Krishna Janmashtami: ರಾಶಿಗನುಗುಣವಾಗಿ ಮಾಡಿ ದಾನ

By Suvarna News  |  First Published Aug 16, 2022, 5:07 PM IST

ಕೃಷ್ಣನ ಭಕ್ತರ ಸಂಭ್ರಮ ಈಗಿನಿಂದ್ಲೇ ಮನೆ ಮಾಡಿದೆ. ಕೃಷ್ಣನ ಆರಾಧನೆಗೆ ತಯಾರಿ ನಡೆದಿದೆ. ಇದೇ ಆಗಸ್ಟ್ 18ರಂದು ಕೃಷ್ಣ ಜನ್ಮಾಷ್ಟಮಿ ನಡೆಯಲಿದೆ. ಭಕ್ತರು ಆ ದಿನ ದಾನದ ಬಗ್ಗೆ ಕೆಲ ವಿಷ್ಯ ನೆನಪಿಟ್ಟುಕೊಂಡ್ರೆ ಶುಭ ಲಾಭ ಪಡೆಯಬಹುದು.
 


ಶ್ರೀ ಕೃಷ್ಣ ಜನ್ಮಾಷ್ಟಮಿ ಹತ್ತಿರ ಬರ್ತಿದೆ. ಪ್ರತಿ ವರ್ಷ ಭಾದ್ರಪದ ಕೃಷ್ಣ ಪಕ್ಷದ ಅಷ್ಟಮಿ ದಿನಾಂಕದಂದು ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತದೆ. ಈ ವರ್ಷ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ಆಗಸ್ಟ್ 18 ರಂದು ಬಂದಿದೆ. ಆಗಸ್ಟ್ 18ರಂದು ಕೃಷ್ಣ ಜನ್ಮಾಷ್ಟಮಿಗೆ ಭಕ್ತರು ತಯಾರಿ ನಡೆಸಿದ್ದಾರೆ. ಆ ದಿನ ಬಾಲ ಗೋಪಾಲನ ಪೂಜೆ ನಡೆಯಲಿದೆ. ಬಾಲ ಕೃಷ್ಣನಿಗೆ ಬೆಣ್ಣೆ, ಲಡ್ಡನ್ನು ನೀಡಿ ಭಕ್ತರು ಭಕ್ತಿಯಿಂದ ಪೂಜೆ ಮಾಡ್ತಾರೆ. ಶ್ರೀಕೃಷ್ಣ ಜನ್ಮಾಷ್ಟಮಿಯಂದು ಕೆಲ ವಸ್ತುಗಳನ್ನು ದಾನ ಮಾಡುವುದು ಶುಭವೆಂದು ನಂಬಲಾಗಿದೆ. ಆ ದಿನ ಯಾವ ರಾಶಿಯವರು ಯಾವ ವಸ್ತುವನ್ನು ದಾನ ಮಾಡಿದ್ರೆ ಶುಭ ಫಲ ದೊರೆಯುತ್ತದೆ ಹಾಗೆ ಏನು ಕೆಲಸ ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ.

ಕೃಷ್ಣ ಜನ್ಮಾಷ್ಟಮಿ (Krishna Janmashtami) ದಿನ ದಾನ : 

Tap to resize

Latest Videos

ಮೇಷ (Aries) ರಾಶಿ :  ಜ್ಯೋತಿಷ್ಯ (Astrology) ಶಾಸ್ತ್ರದ ಪ್ರಕಾರ ಮೇಷ ರಾಶಿಯವರು ಕೃಷ್ಣ ಜನ್ಮಾಷ್ಟಮಿಯ ದಿನದಂದು ಗೋಧಿಯನ್ನು ದಾನ ಮಾಡುವುದು ಮಂಗಳ. ಇದರೊಂದಿಗೆ ವಿಷ್ಣು ಸಹಸ್ರನಾಮ (Vishnusahasranama) ವನ್ನು ಪಠಿಸುವುದರಿಂದಲೂ ಶುಭ ಫಲ ಪ್ರಾಪ್ತಿಯಾಗುತ್ತದೆ.

ವೃಷಭ (Taurus) ರಾಶಿ : ವೃಷಭ ರಾಶಿಯವರು ಜನ್ಮಾಷ್ಟಮಿಯ ದಿನ ಸಕ್ಕರೆಯನ್ನು ದಾನ ಮಾಡುವುದು ಒಳ್ಳೆಯದು.  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹೀಗೆ ಮಾಡುವುದರಿಂದ ಶ್ರೀಕೃಷ್ಣನ ವಿಶೇಷ ಕೃಪೆಗೆ ವೃಷಭ ರಾಶಿಯವರು ಪಾತ್ರರಾಗುತ್ತಾರೆ. 

ಮಿಥುನ (Gemini)  ರಾಶಿ : ಮಿಥುನ ರಾಶಿಯವರು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೃಷ್ಣ ಜನ್ಮಾಷ್ಟಮಿಯಂದು ಧಾನ್ಯಗಳನ್ನು ಬಡವರಿಗೆ ಮತ್ತು ನಿರ್ಗತಿಕರಿಗೆ ದಾನ ಮಾಡಬೇಕು. ಇದು ಅದೃಷ್ಟ ತಂದುಕೊಡಲಿದೆ.

ಕರ್ಕಾಟಕ (Cancer)  ರಾಶಿ. : ಕರ್ಕಾಟಕ ರಾಶಿಯವರು ಕೃಷ್ಣ ಜನ್ಮಾಷ್ಟಮಿಯ ದಿನದಂದು ಬಡವರಿಗೆ ಅಕ್ಕಿ ಮತ್ತು ಖೀರ್ ಅನ್ನು ವಿತರಿಸಬೇಕು. ಹೀಗೆ ಮಾಡಿದಲ್ಲಿ ಕರ್ಕಾಟಕ ರಾಶಿಯವರ ಆಸೆಗಳು ಈಡೇರುತ್ತವೆ.

ಸಿಂಹ (Leo) ರಾಶಿ :  ಸಿಂಹ ರಾಶಿಯವರು ಜನ್ಮಾಷ್ಟಮಿಯ ದಿನದಂದು ಬೆಲ್ಲವನ್ನು ದಾನ ಮಾಡಬೇಕು. ಹಾಗೆಯೇ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸುವುದು ಬಹಳ ಶುಭಕರ.

ಕನ್ಯಾ (Virgo) ರಾಶಿ :  ಕನ್ಯಾ ರಾಶಿ ಜನರು ಜನ್ಮಾಷ್ಟಮಿಯ ದಿನದಂದು ಅಗತ್ಯವಿರುವವರಿಗೆ ಆಹಾರ ಧಾನ್ಯಗಳನ್ನು ದಾನ ಮಾಡಬೇಕು. ಇದ್ರಿಂದ ಶುಭ ಫಲ ಪ್ರಾಪ್ತಿಯಾಗಲಿದೆ. 

ತುಲಾ (Libra) ರಾಶಿ : ಈ ರಾಶಿಯ ಜನರು ಜನ್ಮಾಷ್ಟಮಿಯ ದಿನದಂದು ಬಡವರಿಗೆ ತಮ್ಮ ಅಗತ್ಯಕ್ಕೆ ಅನುಗುಣವಾಗಿ ವಸ್ತುಗಳನ್ನು ದಾನ ಮಾಡಬೇಕು. ಬಡವರಿಗೆ ವಸ್ತ್ರದಾನ ಮಾಡಿದ್ರೆ ಜೀವನದಲ್ಲಿ ಯಶಸ್ಸನ್ನು ಕಾಣಬಹುದಾಗಿದೆ.

ವೃಶ್ಚಿಕ (Capricorn) ರಾಶಿ : ವೃಶ್ಚಿಕ ರಾಶಿಯವರು ಕೃಷ್ಣ ಜನ್ಮಾಷ್ಟಮಿಯಂದು ಗೋಧಿಯನ್ನು ನಿರ್ಗತಿಕರಿಗೆ ದಾನ ಮಾಡಿದರೆ ಉತ್ತಮ ಎನ್ನಲಾಗಿದೆ.  

ಗರುಡ ಪುರಾಣ ಕಲಿಸೋ 10 ಅಸಾಧಾರಣ ಪಾಠಗಳಿವು..

ಧನು (Sagittarius) ರಾಶಿ : ಧನು ರಾಶಿ ಜನರು ಕೃಷ್ಣ ಜನ್ಮಾಷ್ಟಮಿಯ ದಿನದಂದು ಶ್ರೀಕೃಷ್ಣನಿಗೆ ಕೊಳಲು ಮತ್ತು ನವಿಲು ಗರಿಗಳನ್ನು ಅರ್ಪಿಸಬೇಕು. ಬಡ ಮಕ್ಕಳಿಗೆ ಹಣ್ಣುಗಳನ್ನು ದಾನ ಮಾಡಬೇಕು. ಇದ್ರಿಂದ ಶುಭ ಫಲ ದೊರಕುತ್ತದೆ.

ಮಕರ (Capricorn)  ರಾಶಿ : ಕೃಷ್ಣ ಜನ್ಮಾಷ್ಟಮಿಯ ದಿನದಂದು ಆಹಾರ ಧಾನ್ಯಗಳು ಮತ್ತು ಎಳ್ಳನ್ನು ದಾನ ಮಾಡಬಹುದು. ಇದ್ರ ಜೊತೆ ಭಗವದ್ಗೀತೆ  ಓದಬೇಕು ಇಲ್ಲವೆ ಕೇಳಬೇಕು.

ಕುಂಭ (Aquarius)) ರಾಶಿ : ಕುಂಭ ರಾಶಿಯ ಜನರು ಜನ್ಮಾಷ್ಟಮಿಯ ದಿನದಂದು ಶ್ರೀಕೃಷ್ಣನಿಗೆ ನವಿಲು ಗರಿಗಳನ್ನು ಅರ್ಪಿಸಬೇಕು. ಅಲ್ಲದೆ  ಅಗತ್ಯವಿರುವವರಿಗೆ ಹಣ್ಣುಗಳು ಮತ್ತು ಧಾನ್ಯಗಳನ್ನು ದಾನ ಮಾಡಬೇಕು. ಇದ್ರಿಂದ ಯಶಸ್ಸು ದೊರೆಯುತ್ತದೆ. 

ಈ ಸಣ್ಣ ಮಂತ್ರದಲ್ಲಿದೆ ಅಗಾಧ ಶಕ್ತಿ, ಹೇಳಿಕೊಳ್ಳುತ್ತಿದ್ದರೆ ಧೈರ್ಯ ಹೆಚ್ಚೋದು ಗ್ಯಾರಂಟಿ

ಮೀನ (Pisces) ರಾಶಿ : ಮೀನ ರಾಶಿಯವರು ಜನ್ಮಾಷ್ಟಮಿಯ ದಿನದಂದು ದೇವಸ್ಥಾನಕ್ಕೆ ಧಾರ್ಮಿಕ ಪುಸ್ತಕಗಳನ್ನು ದಾನ ಮಾಡಬೇಕು.  ಧಾರ್ಮಿಕ ಪುಸ್ತಕಗಳನ್ನು ಸಹ  ಅಗತ್ಯವಿರುವವರಿಗೆ ದಾನ ಮಾಡಿದ್ರೆ ಒಳ್ಳೆಯದಾಗಲಿದೆ. 

click me!