ಕಷ್ಟ ಎಂಬುದು ಯಾರಿಗೆ ಬರಲ್ಲ ಹೇಳಿ.. ಎಲ್ಲರಿಗೂ ಒಂದಿಲ್ಲೊಂದು ರೀತಿಯಲ್ಲಿ ಬರುತ್ತದೆ. ಆದರೆ, ಕೆಲವರಿಗೆ ಈ ಸಂಕಷ್ಟ ಎಷ್ಟೆಂದರೂ ಮುಗಿಯುವುದೇ ಇಲ್ಲ. ಇಂಥವರು ಜಾತಕವನ್ನು ತೋರಿಸಿಕೊಂಡು ಪರಿಹಾರವನ್ನು ಪಡೆಯಬೇಕು. ಆದರೆ, ಪದೇ ಪದೇ ಸಮಸ್ಯೆಗಳಿದ್ದರೆ ರಾಹುವಿನ ಕಾಟವೂ ಇರಬಹುದು. ರಾಹು ಪ್ರಭಾವ ಇದ್ದರೆ ಏನು ಪರಿಹಾರ ಎಂಬುದನ್ನು ನೋಡೋಣ…
ರಾಹುಕಾಲದಲ್ಲಿ (Rahu Kala) ಯಾವುದೇ ಒಳ್ಳೆಯ ಕೆಲಸವನ್ನು (Good work) ನಾವು ಮಾಡುವುದಿಲ್ಲ. ಹಾಗೆಯೇ ತುಂಬಾ ಸಂಕಷ್ಟಗಳಿದ್ದರೆ ರಾಹು ಕಾಟ ಇರಬಹುದು ಎಂದೂ ಹೇಳಲಾಗುತ್ತದೆ. ಹೀಗಾಗಿ ಜಪ – ತಪಾದಿಗಳ ಸಹಿತ ದೇವರ ಅನುಷ್ಠಾನವನ್ನು ಸಹ ನಾವು ಮಾಡುತ್ತೇವೆ. ಸುಖ, ನೆಮ್ಮದಿ ದಯಪಾಲಿಸು ಎಂದು ದೇವರಲ್ಲಿ ಬೇಡುತ್ತೇವೆ. ಆದರೆ, ಗ್ರಹಗತಿಗಳು ಕೆಟ್ಟರೆ ಮಾತ್ರ ಬಾರಿ ಕಷ್ಟ. ಇದರ ಜೊತೆಗೆ ರಾಹುವಿನ ವಕ್ರದೃಷ್ಟಿ ನಿಮ್ಮ ಮೇಲೆ ಬಿದ್ದರೆ ಭಾರಿ ಕಷ್ಟ ಎದುರಾಗಲಿದೆ. ರಾಹುವಿನ ಕೆಟ್ಟ ದೃಷ್ಟಿಯಿಂದ ಬಚಾವಾಗಲು, ಪರಿಹಾರವನ್ನು ಕಂಡುಕೊಳ್ಳಲು ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಹಲವು ವಿಧಾನಗಳು ಇವೆ.
ರಾಹುವಿನ ಕೆಟ್ಟ ಪ್ರಭಾವ ಬೀರುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಇದಕ್ಕೆ ನೀವು ಕಾಲ ಕಾಲಕ್ಕೆ ಜಾತಕವನ್ನು (Horoscope) ತೋರಿಸಿಕೊಳ್ಳಬೇಕಾಗುತ್ತದೆ. ಒಮ್ಮೆ ರಾಹುವಿನ ಪ್ರಭಾವ ಇದೆಯಂದಾದರೆ ಕೆಲವು ಸರಳವಾದ ಸೂತ್ರಗಳನ್ನು (Simple Tips) ಹೇಳಲಾಗಿದೆ. ಅದರಂತೆ ನಡೆದುಕೊಂಡರೆ ನೆಮ್ಮದಿಯ ಬದುಕನ್ನು ಕಾಣಬಹುದು. ಇದಕ್ಕೆ ಉದ್ದಿನಕಾಳು ಮುಖ್ಯವಾಗುತ್ತದೆ. ಹೀಗಾಗಿ ಆರೋಗ್ಯ ಭಾಗ್ಯವನ್ನೂ ಪಡೆದುಕೊಳ್ಳಬಹುದು. ಹೀಗಾಗಿ ರಾಹುಕಾಟದಿಂದ ಪಾರಾಗಲು ಇರುವ ಉಪಾಯ ಮತ್ತು ವಿಶೇಷವಾಗಿ ಉದ್ದಿನಕಾಳಿನ ಪರಿಹಾರದ ಬಗ್ಗೆ ತಿಳಿಯೋಣ…
ದೌರ್ಭಾಗ್ಯದಿಂದ ಪಾರು
ಉದ್ದಿನ ಕಾಳು ದೌರ್ಭಾಗ್ಯವನ್ನು ಹೋಗಲಾಡಿಸುತ್ತದೆ. ಇದಕ್ಕೋಸ್ಕರ ನೀವು ಮಾಡಬೇಕಾಗಿದ್ದು ಇಷ್ಟೇ, ಸಂಜೆ ವೇಳೆಗೆ 2 ಉದ್ದಿನ ಕಾಳುಗಳನ್ನು ತೆಗೆದುಕೊಳ್ಳಬೇಕು. ಒಂದಕ್ಕೆ ಮೊಸರು (Curd) ಹಾಗೂ ಇನ್ನೊಂದಕ್ಕೆ ಕುಂಕುಮ ಲೇಪಿಸಿ ಅದನ್ನು ತೆಗೆದುಕೊಂಡು ಹೋಗಿ ಅರಳಿ ಮರದ ಕೆಳಗೆ ಇಟ್ಟು ತಿರುಗಿ ನೋಡದೇ ಮನೆಗೆ ವಾಪಸಾಗಬೇಕು. ಹೀಗೆ 21 ದಿನ ಮಾಡಿದರೆ ದೌರ್ಭಾಗ್ಯ ದೂರವಾಗಿ ಅದೃಷ್ಟದ (Luck) ಬಾಗಿಲು ತೆರೆಯುತ್ತದೆ.
ಶನಿಯಿಂದ ಮುಕ್ತಿ (Saturn)
ಜಾತಕದಲ್ಲಿ ಶನಿ ದೋಷವು ಕಂಡುಬಂದರೆ ಅದರಿಂದ ಪರಿಹಾರ ಪಡೆದುಕೊಳ್ಳಲು ಉದ್ದಿನಕಾಳು ಪ್ರಮುಖ ಸಹಕಾರಿಯಾಗಿದೆ. ಶನಿವಾರದ (Saturday) ದಿನದಂದು ಉದ್ದಿನಕಾಳನ್ನು 3 ಬಾರಿ ತಲೆಗೆ ಸುಳಿದುಕೊಳ್ಳಬೇಕು. ಬಳಿಕ ಆ ಕಾಳನ್ನು ದಾನ (Donate) ಮಾಡಬೇಕಾಗುತ್ತದೆ. ಏಳು ಶನಿವಾರ ಹೀಗೆ ಮಾಡಿದಲ್ಲಿ ಶೀಘ್ರ ಪರಿಹಾರವಾಗಿ ಲಾಭವಾಗಲು ಆರಂಭವಾಗುತ್ತದೆ.
ಇದನ್ನು ಓದಿ: ಜಾತಕದಲ್ಲಿ ಗೃಹ ಮೈತ್ರಿತ್ವ ಚೆನ್ನಾಗಿದ್ದರೆ ಮಾತ್ರ ಮದುವೆ ಮಾತು ಮುಂದುವರೆಯಲಿ!
ಆರೋಗ್ಯವಂತರಾಗಿ
ಬಹಳ ಕಾಲದಿಂದ ಮನೆಯ ಸದಸ್ಯರಲ್ಲಿ ಯಾರಾದರೂ ಅನಾರೋಗ್ಯದಿಂದ (Illness) ಬಳಲುತ್ತಿದ್ದರೆ ಹೀಗೆ ಮಾಡಬೇಕು. ಅನಾರೋಗ್ಯಕ್ಕೆ ತುತ್ತಾದವರ ಮಲಗುವ ಮಂಚದ ಕೆಳಗಡೆಗೆ ಪಾತ್ರೆಯೊಂದರಲ್ಲಿ ಸಾಸಿವೆ ಎಣ್ಣೆ ಹಾಕಿಡಬೇಕು. ಬಳಿಕ ಅದರೊಳಗೆ ಉದ್ದನ್ನು ಹಾಕಿಡಬೇಕು. ಮರುದಿನ ಆ ಉದ್ದಿನಕಾಳನ್ನು ಎಣ್ಣೆಯಲ್ಲಿ ಕರಿಯಬೇಕು. ಬಳಿಕ ಈ ಕರಿಯಲಾದ ಉದ್ದಿನಕಾಳನ್ನು ನಾಯಿಗೆ (Dog) ತಿನ್ನಿಸಬೇಕು. ಈ ರೀತಿಯ ಕ್ರಮದಿಂದ ರೋಗದಿಂದ ಮುಕ್ತಿ ಪಡೆಯಬಹುದಾಗಿದೆ.
ಧನಪ್ರಾಪ್ತಿಗೆ ಹೀಗೆ ಮಾಡಿ
ರಾಹುವಿನ ಕೆಟ್ಟ ಪ್ರಭಾವದಿಂದ ಹಣಕಾಸಿ ಸಮಸ್ಯೆ ಎದುರಾಗಿದ್ದರೆ, ಇಲ್ಲಿ ಪರಿಹಾರವನ್ನು ಸೂಚಿಸಲಾಗಿದೆ. ಶನಿ ಅಮಾವಾಸ್ಯೆ, ಶನಿ ಜಯಂತಿ ಇಲ್ಲವೇ ಯಾವುದಾದರೂ ಶುಭ ಮುಹೂರ್ತದ ದಿನ ಉದ್ದಿನ ಕಾಳನ್ನು ದಾನ ಮಾಡಬೇಕು. ಹೀಗೆ ಮಾಡುವುದರಿಂದ ಆರ್ಥಿಕ ಸ್ಥಿತಿ ಉತ್ತಮವಾಗುವುದರ ಜೊತೆಗೆ ಧನ ಲಾಭವಾಗುತ್ತದೆ.
ಇದನ್ನು ಓದಿ: ರಾಹು ಗ್ರಹ ಪರಿವರ್ತನೆ - ಈ 3 ರಾಶಿಯವರಿಗೆ ಈ ವರ್ಷವಿಡೀ ಭಾರಿ ಧನಲಾಭ!
ಶಾಂತಿ, ನೆಮ್ಮದಿ ನೆಲೆಸುತ್ತದೆ
ಸದಾ ಒತ್ತಡದ ಜೀವನದಲ್ಲೇ ಇದ್ದು, ಅಶಾಂತಿ ವಾತಾವರಣ ಉಂಟಾಗಿದ್ದರೆ ಅದಕ್ಕೆ ಕೆಲವು ನಿಯಮಗಳನ್ನು ಅನುಸರಿಸಿ ಪರಿಹಾರವನ್ನು ಕಂಡುಕೊಳ್ಳಬೇಕು. ಮಂಗಳವಾರದ (Tuesday) ದಿನ ಹನುಮಂತನ ದೇಗುಲಕ್ಕೆ ಭೇಟಿ ನೀಡಿ ಹನುಮಾನ್ ಚಾಲೀಸಾವನ್ನು (Hanuman Chalisa) ಪಠಣ ಮಾಡಬೇಕು. ಹೀಗಿ ಪಠಿಸುತ್ತಿರುವಾಗಲೇ ಸಾಸಿವೆ ಎಣ್ಣೆ ದೀಪವನ್ನು ಬೆಳಗಿ, ಅದರೊಳಗೆ ಉದ್ದಿನಕಾಳನ್ನು ಹಾಕಬೇಕು. ಈ ರೀತಿಯ ಕ್ರಮವನ್ನು ನಾಲ್ಕು ಮಂಗಳವಾರ ಮಾಡಿದರೆ ಆಂಜನೇಯನ ಆಶೀರ್ವಾದ (Blessings) ಪ್ರಾಪ್ತಿಯಾಗುತ್ತದೆ. ಜೊತೆಗೆ ಮನೆ - ಮನದಲ್ಲಿ ಶಾಂತಿ ನೆಲೆಸಿ, ಭಯವೂ ದೂರಾಗಲಿದೆ. ಈ ಎಲ್ಲ ಕ್ರಮಗಳನ್ನು ಏಕಾಗ್ರತೆ, ಶ್ರದ್ಧೆಯಿಂದ ಮಾಡಿದಲ್ಲಿ ನಿಮಗೆ ಖಂಡಿತವಾಗಿಯೂ ಉತ್ತಮ ಫಲ ಸಿಗಲಿದೆ.