ಈ ನಕ್ಷತ್ರದವರು ಆಗುತ್ತಾರೆ ಸಂಪತ್ತಿಗೆ ಒಡೆಯರು, ನಿಮ್ಮ ನಕ್ಷತ್ರ ಯಾವುದು..?

By Suvarna News  |  First Published Jun 3, 2021, 6:03 PM IST

ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಿರುವಂತೆ ನಕ್ಷತ್ರಗಳು 27 ಅದರಲ್ಲಿ ಕೇತು ಅಧಿಪತಿಯಾಗಿರುವ ಮೂಲಾ ನಕ್ಷತ್ರವು 19ನೇ ನಕ್ಷತ್ರವಾಗಿದೆ. ಈ ನಕ್ಷತ್ರವು ಗಂಡಮೂಲ ನಕ್ಷತ್ರವಾಗಿದ್ದು, ಈ ನಕ್ಷತ್ರದಲ್ಲಿ ಜನಿಸಿದವರ ತಂದೆಗೆ ತೊಂದರೆಯಾಗುತ್ತದೆ ಎಂದು ಹೇಳಲಾಗುತ್ತದೆ. ಇದಕ್ಕೆ ನಕ್ಷತ್ರ ದೋಷವನ್ನು ಪರಿಹಾರಕ್ಕೆ ಶಾಂತಿಯನ್ನು ಮಾಡಿಸುವುದರಿಂದ ದೋಷ ಪರಿಹಾರವಾಗುತ್ತದೆ. ಮೂಲಾ ನಕ್ಷತ್ರವು ಅಶುಭ ನಕ್ಷತ್ರವಾದರು ಸಹ ಅನೇಕ ವಿಶೇಷತೆಗಳನ್ನು ಹೊಂದಿರುವ ನಕ್ಷತ್ರವಾಗಿದ್ದು, ಈ ನಕ್ಷತ್ರದ ವಿಶೇಷತೆಗಳ ಬಗ್ಗೆ ತಿಳಿಯೋಣ..
 


ಜ್ಯೋತಿಷ್ಯ ಶಾಸ್ತ್ರದಲ್ಲಿ ಒಟ್ಟು 27 ನಕ್ಷತ್ರಗಳಿವೆ. ಪ್ರತಿಯೊಂದು ನಕ್ಷತ್ರದ ಗುಣ ಮತ್ತು ಸ್ವಭಾವವು ಬೇರೆ ಬೇರೆಯಾಗಿರುತ್ತದೆ. ಜ್ಯೋತಿಷ್ಯದಲ್ಲಿಯೇ ನಕ್ಷತ್ರಗಳನ್ನು ಶುಭ ನಕ್ಷತ್ರ, ಮಧ್ಯಮ ನಕ್ಷತ್ರ ಮತ್ತು ಅಶುಭ ನಕ್ಷತ್ರಗಳೆಂದು ವಿಂಗಡಿಸಿದ್ದಾರೆ. ಮಧ್ಯಮ ನಕ್ಷತ್ರದ ಪಟ್ಟಿಯಲ್ಲಿ ಬರುವ ಮೂಲಾ ನಕ್ಷತ್ರವನ್ನು, ಅಶುಭ ನಕ್ಷತ್ರವೆಂದು ಸಹ ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಹಲವು ಉತ್ತಮ ಗುಣವನ್ನು ಒಳಗೊಂಡಿರುವ ಮೂಲಾ ನಕ್ಷತ್ರದ ಬಗ್ಗೆ ಜ್ಯೋತಿಷ್ಯದಲ್ಲಿ ಹೇಳಿರುವ ಕೆಲವು ವಿಚಾರಗಳ ಬಗ್ಗೆ ತಿಳಿದುಕೊಳ್ಳೋಣ..

ಗಂಡಮೂಲ ನಕ್ಷತ್ರಗಳಲ್ಲಿ ಅಶುಭ ನಕ್ಷತ್ರವೆಂದು ಹೇಳಲಾಗುವ ಮೂಲಾ ನಕ್ಷತ್ರದಲ್ಲಿ ಜನಿಸಿದವರ ನಕ್ಷತ್ರ ದೋಷವನ್ನು ಹೊರತುಪಡಿಸಿದರೆ, ಅನೇಕ ವಿಶೇಷತೆಗಳನ್ನು ಹೊಂದಿರುವ ನಕ್ಷತ್ರ ಇದಾಗಿದೆ. ಈ ನಕ್ಷತ್ರದಲ್ಲಿ ಜನಿಸಿದವರು ಬುದ್ಧಿವಂತರು, ಪ್ರಾಮಾಣಿಕರು, ಜವಾಬ್ದಾರಿಯನ್ನು ಅರಿತಿರುವವರು ಮತ್ತು ವಿದ್ವಾಂಸರಾಗಲು ಎಲ್ಲ ಅರ್ಹತೆಗಳನ್ನು ಇವರು ಹೊಂದಿರುತ್ತಾರೆ.

ಇದನ್ನು ಓದಿ: ಮಂಗಳ ಗ್ರಹದ ರಾಶಿ ಪರಿವರ್ತನೆಯಿಂದ ಈ 5 ರಾಶಿಯವರಿಗೆ ಕೆಡುಕು... 

ಮಗುವು ಅಶುಭ (ಗಂಡಮೂಲ) ನಕ್ಷತ್ರದಲ್ಲಿ ಜನಿಸಿದರೆ ಮಗುವಿಗೆ ಅಥವಾ ಅದರ ಸಂಬಂಧಿಗಳಿಗೆ ತೊಂದರೆಯಾಗುತ್ತದೆ ಎಂದು ಜ್ಯೋತಿಷ್ಯ ಹೇಳುತ್ತದೆ. ಅದಕ್ಕೆ ಪರಿಹಾರವನ್ನು ಸಹ ಜ್ಯೋತಿಷ್ಯ ತಿಳಿಸುತ್ತದೆ. ಮಗು ಜನಿಸಿದ 28ನೇ ದಿನ ದೋಷ ಪರಿಹಾರಾರ್ಥವಾಗಿ ಶಾಂತಿಯನ್ನು ಮಾಡಿಸುವುದರಿಂದ ನಕ್ಷತ್ರ ದೋಷ ಪರಿಹಾರವಾಗುತ್ತದೆ ಎಂದು ಹೇಳಲಾಗುತ್ತದೆ.

ಅಷ್ಟೇ ಅಲ್ಲದೆ ಅಶುಭ ನಕ್ಷತ್ರದ ಮೂಹೂರ್ತದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಹಾಗೆ ಮಾಡಿದ್ದೇ ಆದಲ್ಲಿ ಅದರ ಫಲಿತಾಂಶ ಅಶುಭವೇ ಆಗಿರುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಮೂಲಾ ನಕ್ಷತ್ರದಲ್ಲಿ ಮಗು ಜನಿಸಿದರೆ, ಅದರ ತಂದೆಗೆ ತೊಂದರೆ ಎಂದು ಹೇಳಲಾಗುತ್ತದೆ. ಅದಕ್ಕೆ ಶಾಂತಿ ಪೂಜೆಯನ್ನು ಮಾಡಿಸಿಕೊಂಡಲ್ಲಿ ದೋಷ ಪರಿಹಾರವಾಗುತ್ತದೆ.

Tap to resize

Latest Videos



ನಕ್ಷತ್ರಗಳ ಪಟ್ಟಿಯಲ್ಲಿ 19ನೇ ನಕ್ಷತ್ರವೇ ಮೂಲಾ ನಕ್ಷತ್ರ. ಈ ನಕ್ಷತ್ರದಲ್ಲಿ ಜನಿಸಿದವರು ಸ್ವಲ್ಪ ಸಮಯ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ನಕ್ಷತ್ರದ ಅಧಿಪತಿ ದೇವರು ಕೇತು ಗ್ರಹವಾಗಿದ್ದು, ಈ ನಕ್ಷತ್ರದ ವಿಶೇಷತೆಗಳು ಹೀಗಿವೆ:

ಇದನ್ನು ಓದಿ: ಕೆಲಸ – ಕಾರ್ಯಗಳು ಅಡೆತಡೆಯಿಲ್ಲದೆ ಆಗಬೇಕಿದ್ದರೆ ಈ ವಾಸ್ತು ಉಪಾಯ ಪಾಲಿಸಿ... 

ಪ್ರಾಮಾಣಿಕರು
ಈ ನಕ್ಷತ್ರದಲ್ಲಿ ಜನಿಸಿದವರು ಸ್ವಲ್ಪ ಹಠದ ಸ್ವಭಾವವನ್ನು ಹೊಂದಿರುತ್ತಾರೆ. ಕೆಲಸದ ವಿಷಯದಲ್ಲಿ ಅತ್ಯಂತ ಪ್ರಾಮಾಣಿಕರು ಇವರಾಗಿರುತ್ತಾರೆ. ಸದಾ ತಮ್ಮ ಗುರಿಯನ್ನು ತಲುಪುವ ಬಗ್ಗೆ ಯೋಚಿಸುತ್ತಿರುತ್ತಾರೆ. ಗುರಿಯನ್ನು ತಲುಪುವ ತನಕ ನೆಮ್ಮದಿಯಿಂದ ಕೂರದ ವ್ಯಕ್ತಿಗಳು ಮೂಲಾ ನಕ್ಷತ್ರದಲ್ಲಿ ಜನಿಸಿದವರಾಗಿರುತ್ತಾರೆ.

ದೃಢ ವಿಶ್ವಾಸಿಗಳು
ಈ ನಕ್ಷತ್ರದಲ್ಲಿ ಜನಿಸಿದವರು ಯಾವುದೇ ವಿಚಾರವನ್ನು ಯೋಚಿಸಿ ದೃಢ ವಿಶ್ವಾಸದಿಂದ ಕಾರ್ಯನಿರ್ವಹಿಸುತ್ತಾರೆ. ಅಲ್ಲದೆ, ಸರಿಯಾದ ನಿರ್ಣಯವನ್ನು ತೆಗೆದುಕೊಳ್ಳುವ ಕ್ಷಮತೆಯನ್ನು ಸಹ ಇವರು ಹೊಂದಿರುತ್ತಾರೆ. ಅತಿ ಕಿರಿಯ ಮಯಸ್ಸಿನಲ್ಲಿಯೇ ಜೀವನದ ಗುರಿಯನ್ನು ಮತ್ತು ಗುರಿ ತಲುಪುವ ಮಾರ್ಗವನ್ನು ಈ ನಕ್ಷತ್ರದವರು ಕಂಡುಕೊಳ್ಳುತ್ತಾರೆ.

ದಯಾ ಗುಣದವರು
ಇತರರ ಸಹಾಯಕ್ಕೆ ಸದಾ ಸಿದ್ಧರಿರುವ ಮೂಲಾ ನಕ್ಷತ್ರದ ವ್ಯಕ್ತಿಗಳು ದಯಾ ಗುಣವನ್ನು ಹೊಂದಿರುತ್ತಾರೆ. ಇವರ ಸ್ವಭಾವವನ್ನು ದುರುಪಯೋಗ ಪಡಿಸಿಕೊಳ್ಳುವ ಜನರೇ ಹೆಚ್ಚಾಗಿರುತ್ತಾರೆ. ಅಷ್ಟೇ ಅಲ್ಲದೆ ಈ ನಕ್ಷತ್ರದಲ್ಲಿ ಜನಿಸಿದವರು ಭವಿಷ್ಯದ ಬಗ್ಗೆ ಹೆಚ್ಚು ಗಂಭೀರರಾಗಿರುವುದಲ್ಲದೆ, ಯಾವಾಗಲೂ ಯಶಸ್ಸು ಪಡೆಯುವ ಬಗ್ಗೆ ಚಿಂತಿಸುತ್ತಾರೆ. ಈ ನಕ್ಷತ್ರದವರು ನಿಗದಿತ ಸಮಯಕ್ಕೆ ಮುಂಚಿತವಾಗಿ ಕೆಲಸವನ್ನು ಮುಗಿಸಲು ಪ್ರಯತ್ನಿಸುತ್ತಾರೆ. ಎದುರಾಗುವ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸುತ್ತಾರೆ.

ಇದನ್ನು ಓದಿ: ಈ ತಾರೀಖಿನಲ್ಲಿ ಹುಟ್ಟಿದವರು ದುಡ್ಡಿನ ವಿಷಯದಲ್ಲಿ ಬಹಳ ಲಕ್ಕಿ..! 

ಕುಟುಂಬದವರಿಗೆ ಪ್ರಾಮುಖ್ಯತೆ
ಮೂಲಾ ನಕ್ಷತ್ರದಲ್ಲಿ ಜನಿಸಿದವರು ಕುಟುಂಬದವರ ಸಣ್ಣ-ಪುಟ್ಟ ಬಯಕೆಗಳನ್ನು, ಅವಶ್ಯಕತೆಗಳನ್ನು ಪೂರೈಸುವಲ್ಲಿ ಮೊದಲಿಗರು. ಈ ನಕ್ಷತ್ರದಲ್ಲಿ ಜನಿಸಿದವರಿಗೆ ಸ್ನೇಹಿತರು ಕಡಿಮೆಯಾದರೂ, ಅವರ ಸಹಾಯಕ್ಕೆ ಸದಾ ಸಿದ್ಧರಿರುತ್ತಾರೆ. ಸುಲಭವಾಗಿ ಯಾವುದೇ ಬಂಧನಕ್ಕೂ ಸಿಲುಕಿಕೊಳ್ಳುವ ಜಾಯಮಾನ ಇವರದ್ದಾಗಿರುವುದಿಲ್ಲ. ಬಾಂಧವ್ಯಗಳಿಗೆ ಹೆಚ್ಚಿನ ಬೆಲೆ ನೀಡುವ ಇವರು ಅದನ್ನು ಉತ್ತಮವಾಗಿ ನಿಭಾಯಿಸುತ್ತಾರೆ. ಅಷ್ಟೇ ಅಲ್ಲದೆ ತಂದೆ-ತಾಯಿಯ ಮಾತಿಗೆ ಹೆಚ್ಚಿನ ಮನ್ನಣೆ ನೀಡುವ ಸ್ವಭಾವ ಈ ನಕ್ಷತ್ರದಲ್ಲಿ ಜನಿಸಿದವರದ್ದಾಗಿರುತ್ತದೆ. 

click me!