ಆಗಸ್ಟ್‌ನಲ್ಲಿ ಜನಿಸಿದವರ ಗುಣ ಸ್ವಭಾವಗಳು ಹೀಗಿರುತ್ತವೆ..!

By Suvarna News  |  First Published Aug 7, 2020, 11:00 AM IST

ಗುಣ ಸ್ವಭಾವಗಳ ಬಗ್ಗೆ ಎಷ್ಟು ತಿಳಿದುಕೊಂಡರು ಮತ್ತಷ್ಟು ತಿಳಿಯುವ ಹಂಬಲ ಎಲ್ಲರಿಗೂ ಇರುತ್ತದೆ. ವರ್ಷ ಭವಿಷ್ಯ, ರಾಶಿ ಭವಿಷ್ಯ ಹೀಗೆ ಹಲವು ಕಡೆಗಳಿಂದ ಭವಿಷ್ಯದಲ್ಲಿ ಆಗುವ ವಿಚಾರಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ತೋರುತ್ತೇವೆ. ಹಾಗೆಯೇ ಪ್ರತಿ ತಿಂಗಳಿನಲ್ಲಿ ಜನಿಸಿದವರ ಗುಣ ಒಂದೇ ರೀತಿ ಇರಲು ಸಾಧ್ಯವಿಲ್ಲ. ಬೇರೆ ಬೇರೆ ತಿಂಗಳಿನಲ್ಲಿ ಜನಿಸಿದವರ ಗುಣದಲ್ಲಿ, ಸ್ವಭಾವದಲ್ಲಿ ಭಿನ್ನತೆ ಇರುತ್ತದೆ, ಹಾಗೆಯೇ ಅದರದ್ದೇ ಆದ ವಿಶೇಷತೆಯೂ ಇರುತ್ತದೆ. ಹಾಗೆಯೇ ಆಗಸ್ಟ್‌ನಲ್ಲಿ ಜನಿಸಿದವರ ಗುಣ, ಸ್ವಭಾವವೂ ವಿಶಿಷ್ಟವಾಗಿರುತ್ತದೆ. ಹೇಗಿರುತ್ತಾರೆ ಆಗಸ್ಟ್‌ನಲ್ಲಿ ಜನಿಸಿದವರು ನೋಡೋಣ ಬನ್ನಿ.


ಭವಿಷ್ಯದ ವಿಚಾರಗಳ ಬಗ್ಗೆ ಅರಿಯುವ ಕುತೂಹಲ ಎಲ್ಲರಿಗೂ ಇರುತ್ತದೆ. ಗುಣ, ಸ್ವಭಾವಗಳು, ಅದೃಷ್ಟ, ಜಾತಕದಲ್ಲಿರುವ ಯೋಗ, ಹೀಗೆ ಹಲವು ಭವಿಷ್ಯದ ವಿಷಯಗಳ ಬಗ್ಗೆ ತಿಳಿಯುವುರಲ್ಲಿ ಹೆಚ್ಚು ಆಸಕ್ತಿ ಇರುತ್ತದೆ. ದಿನದ ರಾಶಿ ಭವಿಷ್ಯ ತಿಳಿದುಕೊಳ್ಳುವುದೆಂದರೆ ಹಲವರಿಗೆ ಇಷ್ಟ. ಯಾವ ವರ್ಷದಲ್ಲಿ ಜನಿಸಿದವರು ಹೇಗಿರುತ್ತಾರೆ, ಯಾವ ತಿಂಗಳಿನಲ್ಲಿ ಜನಿಸಿದವರ ಗುಣ ಹೇಗಿರುತ್ತದೆ ಎಂಬುದನ್ನು ಜ್ಯೋತಿಷ್ಯದಿಂದ ತಿಳಿಯಲು ಸಾಧ್ಯ. ಅಷ್ಟೇ ಅಲ್ಲದೆ, ಪ್ರತಿ ರಾಶಿಯ ಸ್ವಭಾವವನ್ನು, ಗ್ರಹಗಳ ಸ್ಥಿತಿಯ ಬದಲಾವಣೆಯನ್ನು ಹಾಗೂ ಜಾತಕದಲ್ಲಾಗುವ ಏರು-ಪೇರುಗಳಿಂದ ಜೀವನದ ಮೇಲಾಗುವ ಪರಿಣಾಮಗಳ ಬಗ್ಗೆ ಅರಿತು ತಕ್ಕ ಪರಿಹಾರಗಳನ್ನು ಮಾಡಿಕೊಳ್ಳುತ್ತಾರೆ. 



ಪ್ರತಿಯೊಬ್ಬರಿಗೂ ಅವರ ಗುಣ, ಸ್ವಭಾವಗಳ ಬಗ್ಗೆ ತಿಳಿದುಕೊಳ್ಳಲು ಉತ್ಸಾಹ ಸಹಜವಾಗಿಯೇ ಇರುತ್ತದೆ. ಜನವರಿ ತಿಂಗಳಿನಲ್ಲಿ ಜನಿಸಿದವರು ಹೆಚ್ಚು ಬುದ್ಧಿವಂತರಾಗಿರುತ್ತಾರೆ, ಫೆಬ್ರವರಿಯಲ್ಲಿ ಜನಿಸಿದವರು ಛಲದಿಂದ ಎಲ್ಲವನ್ನೂ ಸಾಧಿಸುವ ಮನಃಸ್ಥಿತಿಯನ್ನು ಹೊಂದಿರುತ್ತಾರೆ. ಜೂನ್‌ನಲ್ಲಿ ಜನಿಸಿದವರು ಭಾವನಾಜೀವಿಯಾಗಿರುತ್ತಾರೆ. ಹೀಗೆ ಪ್ರತಿ ತಿಂಗಳಿಗೂ ಅದರದ್ದೇ ಆದ ವಿಶಿಷ್ಟ ಗುಣ ಸ್ವಭಾವಗಳು ಇರುತ್ತದೆ ಮತ್ತು ಬೇರೆ ಬೇರೆ ತಿಂಗಳಿನಲ್ಲಿ ಜನಿಸಿದವರ ಗುಣ ಸ್ವಭಾವಗಳು ಭಿನ್ನವಾಗಿರುತ್ತವೆ. ಹಾಗೆಯೇ ಆಗಸ್ಟ್ ತಿಂಗಳಿನಲ್ಲಿ ಜನಿಸಿದವರ ವ್ಯಕ್ತಿತ್ವದ ಬಗ್ಗೆ ನೋಡೋಣ.

ಇದನ್ನು ಓದಿ: ಈ ರಾಶಿಯವರಿಗೆ ಈ ಬಣ್ಣಗಳು ಅದೃಷ್ಟ ತರುತ್ತವೆ..! 

ಸೂರ್ಯ ಗ್ರಹದ ಪಾತ್ರ 
ಆಗಸ್ಟ್‌ನಲ್ಲಿ ಜನಿಸಿದವರಿಗೆ ಸಾಮಾನ್ಯವಾಗಿ ಸೂರ್ಯ ಗ್ರಹದ ಪ್ರಭಾವ ಹೆಚ್ಚಿರುತ್ತದೆ. ಹಾಗಾಗಿ ಸಿಟ್ಟು ಮತ್ತು ಉದ್ವೇಗದಂತಹ ಗುಣಗಳಿಂದ ಸಮಸ್ಯೆಯನ್ನು ಎದುರಿಸುತ್ತಾರೆ. ಐಷಾರಾಮಿಯಾಗಿ ಜೀವನ ನಡೆಸುವ ಬಯಕೆಯನ್ನು ಹೊಂದಿರುತ್ತಾರೆ. ವೈಭವಯುತ ಜೀವನಕ್ಕಾಗಿ ಸಿಟ್ಟು, ಹಿಂಸೆ ಮತ್ತು ಅದನ್ನು ಸಮರ್ಥಿಸಿಕೊಳ್ಳುವ ಗುಣವಿರುವ ಇವರು ಧಾರ್ಮಿಕ ವಿಚಾರಗಳಲ್ಲಿ ನಂಬಿಕೆಯನ್ನು ಇಟ್ಟಿರುತ್ತಾರೆ. ಅಷ್ಟೇ ಅಲ್ಲದೆ ತಂದೆ-ತಾಯಿಯ ಸೇವೆಯನ್ನು ಮಾಡುವ ಇವರು ಬಡವರಿಗೆ ಸಹಾಯ ಮಾಡಲು ಸಹ ಸದಾ ಸಿದ್ಧರಿರುತ್ತಾರೆ. ಜಾತಕದಲ್ಲಿ ಸೂರ್ಯನು ಮಿತ್ರ ಗ್ರಹದೊಂದಿಗಿದ್ದರೆ ಈ ವ್ಯಕ್ತಿಗಳಿಗೆ ತಂದೆಯೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ. ಆಗಸ್ಟ್‌ನಲ್ಲಿ ಜನಿಸಿದವರು ಉತ್ತಮ ದಾಂಪತ್ಯ ಜೀವನ ಮತ್ತು ಸಂತಾನಫಲವನ್ನು ಹೊಂದಿರುತ್ತಾರೆ. 

ದಯೆ ಮತ್ತು ಪ್ರಾಮಾಣಿಕತೆಗೆ ಹೆಸರುವಾಸಿ
ತಮಗೇನಾದರೂ ತೊಂದರೆಯಿಲ್ಲ, ಇತರರಿಗೆ ಸಹಾಯ ಮಾಡಲು ಮುಂದಿರುತ್ತಾರೆ. ವಿಶಾಲ ಹೃದಯಿಗಳಾಗಿರುವ ಆಗಸ್ಟ್ ತಿಂಗಳಿನವರು, ಉತ್ತಮ ವಿಚಾರ ಮತ್ತು ಸಂಬಂಧಗಳಲ್ಲಿ ಪ್ರಾಮಾಣಿಕತೆಯನ್ನು ಉಳ್ಳವರಾಗಿರುತ್ತಾರೆ. ಉತ್ತಮರೊಂದಿಗೆ ಸ್ನೇಹವನ್ನಿಟ್ಟುಕೊಂಡಿರುವುದಲ್ಲದೆ, ಅವರಿಗೋಸ್ಕರ ಹೆಚ್ಚು ಖರ್ಚು ಮಾಡುವವರಾಗಿರುತ್ತಾರೆ. ಜ್ಞಾನ ಮತ್ತು ಪ್ರಮಾಣಿಕತೆಯಿಂದ ಜನರನ್ನು ಸೆಳೆದುಕೊಳ್ಳುವ ಚಾಕಚಕ್ಯತೆಯನ್ನು ಹೊಂದಿರುತ್ತಾರೆ.

ಇದನ್ನು ಓದಿ: ಈ ಐದು ರಾಶಿಯವರು ಸಖತ್ ಸೋಮಾರಿಗಳು…! ನಿಮ್ಮ ರಾಶಿಯೂ ಇದ್ಯಾ? 

ಆತ್ಮರತಿಗಳಿವರು
ಆಗಸ್ಟ್‌ನಲ್ಲಿ ಜನಿಸಿದವರು ಆತ್ಮರತಿಗಳಂತೆ. ಹೌದು. ಇವರಿಗೆ ತಮ್ಮ ಬಗ್ಗೆ ತಾವೇ ಕೊಚ್ಚಿಕೊಳ್ಳುವುದು ಎಂದರೆ ಬಹಳ ಪ್ರೀತಿ. ಹೀಗಾಗಿ ಇವರು ತಮ್ಮನ್ನು ತಾವೇ ಹೆಚ್ಚು ಪ್ರೀತಿಸಿಕೊಳ್ಳುವುದರ ಜೊತೆಗೆ ತಮ್ಮ ಬಗ್ಗೆ ಗುಣಗಾನ ಮಾಡಿಕೊಳ್ಳುತ್ತಾರೆ. 

ಆತ್ಮವಿಶ್ವಾಸ, ಛಲಗಾರಿಕೆ
ಆಗಸ್ಟ್‌ನಲ್ಲಿ ಜನಿಸಿದವರು ಜೀವನದಲ್ಲಿ ಹಲವು ರೀತಿಯ ಕಷ್ಟಗಳನ್ನು, ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಹೆದರದೆ ಧೈರ್ಯದಿಂದ ಎಲ್ಲವನ್ನೂ ಎದುರಿಸುವ ಸ್ವಭಾವ ಇವರದ್ದು. ಹೆಚ್ಚು ಆತ್ಮವಿಶ್ವಾಸ ಹೊಂದಿರುವ ಇವರು ಸೃಜನಶೀಲರಾಗಿರುತ್ತಾರೆ. ಕೆಲಸ ಮಾಡುವ ಕ್ಷೇತ್ರದಲ್ಲಿ ಇವರ ಸೃಜನಶೀಲ ವ್ಯಕ್ತಿತ್ವದಿಂದ ಎಲ್ಲರ ಮನಸ್ಸನ್ನು ಗೆಲ್ಲುತ್ತಾರೆ.

ಅನುಮಾನವಿದ್ದರೂ ನಂಬಿಬಿಡುತ್ತಾರೆ!
ಆಗಸ್ಟ್ ತಿಂಗಳಿನಲ್ಲಿ ಜನಿಸಿದ ವ್ಯಕ್ತಿಗಳು ಸಂಕಲ್ಪ ಮಾಡಿದ್ದನ್ನು ಸಾಧಿಸುವ ತನಕ ಬಿಡುವುದಿಲ್ಲ. ಇವರದ್ದು ಸ್ವಲ್ಪ ಅನುಮಾನದ ಸ್ವಭಾವವಿದ್ದರೂ ಬಹುಬೇಗ ಎಲ್ಲರನ್ನೂ ನಂಬಿಬಿಡುತ್ತಾರೆ. ಈ ಸ್ವಭಾವದಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಕಲೆಗೆ ಸಂಬಂಧಿಸಿದ ಕ್ಷೇತ್ರ ಉತ್ತಮ
ಈ ತಿಂಗಳಿನಲ್ಲಿ ಜನಿಸಿದವರು ಯಾವುದಾದರೂ ಕಲೆಗೆ ಸಂಬಂಧಪಟ್ಟ ಕ್ಷೇತ್ರವು ಹೆಚ್ಚು ಯಶಸ್ಸನ್ನು ತಂದುಕೊಡುತ್ತದೆ. ಕಲಾ ಕ್ಷೇತ್ರದಲ್ಲಿ ಖ್ಯಾತಿ ಪಡೆಯುವುದಲ್ಲದೇ ಯಶಸ್ಸಿನ ಶಿಖರವನ್ನು ಮುಟ್ಟುವ ಸಾಮರ್ಥ್ಯ ಇವರಲ್ಲಿರುತ್ತದೆ. 

ಇದನ್ನು ಓದಿ: ಮನೋಭಿಲಾಷೆ ಫಲಿಸಲು ರಾಶಿಗನುಗುಣವಾಗಿ ಇವುಗಳಿಂದ ರುದ್ರಾಭಿಷೇಕ ಮಾಡಿ..! 

ಮದ್ಯ ಸೇವನೆ ಉತ್ತಮವಲ್ಲ
ಆಗಸ್ಟ್‌ನಲ್ಲಿ ಜನಿಸಿದವರು ಮದ್ಯಪಾನ ಮತ್ತು ತಾಮಸ ಆಹಾರವನ್ನು ಸೇವಿಸುವುದು ಉತ್ತಮವಲ್ಲ. ಇದರಿಂದ ಭಾಗ್ಯಶಾಲಿಗಳಾಗಲು ಅಡ್ಡಿಯಾಗುತ್ತದೆ ಎಂಬುದು ಜ್ಯೋತಿಷ್ಯ ತಜ್ಞರ ಅಭಿಪ್ರಾಯವಾಗಿದೆ.

Tap to resize

Latest Videos

click me!