ಶ್ರಾವಣದಲ್ಲಿ ಹೀಗೆ ಮಾಡುವುದರಿಂದ ಅದೃಷ್ಟವೋ ಅದೃಷ್ಟ!

By Suvarna NewsFirst Published Aug 7, 2020, 5:51 PM IST
Highlights

ಈಗ ಶ್ರಾವಣ ಮಾಸ ನಡೆಯುತ್ತಿದೆ. ಇದು ಶುಭ ಮಾಸವೆಂದೇ ಲೆಕ್ಕ. ಈಗ ನೀವು ಕೆಲವು ಶುಭ ಕೆಲಸಗಳನ್ನು ಮಾಡಿದರೆ ವರ್ಷವಿಡೀ ಅದೃಷ್ಟಲಕ್ಷ್ಮಿ ನಿಮ್ಮನ್ನು ಕೈ ಬಿಡುವುದಿಲ್ಲ.

ಶ್ರಾವಣ ಮಾಸದಲ್ಲಿ ನೀವು ಮಾಡಲೇಬೇಕಾದ ಕೆಲವು ಕೆಲಸಗಳಿವೆ. ಅದನ್ನು ಭಕ್ತಿ ಶ್ರದ್ಧೆ ನಿಷ್ಠಗಳಿಂದ ಮಾಡಿದರೆ ನಿಮ್ಮನ್ನು ನೀವು ನಂಬುವ ದೇವರು ವರ್ಷಪೂರ್ತಿ ಕಾಪಾಡುತ್ತಾನೆ. ಶ್ರಾವಣ ಮಾಸದಲ್ಲಿ ಅನೇಕ ಗ್ರಹಗಳು, ಎಲ್ಲರ ಮನೆಗಳಲ್ಲೂ ಹೆಚ್ಚೇನೂ ಉಗ್ರತೆಯಿಲ್ಲದೆ ಚಲಿಸುತ್ತಿರುತ್ತವೆ. ಸೂರ್ಯನ ಪ್ರಭಾವ ಈ ಮಾಸದಲ್ಲಿ ಹೆಚ್ಚಿರುತ್ತದೆ. ರಾಹು- ಕೇತುಗಳ ದಿಗ್ದರ್ಶನ ಈ ಸಂದರ್ಭದಲ್ಲಿ ಕಡಿಮೆ ಇರುತ್ತದೆ. ಹಾಗೂ ವರಮಹಾಲಕ್ಷ್ಮಿ ವ್ರತ, ಕೃಷ್ಣಾಷ್ಟಮಿ, ಮುಂತಾದ ಹಬ್ಬಗಳು ಇದೇ ಸಂದರ್ಭದಲ್ಲಿ ಬರುತ್ತವೆ. ಹೀಗಾಗಿ ಇದು ದೇವತೆಗಳ ಅನುಗ್ರಹ ಮನುಷ್ಯರ ಮೇಲಿರುವ ಮಾಸ.

ರುದ್ರಾಕ್ಷಿ, ತ್ರಿಶೂಲ

ಶ್ರಾವಣ ಮಾಸ ಶಿವನಿಗೆ ಸಂಬಂಧಿಸಿದ ಮಾಸ. ಈ ಮಾಸದಲ್ಲಿ ಶಿವನು ಪೂರ್ತಿ ಕಣ್ಣುಗಳನ್ನು ತೆರೆದು ಲೋಕದತ್ತ ಮಂಗಳಮಯವಾದ ದೃಷ್ಟಿಯನ್ನು ಬೀರುತ್ತಾ ಇರುತ್ತಾನೆ. ಈ ಸಂದರ್ಭದಲ್ಲಿ ಶಿವನಿಗೆ ಸಂಬಂಧಿಸಿದ ಯಾವುದೇ ವಸ್ತುವನ್ನು ಮನೆಗೆ ತರಬಹುದು. ಶಿವಪೂಜೆಗೆ ಅಗತ್ಯವಾದ ಯಾವ ವಸ್ತುವನ್ನು ತಂದರೂ ಶಿವನು ಪ್ರಸನ್ನನಾಗುತ್ತಾನೆ. ನಿಮ್ಮ ಮನೆಯಲ್ಲಿ ಶಿವಲಿಂಗ ಅಥವಾ ಶಿವನ ಮೂರ್ತಿ ಅಥವಾ ಶಿವನ ಫೊಟೋ ಇದ್ದರೆ ಅದನ್ನು ಬಿಲ್ವಪತ್ರೆಯಿಂದ ಅಥವಾ ತುಂಬೆ ಹೂವಿನಿಂದ ಅರ್ಚಿಸಿದರೆ ಶಿವನಿಗೆ ತುಂಬಾ ಸಂತೋಷವಾಗುತ್ತದೆ. ಹಾಗೇ ರುದ್ರಾಕ್ಷಿಯನ್ನು ತಂದು ಅದನ್ನು ಮಾಲೆ ಮಾಡಿ ಜಪಕ್ಕೆ ಬಳಸಬಹುದು. ತಂಪಾದ ಸ್ಫಟಿಕಮಣಿಯನ್ನು ತರಬಹುದು. ಶಿವನ ತ್ರಿಶೂಲವನ್ನು ತಂದು ದೇವರ ಮನೆಯಲ್ಲಿ ಪೂಜೆಗೆ ಇಡಬಹುದು. ಶಿವನ ಡಮರುಗವನ್ನೂ ತರಬಹುದು. ಇವೆಲ್ಲವೂ ಶಿವನನ್ನು ಪ್ರಸನ್ನೀಕರಿಸಿ ಆತನು ನಿಮ್ಮ ಮೇಲೆ ಕೃಪೆ ಮಾಡುವಂತೆ ಮಾಡುತ್ತದೆ.

ಈ ರಾಶಿಯವರಿಗೆ ಈ ಬಣ್ಣಗಳು ಅದೃಷ್ಟ ತರುತ್ತವೆ..! 

ಅರಿಶಿನ, ಚಿನ್ನ

ಅರಿಶಿನ ಅಥವಾ ಹಳದಿ ಬಣ್ಣದ ಯಾವುದೇ ಶುಭ ದ್ರವ್ಯವನ್ನು ಈ ಮಾಸದಲ್ಲಿ ತಂದರೆ ನಿಮಗೆ ಶುಭವಾಗುತ್ತದೆ. ಉದಾಹರಣೆಗೆ ಚಿನ್ನವನ್ನು ಈ ಮಾಸದಲ್ಲಿ ನೀವು ಖರೀದಿಸಬಹುದು. ಹೆಚ್ಚು ಸಾಧ್ಯವಿಲ್ಲದಿದ್ದರೆ ಒಂದು ತುಂಡಾದರೂ ಖರೀದಿಸಿಟ್ಟರೆ ಅದು ಅಕ್ಷಯವಾಗುತ್ತ ಹೋಗುತ್ತದೆ. ಹಾಗೆ ತಂದ ಚಿನ್ನವನ್ನು ಮೊದಲು ಮನೆಯ ಮಹಾಲಕ್ಷ್ಮಿ ಅಥವಾ ಅನ್ನಪೂರ್ಣೇಶ್ವರಿ ದೇವಿಗೆ ಸಮರ್ಪಣೆ ನೈವೇದ್ಯ ಮಾಡಿ ಆಮೇಲೆ ತೊಡಬೇಕು. ಹಾಗೆಯೇ ಅರಿಶಿನವನ್ನು ಈ ಮಾಸದಲ್ಲಿ ತರುವುದು ಕೂಡ ಶ್ರೇಯಸ್ಕರ. ಅರಿಶಿನವನ್ನು ನಿಮ್ಮ ಮನೆಯಲ್ಲಿ ನೆಡಬಹುದು. ಅರಿಶೀನದ ಕೊಂಬನ್ನು ಕೆಂಪು ಪಟ್ಟೆನೂಲಿನಲ್ಲಿ ಕಟ್ಟಿ ದೇಹದಲ್ಲಿ ಧರಿಸಿದರೆ ಶ್ರೇಯಸ್ಕರ.

ರಾಮ ಮಂದಿರ ಕಟ್ಟಲು ಅವಿರತ ಶ್ರಮಿಸಿದ ಕಲಿಯುಗದ ರಾಮಸೈನ್ಯವಿದು..! 

ತುಳಸಿ ಗಿಡ

ಈಗ ಮಳೆಗಾಲ. ಬೀಜಗಳನ್ನು ಬಿತ್ತಲು ಸಕಾಲ. ಸರಿಯಾಗಿ ನೋಡಿದರೆ, ನಿಮ್ಮ ಮನೆಯ ಹೂತೋಟದಲ್ಲಿ ತುಳಸಿಯ ಗಿಡಗಳು ಮೊಳಕೆಯೊಡೆದು ಚಿಗುರಿರಬಹುದು. ಇವುಗಳನ್ನು ಒಂದು ಕುಂಡದಲ್ಲಿ ನೆಟ್ಟು ಪೂಜೆ ಮಾಡಬೇಕು. ನಿಮ್ಮ ಮನೆಯಲ್ಲಿ ತುಳಸಿಯೇ ಇಲ್ಲವಾದರೆ, ಒಂದು ತುಳಸಿ ಗಿಡವನ್ನು ಈ ಕಾಲದಲ್ಲಿ ಹೊರಗಿನಿಂದ ಖರೀದಿಸಿ ಅಥವಾ ಕೇಳಿ ಪಡೆದು ತಂದು ನೆಡುವುದರಿಂದಲೂ ಶುಭ ಲಾಭಗಳು ಉಂಟಾಗುತ್ತವೆ. ಶ್ರಾವಣ ಮಾಸ ಮಹಾಲಕ್ಷ್ಮಿಗೆ ಪ್ರಿಯವಾದ ಮಾಸ. ಶ್ರಾವಣ ಶುಕ್ರವಾರ ಅಥವಾ ಸೋಮವಾರ ಲಕ್ಷ್ಮೀ ಉಪಾಸನೆ ಮಾಡಬೇಕು. ಲಕ್ಷ್ಮಿಯು ನೆಲೆಯಾಗಿರುವುದು ತುಳಸಿಯಲ್ಲಿ. ಹೀಗಾಗಿ ತುಳಸಿ ಶುಭಕರ. ಆಕೆಗೆ ನೆಲೆ ಕಲ್ಪಿಸಿಕೊಡುವುದು ನಿಮ್ಮ ಹೊಣೆ.

ರಾಮನ ಕುರಿತ ಈ ಸಂಗತಿ ಬಹುತೇಕರಿಗೆ ತಿಳಿದಿಲ್ಲ! 

click me!