Vastu tips for financial success: ಐಶ್ವರ್ಯ, ಆರೋಗ್ಯ, ಆಯಸ್ಸಿನ ಜೊತೆ ವಾಸ್ತು ಶಾಸ್ತ್ರದ (Vastu) ನಂಟಿದೆ. ಅನೇಕ ಬಾರಿ ನಾವು ಮಾಡುವ ತಪ್ಪು ನಮ್ಮನ್ನು ಸಂಕಷ್ಟಕ್ಕೆ ನೂಕುತ್ತದೆ. ಮನೆಯೊಳಗಿರುವ ಬಾತ್ ರೂಮ್ ಅದ್ರಲ್ಲೂ ಮಲಗುವ ಕೋಣೆಯಲ್ಲಿರುವ ಸ್ನಾನ ಗೃಹ ಕೂಡ ವಾಸ್ತು ದೋಷಕ್ಕೆ ಕಾರಣವಾಗ್ಬಹುದು.
ಸ್ವಂತ ಮನೆ (Home) ಯಿರಲಿ ಇಲ್ಲ ಬಾಡಿಗೆ (Rent) ಮನೆಯಿರಲಿ, ಮೊದಲು ಕೇಳುವುದು ಅಟ್ಯಾಚ್ಡ್ ಬಾತ್ ರೂಮ್ (Attached Bathroom) ಇದ್ಯಾ ಅಂತಾ. ಎಲ್ಲ ಬೆಡ್ ರೂಮಿಗೂ (Bedroom) ಒಂದೊಂದು ಬಾತ್ ರೂಮ್ ಇರ್ಬೇಕೆಂದು ಜನರು ಬಯಸ್ತಾರೆ. ಅನುಕೂಲದ ಜೊತೆ ಐಷಾರಾಮಿಯ ಸಂಕೇತ ಇದು ಅಂದ್ರೂ ತಪ್ಪಾಗಲಾರದು. ಮನೆಗೆ ಬರುವ ಗೆಸ್ಟ್ ಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೂ ಅನೇಕರು ಅಟ್ಯಾಚ್ಡ್ ಬಾತ್ ರೂಮ್ ಆಯ್ಕೆ ಮಾಡ್ತಾರೆ. ಹಿಂದಿನ ಕಾಲದಲ್ಲಿ ಸ್ವಚ್ಛತೆ (Cleanliness) ಕಾರಣಕ್ಕೆ ಬಾತ್ ರೂಮ್ ಗಳು ಮನೆಯ ಹೊರಗೆ ಇರ್ತಿದ್ದವು. ಆದ್ರೀಗ ಕಿಚನ್ (Kitchen), ಹಾಲ್ (Hall), ಬೆಡ್ ರೂಮ್ ಬಹುತೇಕ ಮನೆಗಳಲ್ಲಿ ದೇವರ ಕೋಣೆ ಕೂಡ ಬಾತ್ ರೂಮ್ ಗೆ ಹೊಂದಿಕೊಂಡೇ ಇರುತ್ತದೆ. ಈ ಅಟ್ಯಾಚ್ಡ್ ಬಾತ್ ರೂಮ್ ಗಳು ನಮ್ಮ ಕೆಲಸ ಸುಲಭ ಮಾಡುತ್ತವೆ ನಿಜ. ಆದ್ರೆ ಅನೇಕ ವಾಸ್ತು (Vastu) ದೋಷಕ್ಕೆ ಕಾರಣವಾಗುತ್ತದೆ. ವಾಸ್ತುದೋಷವಾಗುತ್ತೆ ಎಂಬ ಕಾರಣಕ್ಕೆ ಈಗಿರುವ ಮನೆಯಲ್ಲಿ ಕೆಡವಲು ಸಾಧ್ಯವಿಲ್ಲ. ಬಾಡಿಗೆದಾರರಿಗಂತೂ ಹೊಂದಿಕೊಳ್ಳುವುದು ಅನಿವಾರ್ಯ. ನಿಮ್ಮ ಮನೆಯಲ್ಲೂ ಬೆಡ್ ರೂಮಿಗೆ ಬಾತ್ ರೂಮ್ ಅಟ್ಯಾಚ್ಡ್ ಆಗಿದ್ದರೆ ಕೆಲವೊಂದು ವಿಷ್ಯಗಳನ್ನು ನೆನಪಿಟ್ಟುಕೊಳ್ಳಿ. ಯಾವುದೇ ಕಾರಣಕ್ಕೂ ವಾಸ್ತು ದೋಷವಾಗದಂತೆ ನೋಡಿಕೊಳ್ಳಿ. ಮುನ್ನೆಚ್ಚರಿಕೆ ವಹಿಸಿದ್ರೆ ಮುಂದೆ ಬರುವ ಸಮಸ್ಯೆಯನ್ನು ಸುಲಭವಾಗಿ ತಡೆಯಬಹುದು ಎಂಬುದು ನಿಮ್ಮ ಗಮನದಲ್ಲಿರಲಿ.
ಸ್ವಚ್ಛತೆ (Maintain Clealiness): ಬೆಡ್ ರೂಮಿಗೆ ಅಥವಾ ಡ್ರಾಯಿಂಗ್ ರೂಮಿಗೆ ಬಾತ್ ರೂಮ್ ಹೊಂದಿಕೊಂಡಿದ್ದರೆ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ನೀಡ್ಬೇಕು. ಬಾತ್ ರೂಮ್ ಕೊಳಕಾಗಿದ್ದರೆ ಆರೋಗ್ಯ ಹಾಳಾಗುವುದು ಮಾತ್ರವಲ್ಲ ವಾಸ್ತುದೋಷಕ್ಕೆ ಕಾರಣವಾಗುತ್ತದೆ. ಈ ವಾಸ್ತುದೋಷದಿಂದ ಮನೆಯಲ್ಲಿ ಬಡತನ ಆವರಿಸುತ್ತದೆ. ಲಕ್ಷ್ಮಿ ಎಂದೂ ಕೊಳಕು ಮನೆಯನ್ನು ಪ್ರವೇಶ ಮಾಡುವುದಿಲ್ಲ. ಹಾಗಾಗಿ ಸದಾ ಬಾತ್ ರೂಮಿನ ಸ್ವಚ್ಛತೆಗೆ ಆದ್ಯತೆ ನೀಡಿ.
ಇದನ್ನೂ ಓದಿ: VASTU TIPS: ಮರೆತೂ ಈ ಹೂವುಗಳನ್ನು ದೇವರ ಪೂಜೆಗೆ ಬಳಸಬೇಡಿ!
ಮಲಗುವ ದಿಕ್ಕು (Sleeping Direction): ಮಲಗುವ ದಿಕ್ಕು ಕೂಡ ಮನುಷ್ಯನ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಇದು ವಾಸ್ತುದೋಷಕ್ಕೂ ಕಾರಣವಾಗುತ್ತದೆ. ಪತಿ –ಪತ್ನಿ ಮಧ್ಯೆ ಸುಖ ದಾಂಪತ್ಯವಿರಬೇಕು ಎನ್ನುವವರು ಅಟ್ಯಾಚ್ಡ್ ಬಾತ್ ರೂಮ್ ಇದ್ದರೆ ಸ್ವಲ್ಪ ಎಚ್ಚರವಹಿಸಬೇಕು. ಕಾಲುಗಳು ಅಥವಾ ತಲೆ ಬಾತ್ ರೂಮಿನ ಕಡೆ ಬರದಂತೆ ನೋಡಿಕೊಳ್ಳಬೇಕು. ಬಾತ್ ರೂಮಿನ ಕಡೆ ಕಾಲು ಅಥವಾ ತಲೆ ಹಾಕಿ ಮಲಗಿದ್ರೆ ವಾಸ್ತುದೋಷವಾಗುತ್ತದೆ. ಪತಿ – ಪತ್ನಿ ಮಧ್ಯೆ ಗಲಾಟೆ,ಜಗಳ ಶುರುವಾಗುತ್ತದೆ.
ಬಾತ್ ರೂಮಿನ ಬಣ್ಣ (Colour of your bathroom): ಬಾತ್ರೂಮ್, ಲಿವಿಂಗ್ ರೂಮ್ ಅಥವಾ ಮಲಗುವ ಕೋಣೆಗೆ ಹೊಂದಿಕೊಂಡಿದ್ದರೆ ಅದರ ಬಣ್ಣದ ಬಗ್ಗೆ ಗಮನವಿರಲಿ. ಬಣ್ಣ ವಾಸ್ತು ಪ್ರಕಾರವಾಗಿರಬೇಕು. ವಾಸ್ತು ಪ್ರಕಾರ, ಬಾತ್ ರೂಂನಲ್ಲಿ ಆಕಾಶ ನೀಲಿ, ಕ್ರೀಮ್ ಕಲರ್ ನಂತಹ ತಿಳಿ ಬಣ್ಣಗಳನ್ನು ಬಳಸಿ. ಟೈಲ್ಸ್ ಬಳಸುತ್ತಿದ್ದರೆ ತಿಳಿ ಬಣ್ಣದ ಟೈಲ್ಸ್ ಬಳಸಿ. ಬಾತತ್ ರೂಮಿನಲ್ಲಿ ಕಪ್ಪು ಟೈಲ್ಸನ್ನು ಅಪ್ಪಿತಪ್ಪಿಯೂ ಹಾಗ್ಬೇಡಿ.
ಇದನ್ನೂ ಓದಿ: Saturn Effect: ಶನಿ ಸಾಡೇಸಾತಿ ಈ ರಾಶಿಯವರಿಗೆ ಕಷ್ಟಕಾಲ!
ಹಣದ ನಷ್ಟ : ಬೆಡ್ ರೂಮಿಗೆ ಬಾತ್ ರೂಮ್ ಹೊಂದಿಕೊಂಡಿದ್ದರೆ ಅದ್ರ ನಲ್ಲಿ ಬಗ್ಗೆ ಗಮನವಿರಲಿ. ಮನೆಯ ಯಾವುದೇ ಭಾಗದಲ್ಲಿರುವ ನಲ್ಲಿಯಲ್ಲೂ ನೀರು ತೊಟ್ಟಿಕ್ಕಬಾರದು. ನಲ್ಲಿ ನೀರು ತೊಟ್ಟಿಕ್ಕುತ್ತಿದ್ದರೆ ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಅಟ್ಯಾಚ್ಡ್ ಬಾತ್ ರೂಮಿನ ನಲ್ಲಿ ನೀರು ತೊಟ್ಟಿಕ್ಕುತ್ತಿದ್ದರೆ ಮನೆಯ ಸದಸ್ಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು ನೆನಪಿರಲಿ. ಇದು ಮಾತ್ರವಲ್ಲ ಆರ್ಥಿಕ ನಷ್ಟಕ್ಕೂ ಇದು ಕಾರಣವಾಗುತ್ತದೆ. ಹಾಗಾಗಿ ಬಾತ್ ರೂಮಿನ ನಲ್ಲಿಯನ್ನು ಶೀಘ್ರವೇ ಬದಲಿಸಿ ಇಲ್ಲವೆ ಸರಿಪಡಿಸಿ ವಾಸ್ತುದೋಷದಿಂದ ಮುಕ್ತಿ ಪಡೆಯಿರಿ.