ಬುಧ. ಈ ಎರಡು ರಾಶಿಯವರು ಮಾರುತಿನಂದನನ ಆಶೀರ್ವಾದ ಪಡೆಯಲು 
'ಅತುಲಿತ ಬಲಧಂ ಹೇಮಶೈಲಭ ದೇಹಂ ಧನುಜವನ ಕೃಷನುಂ ಜ್ಞಾನಿನಾಮಾಗ್ರಗಣ್ಯಂ
 ಸಕಲಗುಣಿಧಾನ್ ವನರಾಣಾಮಧೀಶನ್ ರಘುಪತಿಪ್ರಿಯಭಕ್ತ ವಾತಜಾತನ್ ನಮಾಮಿ ॥'
' ಮಂತ್ರವನ್ನು ಪಠಿಸಿ, ಖಂಡಿತವಾಗಿಯೂ ನಿಮ್ಮ ಜೀವನದಲ್ಲಿ ಯಶಸ್ಸು ಸಿಗುತ್ತದೆ.

ಮಕರ ಮತ್ತು ಕುಂಭ (Capricorn and Aquarius)
ಮಕರ ಮತ್ತು ಕುಂಭ ರಾಶಿಯ ಅಧಿಪತಿ ಶನಿ ದೇವ. ಈ ಎರಡು ರಾಶಿಗಳ ಜನರು ಜೀವನದಲ್ಲಿ ಸಂತೋಷಕ್ಕಾಗಿ ಹನುಮ ಮತ್ತು ಶನಿದೇವರ ಆಶೀರ್ವಾದವನ್ನು ಪಡೆಯಬೇಕು. ನೀವು ಈ ಮಂತ್ರಗಳನ್ನು ಪಠಿಸಬೇಕು, 
'ಓಂ ನಮೋ ಹನುಮತೇ ರುದ್ರಾವತಾರಾಯ 
ಸರ್ವಶತ್ರುಸಂಹಾರಣಾಯ ಸರ್ವರೋಗ ಹರಾಯ 
ಸರ್ವವಶೀಕರಣಾಯ ರಾಮದೂತಾಯ ಸ್ವಾಹಾ'

ಧನು ರಾಶಿ ಮತ್ತು ಮೀನ (Sagittarius and Pisces)
ಧನು ರಾಶಿ ಮತ್ತು ಮೀನ ರಾಶಿಯ ಅಧಿಪತಿ ಗುರು. ಭಜರಂಗಬಲಿಯ ಆಶೀರ್ವಾದವನ್ನು ಪಡೆಯಲು, ಈ ಎರಡು ರಾಶಿಚಕ್ರ ಚಿಹ್ನೆಗಳ ಜನರು ಪ್ರತಿದಿನ ಭಜರಂಗಬಾಣವನ್ನು ಪಠಿಸಬೇಕು, ಹಾಗೆಯೇ 'ಓಂ ಹನುಮತೇ ನಮಃ' ದೈವಿಕ ಮಂತ್ರವನ್ನು ಪಠಿಸಿ.

ಕರ್ಕಾಟಕ ರಾಶಿ (Cancer)
ಚಂದ್ರನು ಕರ್ಕ ರಾಶಿಯ ಅಧಿಪತಿ. ಈ ರಾಶಿಯವರು ಹನುಮನ ಆಶೀರ್ವಾದವನ್ನು ಪಡೆಯಲು, ಅವರ ಮನೋಬಲವನ್ನು ಹೆಚ್ಚಿಸಲು, ಹನುಮಾನ್ ಗಾಯತ್ರಿ ಮಂತ್ರ 
'ಓಂ ಅಂಜನಿಸುತಾಯ ವಿದ್ಮಹೇ ವಾಯುಪುತ್ರಯ ಧೀಮಹಿ 
ತನ್ನೋ ಮಾರುತಿ ಪ್ರಚೋದಯಾತ್' ಜಪ ಮಾಡಬೇಕು.'

Shani Jayanti 2023: ಶನಿಗೂ ಸೂರ್ಯನಿಗೂ ಮುನಿಸೇಕೆ? ಶನಿಯ ಜನ್ಮವೃತ್ತಾಂತ ಬಲ್ಲಿರಾ?

ಸಿಂಹ ರಾಶಿ (Leo)
ಸಿಂಹ ರಾಶಿಯ ಅಧಿಪತಿ ಸೂರ್ಯ ದೇವರು. ಈ ರಾಶಿಯವರು ‘ಓಂ ಹನುಮತೇ ರುದ್ರಾತ್ಮಕಾಯ ಹುಂ ಫಟ್’ ಮಂತ್ರವನ್ನು ಜಪಿಸಬೇಕು. ಈ ಮಂತ್ರವನ್ನು ಪಠಿಸುವುದರಿಂದ ಎಲ್ಲಾ ದುಃಖಗಳು, ನೋವುಗಳು ಅಥವಾ ಸಂಕಟಗಳು ಕೊನೆಗೊಳ್ಳುತ್ತವೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!