ಆಕರ್ಷಣೆ, ಪ್ರೀತಿ, ಅದೃಷ್ಟ, ಲಕ್ಷುರಿಗಳಿಗೆ ಕಾರಕವಾಗಿರುವ ಶುಕ್ರ ಗ್ರಹವು ಈ ತಿಂಗಳಲ್ಲಿ ಮಕರದಿಂದ ಕುಂಭ ರಾಶಿಗೆ ಕಾಲಿಡುತ್ತಿದೆ. ಇದರಿಂದ ಮೂರು ರಾಶಿಗಳು ಬಹಳಷ್ಟು ಲಾಭಗಳನ್ನು ಕಾಣುತ್ತಿವೆ.
ಶುಕ್ರ(Venus) ಗ್ರಹವು ಪಂಚಾಂಗದ ಪ್ರಕಾರ ಅತಿ ಪ್ರಮುಖ ಗ್ರಹವಾಗಿದೆ. ವ್ಯಕ್ತಿಗಳ ಬಾಳಿನಲ್ಲಿ ಅದು ಬೀರುವ ಪರಿಣಾಮ ಅಗಾಧ. ಆಕರ್ಷಣೆ(attraction), ಅದೃಷ್ಟ(Good luck), ಸಂಪತ್ತು(wealth), ಪ್ರೀತಿ(Love) ಹಾಗೂ ಲಕ್ಷುರಿಗಳಿಗೆ ಕಾರಣವಾಗುವ ಶುಕ್ರನು ಸಧ್ಯ ಮಕರ ರಾಶಿ(Capricorn)ಯಲ್ಲಿದ್ದಾನೆ. ಅಲ್ಲಿ ತನ್ನ ಪ್ರಯಾಣ ಮುಗಿಸಿ ಕುಂಭ ರಾಶಿ(Aquarius)ಗೆ ಕಾಲಿಡಲಿದ್ದಾನೆ. ಈ ಶುಕ್ರ ಗೋಚಾರ ಯಾವಾಗ, ಇದರಿಂದ ಯಾವೆಲ್ಲ ರಾಶಿಗಳು ಲಾಭ ಪಡೆಯಲಿವೆ, ಯಾವ ರೀತಿಯ ಲಾಭಗಳನ್ನು ಪಡೆಯಲಿವೆ ಎಲ್ಲ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಪಂಚಾಂಗದ ಪ್ರಕಾರ, ಶುಕ್ರನ ರಾಶಿಚಕ್ರ ಬದಲಾವಣೆಯು ಮಾರ್ಚ್ 31, 2022ರಂದು ಬೆಳಿಗ್ಗೆ 8:54ಕ್ಕೆ ಸಂಭವಿಸುತ್ತದೆ. ಏಪ್ರಿಲ್ 27ರ ಸಂಜೆ 6.30ರವರೆಗೆ ಶುಕ್ರನು ಈ ರಾಶಿಯಲ್ಲಿ ಇರುತ್ತಾನೆ. ಇದಾದ ನಂತರ ಶುಕ್ರನ ರಾಶಿ ಬದಲಾವಣೆಯು ಮೀನ ರಾಶಿಯಲ್ಲಿ ಇರುತ್ತದೆ. ಶುಕ್ರನು ತುಲಾ ಹಾಗೂ ವೃಷಭ ರಾಶಿಗಳ ಅಧಿಪತಿಯಾಗಿದ್ದಾನೆ. ಶುಕ್ರನ ಗೋಚಾರದಿಂದ ಈ ಸಮಯದಲ್ಲಿ ಮೂರು ರಾಶಿಗಳ ಬದುಕಲ್ಲಿ ಹೆಚ್ಚು ಧನಾತ್ಮಕ ಬದಲಾವಣೆಗಳನ್ನು ಕಾಣಬಹುದು.
ವೃಷಭ(Taurus)
ಶುಕ್ರ ಗ್ರಹವನ್ನು ವೃಷಭ ರಾಶಿಯ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಈ ಶುಕ್ರ ಸಂಕ್ರಮಣವು ವೃಷಭ ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ತರುತ್ತದೆ. ನೀವು ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ಬೆಳವಣಿಗೆಯನ್ನು ಪಡೆಯಬಹುದು. ಅಷ್ಟೇ ಅಲ್ಲದೆ ಕಚೇರಿಯಲ್ಲಿ ಬಡ್ತಿ(promotion) ಅವಕಾಶಗಳಿವೆ. ಸಂಬಳ ಹೆಚ್ಚಳವಾಗಲಿದೆ. ಈ ಸಮಯದಲ್ಲಿ, ನೀವು ಕೈಗೊಳ್ಳುವ ಕೆಲ ಸುಧಾರಣೆಗಳು ಬಹಳಷ್ಟು ಪ್ರಗತಿಗೆ ಕಾರಣವಾಗುತ್ತವೆ. ಕಚೇರಿಯಲ್ಲಿ ಜವಾಬ್ದಾರಿಗಳು(Responsibilities) ಹೆಚ್ಚಾಗಬಹುದು. ಈ ಎಲ್ಲ ಕಾರಣಗಳಿಂದ ನೀವು ಆಸ್ತಿ ಖರೀದಿಗೆ ಕೈ ಹಾಕಬಹುದು. ಹೊಸ ವಾಹನ ಯೋಗವೂ ಇದೆ. ಕೌಟುಂಬಿಕ ಜೀವನದಲ್ಲಿ ಪ್ರೀತಿ ಹೆಚ್ಚಲಿದೆ.
Best Cooks: ಈ 5 ರಾಶಿಯವರು ಅಡುಗೆಗೆ ನಿಂತರೆ ಭೀಮಸೇನ ನಳಮಹಾರಾಜರೇ!
ತುಲಾ(Libra)
ತುಲಾ ರಾಶಿಯವರಿಗೆ ಶುಕ್ರನು ಈ ಕುಂಭ ಗೋಚಾರ ಸಂದರ್ಭದಲ್ಲಿ ವಿಶೇಷ ಫಲಿತಾಂಶಗಳನ್ನು ನೀಡಲಿದ್ದಾನೆ. ಶುಕ್ರನ ಈ ರಾಶಿ ಬದಲಾವಣೆಯು ತುಲಾ ರಾಶಿಯವರಿಗೆ ಪ್ರೀತಿ, ಶಿಕ್ಷಣ(education) ಮತ್ತು ಮಕ್ಕಳ ವಿಷಯದಲ್ಲಿ ಉತ್ತಮ ಫಲಿತಾಂಶಗಳನ್ನು ನೀಡಲಿದೆ. ಈ ಸಮಯದಲ್ಲಿ, ನಿಮ್ಮ ಸಂಗಾತಿಯಿಂದ ಉತ್ತಮ ಬೆಂಬಲವನ್ನು ಪಡೆಯಲಿದ್ದೀರಿ. ಮನರಂಜನಾ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಉತ್ತಮ ಅವಕಾಶಗಳನ್ನು ಪಡೆಯಲಿದ್ದಾರೆ. ಆದಾಯ ಹೆಚ್ಚಲಿದೆ. ಈ ಶುಕ್ರ ಗೋಚಾರವು ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶಗಳನ್ನು ತಂದುಕೊಡುತ್ತದೆ. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗ ಬಯಸುವ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಪ್ರಯತ್ನ ಹೆಚ್ಚಿಸಬಹುದು.
Vastu Tips: ಶಬ್ಧ ಹಾಗೂ ಸುಗಂಧದಿಂದ ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸಿ
ಕುಂಭ(Aquarius)
ಶುಕ್ರನ ರಾಶಿ ಬದಲಾವಣೆ ಕುಂಭ ರಾಶಿಯಲ್ಲೇ ಆಗುತ್ತಿರುವುದಲ್ಲದೆ, ಈ ರಾಶಿಯ ಮೇಲೆ ಶುಕ್ರನ ಕೃಪಾಕಟಾಕ್ಷ ಹೆಚ್ಚಲಿದೆ. ಗುರುವು ಈಗಾಗಲೇ ನಿಮ್ಮ ರಾಶಿಯಲ್ಲಿ ಕುಳಿತಿದ್ದಾನೆ. ಹೀಗಾಗಿ, ಈ ಗುರು ಮತ್ತು ಶುಕ್ರನ ಸಂಯೋಗ ಇಲ್ಲಿ ರೂಪುಗೊಳ್ಳಲಿದೆ. ಈ ಸಂಯೋಗವು ಕುಂಭ ರಾಶಿಯವರಿಗೆ ಎಲ್ಲ ರೀತಿಯ ಸಂತೋಷವನ್ನು ಹೆಚ್ಚಿಸಲಿದೆ. ಈ ಸಮಯದಲ್ಲಿ ಆಧ್ಯಾತ್ಮಿಕತೆಯ ಕಡೆಗೆ ಹೆಚ್ಚಿನ ಒಲವು ಕಂಡುಬರಬಹುದು. ಬಾಂಧವ್ಯವನ್ನು ಬಿಟ್ಟುಬಿಡುವಂಥ ಯೋಚನೆಗಳೂ ಮನಸ್ಸಿನಲ್ಲಿ ಬರಬಹುದು. ನೀವು ಶಾಂತವಾಗಿರಬೇಕು ಮತ್ತು ನಿಮ್ಮ ಜವಾಬ್ದಾರಿಗಳನ್ನು ಅರ್ಥ ಮಾಡಿಕೊಳ್ಳಬೇಕು. ಉದ್ಯೋಗ(Job) ಮಾಡುವವರಿಗೆ ಈ ಕಾಲ ಬಹಳಷ್ಟು ಲಾಭದಾಯಕವಾಗಿರುತ್ತದೆ. ಮಕ್ಕಳಿಂದ ಸಂತಸ ಹೆಚ್ಚುತ್ತದೆ. ಕೌಟುಂಬಿಕವಾಗಿ ನಡೆವ ಕೆಲ ಬದಲಾವಣೆಗಳು ನಿಮ್ಮ ಜೀವನದ ಮೇಲೆ ಧನಾತ್ಮಕ ಪರಿಣಾಮ ಬೀರಲಿವೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.