ಶ್ರೀಕಷ್ಣ ಜನ್ಮಾಷ್ಟಮಿಯಂದು ಈ 5 ರಾಶಿಯವರ ಅದೃಷ್ಟ ಬದಲಾಗತ್ತೆ…!

By Suvarna News  |  First Published Aug 10, 2020, 5:23 PM IST

ಶ್ರೀಕೃಷ್ಣ ಜನ್ಮಾಷ್ಟಮಿ ಇದೇ ಮಂಗಳವಾರ ಆಚರಿಸಲ್ಪಡುತ್ತಿದೆ. ಕೃಷ್ಣಾ ಎನಬಾರದೇ, ಕೃಷ್ಣನ ನೆನೆದರೆ ಕಷ್ಟವೊಂದಿಷ್ಟಿಲ್ಲ…. ಹೀಗೆ ಸಾಗುವ ಹಾಡಿನ ಸಾಲುಗಳು ನೆನಪಿಲ್ಲವೇ..? ಹಾಗೆಯೇ ಕೃಷ್ಣ ಪರಮಾತ್ಮನನ್ನು ನೆನೆದರೆ ಎಂಥ ಕಷ್ಟಗಳೇ ಇರಲಿ ಅವುಗಳು ಮಂಜಿನಂತೆ ಕರಗಿಹೋಗುತ್ತದೆ. ಈ ಬಾರಿಯ ಶ್ರೀಕೃಷ್ಣ ಜನ್ಮಾಷ್ಟಮಿಯು ಕೆಲವು ರಾಶಿಯವರಿಗೆ ಅದೃಷ್ಟ ತಂದು ಕೊಡಲಿದೆ. ಹಾಗಾದರೆ ಯಾವುವು ಆ ರಾಶಿಗಳು ಎಂಬ ಬಗ್ಗೆ ನೋಡೋಣ…


ಶ್ರೀಕೃಷ್ಣ ಪರಮಾತ್ಮ ಎಂದರೆ ಕೇಳಿದ್ದನ್ನು ಕೊಡುವವನಷ್ಟೇ ಅಲ್ಲ, ಕೇಳದಿದ್ದರೂ ಕೊಡುವ ಕರುಣಾಮಯಿ ಹಾಗೂ ಹೃದಯಮಯಿ. ಅಂತಹ ಕಡುಕಷ್ಟದಲ್ಲಿದ್ದ ತನ್ನ ಆಪ್ತ ಸ್ನೇಹಿತ ಸುಧಾಮ (ಕುಚೇಲ)ನಿಗೆ ಗೊತ್ತಿಲ್ಲದಂತೆ ಅಷ್ಟೈಶ್ವರ್ಯವನ್ನೂ ದಯಪಾಲಿಸಿದ ಭಗವಂತ. ಇಂಥ ದೇವರ ನೆನೆದರೆ, ಪೂಜಿಸಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯನ್ನು ಎಂದೂ ಸುಳ್ಳು ಮಾಡದ ಪರಮಾತ್ಮನೂ ಹೌದು. ಶ್ರೀ ಕೃಷ್ಣ ಜನ್ಮಾಷ್ಟಮಿ ಹಲವರಿಗೆ ಶುಭವನ್ನು ತರುತ್ತಿದ್ದು, ಒಳ್ಳೆಯದನ್ನು ಮಾಡುತ್ತಿದೆ. 

ಇನ್ನು ಶ್ರೀಕೃಷ್ಣ ಎಂದರೆ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ? ಬಾಲಕೃಷ್ಣನಿಂದ ಹಿಡಿದು ಎಲ್ಲ ಹಂತಗಳಲ್ಲೂ ಅವನ ಲೀಲೆಗಳನ್ನು ಕೇಳುವುದೇ ಒಂದು ಸೊಗಸು. ಇಂತಹ ಶ್ರೀಕೃಷ್ಣನ ಜನ್ಮದಿನವು ಅಷ್ಟಮಿಯಂದು ಆಚರಿಸಲ್ಪಡುತ್ತದೆ. ಈ ಶ್ರೀಕೃಷ್ಣ ಜನ್ಮಾಷ್ಟಮಿ ಇದೇ ಆಗಸ್ಟ್ 11ರ ಮಂಗಳವಾರ ಆಚರಿಸಲ್ಪಡುತ್ತಿದ್ದು, ಎಲ್ಲರೂ ಅವನ ಕೃಪೆಗೆ ಪಾತ್ರರಾಗಬೇಕೆಂಬ ನಿಟ್ಟಿನಲ್ಲಿ ಪೂಜೆ-ಪುನಸ್ಕಾರಗಳು ನಡೆಯುತ್ತವೆ. ಎಲ್ಲರೂ ಶ್ರದ್ಧಾ-ಭಕ್ತಿಯಿಂದ ಭಗವಾನ್ ಶ್ರೀ ಕೃಷ್ಣನ ಪೂಜಿಸಿದರೆ ಒಳ್ಳೆಯದಾಗುತ್ತದೆ.



ಇನ್ನು ಶ್ರೀಕೃಷ್ಣ ಜನ್ಮಾಷ್ಟಮಿಯಂದು ಹಲವರ ಅದೃಷ್ಟವೂ ಬದಲಾಗಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಜನ್ಮಾಷ್ಟಮಿ ದಿನದ ಬೆಳಗ್ಗಿನ ಸಮಯದಲ್ಲಿ ವೃದ್ಧಿಯೋಗ ಪ್ರಾಪ್ತಿಯಾಗುತ್ತದೆ. ಈ ದಿನದಂದು ಕೆಲವು ರಾಶಿಯವರಿಗೆ ಆರ್ಥಿಕ ಲಾಭ ತಂದುಕೊಡುತ್ತದೆ. ಹಲವು ದಿನಗಳ ಪ್ರಯತ್ನ ಫಲಿಸುತ್ತದೆ. ಧನಪ್ರಾಪ್ತಿಯಾಗುವ ಕಾಲವೂ ಸನ್ನಿಹಿತವಾಗಿದೆ. ಹೀಗಾಗಿ ಈ ದಿನದಿಂದ 5 ರಾಶಿಯವರಿಗೆ ಅದೃಷ್ಟ ಒಲಿಯಲಿದ್ದು, ಯಾವ ಯಾವ ರಾಶಿಗೆ ಎಂಬ ಬಗ್ಗೆ ನೋಡೋಣ ಬನ್ನಿ…

ಇದನ್ನು ಓದಿ: ಈ ಐದು ರಾಶಿಯವರು ಸಖತ್ ಸೋಮಾರಿಗಳು…! ನಿಮ್ಮ ರಾಶಿಯೂ ಇದ್ಯಾ?

ಮೇಷ ರಾಶಿ
ಜನ್ಮಾಷ್ಟಮಿಯಂದು ಘಟಿಸುವ ವೃದ್ಧಿಯೋಗದಿಂದ ಈ ರಾಶಿಯವರಿಗ ಉತ್ತಮ ಲಾಭವಾಗಲಿದ್ದು, ಆರ್ಥಿಕ ಸ್ಥಿತಿಯಲ್ಲಿ ತುಂಬ ಸುಧಾರಣೆಯಾಗುತ್ತದೆ. ಕೆಲಸ, ವ್ಯಾಪಾರ ಹೀಗೆ ಎಲ್ಲರದರಲ್ಲೂ ಅಭಿವೃದ್ಧಿಯಾಗುತ್ತದೆ. ಧನ ಸಂಪತ್ತಿಗೆ ಸಂಬಂಧಪಟ್ಟಂತೆ ಯಾವುದೋ ಒಂದು ದೊಡ್ಡ ಲಾಭವಾಗುವ ಸಾಧ್ಯತೆ ಹೆಚ್ಚಿದೆ. ಆ ದಿನ ಭಾಗ್ಯದ ಸಂಪೂರ್ಣ ಸಾಥ್ ಸಿಗಲಿದೆ. 

ಕರ್ಕಾಟಕ ರಾಶಿ
ಈ ವೃದ್ಧಿಯೋಗದಿಂದ ಧನಪ್ರಾಪ್ತಿಯಾಗುವ ಸಂಭವ ಈ ರಾಶಿಯವರಿಗಿದೆ. ವೃತ್ತಿಜೀವನದಲ್ಲೂ ಆಗುತ್ತಿರುವ ಏರು-ಪೇರುಗಳಿಗೆ ಮುಕ್ತಿ ಸಿಕ್ಕು ಅಲ್ಲಿಯೂ ಉತ್ತಮವಾದ ವಾತಾವರಣ ನಿರ್ಮಾಣವಾಗಲಿದೆ. ತುಂಬಾ ಸಮಯದಿಂದ ಈ ರಾಶಿಯವರು ಎದುರಿಸುತ್ತಿರುವ ಸಮಸ್ಯೆ ನಿವಾರಣೆಯಾಗಲಿದೆ. 

ಇದನ್ನು ಓದಿ: ಈ ರಾಶಿಯವರಿಗೆ ಈ ಬಣ್ಣಗಳು ಅದೃಷ್ಟ ತರುತ್ತವೆ..!

Tap to resize

Latest Videos



ಸಿಂಹ ರಾಶಿ
ಈ ರಾಶಿಯವರಿಗೂ ವೃದ್ಧಿ ಯೋಗವು ಧನ ಲಾಭವನ್ನು ತಂದುಕೊಡಲಿದೆ. ಯಾರಿಗಾದರೂ ಸಾಲ ನೀಡಿ ಅದು ಇಲ್ಲಿಯವರೆಗೂ ವಾಪಸ್ ಬರದಿದ್ದರೆ, ಈ ಸಮಯದಲ್ಲಿ ವಾಪಸ್ ಬರಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ಸಂದರ್ಭದಲ್ಲಿ ನೀವು ಹೊಸ ಮನೆ, ವಾಹನಗಳನ್ನು ಖರೀದಿಸುವ ಯೋಜನೆಯನ್ನೂ ಹಾಕಿಕೊಳ್ಳಬಹುದು. ಸಂತಾನದಿಂದ ಸುಖ ಪ್ರಾಪ್ತಿಯಾಗಲಿದೆ ಎಂದೂ ಹೇಳಲಾಗುತ್ತದೆ. 

ಧನು ರಾಶಿ
ಈ ರಾಶಿಯವರಿಗೆ ಶ್ರೀಕೃಷ್ಣ ಜನ್ಮಾಷ್ಟಮಿಯು ವೃತ್ತಿ ಜೀವನಕ್ಕೆ ಬಹಳ ಶುಭದಾಯಕವಾಗಿದೆ. ಜನ್ಮಾಷ್ಟಮಿಯಂದು ಆಗುವ ವೃದ್ಧಿ ಯೋಗದಿಂದಾಗಿ ವೃತ್ತಿಯಲ್ಲಿ ಬಹಳ ದೊಡ್ಡ ಲಾಭ ಸಿಗುವ ಎಲ್ಲ ಸಾಧ್ಯತೆಗಳು ದಟ್ಟವಾಗಿದೆ. ಅಲ್ಲದೆ, ವ್ಯಾಪಾರದಲ್ಲಿ ತೊಡಗಿಕೊಂಡವರಿಗೂ ಒಳ್ಳೆಯ ಲಾಭ ಸಿಗಲಿದ್ದು, ಅವರಿಗೆ ಇನ್ನಷ್ಟು ಪೂರಕ ವಾತಾವರಣ ನಿರ್ಮಾಣವಾಗಲಿದೆ. ಜೊತೆಗೆ ಕೆಲಸದಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುವಿಕೆ ಸಾಧ್ಯವಾಗುತ್ತದೆ. 

ಇದನ್ನು ಓದಿ: ಆಗಸ್ಟ್‌ನಲ್ಲಿ ಜನಿಸಿದವರ ಗುಣ ಸ್ವಭಾವಗಳು ಹೀಗಿರುತ್ತವೆ..!

ಮೀನ ರಾಶಿ
ಈ ರಾಶಿಯವರು ಬಹಳ ಸಮಯದಲ್ಲಿ ಸಂಕಟಗಳು, ಹಲವು ಸಮಸ್ಯೆಗಳಿಂದ ಸಿಲುಕಿಕೊಂಡಿದ್ದರೆ ಈ ಶ್ರೀಕೃಷ್ಣ ಜನ್ಮಾಷ್ಟಮಿಯು ಪರಿಹಾರವನ್ನು ಮಾಡಿಕೊಡುವುದಲ್ಲದೆ, ಅದೃಷ್ಟವನ್ನೂ ತಂದುಕೊಡಲಿದೆ. ಈ ದಿನ ಈ ರಾಶಿಯವರಿಗೆ ಧನ ಲಾಭವಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಜೊತೆಗೆ ವೃತ್ತಿ ಜೀವನದಲ್ಲೂ ಧನ ಪ್ರಾಪ್ತಿಯಾಗುವ ಮೂಲಕ ಆರ್ಥಿಕ ಸಂಕಷ್ಟದಿಂದಲೂ ಪಾರು ಮಾಡುತ್ತದೆ. ಮನೆಯಲ್ಲಿ ಇಲ್ಲವೇ ಕುಟುಂಬದವರೆಲ್ಲರೂ ಸೇರಿ ಯಾವುದಾದರೂ ಶುಭ ಸಮಾರಂಭಗಳನ್ನು ಮಾಡುವ ಯೋಚನೆ ಇದ್ದರೆ, ಈ ಸಮಯ ಪ್ರಶಸ್ತವಾಗಿದೆ ಎಂದು ಹೇಳಲಾಗಿದೆ. 

click me!