
ಲಕ್ಷ್ಮಿ (Laxmi) ಆಶೀರ್ವಾದ ಸಿಕ್ಕಿದ್ರೆ ಭಿಕ್ಷುಕ ಕೂಡ ಲಕ್ಷಾಧಿಪತಿಯಾಗ್ತಾನೆ. ಲಕ್ಷ್ಮಿ ಒಲಿದ್ರೆ ಎಲ್ಲಿಂದ ಆರ್ಥಿಕ (Economic) ವೃದ್ಧಿಯಾಗುತ್ತೆ ಎನ್ನೋದೇ ತಿಳಿಯೋದಿಲ್ಲ. ರಾತ್ರೋರಾತ್ರಿ ಶ್ರೀಮಂತ (Rich) ರಾದವರಿದ್ದಾರೆ. ಪ್ರತಿಯೊಬ್ಬರೂ ಇದನ್ನೇ ಬಯಸೋದು. ತಾಯಿ ಲಕ್ಷ್ಮ ಆಶೀರ್ವಾದ ತಮಗೂ ಇರಲಿ ಎಂದುಕೊಳ್ತಾರೆ. ಇದೇ ಕಾರಣಕ್ಕೆ ಲಕ್ಷ್ಮಿ ಒಲಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ವಾಸ್ತು ಶಾಸ್ತ್ರದಲ್ಲಿ ತಾಯಿ ಲಕ್ಷ್ಮಿ ಒಲಿಸಿಕೊಳ್ಳುವ ಬಗೆಯನ್ನು ಹೇಳಲಾಗಿದೆ. ವಾಸ್ತು ಶಾಸ್ತ್ರದಲ್ಲಿ ಮನೆಯ ಪ್ರತಿ ಕೋಣೆ (Room) ಯ ಸರಿಯಾದ ದಿಕ್ಕು ಮತ್ತು ಅದರಲ್ಲಿ ಇರಿಸಲಾಗಿರುವ ವಸ್ತುಗಳ ಸರಿಯಾದ ಬಳಕೆಯನ್ನು ವಿವರಿಸಲಾಗಿದೆ. ಇದಲ್ಲದೇ ಯಾವ ಸಮಯದಲ್ಲಿ ಯಾವ ಕೆಲಸವನ್ನು ಮಾಡಬೇಕು ಎಂಬ ಮಾಹಿತಿಯೂ ವಾಸ್ತು ಶಾಸ್ತ್ರದಲ್ಲಿದೆ. ಮನೆಯಲ್ಲಿ ಧನಾತ್ಮಕ ಶಕ್ತಿ (Positive energy) ಹೆಚ್ಚಾಗಲು ವಾಸ್ತು ಶಾಸ್ತ್ರದಲ್ಲಿ ಕೆಲವು ನಿಯಮಗಳನ್ನು ಹೇಳಲಾಗಿದೆ. ತಾಯಿ ಲಕ್ಷ್ಮಿ ಯಾವಾಗಲೂ ಸ್ವಚ್ಛವಾದ ಮನೆಯಲ್ಲಿ ನೆಲೆಸುತ್ತಾಳೆ. ವಾಸ್ತು ಶಾಸ್ತ್ರದಲ್ಲಿಯೂ ಕೆಲವು ಸ್ವಚ್ಛತೆಯ ನಿಯಮಗಳನ್ನು ಹೇಳಲಾಗಿದೆ. ನಾವೆಲ್ಲ ಪ್ರತಿ ದಿನ ಮನೆಯನ್ನು ಸ್ವಚ್ಛಗೊಳಿಸ್ತೇವೆ. ಆದ್ರೆ ಹೇಗೆ ಸ್ವಚ್ಛಗೊಳಿಸಬೇಕು? ವಾಸ್ತು ಶಾಸ್ತ್ರದಲ್ಲಿರುವ ನಿಯಮವೇನು ಎಂಬುದು ನಮಗೆ ಗೊತ್ತಿಲ್ಲ. ಇಂದು ನಾವು ಹೇಗೆ ಮನೆ ಸ್ವಚ್ಛಗೊಳಿಸಿದ್ರೆ ತಾಯಿಯ ಕೃಪೆ ನಿಮ್ಮ ಮೇಲಾಗುತ್ತದೆ, ಹಣದ ಮಳೆಯಾಗುತ್ತದೆ ಎಂಬುದನ್ನು ಹೇಳ್ತೇವೆ.
ಮನೆಯ ಸ್ವಚ್ಛತೆ ಹೀಗಿರಲಿ :
ಮುಖ್ಯ ಬಾಗಿಲಿನಿಂದ ಇಡೀ ಮನೆಯನ್ನು ಸ್ವಚ್ಛಗೊಳಿಸಿ : ಲಕ್ಷ್ಮಿ ಸ್ವಚ್ಛತೆಯನ್ನು ತುಂಬಾ ಪ್ರೀತಿಸುತ್ತಾಳೆ. ಒಳ ಮನೆಯಿಂದ ಮುಖ್ಯ ದ್ವಾರದ ಮೂಲಕ ಕಸವನ್ನು ನಾವು ಹೊರಕ್ಕೆ ಹಾಕ್ತೇವೆ. ಆದ್ರೆ ನೀವು ಲಕ್ಷ್ಮಿಯನ್ನು ಮೆಚ್ಚಿಸಲು ಬಯಸಿದರೆ ನಿಮ್ಮ ಮನೆಯ ಮುಖ್ಯ ದ್ವಾರದಿಂದ ಇಡೀ ಮನೆಯನ್ನು ಸ್ವಚ್ಛಗೊಳಿಸಬೇಕು.
ಸೂರ್ಯ ಗೋಚಾರ: ಈ 5 ರಾಶಿಯವರು ಎಚ್ಚರ, ಎಚ್ಚರ!
ಹಣದ ಹೊಳೆ ಹರಿಯಬೇಕೆಂದ್ರೆ ಹೀಗೆ ಮಾಡಿ : ಲಕ್ಷ್ಮಿಯು ಸ್ವಚ್ಛವಾದ ಮನೆಯಲ್ಲಿ ಸ್ಥಿರವಾಗಿ ನೆಲೆಸ್ತಾಳೆ ಎಂಬ ನಂಬಿಕೆಯಿದೆ. ಹಾಗಾಗಿಯೇ ಪ್ರತಿ ದಿನ ಮನೆಯನ್ನು ಕ್ಲೀನ್ ಮಾಡ್ಬೇಕು. ಮನೆಯ ವಸ್ತುಗಳನ್ನು ಸರಿಯಾದ ಜಾಗದಲ್ಲಿ ಇಟ್ಟಿರಬೇಕು. ಕಾಲಿಗೆ ಸಿಕ್ಕುವಂತೆ ಕಸವನ್ನು ಎಸೆದಿರಬಾರದು. ಮನೆ ಚೊಕ್ಕಟವಾಗಿದ್ದರೆ ಆ ಮನೆಯ ಸದಸ್ಯರ ಎಲ್ಲ ಕೆಲಸಗಳು ಸುಸೂತ್ರವಾಗಿ ನಡೆಯುತ್ತವೆ. ಮನೆಯಲ್ಲಿ ಪ್ರಗತಿ ಕಾಣಬಹುದು. ಮನೆಯಲ್ಲಿ ಸದಾ ಹಣ ತುಂಬಿರುತ್ತದೆ. ಯಾವುದೇ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ. ಸಮಾಜದಲ್ಲಿ ಗೌರವ ಪ್ರಾಪ್ತಿಯಾಗುತ್ತದೆ.
ಪ್ರತಿ ಮೂಲೆಯನ್ನು ಸ್ವಚ್ಛಗೊಳಿಸಿ : ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಪ್ರತಿಯೊಂದು ಮೂಲೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಪೀಠೋಪಕರಣಗಳು, ಸೋಫಾಗಳು, ಹಾಸಿಗೆಗಳು ಸಹ ಕಾಲಕಾಲಕ್ಕೆ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಮನೆಯ ಮೂಲೆಗಳಲ್ಲಿ ದೇವರು ಮತ್ತು ದೇವತೆಗಳು ನೆಲೆಸಿದ್ದಾರೆ ಎಂದು ನಂಬಲಾಗಿದೆ. ಆದ್ದರಿಂದ, ಮೂಲೆ – ಮೂಲೆಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು.
Numerology Today: ಇವರಿಗೆ ಅತಿ ಭಾವುಕತೆಯಿಂದ ಸಮಸ್ಯೆ
ಸ್ನಾನ ಗೃಹದ ಸ್ವಚ್ಛತೆ : ಮನೆಯ ಸ್ನಾನಗೃಹ, ಟೆರೇಸ್ ಮತ್ತು ಬಾಲ್ಕನಿಯನ್ನು ಸಹ ಸರಿಯಾಗಿ ಸ್ವಚ್ಛಗೊಳಿಸಬೇಕು. ನಿಮ್ಮ ಸ್ನಾನಗೃಹವು ಕೊಳಕಾಗಿದ್ದರೆ ರಾಹು ತೊಂದರೆಗೊಳಗಾಗಬಹುದು. ಕೆಟ್ಟ ರಾಹು ನಿಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಇದಲ್ಲದೆ, ಛಾವಣಿಯ ಮೇಲೆ ಕೊಳಕು ಅಥವಾ ಯಾವುದೇ ರೀತಿಯ ಕಸವಿದ್ದರೂ ತಾಯಿ ಲಕ್ಷ್ಮಿ ನಿಮ್ಮ ಮೇಲೆ ಕೋಪಗೊಳ್ಳುತ್ತಾಳೆ. ಮನೆ ಕೊಳಕಾಗಿದ್ದರೆ ವಾಸ್ತು ದೋಷ ನಿಮ್ಮನ್ನು ಕಾಡುತ್ತದೆ.
ಸೂರ್ಯಾಸ್ತದ ನಂತರ ಕಸ ಗುಡಿಸಬೇಡಿ : ವಾಸ್ತು ಪ್ರಕಾರ, ಸೂರ್ಯಾಸ್ತದ ಸಮಯದಲ್ಲಿ ಅಥವಾ ಸೂರ್ಯಾಸ್ತದ ನಂತರ ಮನೆಯನ್ನು ಗುಡಿಸಬಾರದು. ಏಕೆಂದರೆ ಇದು ಲಕ್ಷ್ಮಿ ಮನೆಗೆ ಬರುವ ಸಮಯವೆಂದು ಪರಿಗಣಿಸಲಾಗುತ್ತದೆ. ಕಸವನ್ನು ಹೊರಗೆ ಹಾಕ್ತಿದ್ದರೆ ಬಂದ ಲಕ್ಷ್ಮಿ ವಾಪಸ್ ಹೋಗ್ತಾಳೆಂಬ ನಂಬಿಕೆಯಿದೆ. ಇದರ ಹೊರತಾಗಿ ಬ್ರಹ್ಮ ಮುಹೂರ್ತದಲ್ಲೂ ಪೊರಕೆಯಿಂದ ಮನೆಯನ್ನು ಗುಡಿಸಬಾರದು.