Vastu Tips : ಸಣ್ಣ ಕೊಳಲು ಬದಲಿಸುತ್ತೆ ನಿಮ್ಮ ಅದೃಷ್ಟ

By Suvarna News  |  First Published Aug 16, 2022, 5:26 PM IST

ಕೊಳಲು ಎಂದ ತಕ್ಷಣ ನೆನಪಾಗೋದು ಶ್ರೀ ಕೃಷ್ಣ, ಕೃಷ್ಣನ ಪ್ರೀತಿಯ ವಸ್ತುವಾದ ಕೊಳಲಿನಿಂದ ಬರೀ ನಾದ ಬರೋದಿಲ್ಲ. ಸಕಾರಾತ್ಮಕ ಶಕ್ತಿ ಜೊತೆ ಸುಖ,ಸಂತೋಷ, ಸಮೃದ್ಧಿ ಪ್ರಾಪ್ತಿಯಾಗುತ್ತದೆ. 
 


ಶ್ರೀ ಕೃಷ್ಣನಿಗೆ ಅತ್ಯಂತ ಪ್ರಿಯವಾದ ವಸ್ತುಗಳಲ್ಲಿ ಕೊಳಲು ಮೊದಲ ಸ್ಥಾನದಲ್ಲಿದೆ. ಶ್ರೀ ಕೃಷ್ಣನ ಫೋಟೋ ಅಥವಾ ಮೂರ್ತಿ ಬಳಿ ಕೊಳಲನ್ನು ಇಡುವುದರಿಂದ ಸಂತೋಷ, ಸಮೃದ್ಧಿ ಮತ್ತು ಸುಖ ಬರುತ್ತದೆ ಎಂದು ನಂಬಲಾಗಿದೆ. ವಾಸ್ತು ಶಾಸ್ತ್ರದಲ್ಲೂ ಕೊಳಲಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕೊಳಲನ್ನು ಇಡುವುದರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ. ಮನೆಯಲ್ಲಿ ಕೊಳಲಿದ್ದರೆ ಸದಾ ಶಾಂತಿ ನೆಲೆಸಿರುತ್ತದೆ ಎಂದು ನಂಬಲಾಗಿದೆ. ಮನೆಯಲ್ಲಿರುವ ವಾಸ್ತು ದೋಷ ನಿವಾರಣೆಗೂ ಕೊಳಲನ್ನು ಇಡಬೇಕೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಕೃಷ್ಣ ಜನ್ಮಾಷ್ಟಮಿ ಹತ್ತಿರ ಬರ್ತಿದೆ. ಆಗಸ್ಟ್ 18ರಂದು ಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಲಾಗ್ತಿದೆ. ಈ ಕೃಷ್ಣ ಜನ್ಮಾಷ್ಟಮಿಯಂದು ಕೊಳಲಿನ ಕೆಲವು ವಾಸ್ತು ಉಪಾಯಗಳನ್ನು ಪಾಲನೆ ಮಾಡಿದ್ರೆ ಎಲ್ಲ ರೀತಿಯ ಸಮಸ್ಯೆ ದೂರವಾಗಿ ಸುಖ, ಯಶಸ್ಸು ಪ್ರಾಪ್ತಿಯಾಗುತ್ತದೆ. ಕೃಷ್ಣ ಜನ್ಮಾಷ್ಟಮಿಯಂದು ಏನು ಮಾಡ್ಬೇಕು ಎಂಬುದನ್ನು ನಾವು ಹೇಳ್ತೇವೆ. 

ಜನ್ಮಾಷ್ಟಮಿ (Janmashtami) ಯಂದು ಕೊಳಲಿ (Flute) ನ ಈ ಉಪಾಯ ಪಾಲಿಸಿ : 
ವ್ಯವಹಾರದಲ್ಲಿ ಲಾಭ (Profit) : ವ್ಯಾಪಾರ (Business)ದಲ್ಲಿ ನಿರಂತರವಾಗಿ ನಷ್ಟವಾಗ್ತಿದ್ದರೆ  ಅಥವಾ ಬೇರೆ ಯಾವುದೇ ರೀತಿಯ ಸಮಸ್ಯೆ ಎದುರಾಗಿದ್ದರೆ ಅದಕ್ಕೆ ಕೊಳಲಿನಲ್ಲಿ ಪರಿಹಾರವಿದೆ. ಬಿದಿರಿ (bamboo) ನಿಂದ ಮಾಡಿದ ಕೊಳಲನ್ನು ಪರಿಹಾರಕ್ಕೆ ಬಳಸಬೇಕು. ಕೃಷ್ಣ ಜನ್ಮಾಷ್ಟಮಿಯ ದಿನದಂದು  ಶ್ರೀಕೃಷ್ಣ ( Krishna)ನನ್ನು ಪೂಜಿಸಬೇಕು. ಕೃಷ್ಣನ ಮೂರ್ತಿ ಅಥವಾ ಫೋಟೋ (Photo) ಬಳಿ ಕೊಳಲನ್ನು ಇಟ್ಟು ಅದನ್ನೂ ಪೂಜಿಸಬೇಕು. ನಂತ್ರ ನಿಮ್ಮ ಅಂಗಡಿ ಅಥವಾ ಕಚೇರಿಯ ಚಾವಣಿಯ ಮೇಲೆ ಈ ಬಿದುರಿನ ಕೊಳಲನ್ನು ನೇತುಹಾಕಬೇಕು. ಇದರಿಂದ ವ್ಯವಹಾರದಲ್ಲಿ ಯಶಸ್ಸು ಸಿಗುವುದಲ್ಲದೆ ಲಾಭ ನಿಮ್ಮದಾಗುತ್ತದೆ.

Tap to resize

Latest Videos

undefined

ದಾಂಪತ್ಯ ಜೀವನದಲ್ಲಿ ಸುಖ ಪ್ರಾಪ್ತಿ : ದಾಂಪತ್ಯ ಜೀವನದಲ್ಲಿ ಸದಾ ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ಪತಿ-ಪತ್ನಿಯರ ನಡುವೆ ಸಣ್ಣಪುಟ್ಟ ವಿಷಯಗಳಿಗೆ ಜಗಳ ಉಂಟಾದರೆ ಕೊಳಲಿನ ಮೂಲಕ ದಾಂಪತ್ಯ ಜೀವನದಲ್ಲಿ ಮಧುರತೆಯನ್ನು ತರಬಹುದು. ಇದಕ್ಕಾಗಿ  ಎರಡು ಕೊಳಲುಗಳನ್ನು ತೆಗೆದುಕೊಳ್ಳಬೇಕು. ಅವುಗಳನ್ನು ಕೆಂಪು ದಾರ ಅಥವಾ ರಿಬ್ಬನ್ ನಿಂದ ಹಾಸಿಗೆಗೆ ಕಟ್ಟಬೇಕು. ಹೀಗೆ ಮಾಡುವುದರಿಂದ ನಿಮ್ಮ ಸಂಬಂಧ ಗಟ್ಟಿಯಾಗುತ್ತದೆ.

ಆರ್ಥಿಕ ಸ್ಥಿತಿ ವೃದ್ಧಿಗಾಗಿ : ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದ್ದರೆ ಅಥವಾ ನಿರಂತರ ಸಾಲದ ಹೊರೆಯಲ್ಲಿ ಸಿಕ್ಕಿ ಬಿದ್ದಿದ್ದರೆ ವಾಸ್ತು ಶಾಸ್ತ್ರದಲ್ಲಿ ಹೇಳಿರುವ ಕೊಳಲಿನ ನಿಯಮವನ್ನು ಪಾಲನೆ ಮಾಡಬಹುದು. ವಾಸ್ತು ಶಾಸ್ತ್ರದ ಪ್ರಕಾರ,  ಆರ್ಥಿಕ ಸಮಸ್ಯೆ ಎದುರಾಗ್ತಿದ್ದರೆ  ಮನೆಯಲ್ಲಿ ಬೆಳ್ಳಿಯ ಕೊಳಲನ್ನು ಇರಿಸಬೇಕು. ಇದರಿಂದ ಲಕ್ಷ್ಮಿಯ ಕೃಪೆ ಸದಾ ನಿಮ್ಮ ಮನೆ ಹಾಗೂ ನಿಮ್ಮ ಮೇಲಿರುತ್ತದೆ. 

ಕನಸಲ್ಲಿ ಹಣ ನೋಡಿದ್ರೆ, ನಿಜವಾಗ್ಲೂ ಶ್ರೀಮಂತರಾಗ್ತಾರ?

ಮನೆಯಲ್ಲಿರುವ ವಾಸ್ತು ದೋಷ ನಿವಾರಣೆಗೆ ಕೊಳಲು : ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ವಾಸ್ತು ದೋಷ ಇದ್ದರೆ ಅದನ್ನು ಹೋಗಲಾಡಿಸಲು ಕೊಳಲನ್ನು ನೀವು ಬಳಸಬಹುದು. ಮನೆಯಲ್ಲಿ ಕೊಳಲನ್ನು ಇಡುವುದ್ರಿಂದ ಮನೆಯ ವಾಸ್ತು ದೋಷ ನಿವಾರಣೆಯಾಗುತ್ತದೆ. ಬಂದ ಸಮಸ್ಯೆಯಲ್ಲ ಕಡಿಮೆಯಾಗುತ್ತದೆ. 

ಈ ಸಣ್ಣ ಮಂತ್ರದಲ್ಲಿದೆ ಅಗಾಧ ಶಕ್ತಿ, ಹೇಳಿಕೊಳ್ಳುತ್ತಿದ್ದರೆ ಧೈರ್ಯ ಹೆಚ್ಚೋದು ಗ್ಯಾರಂಟಿ

ಶನಿಯ ಕೋಪ ಕೊಳಲಿನಿಂದ ಉಪಶಮನ : ಶನಿಯಿಂದ ತಪ್ಪಿಸಿಕೊಳ್ಳುವುದು ಸುಲಭದ ಮಾತಲ್ಲ. ಶನಿ ಕೋಪಗೊಂಡ್ರೆ ಸಮಸ್ಯೆಗಳು ಎದುರಾಗುತ್ತವೆ. ಅನೇಕರ ಜಾತಕದಲ್ಲಿ ಶನಿ ದೋಷವಿರುತ್ತದೆ. ಅಂಥವರು ಕೃಷ್ಣ ಕೊಳಲಿನಿಂದ ಶನಿ ದೋಷಕ್ಕೆ ಪರಿಹಾರವನ್ನು ಮಾಡಿಕೊಳ್ಳಬಹುದು. ಈ ಮೂಲಕ ಸಮಸ್ಯೆಯಿಂದ ಹೊರಗೆ ಬರಬಹುದು.ಇದಕ್ಕಾಗಿ ಕೊಳಲನ್ನು ತೆಗೆದುಕೊಂಡು ಅದರಲ್ಲಿ ಸಕ್ಕರೆ ತುಂಬಿಸಬೇಕು. ನಂತ್ರ ಕೊಳಲನ್ನು ಜನವಸತಿ ಇಲ್ಲದ ಜಾಗದಲ್ಲಿ ಹೂಳಬೇಕು. ಈ ರೀತಿ ಮಾಡುವುದರಿಂದ ಶನಿ ಸಾಡೇ ಸಾಥ್ ಮತ್ತು ಶನಿ ಧೈಯ ದೋಷವಿದ್ದರೆ ಪರಿಹಾರ ಸಿಗುತ್ತದೆ. 
 

click me!