ಈ ರಾಶಿಯವರು ಕಿರಿಕ್‌ ಮಾಡೋ ಸಹೋದ್ಯೋಗಿಗಳಾಗಿರ್ತಾರೆ!

By Suvarna News  |  First Published Aug 8, 2020, 4:49 PM IST

ಕೆಲವು ಸಹೋದ್ಯೋಗಿಗಳು ನಿಮಗೆ ನಾನಾ ಕಿರಿಕಿರಿಯ ದರ್ಶನ ಮಾಡಿಸುತ್ತಿರುತ್ತಾರೆ. ಅವರ ಉದ್ದೇಶ ಕಿರಿಕಿರಿ ಮಾಡುವುದಲ್ಲದೇ ಇರಬಹುದು. ಆದರೆ ಅವರ ಸ್ವಭಾವ ನಿಮಗೆ ಆಗಿಬರದೇ ಇದ್ದರೆ ಕೆಲಸ ಕಷ್ಟ ಕಷ್ಟ. ಅಂಥವರ್ಯಾರು?


ಸಿಂಹ ರಾಶಿ 
ಇವರ ಸ್ವಭಾವ ಸಿಂಹ ಎಂಬ ಹೆಸರಿಗೆ ತಕ್ಕಂತೆ ಡಾಮಿನೇಟಿಂಗ್‌. ಇವರು ಬಾಸ್‌ಗಳಾಗಿದ್ದಾರೆ ಓಕೆ, ಯಾಕೆಂದರೆ ಸಹಜವಾಗಿ ಎಲ್ಲರೂ ಇವರು ಹೇಳಿದಂತೆ ಕೇಳುತ್ತಿರುತ್ತಾರೆ. ಬಾಸಿಸಂ ಮಾಡುವುದರಲ್ಲಿ ಇವರನ್ನು ಬಿಟ್ಟರೆ ಬೇರೆ ಇಲ್ಲ. ಇವರ ಸ್ವಭಾವವೇ ಕಚೇರಿಯಲ್ಲಿ ಇಂಪಾರ್ಟೆನ್ಸ್ ತೆಗೆದುಕೊಳ್ಳುವುದು. ಇವರು ಬಾಸ್‌ ಅಲ್ಲದೆ ಇದ್ದರೆ, ತಾವು ಹೇಳಿದಂತೆ ಉಳಿದವರು ಕೇಳಬೇಕು ಎಂದು ಒತ್ತಾಯಿಸುವ ಸ್ವಭಾವದಿಂದಾಗಿ ಎಲ್ಲರಿಗೂ ಕಿರಿಕಿರಿ ಮಾಡಬಹುದು. ಅಥವಾ ಇನ್ನೊಬ್ಬ ಇಂಥದೇ ವ್ಯಕ್ತಿತ್ವದ ವ್ಯಕ್ತಿ ಎದುರಾದರೆ ಮಹಾಯುದ್ಧವೇ ಏರ್ಪಡಬಹುದು. ಇಂಥವರ ಮಾತಿಗೆ ಹೂಂಗುಟ್ಟುತ್ತ ಇದ್ದರೆ ಅವರಿಗೆ ಖುಷಿಯಾಗುತ್ತದೆ.

ಮಿಥುನ ರಾಶಿ
ಸ್ವಭಾವತಃ ಭಾವುಕ ಜೀವಿಗಳಾದ ಇವರು ತಮ್ಮ ಗೋಳುಗಳನ್ನೆಲ್ಲಾ ತಮ್ಮ ಆತ್ಮೀಯರಿಗೂ ಸಹೋದ್ಯೋಗಿಗಳಿಗೂ ದಾಟಿಸುವುದರಲ್ಲಿ ನಿಸ್ಸೀಮರು. ತಮ್ಮ ವೈಯಕ್ತಿಕ ಸಂಗತಿಗಳಲ್ಲಿ ಯಾವುದನ್ನು ಹೇಳಿಕೊಳ್ಳಬೇಕು, ಯಾವುದನ್ನು ಬಿಡಬೇಕು ಎಂಬ ವಿವೇಚನೆ ಇವರಿಗೆ ಕೊಂಚ ಕಡಿಮೆ. ಗಂಡ ಅಥವಾ ಹೆಂಡತಿಯ ಜೊತೆಗೆ ಬಂದ ಮನಸ್ತಾಪವನ್ನೂ ನಿಮ್ಮ ಜೊತೆ ಹೇಳಿಕೊಂಡು ನಿಮ್ಮ ತಲೆ ತಿನ್ನಬಲ್ಲರು. ಇನ್ನೊಬ್ಬನ ವೈಯಕ್ತಿಕ ವಿಚಾರಗಳಲ್ಲಿ ಮೂಗು ತೂರಿಸುವವರು ನೀವು ಅಲ್ಲವಾದರೆ ಇದು ನಿಮಗೆ ಮುಜುಗರ ಉಂಟುಮಾಡಬಹುದು. ಹಾಗೇ ಇವರು ನಿಮ್ಮ ಮನಸ್ಸಿಗೂ ಕೈಹಾಕಿ ಕಲಕಬಹುದು.

Tap to resize

Latest Videos

ಕುಂಭ ರಾಶಿ
ಇವರು ಅತ್ಯಂತ ಪರ್‌ಫೆಕ್ಷನಿಸ್ಟ್‌ಗಳು. ಅರು ಮಾಡಿದ ಎಲ್ಲ ಕೆಲಸಗಳೂ ಅಚ್ಚುಕಟ್ಟಾಗಿ, ಅತ್ಯಂತ ಶ್ರೇಷ್ಠವಾಗಿ ಇರಬೇಕು ಎಂದು ಬಯಸುತ್ತಾರೆ. ಅದೇನೋ ಸರಿಯೇ, ಆದರೆ ನಿಮ್ಮ ಕೆಲಸವೂ ಹಾಗೇ ಇರಬೇಕೆಂದು ಬಯಸುವುದರಿಂದಲೇ ಇತರರಿಗೆ ಕಿರಿಕಿರಿ ಉಂಟಾಗುವುದು. ಇಂಥವರು ನಿಮ್ಮ ಬಾಸ್‌ ಅಥವಾ ಟೀಮ್‌ ಮ್ಯಾನೇಜರ್‌ ಆಗಿದ್ದರೆ ನಿಮಗೆ ಸದಾಕಾಲ ಮಾಡಿದ ಕೆಲಸವನ್ನೇ ಇನ್ನೊಮ್ಮೆ ಮತ್ತೊಮ್ಮೆ ಮಾಡುವ ಕಿರುಕುಳ ತಪ್ಪುವುದಿಲ್ಲ. ಇವರಿಗೆ ಇವರಂಥವರೇ ಜೊತೆಯಾದರೆ ಕಚೇರಿ ಶಾಂತಿಯಿಂದಿರುತ್ತದೆ. ಇಲ್ಲವಾದರೆ ಜಗಳಗಳು ಗ್ಯಾರಂಟಿ.

ಶ್ರಾವಣದಲ್ಲಿ ಹೀಗೆ ಮಾಡುವುದರಿಂದ ಅದೃಷ್ಟವೋ ಅದೃಷ್ಟ! 

ಧನು ರಾಶಿ
ಇವರು ತಲೆ ತಿನ್ನುವುದರಲ್ಲಿ ಅತ್ಯಂತ ಪಳಗಿದವರು. ಎಲ್ಲರ ಕೆಲಸಗಳಲ್ಲೂ ಮೂಗು ತೂರಿಸುತ್ತಾರೆ; ಎಲ್ಲ ವಿಚಾರಗಳಲ್ಲೂ ಕೈಕಾಲು ತೂರಿಸುತ್ತಾರೆ. ಎಲ್ಲರ ಆಗುಹೋಗುಗಳೂ ಇವರಿಗೆ ಬೇಕು. ಕೆಲವು ವಿಚಾರಗಳಲ್ಲಿ ತಮಗೆ ಏನೂ ಗೊತ್ತಿಲ್ಲದಿದ್ದರೂ, ಎಲ್ಲ ಗೊತ್ತಿದ್ದವರಂತೆ ಬೋಧನೆ ಮಾಡುವುದರಲ್ಲಿ ಇವರನ್ನು ಬಿಟ್ಟರೆ ಇನ್ನೊಬ್ಬರಿಲ್ಲ. ನಿಮ್ಮ ಕೆಲಸದಲ್ಲಿ ಹೇಗೂ ಮೂಗು ತೂರಿಸುತ್ತಾರೆ; ನಿಮ್ಮ ಪರ್ಸನಲ್‌ ವಿಚಾರಗಳಲ್ಲೂ ಕೈಕಾಲು ಆಡಿಸಲು ಬರಬಹುದು. ಇಂಥವರು ಬಾಸ್‌ ಆಗಿದ್ದರೆ ನಿರ್ದಾಕ್ಷಿಣ್ಯವಾಗಿ ದೂರ ಇಡುವುದೂ ಕಷ್ಟವೇ. ಇಂಥವರನ್ನು ನಾಜೂಕಾಗಿ ಹ್ಯಾಂಡಲ್‌ ಮಾಡದಿದ್ದರೆ ಕಷ್ಟ ನಿಮಗೇ.

ವೃಶ್ಚಿಕ ರಾಶಿ
ಇವರು ಒಂದು ಮಾತಿಗೆ ಎರಡು ಸೇರಿಸಿ, ಎರಡು ಮಾತಿಗೆ ನಾಲ್ಕು ಸೇರಿಸಿ ಬಾಸ್‌ಗೆ ವರದಿ ಮಾಡುವುದರಲ್ಲಿ ನಿಷ್ಣಾತರು. ಕತೆ ಕಟ್ಟುವ ಕಲೆ ಇವರಿಗೆ ಒಲಿದಿರುತ್ತದೆ. ಸುಮ್ಮನೇ ನೀವು ಕಚೇರಿಯ ಬಗ್ಗೆ ಒಂದು ಅಸಮಾಧಾನದ ಮಾತು ಆಡಿದರೂ ಸಾಕು, ಅದು ಬಾಸ್‌ನ ಬಗ್ಗೆಯೇ ಹೇಳಿದ್ದೆಂದು ಅರ್ಥ ಕಲ್ಪಿಸಿ, ಬಾಸ್‌ಗೆ ಮುಟ್ಟಿಸಬಲ್ಲರು. ಇವರನ್ನು ಚೆನ್ನಾಗಿ ಇಟ್ಟುಕೊಂಡರೆ ನಿಮಗೆ ಮನಶ್ಶಾಂತಿ ನೆಮ್ಮದಿ ಇರುತ್ತದೆ. ಇಲ್ಲದೆ ಹೋದರೆ ಇವರ ಚಾಡಿಯ ಹಾವಳಿಗೆ ಸಿಲುಕಿ ಒಂದಲ್ಲ ಒಂದು ಬಾರಿ ಚೌತಿಯ ಚಂದ್ರನನ್ನು ನೋಡಿದ ಕೃಷ್ಣನಂತೆ ಯಾವ ಅಪರಾಧ ಇಲ್ಲದಿದ್ದರೂ ನೀವು ಕಷ್ಟ ಉಣ್ಣಬೇಕಾಗಬಹುದು.

ಸತ್ಯವನ್ನು ಯಾಕಾಗಿ ಹೇಳಬೇಕು? ಸತ್ಯದ ಪ್ರಾಮುಖ್ಯತೆ ಏನು? 

ವೃಷಭ ರಾಶಿ
ಇವರು ಸ್ವಲ್ಪ ದುಡುಕು ಸ್ವಭಾವದವರು. ವಿವೇಚನೆ ಇಲ್ಲದೆ ಹಿಂದೆ ಮುಂದೆ ನುಗ್ಗುತ್ತಿರುತ್ತಾರೆ. ಕೆಲಸಗಳನ್ನೂ ತಮ್ಮ ದುಡುಕಿನಿಂದಾಗಿ ಕೆಡಿಸಬಹುದು. ಇಂಥವರು ಟೀಮ್‌ನಲ್ಲಿ ಇದ್ದರೆ ಬಾಸ್‌ಗೆ ತಲೆನೋವು ಕಟ್ಟಿಟ್ಟದ್ದು. ನೀವು ಮಾಡಿದ ಕೆಲಸಗಳನ್ನೂ ಇವರು ತಮ್ಮ ದುಡುಕಿನಿಂದಾಗಿ ಕೆಡಿಸಿ ಹಾಕಬಹುದು. ಕೆಲವೊಮ್ಮೆ ಇನ್ನೊಬ್ಬರ ಮಾತನ್ನು ಕೇಳಿಕೊಂಡು ಇತರರ ಮೇಲೆ ಸಮರ ಸಾರಬಹುದು. ದ್ವೇಷ ಕಟ್ಟಿಕೊಂಡರೆ ಇವರು ಸುಮ್ಮನೇ ಬಿಡಲಾರರು. ತಮ್ಮ ತಪ್ಪು ತಿಳಿದರೂ ತಿದ್ದಿಕೊಳ್ಳುವವರಲ್ಲ. 

ದೇವತೆಗಳಿಂದ ಸಂಪಾದಿಸಿದ ಬಲಕ್ಕಿಂತ ದೊಡ್ಡದು ಗುರುವಿನ ಕೃಪೆ..!

click me!