ಈ ಸಣ್ಣ ಮಂತ್ರದಲ್ಲಿದೆ ಅಗಾಧ ಶಕ್ತಿ, ಹೇಳಿಕೊಳ್ಳುತ್ತಿದ್ದರೆ ಧೈರ್ಯ ಹೆಚ್ಚೋದು ಗ್ಯಾರಂಟಿ

By Suvarna NewsFirst Published Aug 16, 2022, 1:09 PM IST
Highlights

ಮಂತ್ರ, ಜಪ, ಸೋತ್ರದ ವಿಷ್ಯ ಬಂದಾಗ ಜನರು ಆಧ್ಯಾತ್ಮಿಕ ಎಂದುಕೊಳ್ತಾರೆ. ಆದ್ರೆ ಮಂತ್ರಗಳು ಕೇವಲ ದೇವರಿಗೆ ಸೀಮಿತವಾಗಿಲ್ಲ. ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಈ ಮಂತ್ರಗಳು ನೆರವಾಗುತ್ತವೆ. 

ಓಂಕಾರವನ್ನು ಬೀಜ ಮಂತ್ರವೆಂದು ಕರೆಯಲಾಗುತ್ತದೆ. ಹಿಂದೂ ಧರ್ಮದಲ್ಲಿ ಓಂಗೆ ವಿಶೇಷ ಮಹತ್ವವಿದೆ. ಓಂ ಅನ್ನು ಅತ್ಯಂತ ಪ್ರಭಾವಶಾಲಿ ಎಂದು ಪರಿಗಣಿಸಲಾಗಿದೆ. ಓಂ ಒಂದು ಚಿಕ್ಕ ಪದವಾಗಿರಬಹುದು ಆದರೆ ಅದರ ಪ್ರಯೋಜನ ಸಾಕಷ್ಟಿದೆ. ಹಿಂದೂ ಧರ್ಮದ ಪ್ರಕಾರ ಓಂ ಕಾರ ಹುಟ್ಟಿದ್ದು ಶಿವನ ಮುಖದಿಂದ ಎನ್ನಲಾಗುತ್ತದೆ. ಓಂ ಎಂಬುದು ಮೂರು ಅಕ್ಷರದಿಂದ ಸೃಷ್ಟಿಯಾಗಿದೆ. ಅ,ಉ ಮತ್ತು ಮ ಎಂಬ ಮೂರು ಅಕ್ಷರ ಸೇರಿ ಓಂ ಗಿದೆ. ಅ ಅಕ್ಷರವು   ಸೃಷ್ಟಿಯನ್ನು ಸೂಚಿಸುತ್ತದೆ. ಉ ಅಕ್ಷರವು  ಸ್ಥಿತಿಯನ್ನು ಸೂಚಿಸುತ್ತದೆ ಮತ್ತು ಮ ಅಕ್ಷರವು  ಲಯವನ್ನು ಸೂಚಿಸುತ್ತದೆ. ಓಂ ಪಠಣೆಯಿಂದ ಅನೇಕ ಪ್ರಯೋಜನಗಳಿವೆ. ಇಡೀ ವಿಶ್ವವೇ ಈ ಪದದಲ್ಲಿ ಅಡಕವಾಗಿದೆ. ಇದನ್ನು ಜಪಿಸುವುದರಿಂದ ದೈಹಿಕ ಮತ್ತು ಮಾನಸಿಕ ಒತ್ತಡವು ದೂರವಾಗುತ್ತದೆ ಮತ್ತು ವಿಭಿನ್ನ ಶಕ್ತಿಯ ಅನುಭವವಾಗುತ್ತದೆ. ವ್ಯಕ್ತಿಯು ಸಕಾರಾತ್ಮಕ ದಿಕ್ಕಿನಲ್ಲಿ ಚಲಿಸಲು ಓಂಕಾರ ಸಹಕಾರಿ. ಓಂಕಾರವನ್ನು ಸರಿಯಾಗಿ ಉಚ್ಚರಿಸಿದ್ರೆ ಮಾತ್ರ ಅದರ ಲಾಭ ಅಪಾರ. ಓಂಕಾರ ಪಠಣದ ನಿಯಮಗಳು ಮತ್ತು ಅದರ ಪ್ರಯೋಜನಗಳ ಬಗ್ಗೆ ತಿಳಿಯೋಣ.

ಓಂ (Om) ಕಾರ ಪಠಣ ನಿಯಮಗಳು : ಬೆಳಗ್ಗೆ ಸೂರ್ಯೋದಯ (Sunrise) ಕ್ಕೆ ಮುನ್ನ ಓಂಕಾರ ಪಠಿಸುವುದು ಬಹಳ ಪ್ರಯೋಜನಕಾರಿ. ಇದನ್ನು ಜಪಿಸಲು  ಶಾಂತಿ ಇರುವ ಮತ್ತು ಯಾವುದೇ ರೀತಿಯಲ್ಲಿ ವ್ಯವಧಾನವಿಲ್ಲದ ಸ್ಥಳವನ್ನು ಆರಿಸಬೇಕು. ಈ ಮಂತ್ರವನ್ನು 108 ಬಾರಿ ಪಠಿಸುವುದ್ರಿಂದ ಹೆಚ್ಚಿನ ಫಲ ಪಡೆಯಬಹುದು. ಓ ಹಾಗೂ ಮ್ ಎರಡು ಅಕ್ಷರಗಳನ್ನು ಇಲ್ಲಿ ಉಚ್ಚರಿಸಬೇಕಾಗುತ್ತದೆ. ಓ ಆರೋಹಣದಲ್ಲಿದ್ದರೆ ಮ್ ಅವರೋಹಣದಲ್ಲಿರುತ್ತದೆ. ಅನೇಕರು ಓವನ್ನು ಹೆಚ್ಚಿನ ಪ್ರಮಾಣದಲ್ಲಿ ಉಚ್ಚಾರ ಮಾಡ್ತಾರೆ. ಆದ್ರೆ ಅದು ತಪ್ಪು. ಓಗಿಂತ ಮ್ ಉಚ್ಚಾರವನ್ನು ಹೆಚ್ಚಾಗಿ ಉಚ್ಚರಿಸಬೇಕು. 

ಓಂಕಾರ ಪಠಣೆಯಿಂದ ಆಗುವ ಲಾಭಗಳು : 
ಒತ್ತಡ (Stress) ದೂರ ಮಾಡುತ್ತದೆ :
ಓಂ ಪಠಣವು ದೈಹಿಕವಾಗಿ ಮತ್ತು ಮಾನಸಿಕ (Mental) ವಾಗಿ ಶಾಂತಿಯನ್ನು ತರುತ್ತದೆ. ಒಬ್ಬ ವ್ಯಕ್ತಿಯು ದೈಹಿಕ ಮತ್ತು ಮಾನಸಿಕ ಒತ್ತಡದಿಂದ ಮುಕ್ತವಾದಾಗ  ಉತ್ತಮ ನಿದ್ರೆ (Sleep) ಆತನಿಗೆ ಬರುತ್ತದೆ. ಓಂಕಾರ ಉಚ್ಚಾರಣೆ ಮಾಡುವುದ್ರಿಂದ ವ್ಯಕ್ತಿಯು ಎಲ್ಲಾ ರೀತಿಯ ಚಿಂತೆಗಳಿಂದ ಮುಕ್ತನಾಗುತ್ತಾನೆ. ಈ ಮಂತ್ರವು ದೇಹದ ಅನೇಕ ಸಮಸ್ಯೆಗಳಿಗೆ ಮುಕ್ತಿ ನೀಡುತ್ತದೆ. ವ್ಯಕ್ತಿಯ ಮನಸ್ಸಿಗೆ ಶಾಂತಿಯನ್ನು ಓಂಕಾರ ನೀಡುತ್ತದೆ.

Vastu Tips: ಮನಿ ಪ್ಲ್ಯಾಂಟ್ ಮನಿಯನ್ನು ಮನೆ ಒಳಗೆ ತರ್ಬೇಕಂದ್ರೆ ಈ ರೂಲ್ಸ್ ಫಾಲೋ ಮಾಡಿ..

ಧನಾತ್ಮಕ ಶಕ್ತಿಯನ್ನು ಹೊರಹಾಕುತ್ತದೆ : ಓಂ ಪಠಣದಿಂದ ಧನಾತ್ಮಕ ಶಕ್ತಿ ಮನಸ್ಸಿನಲ್ಲಿ ನೆಲೆಸುತ್ತದೆ. ಓಂಕಾರ ಉಚ್ಚಾರಣೆ ಮಾಡಿದ್ರೆ ನಿಮ್ಮ ಮನಸ್ಸು ಮಾತ್ರವಲ್ಲ ನಿಮ್ಮ ಸುತ್ತಲಿನ ಪರಿಸರವೂ ಧನಾತ್ಮಕವಾಗಿರುತ್ತದೆ. ವ್ಯಕ್ತಿ ಪ್ರತಿಯೊಂದು ವಿಷ್ಯಕ್ಕೂ ಗಮನ ನೀಡಲು ಸಾಧ್ಯವಾಗುತ್ತದೆ. ಎಲ್ಲ ವಿಷ್ಯಕ್ಕೆ ಪ್ರಾಮುಖ್ಯತೆ ನೀಡಿ, ಏಕಾಗ್ರತೆ ಶಕ್ತಿ ಹೆಚ್ಚಿಸಿಕೊಳ್ಳಲು ಓಂಕಾರ ನೆರವಾಗುತ್ತದೆ. 

ಅನೇಕ ರೋಗಗಳಿಂದ ಮುಕ್ತಿ ನೀಡುತ್ತದೆ :  ಓಂಕಾರ ಪಠಣ ಮಾಡುವುದರಿಂದ ಥೈರಾಯ್ಡ್, ಬಿಪಿ ಮತ್ತು ಹೊಟ್ಟೆಯ ಸಮಸ್ಯೆಗಳಂತಹ ಅನೇಕ ಕಾಯಿಲೆಗಳು ದೂರವಾಗುತ್ತವೆ. ಇದನ್ನು ಪಠಿಸುವುದರಿಂದ ದೇಹದಲ್ಲಿ ಆಮ್ಲಜನಕದ ಪ್ರಮಾಣ ಸುಧಾರಿಸುತ್ತದೆ. ಇಷ್ಟೇ ಅಲ್ಲ ಖಿನ್ನತೆಯಿಂದ ಬಳಲುತ್ತಿರುವವರು ಓಂ ಜಪ ಮಾಡಿದರೆ ಖಿನ್ನತೆಯಿಂದ ಮುಕ್ತಿ ಪಡೆಯಬಹುದು.

ರುದ್ರಾಕ್ಷಿ ಒಳ್ಳೇಯದು ಹೌದು, ಆದರೆ, ಆ ಸಂದರ್ಭದಲ್ಲಿ ಅಪ್ಪಿತಪ್ಪಿಯೂ ಧರಿಸಬೇಡಿ!

ಆಯಸ್ಸು ವೃದ್ಧಿ : ಓಂಕಾರ ಉಚ್ಚಾರಣೆ ಮಾಡಿದಾಗ ಉಸಿರಾಟ ಕ್ರಿಯೆ ದೀರ್ಘವಾಗುತ್ತದೆ. ಒಂದು ನಿಮಿಷಕ್ಕೆ 20 ಬಾರಿ ಉಸಿರಾಟ ಕ್ರಿಯೆ ನಡೆಸುವವರು ಓಂಕಾರ ಉಚ್ಚಾರಣೆ ಮಾಡ್ತಿದ್ದರೆ ಉಸಿರಾಟ ಕ್ರಿಯೆ 15- 18ಕ್ಕೆ ಬರುತ್ತದೆ. ಉಸಿರಾಟ ಕ್ರಿಯೆ ದೀರ್ಘವಾದಾಗ ಆಯಸ್ಸು ವೃದ್ಧಿಯಾಗುತ್ತದೆ. ಶ್ವಾಸಕೋಶ ಬಲಪಡೆಯುವ ಕಾರಣ ವ್ಯಕ್ತಿ ನಾಲ್ಕೆಂಟು ವರ್ಷ ಹೆಚ್ಚಿಗೆ ಬದುಕುತ್ತಾನೆ. 
 

click me!