Traits Of Scorpio: ವೃಶ್ಚಿಕ ರಾಶಿಯ ಪುರುಷರ ಸ್ವಭಾವಗಳೇನೇನು ಗೊತ್ತಾ?

By Suvarna News  |  First Published Mar 14, 2022, 1:21 PM IST

ವೃಶ್ಚಿಕ ರಾಶಿಯ ಪುರುಷರನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲಾಗದು. ಅವರು ಗುಟ್ಟು ಮಾಡುವುದು ಹೆಚ್ಚು. ಸಿಕ್ಕಾಪಟ್ಟೆ ಪ್ರಾಮಾಣಿಕರಾದರೂ ಅಷ್ಟೇ ಕಹಿ ಮಾತುಗಳಿಗೆ ಹೆಸರಾದವರು. ವೃಶ್ಚಿಕ ರಾಶಿಯ ಪುರುಷರ ಗುಣಸ್ವಭಾವಗಳು ಹೇಗಿರುತ್ತವೆ ಗೊತ್ತಾ? 


ಭಾವನೆಗಳೇ ಇಲ್ಲದವರಂತೆ ಇರುತ್ತಾರೆ, ಮಾತುಗಳಲ್ಲಿ ಇರಿಯುತ್ತಾರೆ, ಕಷ್ಟ ಪಟ್ಟು ಕೆಲಸ ಮಾಡುತ್ತಾರೆ, ಅಷ್ಟೇ ಗುಟ್ಟುಗಳನ್ನು ಒಳಗಿಟ್ಟುಕೊಂಡಿರುತ್ತಾರೆ.. ವೃಶ್ಚಿಕ ರಾಶಿಯ ಪುರುಷರು ನೋಡಲು ಹೇಗೇ ಕಂಡರೂ ಅವರೊಳಗೆ ಬೇರೆಯೇ ಇರುತ್ತಾರೆ. ಎಲ್ಲದನ್ನೂ ಅನುಮಾನದಿಂದಲೇ ನೋಡುವ, ಯಾವುದನ್ನಾದರೂ ತಿರುಗು ಮುರುಗು ಮಾಡುವ, ಹೆಚ್ಚು ಆತ್ಮಹತ್ಯೆ ಯೋಚನೆಗಳನ್ನು ಪಡೆಯುವ, ಹಣ ಮಾಡುವ, ಎಲ್ಲರ ಬೆಂಬಲ ಪಡೆಯಬಲ್ಲ ಸ್ವಭಾವ ವೃಶ್ಚಿಕ ರಾಶಿಯ ಪುರುಷರದು. ಸಂಗಾತಿಯಾಗಿ ಡಾಮಿನೇಟಿಂಗ್ ಆಗಿರುವ ಇವರು ಸಿಕ್ಕಾಪಟ್ಟೆ ಪೊಸೆಸಿವ್ ಕೂಡಾ. ಈ ರಾಶಿಯ ಪುರುಷರ ಕೆಲ ಗುಣಸ್ವಭಾವಗಳ ಬಗ್ಗೆ ನೋಡೋಣ. 

ಸಿಕ್ಕಾಪಟ್ಟೆ ಪ್ರಾಮಾಣಿಕತೆ(brutally honest)
ಇವರ ಪ್ರಾಮಾಣಿಕತೆ ಎಷ್ಟೆಂದರೆ ಅದನ್ನು ಹೊರ ಹಾಕುವ ಭರದಲ್ಲಿ ಮತ್ತೊಬ್ಬರಿಗೆ ನೋವುಂಟು ಮಾಡುವುದು ಕೂಡಾ ಇವರ ಗಮನಕ್ಕೆ ಬರುವುದಿಲ್ಲ. ಬಂದರೂ ಅದಕ್ಕೆ ಕೇರ್ ಮಾಡುವವರಲ್ಲ. ಅವರು ತಮ್ಮ ಮಾತುಗಳನ್ನು ಅಳೆದು ತೂಗಿ ಆಡಿದರೂ ತಮಗನಿಸಿದ್ದನ್ನು ಹೇಳುವಲ್ಲಿ ಹಿಂದೆ ಬೀಳುವುದಿಲ್ಲ. ಮೊಂಡು ಸ್ವಭಾವದವರಾದರೂ ಸರಳವಾಗಿರುತ್ತಾರೆ. ಪ್ರಾಮಾಣಿಕವಾಗಿ ಮಾತಾಡಿ ಇನ್ನೊಬ್ಬರಿಗೆ ನೋವು ತಂದರೂ ಅದರ ಬಗ್ಗೆ ಪಶ್ಚಾತ್ತಾಪವೂ ಇವರಲ್ಲಿರುವುದಿಲ್ಲ.

Tap to resize

Latest Videos

ಕಷ್ಟಪಡಲು ಹೆದರೋಲ್ಲ(hard working)
ವೃಶ್ಚಿಕ ರಾಶಿಯ ಪುರುಷರು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ ಮತ್ತು ಕೆಲಸವನ್ನು ಉತ್ಸಾಹ ಹಾಗೂ ಪ್ರೀತಿಯಿಂದಲೇ ಮಾಡುತ್ತಾರೆ. ಸೋಲಿನಿಂದ ಕುಗ್ಗುವವರಲ್ಲ. ಯಶಸ್ಸು ಸಿಗುವವರೆಗೂ ಪ್ರಯತ್ನಿಸುವ ಸ್ವಭಾವದವರು. ತಮ್ಮಿಂದ ಸಾಧಿಸಲಾಗುವ ಗುರಿಗಳನ್ನೇ ಹಾಕಿಕೊಳ್ಳುತ್ತಾರೆ ಹಾಗೂ ಅದನ್ನು ಸಾಧಿಸಲು ಎಂದಿಗೂ ಪ್ರಯತ್ನಗಳನ್ನು ಬಿಟ್ಟು ಕೊಡುವುದಿಲ್ಲ. 

ಅಧಿಕಾರ ಇವರಿಗಿಷ್ಟ
ಅವರು ತಮ್ಮದೇ ಆದ ರೀತಿಯಲ್ಲಿ ಕೆಲಸಗಳನ್ನು ಮಾಡಲು ಇಷ್ಟಪಡುತ್ತಾರೆ ಮತ್ತು ಜವಾಬ್ದಾರಿಯನ್ನು ತೆಗೆದುಕೊಳ್ಳಲು ಇಷ್ಟಪಡುತ್ತಾರೆ. ಅವರು ಇನ್ನೊಬ್ಬರಿಗೆ ಆದೇಶ ನೀಡಿ ಅದಿಕಾರ ಸ್ಥಾಪಿಸಿಕೊಳ್ಳಬಲ್ಲರು. ಈ ಮೂಲಕ ಸ್ವಯಂ ಅಭಿವೃದ್ಧಿ ಹೊಂದುತ್ತಾರೆ. ಹೀಗೆ ತಾವಂದುಕೊಂಡಂತೆಯೇ ಕೆಲಸ ಮಾಡಿಸಿಕೊಳ್ಳುವ ಅವರು ನೋಡುವವರಿಗೆ ಸ್ವಾರ್ಥಿ(selfish)ಗಳಾಗಿಯೂ ಕಾಣುತ್ತಾರೆ. ನಾಯಕತ್ವ ಸಿಗದಿದ್ದಲ್ಲಿ ವೃಶ್ಚಿಕ ರಾಶಿಯ ಪುರುಷರಿಗೆ ಕಿರಿಕಿರಿಯಾಗುತ್ತದೆ.

ಕೈ ನೋಡಿಯೇ ಹೇಳಬಹುದು ಯಾರು ತಪ್ಪು ನಿರ್ಧಾರ ತೆಗೆದುಕೊಳ್ಳುವವರೆಂದು! ನಿಮ್ಮ ಕೈ ಹೀಗಿದೆಯೇ?

ಕಹಿ ಸ್ವಭಾವ
ವೃಶ್ಚಿಕ ರಾಶಿಯ ಪುರುಷರು ತುಂಬಾ ಕಹಿ ಮತ್ತು ಅಸಮಾಧಾನವನ್ನು ಹೊಂದಿರುತ್ತಾರೆ. ಯಾವುದೇ ವಿಷಯಕ್ಕೆ ಸೇಡು ತೀರಿಸಿಕೊಳ್ಳುವ ಗುಣ ಹೊಂದಿದ್ದಾರೆ. ಯಾರನ್ನೂ ಅಷ್ಟು ಸುಲಭವಾಗಿ ಕ್ಷಮಿಸುವವರು ಇವರಲ್ಲ. ಹಳತನ್ನು ಮರೆಯುವವರಲ್ಲ. ಕೆಲವೊಮ್ಮೆ ತಮ್ಮದೇ ತಪ್ಪಿದ್ದಾಗ ತಪ್ಪು ಒಪ್ಪಿಕೊಳ್ಳುವವರೂ ಅಲ್ಲ. ಹಿರಿಯರ ಮಾತುಗಳಲ್ಲಿ ತಪ್ಪಿದ್ದರೆ ಅದಕ್ಕೆ  ಬೆಲೆ ಕೊಡುವವರಲ್ಲ. ಪ್ರೀತಿ ಪ್ರೇಮ ವಿಚಾರದಲ್ಲಿ ತೀರಾ ಗೊಂದಲಕ್ಕೆ ಬಿದ್ದು, ಯಾವುದೇ ನಿರ್ಧಾರ ಸರಿಯಾಗಿ ತೆಗೆದುಕೊಳ್ಳದೆ ಹೋಗುತ್ತಾರೆ. ಪ್ರೇಮಿಯ ಮನಸ್ಸೂ ನೋಯಿಸುತ್ತಾರೆ, ಮನೆಯವರ ಮನಸ್ಸೂ ನೋಯಿಸುತ್ತಾರೆ, ಕಡೆಗೆ ತಮ್ಮ ಮನಸ್ಸಿಗೂ ನೋವು ಮಾಡಿಕೊಳ್ಳುತ್ತಾರೆ.

Best Cooks: ಈ 5 ರಾಶಿಯವರು ಅಡುಗೆಗೆ ನಿಂತರೆ ಭೀಮಸೇನ ನಳಮಹಾರಾಜರೇ!

ನಿಗೂಢರು(mysterious)
ವೃಶ್ಚಿಕ ರಾಶಿಯ ಪುರುಷರು ತುಂಬಾ ರಹಸ್ಯವಾಗಿಯೂ ನಿಗೂಢವಾಗಿಯೂ ಇರುತ್ತಾರೆ. ಅವರು ಮುಚ್ಚಿದ ಪುಸ್ತಕದಂತಿರುತ್ತಾರೆ. ಹಾಗಾಗಿ, ಯಾರಿಗೂ ಅವರನ್ನು ಓದುವುದು ಸುಲಭವಲ್ಲ. ಅವರ ಮನಸ್ಸಲ್ಲೇನಾಗುತ್ತಿದೆ ಎಂಬುದು ತಿಳಿಯುವುದಿಲ್ಲ. ಯಾವಾಗಲೂ ಮೋಸ ಹೋಗುವ ಬಗ್ಗೆ ಹೆದರುತ್ತಾರೆ ಹಾಗೂ ಅಪಾಯ(danger)ಗಳನ್ನು ಮೊದಲೇ ಊಹಿಸುತ್ತಾರೆ. ತಮ್ಮ ಮನಸ್ಸನ್ನು ಸ್ವಲ್ಪ ಹೊರಗೆ ಹಾಕಲು ಅವರಿಗೆ ಸಾಕಷ್ಟು ಸಮಯ ಹಿಡಿಯುತ್ತದೆ. ಹಾಗಾಗಿಯೇ, ಇವರು ಭಾವನೆಗಳೇ ಇಲ್ಲದ ಬರಡು ಜೀವಿಗಳಂತೆ ಕಾಣಬಹುದು. ಕೆಲವೊಮ್ಮೆ ಅದೇ  ನಿಜವಾಗಿದ್ದರೆ, ಬಹುತೇಕ ಬಾರಿ ಅವರು ಭಾವನೆಗಳನ್ನೆಲ್ಲ ಗುಟ್ಟಿನಂತೆ ಕಾಪಾಡುತ್ತಾರೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!