ಕುಲದೇವತೆಯನ್ನು ಆರಾಧಿಸಿ, ನಿಮ್ಮನ್ನು ಕಾಪಾಡಲು ಅದೇ ಸಾಕು!

By Suvarna News  |  First Published May 30, 2021, 4:08 PM IST

ಕೆಲವೊಮ್ಮೆ ನಮಗೆ ಸಂಕಷ್ಟಗಳ ಸರಮಾಲೆಯೇ ಎದುರಾಗುತ್ತದೆ. ಎಲ್ಲ ಪ್ರಯತ್ನಗಳನ್ನೂ ಮಾಡುತ್ತೇವೆ; ಅಂಥ ಹೊತ್ತಿನಲ್ಲಿ ನಿಮ್ಮ ನೆರವಿಗೆ ಬರುವವರೇ ಕುಲದೇವರು. ಕುಲದೇವತೆಯ ಧ್ಯಾನದಿಂದಲೇ ಮನಶ್ಶಾಂತಿ, ನೆಮ್ಮದಿ, ಕೆಲಸದಲ್ಲಿ ಗೆಲುವು, ಆರೋಗ್ಯ ಎಲ್ಲವೂ.


ನಮಗೆಲ್ಲರಿಗೂ ಒಬ್ಬ ಕುಲದೇವರು ಅಥವಾ ಕುಲದೇವತೆ ಇದ್ದೇ ಇರುತ್ತಾರೆ. ಅದು ನಮಗೆ ಗೊತ್ತಿರಬಹುದು, ಅಥವಾ ಗೊತ್ತಿಲ್ಲದಿರಬಹುದು. ನಿಮ್ಮ ಹಿರಿಯರು ಹೇಳಲು ಮರೆತಿರಬಹುದು. ಆದರೂ ಕುಲದೇವರು ಇರುವುದು ಖಚಿತ. ಕೆಲವೊಮ್ಮೆ ನಮಗೆ ಸಂಕಷ್ಟಗಳ ಸರಮಾಲೆಯೇ ಎದುರಾಗುತ್ತದೆ. ಎಲ್ಲ ಪ್ರಯತ್ನಗಳನ್ನೂ ಮಾಡುತ್ತೇವೆ; ಜೊತೆಗೆ ದೇವರ ಆರಾಧನೆ ಮಾಡಲು ಮುಂದಾದಾಗ, ಯಾವ ದೇವರನ್ನು ಧ್ಯಾನಿಸಬೇಕು ಎಂಬುದೇ ಹೊಳೆಯುವುದಿಲ್ಲ.

ಅಂಥ ಹೊತ್ತಿನಲ್ಲಿ ನಿಮ್ಮ ನೆರವಿಗೆ ಬರುವವರೇ ಕುಲದೇವರು. ಕುಲದೇವತೆಯ ಧ್ಯಾನದಿಂದಲೇ ಮನಶ್ಶಾಂತಿ, ನೆಮ್ಮದಿ, ಕೆಲಸದಲ್ಲಿ ಗೆಲುವು, ಆರೋಗ್ಯ ಎಲ್ಲವೂ. ಸಾಮಾನ್ಯವಾಗಿ ನರಸಿಂಹ, ದುರ್ಗಾಪರಮೇಶ್ವರಿ, ಗಣಪತಿ, ಮಹಾವಿಷ್ಣು, ಪರಮಶಿವ, ದುರ್ಗೆ ಹಾಗೂ ಆಕೆಯ ನಾನಾ ಅವತಾರಗಳು ಕುಲದೇವರಾಗಿರುತ್ತಾರೆ. ಇವರ ನಾಮಜಪದಿಂದ ಸರ್ವಸಿದ್ಧಿ. 

Tap to resize

Latest Videos

ಕುಲದೇವರ ನಾಮಜಪ
ಕುಲ ಎಂದರೆ ಮೂಲಾಧಾರ ಚಕ್ರ, ಶಕ್ತಿ ಅಥವಾ ಕುಂಡಲಿನಿ. ಕುಲ + ದೇವತೆ ಅಂದರೆ ಯಾವ ದೇವತೆಯ ಉಪಾಸನೆಯನ್ನು ಮಾಡುವುದರಿಂದ ಮೂಲಾಧಾರ ಚಕ್ರವು ಜಾಗೃತವಾಗುತ್ತದೆಯೋ ಅಥವಾ ಆಧ್ಯಾತ್ಮಿಕ ಉನ್ನತಿಯು ಪ್ರಾರಂಭವಾಗುತ್ತದೆಯೋ ಅವಳನ್ನು ಕುಲದೇವತೆ ಎನ್ನುತ್ತಾರೆ. ಗುರುಪ್ರಾಪ್ತಿಯಾಗಿದ್ದರೆ ಮತ್ತು ಗುರುಗಳು ಗುರುಮಂತ್ರವನ್ನು ಕೊಟ್ಟಿದ್ದರೆ ಗುರುಮಂತ್ರವನ್ನೇ ಜಪಿಸಬೇಕು. ಇಲ್ಲದಿದ್ದಲ್ಲಿ ಕುಲದೇವತೆಯ ನಾಮಜಪವನ್ನು ಪ್ರತಿದಿನ ಕನಿಷ್ಠ ೧ರಿಂದ ೨ ಗಂಟೆಗಳ ಕಾಲ ಸತತವಾಗಿ ಮಾಡಬೇಕು.

ಕೊನೆಯ ಶ್ವಾಸದವರೆಗೂ ಪ್ರತಿಯೊಬ್ಬರ ಜೊತೆಗಿರುವ ಪ್ರಾರಬ್ಧದ ತೀವ್ರತೆಯು ಕುಲದೇವತೆಯ ನಾಮಜಪದಿಂದಲೇ ಕಡಿಮೆಯಾಗುತ್ತದೆ. ಕುಲದೇವತೆಯು ಪೃಥ್ವಿತತ್ತ್ವದ ದೇವತೆಯಾಗಿರುವುದರಿಂದ ಅವಳ ನಾಮಜಪದಿಂದಲೇ ಸಾಧನೆಯನ್ನು ಆರಂಭಿಸುವುದರಿಂದ ಯಾವುದೇ ರೀತಿಯ ತೊಂದರೆಗಳಾಗುವುದಿಲ್ಲ. 

ನಿಮ್ಮ ಜನ್ಮರಾಶಿಗೆ ಸರಿಹೊಂದುವ ಸಾಕುಪ್ರಾಣಿ ಯಾವುದು? ಇಲ್ಲಿ ತಿಳಿಯಿರಿ ...
 

ನಾಮಜಪ ಮಾಡುವ ಪದ್ಧತಿ
ಕುಲದೇವತೆಯ ಹೆಸರಿಗೆ ಪ್ರಾರಂಭದಲ್ಲಿ ‘ಶ್ರೀ’ ಸೇರಿಸಬೇಕು. ಹೆಸರಿಗೆ ಚತುರ್ಥಿ ವಿಭಕ್ತಿ ಪ್ರತ್ಯಯವನ್ನು ಸೇರಿಸಿ, ಕೊನೆಗೆ ‘ನಮಃ’ ಎನ್ನಬೇಕು. ಉದಾಹರಣೆಗಾಗಿ, ಕುಲದೇವತೆಯು ‘ಗಣೇಶ’ ಆಗಿದ್ದರೆ ‘ಶ್ರೀ ಗಣೇಶಾಯ ನಮಃ|’, ಕುಲದೇವಿಯು ‘ಭವಾನಿ’ ಆಗಿದ್ದರೆ ‘ಶ್ರೀ ಭವಾನಿದೇವ್ಯೈ ನಮಃ’ ಎಂದು ಹೇಳಬೇಕು. ಚತುರ್ಥಿ ಪ್ರತ್ಯಯದ ಅರ್ಥವು ‘ಗೆ’ ಎಂದಾಗಿದೆ. ಯಾವ ದೇವತೆಯ ನಾಮಜಪವನ್ನು ಮಾಡುತ್ತೇವೆಯೋ, ಆ ‘ದೇವತೆಗೆ ನಮಸ್ಕಾರ’ ಎಂದು ಇದರ ಅರ್ಥವಾಗಿದೆ.
ಕುಲದೇವತೆಯು ಯಾರೆಂದು ಗೊತ್ತಿಲ್ಲದಿದ್ದರೆ ಇಷ್ಟದೇವತೆಯ ಅಥವಾ ‘ಶ್ರೀ ಕುಲದೇವತಾಯೈ ನಮಃ’ ಎಂದು ನಾಮಜಪ ಮಾಡಬೇಕು. ಅದು ಪೂರ್ಣವಾದ ನಂತರ ನಿಮ್ಮ ಕುಲದೇವತೆಯ ಹೆಸರು ಹೇಳುವವರು ಭೇಟಿಯಾಗುತ್ತಾರೆ ಅಥವಾ ಇನ್ಯಾವುದೋ ಒಂದು ರೀತಿಯಲ್ಲಿ ನಿಮಗೆ ನಿಮ್ಮ ಕುಲದೇವತೆ ಯಾರೆಂದು ತಿಳಿದೇ ತಿಳಿಯುತ್ತದೆ. 

ಭಾನುವಾರ ಹುಟ್ಟಿದವರು ಸುಖಿಗಳಾಗಿಯೇ ಇರ್ತಾರಾ? ...
 

ಕುಲದೇವರು ಮತ್ತು ಕುಲದೇವತೆ
ಕೇವಲ ಕುಲದೇವರು ಇದ್ದರೆ ಕುಲದೇವರ ನಾಮಜಪವನ್ನು ಮಾಡಬೇಕು ಮತ್ತು ಕೇವಲ ಕುಲದೇವಿ ಇದ್ದರೆ ಕುಲದೇವಿಯ ನಾಮಜಪವನ್ನು ಮಾಡಬೇಕು.ಯಾರಾದರೊಬ್ಬರಿಗೆ ಕುಲದೇವರು ಮತ್ತು ಕುಲದೇವಿ ಹೀಗೆ ಇಬ್ಬರೂ ಇದ್ದರೆ ಅವರು ಕುಲದೇವಿಯ ನಾಮಜಪವನ್ನು ಮಾಡಬೇಕು. ಚಿಕ್ಕವರಾಗಿದ್ದಾಗ ತಂದೆ-ತಾಯಿ ಇಬ್ಬರೂ ಇದ್ದರೂ ನಾವು ತಾಯಿಯಲ್ಲಿಯೇ ಹೆಚ್ಚು ಹಠ ಮಾಡುತ್ತೇವೆ. ಏಕೆಂದರೆ ತಾಯಿಯು ಬೇಗನೇ ಹಠವನ್ನು ಪೂರೈಸುತ್ತಾಳೆ. ಹಾಗೆಯೇ ಕುಲದೇವರಿಗಿಂತಲೂ ಕುಲದೇವಿಯು ಬೇಗನೇ ಪ್ರಸನ್ನಳಾಗುತ್ತಾಳೆ.

ಮಂಗಳವಾರ ಜನಿಸಿದವರು ಛಲಬಿಡದ ಹೋರಾಟಗಾರರು! ...

ಕುಲದೇವರು ಗಣೇಶ ಪಂಚಾಯತನ ಅಥವಾ ವಿಷ್ಣು ಪಂಚಾಯತನ ಈ ಪ್ರಕಾರ ಇದ್ದರೆ ಆ ಪಂಚಾಯತನದಲ್ಲಿನ ಪ್ರಮುಖ ದೇವತೆಗಳಾದ ಶ್ರೀ ಗಣೇಶ ಅಥವಾ ಶ್ರೀವಿಷ್ಣು ಇವರನ್ನು ಕುಲದೇವರೆಂದು ತಿಳಿದುಕೊಳ್ಳಬೇಕು. ಕುಲದೇವರು ಗೊತ್ತಿಲ್ಲದಿದ್ದರೆ ಕುಟುಂಬದಲ್ಲಿನ ಹಿರಿಯ ವ್ಯಕ್ತಿಗಳು, ಬಂಧುಗಳು, ಜಾತಿಬಾಂಧವರು, ಹಳ್ಳಿಗಳಲ್ಲಿನ ಹಿರಿಯ ವ್ಯಕ್ತಿಗಳು, ಪುರೋಹಿತರು ಮುಂತಾದವರಿಂದ ಕುಲದೇವರು ಯಾರು ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು.

ವಿವಾಹಿತೆಗೆ ಯಾವುದು ಹಿತ?
ಸ್ತ್ರೀಯು ವಿವಾಹವಾದ ನಂತರ ಅತ್ತೆ ಮನೆಯ ಕುಲದೇವರ ನಾಮಜಪವನ್ನು ಮಾಡಬೇಕೋ ಅಥವಾ ತವರು ಮನೆಯ ಕುಲದೇವರ ನಾಮಜಪವನ್ನು ಮಾಡಬೇಕೋ? ಸಾಮಾನ್ಯವಾಗಿ ವಿವಾಹದ ನಂತರ ಸ್ತ್ರೀಯರ ಹೆಸರು ಬದಲಾಗುತ್ತದೆ. ತವರು ಮನೆಯ ಎಲ್ಲವನ್ನೂ ತ್ಯಾಗ ಮಾಡಿ ಸ್ತ್ರೀಯು ಅತ್ತೆ ಮನೆಗೆ ಬರುತ್ತಾಳೆ. ಒಂದು ಅರ್ಥದಲ್ಲಿ ಅದು ಅವಳ ಪುನರ್ಜನ್ಮವೇ ಆಗಿರುತ್ತದೆ; ಆದುದರಿಂದ ಮದುವೆಯಾದ ಮೇಲೆ ಸ್ತ್ರೀಯು ಅತ್ತೆ ಮನೆಯ ಕುಲದೇವರ ನಾಮಜಪವನ್ನು ಮಾಡಬೇಕು. ಆದರೆ ಯಾರಾದರೊಬ್ಬ ಸ್ತ್ರೀಯು ಚಿಕ್ಕಂದಿನಿಂದಲೇ ನಾಮಜಪವನ್ನು ಮಾಡುತ್ತಿದ್ದರೆ ಅಥವಾ ಉನ್ನತ ಸಾಧಕಳಾಗಿದ್ದರೆ ಅವಳು ತನ್ನ ಮೊದಲಿನ ನಾಮಜಪವನ್ನೇ ಮುಂದುವರಿಸಬೇಕು. ಮದುವೆಗಿಂತ ಮೊದಲು ಅವಳಿಗೆ ಗುರುಗಳು ನಾಮಜಪವನ್ನು ಕೊಟ್ಟಿದ್ದರೆ ಆ ಜಪವನ್ನೇ ಮಾಡಬೇಕು.

ನಾಮಜಪ ಮತ್ತು ಪ್ರಾರ್ಥನೆಯಿಂದ ಸಾತ್ತ್ವಿಕ ಶಕ್ತಿಯು ಹೆಚ್ಚಾಗುವುದರಿಂದ ವ್ಯಕ್ತಿಯ ಪ್ರಭಾಮಂಡಲವೂ ಹೆಚ್ಚಾಗುವುದು. ನಮ್ಮ ಶರೀರದ ಸುತ್ತಲಿರುವ ಅನೇಕ ವಲಯಗಳಿಂದ ಪ್ರಭಾಮಂಡಲ ತಯಾರಾಗುತ್ತದೆ. ವೈಜ್ಞಾನಿಕ ಉಪಕರಣಗಳ ಆಧಾರದಲ್ಲಿ ನಾವು ಈ ಪ್ರಭಾಮಂಡಲವನ್ನು ಅಳೆಯಬಹುದು. 

click me!