Hindu Gods‌: ಯಾವ ದೇವರಿಗೆ ಯಾವ ಆಹಾರ ಇಷ್ಟ?

By Suvarna News  |  First Published Jan 2, 2022, 1:53 PM IST

ಯಾವ ದೇವರಿಗೆ ಯಾವ ಆಹಾರ ಪದಾರ್ಥ ಇಷ್ಟ ಎಂದು ತಿಳಿದು ನೈವೇದ್ಯ ನೀಡುವುದರಿಂದ ದೇವರನ್ನು ಒಲಿಸಿಕೊಳ್ಳುವುದು ಸುಲಭವಾಗುತ್ತದೆ. 


ಹಿಂದೂಗಳಿಗೆ 36 ಕೋಟಿ ದೇವರು. ಇದು ಪ್ರತಿಯೊಬ್ಬರ ಭಾವನೆಯನ್ನೂ ಹಿಂದೂ ಧರ್ಮ ಗೌರವಿಸುವುದನ್ನು ಸೂಚಿಸುತ್ತದೆ. ಅದು ಪ್ರಕೃತಿ, ಪ್ರಾಣಿ, ಪಕ್ಷಿಗಳೆಲ್ಲದರಲ್ಲೂ ದೈವತ್ವವನ್ನು ಕಾಣುತ್ತದೆ. ಮನೆಗೆ ಪ್ರೀತಿ ಪಾತ್ರರು ಬಂದಾಗ ಅವರಿಗಿಷ್ಟವಾದ ಅಡುಗೆ ಮಾಡುತ್ತೇವೆ. ಅವರ ಇಷ್ಟದ ಸಿಹಿ ಮಾಡಿ ಬಡಿಸುತ್ತೇವೆ. ಅವರದನ್ನು ತಿಂದು ಸಂತೋಷ ಪಡುವುದನ್ನು ನೋಡಿ ಸಂತೋಷ ಪಡುತ್ತೇವೆ. ಹಾಗೆಯೇ ದೇವರನ್ನು ಕೂಡಾ ಅವರಿಗಿಷ್ಟವಾದ ಅಡುಗೆ ಮಾಡಿ ಮೆಚ್ಚಿಸಲು ಸಾಧ್ಯವಿದೆ. ನಮ್ಮ ಪ್ರೀತಿಯನ್ನು ಸೂಚಿಸಲು ಆಹಾರದಷ್ಟು ಪ್ರಮುಖ ವಿಧಾನ ಇನ್ನೊಂದೇನಿದೆ? ಆದರೆ, ಹಾಗೆ ಮಾಡಿ ನೈವೇದ್ಯ ಮಾಡುವ ಮುನ್ನ ಯಾವ ದೇವರಿಗೆ ಯಾವ ಅಡುಗೆ ಇಷ್ಟ ಎಂಬುದನ್ನು ತಿಳಿದುಕೊಳ್ಳಬೇಕು. 

ವಿಷ್ಣು(Lord Vishnu)
ವಿಷ್ಣುವಿಗೆ ಹಳದಿ ಬಣ್ಣ ಇಷ್ಟ. ಆತನಿಗೆ ಜೇನುತುಪ್ಪ, ಕಡ್ಲೇ ಬೇಳೆ, ಬಾಳೆಹಣ್ಣು ಹಾಗೂ ಒಣದ್ರಾಕ್ಷಿ ಎಂದರೆ ಪಂಚಪ್ರಾಣ. ಇದರ ಹೊರತಾಗಿಯೂ ಆಹಾರ ಪ್ರಿಯನಾಗಿರುವ ವಿಷ್ಣುವಿಗೆ ವಿಶೇಷ ಸಂದರ್ಭಗಳಲ್ಲಿ 56 ರೀತಿಯ ಆಹಾರ ಪದಾರ್ಥಗಳನ್ನು ತಯಾರಿಸಿ ನೀಡಲಾಗುತ್ತದೆ. ವಿಶೇಷವಾಗಿ ಪುರಿಯ ಜಗನ್ನಾಥ ದೇವಾಲಯದಲ್ಲಿ ಪ್ರತಿದಿನ ಜಗನ್ನಾಥನ ಭೋಜನ ಅದ್ಧೂರಿಯಾಗಿಯೇ ಇರುವುದನ್ನು ಕಾಣಬಹುದು. ವಿಷ್ಣು ಇರುವುದೇ ಕ್ಷೀರ ಸಾಗರದಲ್ಲಿ ಎಂಬ ನಂಬಿಕೆ ಇದೆ. ಹೀಗಾಗಿ ವಿಷ್ಣುವಿಗೆ ಹಾಲನ್ನು ಹಾಗೂ ಹಾಲಿನ ಪದಾರ್ಥಗಳಿಂದ ತಯಾರಿಸಿದ ಪಂಚಾಮೃತವನ್ನು ಕೂಡಾ ನೀಡಲಾಗುತ್ತದೆ. 

Tap to resize

Latest Videos

undefined

ಶಿವ(Lord Shiva) 
ಈ ಮಹಾಯೋಗಿಗೆ ಸರಳ ಆಭರಣ, ಸರಳ ಆಹಾರ ಇಷ್ಟ. ಏನನ್ನೇ ಭಕ್ತಿಯಿಂದ ಕೊಟ್ಟರೂ ಮೆಚ್ಚುವವನು ಈತ. ಶಾಸ್ತ್ರಗಳ ಪ್ರಕಾರ ಶಿವ ಕಂದಮೂಲ ಪ್ರಿಯ. ಈತನ ಮೆಚ್ಚಿನ ಆಹಾರಗಳೆಂದರೆ ಬಾಂಗ್, ಹಾಲು, ಥಂಡೈ, ಬಿಳಿ ಬಣ್ಣದ ಸಿಹಿ ತಿನಿಸುಗಳು(sweets). 

Hindu Festival: ಇಂದು ಎಳ್ಳಮಾವಾಸ್ಯೆ, ತೀರ್ಥಸ್ನಾನದಿಂದ ಪಾಪ ಪರಿಹಾರ

ಭಗವಾನ್ ಶನಿ(lord Shani)
ಶನಿ ಎಂದರೆ ಭಯ ಭಕ್ತಿ ಎರಡೂ ಹೆಚ್ಚು. ಆತ ನಮ್ಮ ಕರ್ಮಗಳಿಗನುಸಾರ ಯಾವುದೇ ಭೇದವಿಲ್ಲದೆ ಫಲ ನೀಡುವವನು. ಇವನಿಗೆ ಕಪ್ಪು(black) ಬಣ್ಣವೆಂದರೆ ಇಷ್ಟ. ಈತನ ತಾಯಿ ಛಾಯಾ ಗರ್ಭಿಣಿಯಾಗಿದ್ದಾಗ ಆಹಾರ ನೀರು ತ್ಯಜಿಸಿ ಹಲವಾರು ದಿನಗಳ ಕಾಲ ತಪಸ್ಸನ್ನು ಕೈಗೊಂಡಿದ್ದಳಂತೆ. ಅದೇ ಕಾರಣಕ್ಕೆ ಶನಿ ಕಪ್ಪಾಗಿ ಹುಟ್ಟಿದನೆಂದೂ, ಆತನಿಗೆ ಕಪ್ಪೆಂದರೆ ಇಷ್ಟವೆಂದೂ ಹೇಳಲಾಗುತ್ತದೆ. ಈತನಿಗೆ ಕರಿ ಎಳ್ಳಿನ ಉಂಡೆ, ಕಪ್ಪು ಬೇಳೆಕಾಳುಗಳಿಂದ ತಯಾರಿಸಿದ ಆಹಾರ ಪದಾರ್ಥಗಳು ಇಷ್ಟ.

ಸರಸ್ವತಿ(Goddess Saraswati)
ಈಕೆ ಜ್ಞಾನದಾತೆ. ಸರಳ ಆಹಾರ ಈಕೆಗಿಷ್ಟ. ತಾಜಾ ಹಣ್ಣುಗಳು(fresh fruits), ಅವಲಕ್ಕಿ ಹಾಗೂ ಮೊಸರು, ಕಿಚಡಿ ಸರಸ್ವತಿಯ ಇಷ್ಟ ಪದಾರ್ಥಗಳು. ಇದಲ್ಲದೆ ಬೂಂದಿ ಹಾಗೂ ಮಂಡಕ್ಕಿಯನ್ನೂ ಸರಸ್ವತಿ ಪೂಜೆಯಂದು ನೈವೇದ್ಯ ಮಾಡಲಾಗುತ್ತದೆ. 

Temples In India: ಈ ದೇವಾಲಯಗಳು ಪ್ರಸಾದದಿಂದಲೇ ಫೇಮಸ್‌

ದುರ್ಗಾಮಾತೆ(Maa Durga)
ವೈಷ್ಣವರು ಹಾಗೂ ಶೈವರ ಪ್ರಕಾರ ದುರ್ಗೆ ಸಸ್ಯಾಹಾರಿ(vegetarian). ಆದರೆ ಉಳಿದವರು ಆಕೆಯನ್ನು ಮಾಂಸಾಹಾರಿ ಎಂದುಕೊಳ್ಳುತ್ತಾರೆ. ಹಾಗಾಗಿ, ದುರ್ಗೆಗೆ ಕೋಳಿ, ಕುರಿಗಳನ್ನು ಬಲಿ ಕೊಡುವುದನ್ನು ನೋಡಿಯೇ ಇರುತ್ತೀರಿ. ಇದರ ಹೊರತಾಗಿ ಕಿಚಡಿ, ದಾಲ್, ಅನ್ನ, ಖೀರು ದುರ್ಗೆಗಿಷ್ಟ. 

ಲಕ್ಷ್ಮೀ(Goddess Lakshmi)
ಸಂಪತ್ತಿನ ಅಧಿದೇವತೆ ಲಕ್ಷ್ಮೀಗೆ ಖೀರು ಹಾಗೂ ಮಾಲ್ಪುವಾ ಇಷ್ಟ. ಮತ್ತಷ್ಟು ಪುರಾಣಗಳ ಪ್ರಕಾರ, ಆಕೆಗೆ ನೆಲ್ಲಿಕಾಯಿ ಹಾಗೂ ಮೆಣಸಿನಕಾಯಿ ಇಷ್ಟ.

ಕೃಷ್ಣ(Krishna)
ಕೃಷ್ಣನ ಇಷ್ಟ ಕಷ್ಟಗಳು ಎಲ್ಲರಿಗೂ ಗೊತ್ತು. ಈತನಿಗೆಅವಲಕ್ಕಿ, ಮಜ್ಜಿಗೆ, ಬೆಣ್ಣೆ, ಲಡ್ಡೂಗಳೆಂದರೆ ಪಂಚಪ್ರಾಣ. 

ಕಾಳಿ(Kaali)
ಕಾಳಿ ಸಸ್ಯಾಹಾರಿಯಾಗಿದ್ದು, ಅಕ್ಕಿಯಿಂದ ತಯಾರಿಸಿದ ಆಹಾರ ಪದಾರ್ಥಗಳು ಆಕೆಗಿಷ್ಟ. ಕಿಚಡಿ ಹಾಗೂ ಖೀರು ಆಕೆಗೆ ನೈವೇದ್ಯವಾಗಿ ನೀಡಬೇಕು. 

ಆಂಜನೇಯ(Lord Hanuman)
ಕೆಂಪು ಬಣ್ಣವೆಂದರೆ ಆಂಜನೇಯನಿಗೆ ಇಷ್ಟ. ಸೀತೆ ಸಿಂಧೂರ ಇಡುವುದರಿಂದ ರಾಮನಿಗೆ ಆಕೆ ಕಂಡರೆ ಇಷ್ಟವೆಂದು ಮುಗ್ಧವಾಗಿ ನಂಬುವ ಆಂಜನೇಯ, ಮೈ ತುಂಬಾ ಕುಂಕುಮ ಬಳಿದುಕೊಂಡಿದ್ದನಂತೆ. ಈತನಿಗೆ ಕೆಂಪು ಬೇಳೆಗಳಿಂದ ತಯಾರಿಸಿದ ಆಹಾರ ಖಾದ್ಯಗಳು, ಬೆಲ್ಲ, ದಾಳಿಂಬೆ, ಲಡ್ಡೂಗಳೆಂದರೆ ಇಷ್ಟ. 

ಗಣೇಶ(Lord Ganesha)
ಗಣೇಶನಿಗೇನಿಷ್ಟ ಎಂಬುದು ಬಹುತೇಕ ಎಲ್ಲರಿಗೂ ಗೊತ್ತೇ ಇದೆ. ಮೋದಕ, ಲಡ್ಡೂ ಎಂದರೆ ಗಣೇಶನಿಗೆ ಎಲ್ಲಿಲ್ಲದ ಇಷ್ಟ. ಇದಲ್ಲದೆ ಕಬ್ಬು, ಕಡಲೆ, ಬೆಲ್ಲ ಎಂದರೂ ಗಣೇಶನಿಗಿಷ್ಟ. 

click me!