Astrology Tips : ಗ್ರಹಣ ದೋಷ ಬೆನ್ನು ಹತ್ತಿದೆ ಅಂದ್ರೆ ಇಲ್ಲಿದೆ ಉಪಾಯ

By Suvarna NewsFirst Published Nov 3, 2022, 2:35 PM IST
Highlights

ಒಂದಾದ್ಮೇಲೆ ಒಂದು ಸಮಸ್ಯೆ ಕಾಡ್ತಿದೆ, ಏನೇ ಮಾಡಿದ್ರೂ ಪರಿಹಾರ ಸಿಗ್ತಿಲ್ಲ ಎಂದಾಗ ಜನರು ಜಾತಕ ಪರೀಕ್ಷಿಸ್ತಾರೆ. ಅದ್ರಲ್ಲಿ ಗ್ರಹಣ ದೋಷದಿಂದ ಸಮಸ್ಯೆಯಾಗ್ತಿದೆ ಎಂಬ ಸಂಗತಿ ಗೊತ್ತಾಗುತ್ತದೆ. ಗ್ರಹಣ ದೋಷ ಜೀವನ ಪರ್ಯಂತ ಕಾಡುವಂತಹದ್ದು. ಅದ್ರಿಂದ ಮುಕ್ತಿ ಬೇಕೆಂದ್ರೆ ಹೀಗೆ ಮಾಡಿ.
 

ಸೂರ್ಯ ಗ್ರಹಣ ಸಂಭವಿಸಿದ 15 ದಿನಗಳ ನಂತ್ರ ಅಂದ್ರೆ ನವೆಂಬರ್ 8ರಂದು ಕಾರ್ತಿಕ ಪೂರ್ಣಿಮೆ ದಿನ ಪೂರ್ಣ ಚಂದ್ರ ಗ್ರಹಣ ಸಂಭವಿಸಲಿದೆ.  ಇದು ವರ್ಷದ ಕೊನೆಯ ಚಂದ್ರ ಗ್ರಹಣ. ಆಕಾಶದಲ್ಲಾಗುವ ಬದಲಾವಣೆಗಳು ಎಲ್ಲಾ ರಾಶಿಗಳ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರಲಿದೆ. ಚಂದ್ರ ಗ್ರಹಣ (Lunar Eclipse) ದ ವೇಳೆ ಯಾವುದೇ ಮಗು ಜನಿಸಿದ್ರೆ ಅದರ ಜಾತಕ (Horoscope) ದಲ್ಲಿ ಚಂದ್ರ ಗ್ರಹಣದೋಷ ಕಾಣಿಸಿಕೊಳ್ಳುತ್ತದೆ. ಗ್ರಹಣ ದೋಷ ಇಡೀ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಮಗುವಿನ ಗೌರವಕ್ಕೆ ಹಾನಿಯಾಗುತ್ತದೆ. ಉದ್ಯೋಗದಲ್ಲಿ ಸಮಸ್ಯೆ ಎದುರಾಗುತ್ತದೆ.  ಜಾತಕದಲ್ಲಿ ಚಂದ್ರಗ್ರಹಣ ದೋಷವಿದ್ದರೆ ಏನೆಲ್ಲ ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ. 

ಚಂದ್ರ ಗ್ರಹಣ ದೋಷ ಎಂದರೇನು? : ಒಬ್ಬ ವ್ಯಕ್ತಿ ಸೂರ್ಯ (Sun) ಅಥವಾ ಚಂದ್ರ ಗ್ರಹಣದ ಸಮಯದಲ್ಲಿ ಜನಿಸಿದಾಗ  ಆ ವ್ಯಕ್ತಿಗೆ ಗ್ರಹಣ ದೋಷ ತಾಕುತ್ತದೆ. ನೆರಳಿನ ಗ್ರಹಗಳಾದ ರಾಹು ಮತ್ತು ಕೇತುಗಳ ಉಪಸ್ಥಿತಿಯಿಂದಾಗಿ ಈ ದೋಷ ಕಾಣಿಸಿಕೊಳ್ಳುತ್ತದೆ. ಚಂದ್ರ ಗ್ರಹಣದಲ್ಲಿ ಎರಡು ವಿಧ. ಮೊದಲನೆಯದು ಸಂಪೂರ್ಣ ಚಂದ್ರಗ್ರಹಣವಾಗಿದ್ದು, ಇದರಲ್ಲಿ ಚಂದ್ರ ಮತ್ತು ರಾಹು ಒಂದೇ ಮನೆಯಲ್ಲಿರುತ್ತಾರೆ. ಎರಡನೆಯದು ಭಾಗಶಃ ಚಂದ್ರಗ್ರಹಣವಾಗಿದೆ. ಇದರಲ್ಲಿ ಚಂದ್ರ ಮತ್ತು ಕೇತು ಒಂದೇ ಮನೆಯಲ್ಲಿರುತ್ತಾರೆ. 

ಜಾತಕದಲ್ಲಿ ಗ್ರಹಣ ದೋಷವಿದ್ರೆ ಏನಾಗುತ್ತದೆ? : ಜಾತಕದಲ್ಲಿ ಗ್ರಹಣ ದೋಷವಿದ್ದರೆ ಜೀವನದಲ್ಲಿ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಒಂದಾದ್ಮೇಲೆ ಒಂದರಂತೆ ಸಮಸ್ಯೆ ಕಾಡಲು ಶುರುವಾಗುತ್ತದೆ. ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗುತ್ತದೆ. ಮದುವೆಯಲ್ಲಿ ಅಡಚಣೆ,  ಸಂಗಾತಿಯೊಂದಿಗೆ ಜಗಳ ಹೀಗೆ ಅನೇಕ ರೀತಿಯ ಜಟಿಲತೆ ಎದುರಿಸಬೇಕಾಗುತ್ತದೆ. ಗ್ರಹಣ ದೋಷದಿಂದಾಗಿ ಆರೋಗ್ಯ ಹದಗೆಡುವ ಸಾಧ್ಯತೆಯಿರುತ್ತದೆ. ಆಕಸ್ಮಿಕ ಅಪಘಾತಗಳು ನಡೆಯಲಿವೆ. ವ್ಯವಹಾರದಲ್ಲಿ ನಷ್ಟ ಸೇರಿದಂತೆ ಮಾನಸಿಕ ಸಮಸ್ಯೆ, ಒತ್ತಡ, ಕೋಪ ಕೂಡ ಕಾಡುವ ಸಾಧ್ಯತೆಯಿರುತ್ತದೆ. 

ಮದುವೆ ಬೇಗ ಆಗ್ಬೇಕಾ? ಈ ಜ್ಯೋತಿಷ್ಯ ಸಲಹೆ ಪಾಲೋ ಮಾಡಿ

ಚಂದ್ರ ಗ್ರಹಣ ದೋಷದ ಪರಿಹಾರಕ್ಕೆ ಏನು ಮಾಡ್ಬೇಕು ? : ಚಂದ್ರ ಗ್ರಹಣ (Lunar Eclipse) ದೋಷ ಮನುಷ್ಯನಲ್ಲಿ ಉದ್ವಿಗ್ನತೆಯನ್ನು ಉಂಟು ಮಾಡುತ್ತದೆ. ಹಾಗಾಗಿ ತಾಳ್ಮೆ ಇಲ್ಲಿ ಬಹಳ ಮುಖ್ಯವಾಗುತ್ತದೆ. 

ಚಂದ್ರ ಮೂಲ ಮಂತ್ರವನ್ನು ಪಠಿಸಬೇಕು : ಜಾತಕದಲ್ಲಿ ಚಂದ್ರಗ್ರಹಣ ದೋಷವಿದ್ದರೆ ನಿಯಮಿತವಾಗಿ ಚಂದ್ರನ ಮೂಲ ಮಂತ್ರವನ್ನು 108 ಬಾರಿ ಜಪಿಸಬೇಕು. ಈ ಮಂತ್ರದ  ಪ್ರಭಾವದಿಂದ ಮನಸ್ಸು ಶಾಂತವಾಗುತ್ತದೆ. ಶಿಕ್ಷಣ ಮತ್ತು ವೃತ್ತಿಯಲ್ಲಿ ಯಶಸ್ಸು ಪಡೆಯಲು ನೆರವಾಗುತ್ತದೆ. 

ಗಂಗಾಜಲದಲ್ಲಿ ಸ್ನಾನ ಮಾಡಿದ್ರೆ ದೋಷ ಪರಿಹಾರ : ಚಂದ್ರ ಗ್ರಹಣದಿಂದ ಮುಕ್ತಿ ಹೊಂದಬೇಕೆಂದರೆ ಗ್ರಹಣವಾದ ತಕ್ಷಣ ಸ್ನಾನ ಮಾಡಬೇಕು. ಸ್ನಾನದ ನೀರಿಗೆ ನೀವು ಗಂಗಾಜಲವನ್ನು ಹಾಕಬೇಕು. ಗಂಗಾಜಲವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇದು ಎಲ್ಲ ದೋಷಗಳಿಂದ ಮುಕ್ತಿ ನೀಡುತ್ತದೆ.

ಮಹಾಮೃತ್ಯುಂಜಯ ಮಂತ್ರದಲ್ಲಿದೆ ಶಕ್ತಿ : ಚಂದ್ರ ಗ್ರಹಣ ದೋಷವಿದ್ದವರು 
ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ ।
ಉರ್ವಾರುಕಮಿವ ಬಂಧನಾನ್ ಮೃತ್ಯೊರ್ಮುಕ್ಷೀಯ ಮಾऽಮೃತಾತ್।। 

ಎಂಬ ಮಹಾಮೃತ್ಯುಂಜಯ ಮಂತ್ರವನ್ನು ನಿಯಮಿತವಾಗಿ ಜಪಿಸಬೇಕು. ಇದ್ರಿಂದ ಆರೋಗ್ಯ ಸುಧಾರಿಸುತ್ತದೆ.  ಪಾಪಗಳಿಂದ ಮುಕ್ತಿ ನೀಡುತ್ತದೆ. 

ದಾನ (Donation) ಮಾಡಿದ್ರೆ ಒಳ್ಳೆಯದು : ಜಾತಕದಲ್ಲಿ ಚಂದ್ರಗ್ರಹಣ ದೋಷವಿದ್ದರೆ ಗ್ರಹಣ ಮುಕ್ತಾಯವಾದ ತಕ್ಷಣ ದಾನ ಮಾಡಬೇಕು. ಬಡವರಿಗೆ, ಅಗತ್ಯವಿರುವವರಿಗೆ ವಸ್ತು ಅಥವಾ ಆಹಾರವನ್ನು ದಾನ ಮಾಡಬೇಕು.  ದಾನದಿಂದ ಅನೇಕ ದೋಷಗಳಿಗೆ ಪರಿಹಾರ ಸಿಗುತ್ತದೆ. 

ತುಳಸಿ ವಿವಾಹ 2022; ತುಳಸಿಯ ಪ್ರಾಮುಖ್ಯತೆ, ಪೂಜಾ ವಿಧಿ, ಪುರಾಣ ಕತೆ..

ಚಂದ್ರ ಗ್ರಹಣ ದೋಷವಿದ್ರೆ ಹೀಗೂ ಮಾಡಿ : ಚಂದ್ರ ಗ್ರಹಣ ದೋಷವಿರುವವರು ಹನುಮಾನ್ ಚಾಲೀಸಾ ಓದಬೇಕು. ಪ್ರತಿ ದಿನ ಹನುಮಾನ್ ಚಾಲೀಸಾ ಪಠಿಸಬೇಕು. ಮಂಗಳವಾರ ಮತ್ತು ಶನಿವಾರದಂದು ಸುಂದರಕಾಂಡವನ್ನು ಪಠಿಸಬೇಕು. ಇದನ್ನು ನಿಯಮಿತವಾಗಿ ಮಾಡಿದ್ರೆ ಚಂದ್ರ ಗ್ರಹಣ ದೋಷ ಕಡಿಮೆಯಾಗುತ್ತದೆ.  
 

click me!