
ಬಹುತೇಕ ಪ್ರತಿ ಹಿಂದೂಗಳ ಮನೆಯಲ್ಲೂ ಪ್ರತಿ ದಿನ ದೇವರ ಪೂಜೆ ನಡೆಯುತ್ತದೆ. ಪೂಜೆಗೆ ಹಿಂದೂ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆ ಇದೆ. ಪ್ರತಿಯೊಬ್ಬರು ಕೂಡಾ ತಾವು ನಂಬಿದಂತೆ, ನೋಡಿದಂತೆ ದೇವರನ್ನು ಪೂಜಿಸುತ್ತಾರೆ. ಆದರೆ, ಪೂಜೆಗೆ ಕೂಡಾ ಕೆಲ ನಿಯಮಗಳಿರುತ್ತವೆ. ಅದನ್ನು ಅದೇ ಕ್ರಮದಲ್ಲಿ ಮಾಡಿದಾಗ ಪೂಜಾ ಫಲಗಳು ದೊರಕುವ ಸಂಭಾವ್ಯ ಹೆಚ್ಚು. ಪೂಜೆಯ ನಂತರವೂ ಮನಸ್ಸು ಗೊಂದಲದಲ್ಲಿದೆ, ಯಾವುದೋ ಚಿಂತೆ ಕಾಡುತ್ತಿದೆ ಎಂದರೆ ಪೂಜಿಸುವಾಗ ನೀವೆಲ್ಲೋ ತಪ್ಪುತ್ತಿದ್ದೀರೆಂದರ್ಥ. ಪೂಜಿಸುವಾಗ ತಪ್ಪಾದರೆ ಹಣ ಕೈಲಿ ನಿಲ್ಲುವುದಿಲ್ಲ, ಬಯಸಿದ್ದು ದೊರೆಯುವುದಿಲ್ಲ, ಅಂದುಕೊಂಡ ಕಾರ್ಯಗಳಲ್ಲಿ ವಿಜಘ್ನ ಕಾಣಿಸುತ್ತದೆ. ಪೂಜೆ ಮಾಡುವಾಗ ಸಾಮಾನ್ಯವಾಗಿ ಆಗುವ ತಪ್ಪುಗಳು ಯಾವುವು ಹಾಗೂ ಸರಿಯಾದ ಕ್ರಮ ಯಾವುದು ಎಂಬುದರ ವಿವರ ಇಲ್ಲಿದೆ.
ದಿಕ್ಕಿನ(direction) ಬಗ್ಗೆ ಎಚ್ಚರವಿರಲಿ
ಮನೆಯಲ್ಲಿ ಯಾವಾಗಲೂ ದೇವರ ಕೋಣೆಯು ಈಶಾನ್ಯ(north-east) ದಿಕ್ಕಿಗಿರಬೇಕು. ಇದು ದೇವರಿಗೆ ಅತ್ಯಂತ ಪವಿತ್ರ ದಿಕ್ಕಾಗಿದೆ. ಈ ದಿಕ್ಕಿನಲ್ಲಿ ಪೂಜಾ ಕೋಣೆ ಇದ್ದಾಗ ಫಲ ಚೆನ್ನಾಗಿರುತ್ತದೆ. ಅದೇ ನೈಋತ್ಯ(south-west) ದಿಕ್ಕಿನಲ್ಲಿ ದೇವರ ಕೋಣೆಯಿದ್ದರೆ ಪೂಜಾ ಫಲಗಳು ಕಡಿಮೆಯಾಗುತ್ತವೆ.
ಮಡಿ ಉಡಬೇಕು
ತಲೆಗೆ ಸ್ನಾನ ಮಾಡಿ ಪೂಜೆ ಮಾಡಲು ಕೂರುವುದಾದರೆ ಕೂದಲಿಂದ ನೀರಿಳಿಯುತ್ತಿರಬಾರದು. ಚೆನ್ನಾಗಿ ಒಣಗಿಸಿಕೊಂಡ ಬಳಿಕವೇ ಪೂಜೆಗೆ ತೊಡಗಬೇಕು. ಕೆಲ ಪುರುಷರಿಗೆ ಸ್ನಾನ ಮಾಡಿ ಮೈಯೊರೆಸಿಕೊಂಡು ಟವೆಲ್(towel) ಉಟ್ಟುಕೊಂಡು ಬಂದು ಕುಳಿತು ದೇವರ ಪೂಜೆ ಮಾಡುವ ಅಭ್ಯಾಸ ಇರುತ್ತದೆ. ಆದರೆ, ಹೀಗೆ ಟವಲ್ ಉಟ್ಟು ಪೂಜಿಸಬಾರದು. ಬದಲಿಗೆ, ಮಡಿಯುಟ್ಟು ಪೂಜೆ ಮಾಡಬೇಕು.
Hindu Gods: ಯಾವ ದೇವರಿಗೆ ಯಾವ ಆಹಾರ ಇಷ್ಟ?
ಪೂರ್ವಾಭಿಮುಖ
ಪೂಜೆ ಮಾಡುವಾಗ ನಿಮ್ಮ ಮುಖ ಯಾವಾಗಲೂ ಪಶ್ಚಿಮ(west) ದಿಕ್ಕಿನ ಕಡೆ ಇರಬೇಕು. ಅಂದರೆ ದೇವರನ್ನು ಪೂರ್ವ(east) ದಿಕ್ಕಿಗೆ ಮುಖ ಹಾಕುವಂತೆ ಇಟ್ಟಿರಬೇಕು. ಅಷ್ಟೇ ಅಲ್ಲ, ದೇವರಿಗೆ ಬೆನ್ನು ಹಾಕಿ ಎಂದಿಗೂ ಕೂರಬಾರದು.
ಕೂರುವ ರೀತಿ
ಸಾಮಾನ್ಯವಾಗಿ ಜನರು ನೆಲದ ಮೇಲೆ ಕುಳಿತೇ ಪೂಜಿಸುವುದಿದೆ. ಆದರೆ, ಇದು ಸರಿಯಲ್ಲ. ಯಾವಾಗಲೂ ಸ್ವಚ್ಛವಾದ ಮಣೆಯೊಂದನ್ನು ಹಾಕಿಕೊಂಡು ಚಕ್ಕಳ ಮಕ್ಕಳ ಹಾಕಿಕೊಂಡೇ ದೇವರನ್ನು ಪೂಜಿಸಬೇಕು. ಪೂಜಿಸುವಾಗ ಹಣೆಯ ಮೇಲೆ ತಿಲಕವಿರಲೇಬೇಕು. ಹೆಣ್ಣು ಮಕ್ಕಳಾದರೆ ಕೈಯ್ಯಲ್ಲಿ ಬಳೆಗಳೂ ಇರಬೇಕು. ನಿಮ್ಮ ಎಡಭಾಗದಲ್ಲಿ ಗಂಟೆ, ಶಂಖ ಹಾಗೂ ಧೂಪವನ್ನು ಇಟ್ಟುಕೊಳ್ಳಬೇಕು. ಬಲ ಭಾಗದಲ್ಲಿ ನೀರಿನ ಕಮಂಡಲ ಮತ್ತು ಪೂಜಾ ಸಾಮಗ್ರಿಗಳನ್ನು ಇಟ್ಟುಕೊಳ್ಳಬೇಕು.
Business Astro: ಕ್ಲಿಕ್ ಆಗೋಕೆ ಜ್ಯೋತಿಷ್ಯದ ಟಿಪ್ಸ್
ದೀಪ(diya)
ಪೂಜಿಸಲು ಆರಂಭಿಸುವ ಮುನ್ನ ದೀಪ ಹಚ್ಚಿಕೊಳ್ಳಲೇ ಬೇಕು. ಬೆಳಗ್ಗೆ ಹಾಗೂ ಸಂಜೆ ಹೊತ್ತು ದೇವರ ಕೋಣೆಯಲ್ಲಿ ದೀಪ ಉರಿಯುತ್ತಿರಬೇಕು. ಅಷ್ಟೇ ಅಲ್ಲ, ಎರಡು ಅಥವಾ ಅದಕ್ಕಿಂತ ಹೆಚ್ಚು ದೀಪ ಹಚ್ಚುವಾಗ ಒಂದು ದೀಪದಿಂದ ಮತ್ತೊಂದು ದೀಪವನ್ನು ಹಚ್ಚಬಾರದು. ತುಪ್ಪದ ದೀಪವನ್ನು ನಿಮ್ಮ ಎಡಕ್ಕೆ ಇಡಬೇಕು.
ಪಂಚದೇವ
ಪ್ರತಿ ಬಾರಿ ಪೂಜಿಸುವಾಗಲೂ ಪಂಚ ದೇವರನ್ನು ಪೂಜಿಸಲೇಬೇಕು. ಅಂದರೆ ವಿಷ್ಣು(Lord Vishnu), ಗಣೇಶ, ಮಹಾದೇವ, ಸೂರ್ಯ ದೇವ ಹಾಗೂ ದುರ್ಗಾಮಾತೆಯನ್ನು ಪೂಜಿಸಬೇಕು. ಇವರೆಲ್ಲರನ್ನೂ ಸ್ಮರಿಸಿಕೊಂಡು ಪೂಜೆ ಮಾಡಬೇಕು. ಎಲ್ಲಕ್ಕಿಂತ ಮೊದಲು ಗಣೇಶ(Lord Ganesha) ಶ್ಲೋಕಗಳನ್ನು ಹೇಳಿಕೊಂಡು ಗಣಪತಿಗೆ ಕೈ ಮುಗಿದು ಮುಂದುವರಿಸಬೇಕು. ಇದರಿಂದ ಮನೆಯಲ್ಲಿ ಸದಾ ಸಂತೋಷ ತುಂಬಿರುತ್ತದೆ.
ಜಪ ನಿಯಮ
ಜಪ ಮಾಡುವಾಗ ಸಾಮಾನ್ಯವಾಗಿ ಬಹುತೇಕರು ಈ ತಪ್ಪನ್ನು ಮಾಡುತ್ತಾರೆ. ಅದೇ ಬಾಯಿಯಾಡಿಸುವುದು. ಆದರೆ, ಜಪ ಮಾಡುವಾಗ ಮನಸ್ಸಿನಲ್ಲೇ ಸ್ಮರಿಸಬೇಕು. ತುಟಿ ಬಿಚ್ಚಕೂಡದು. ಜಪದ ನಂತರ ಪೀಠದ ಕೆಳಗಿರುವ ಭೂಮಿಯನ್ನು ಎರಡೂ ಕೈಗಳಿಂದ ಮುಟ್ಟಿ ಕಣ್ಣಿಗೊತ್ತಿಕೊಳ್ಳಬೇಕು.