ಈ ನಾಲ್ಕು ರಾಶಿಯವರ ಮೇಲೆ ಸದಾ ಇರತ್ತೆ ಶನಿ – ಬುಧ ಗ್ರಹಗಳ ಕೃಪೆ..!

By Suvarna NewsFirst Published Jul 5, 2021, 4:09 PM IST
Highlights

ಆಯಾ ರಾಶಿಗಳ ಅಧಿಪತ್ಯವನ್ನು ಒಂಭತ್ತು ಗ್ರಹಗಳು ಪಡೆದಿರುತ್ತವೆ. ಮಿಥುನ ರಾಶಿಗೆ ಬುಧ ಗ್ರಹವಾದರೆ, ಕುಂಭ ರಾಶಿಗೆ ಶನಿ ದೇವ ಅಧಿಪತಿಯಾಗಿದ್ದಾನೆ. ಹಾಗಾಗಿ ಪ್ರತಿ ರಾಶಿಯ ವ್ಯಕ್ತಿಗಳು ಅಧಿಪತಿ ಗ್ರಹದ ಅನುಗ್ರಹವನ್ನು ಪಡೆದಿರುತ್ತಾರೆ. ಅಷ್ಟೇ ಅಲ್ಲದೆ ಜೀವನದಲ್ಲಿ ಯಶಸ್ಸನ್ನು ಕಾಣಲು ಆಯಾ ಗ್ರಹಗಳ ಕೃಪೆಯು ಸಹ ಅಗತ್ಯವಿರುತ್ತದೆ. ಹಾಗಾದರೆ ಯಾವ ರಾಶಿಗೆ ಬುಧ ಮತ್ತು ಶನಿ ಅಧಿಪತಿಗಳಾಗಿದ್ದಾರೆ ಎಂಬುದನ್ನು ತಿಳಿಯೋಣ,,..

ಜ್ಯೋತಿಷ್ಯ ಶಾಸ್ತ್ರದಲ್ಲಿ ಹನ್ನೆರಡು ರಾಶಿಗಳಿವೆ. ಪ್ರತಿ ರಾಶಿಗೂ ಒಂದೊಂದು ಗ್ರಹಗಳು ಅಧಿಪತಿಗಳಾಗಿರುತ್ತವೆ. ಹಾಗಾಗಿ ಆ ಗ್ರಹಗಳ ಪ್ರಭಾವವು ರಾಶಿಚಕ್ರಗಳ ಮೇಲಾಗುತ್ತವೆ. ವ್ಯಕ್ತಿಯ ಜೀವನದಲ್ಲಾಗುವ ಘಟನೆಗಳು ರಾಶಿ ಮತ್ತು ಗ್ರಹಗಳಿಂದ ಪ್ರಭಾವಿತವಾಗಿರುತ್ತವೆ. ಆಯಾ ರಾಶಿಯವರಿಗೆ ಅಧಿಪತಿ ಗ್ರಹಗಳ ಕೃಪೆ ಇರುತ್ತದೆ. ಅಷ್ಟೇ ಅಲ್ಲದೆ ಬೇರೆ ಕೆಲವು ಗ್ರಹಗಳ ಅನುಗ್ರಹವು ಇರುತ್ತದೆ. ಹಾಗಾಗಿ ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ.

ಹೆಚ್ಚು ಬುದ್ಧಿವಂತರಾಗಿರುವ ಈ ರಾಶಿಗಳ ಮೇಲೆ ಶನಿ ಗ್ರಹದ ಮತ್ತು ಬುಧ ಗ್ರಹದ ಕೃಪೆ ಇರುತ್ತದೆ. ಈ ನಾಲ್ಕು ರಾಶಿಯ ವ್ಯಕ್ತಿಗಳು ಚತುರರು ಮತ್ತು ಪರಿಶ್ರಮಿಗಳು ಆಗಿರುತ್ತಾರೆ. ಹಾಗಾಗಿ ಈ ರಾಶಿಯವರು ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ.

ಇದನ್ನು ಓದಿ: ಈ ನಕ್ಷತ್ರದಲ್ಲಿ ಜನಿಸಿದವರು ಬುದ್ಧಿವಂತರು – ಸರ್ಕಾರಿ ಉದ್ಯೋಗ ಸಿಗುವ ಸಂಭವ ಹೆಚ್ಚು...! 

ಮಿಥುನ ರಾಶಿ
ಈ ರಾಶಿಯ ವ್ಯಕ್ತಿಗಳಿಗೆ ಬುಧ ಗ್ರಹದ ಪ್ರಭಾವ ಹೆಚ್ಚಿರುತ್ತದೆ. ಸಮಾಜದಲ್ಲಿ ಈ ರಾಶಿಯ ವ್ಯಕ್ತಿಗಳಿಗೆ ವಿಶೇಷ ಗೌರವಾದರಗಳಿರುತ್ತವೆ. ಎಲ್ಲರಿಗಿಂತ ಭಿನ್ನರಾಗಿ ಗುರುತಿಸಿಕೊಳ್ಳುತ್ತಾರೆ. ಈ ರಾಶಿಯವರು ಹೊಸತನ್ನು ಕಲಿಯಲು ಪ್ರಯತ್ನಿಸುತ್ತಿರುತ್ತಾರೆ. ಮಿಥುನ ರಾಶಿಯವರು ಬಹುಮುಖ ಪ್ರತಿಭೆಯನ್ನು ಹೊಂದಿರುತ್ತಾರೆ.  ಯಾವುದೇ ಗುರಿಯನ್ನಿಟ್ಟುಕೊಂಡರೆ ಅದರ ಬಗ್ಗೆ ಆಳವಾಗಿ ಯೋಚಿಸುತ್ತಾರೆ. ಅಷ್ಟೇ ಅಲ್ಲದೆ ಅದರಲ್ಲಿ ಯಶಸ್ಸನ್ನು ಕಾಣಲು ಸತತವಾಗಿ ಪ್ರಯತ್ನವನ್ನು ಜಾರಿಯಲ್ಲಿಟ್ಟುಕೊಂಡಿರುತ್ತಾರೆ. ಮಿಥುನ ರಾಶಿಯ ವ್ಯಕ್ತಿಗಳು ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಕೆಲಸವನ್ನು ನಿರ್ವಹಿಸಿದಲ್ಲಿ ಸಫಲತೆಯನ್ನು ಕಾಣುತ್ತಾರೆ. ಬುಧನ ಅನುಗ್ರಹವಿರುವ ಕಾರಣ ಚತುರತೆಯಿಂದ ಕಾರ್ಯವನ್ನು ಪೂರೈಸುವುದರ ಮೂಲಕ ಆಯಾ ಕ್ಷೇತ್ರದಲ್ಲಿ ಪ್ರಶಂಸೆಗೆ  ಪಾತ್ರರಾಗುತ್ತಾರೆ.



ಕನ್ಯಾ ರಾಶಿ
ಈ ರಾಶಿಯವರ ಅಧಿಪತಿ ದೇವರು ಬುಧ ಗ್ರಹವಾಗಿದೆ. ಬುಧ ಗ್ರಹದ ಕೃಪೆಯಿಂದ ಕನ್ಯಾ ರಾಶಿಯವರು ಹೆಚ್ಚು ಬುದ್ಧಿವಂತರು ಮತ್ತು ಪರಿಶ್ರಮಿಗಳಾಗಿರುತ್ತಾರೆ. ಜೀವನದ ಪ್ರತಿ ಹಂತದಲ್ಲೂ ನಿಯಮಗಳಿಗೆ ಬದ್ಧರಾಗಿರುತ್ತಾರೆ. ಅವುಗಳನ್ನು ಪಾಲಿಸುವಲ್ಲಿ ಪೂರ್ಣ ಶ್ರದ್ಧೆ ಮತ್ತು ನಿಷ್ಠೆಯನ್ನಿಟ್ಟಿರುತ್ತಾರೆ. ಹಾಗಾಗಿ ಈ ಮೂಲಕವೇ ಯಶಸ್ಸನ್ನು ಗಳಿಸುತ್ತಾರೆ. ಈ ರಾಶಿಯವರ ಯೋಚಿಸುವ ಕ್ಷಮತೆ ಉತ್ತಮವಾಗಿರುತ್ತದೆ. ಕನ್ಯಾ ರಾಶಿಯವರು ಉತ್ತಮ ನಾಯಕತ್ವದ ಗುಣವನ್ನು ಹೊಂದಿರುತ್ತಾರೆ. ಈ ರಾಶಿಯವರು ಪರಿಶ್ರಮದ ಬಲದಿಂದ ಜೀವನದಲ್ಲಿ ಉನ್ನತ ಮಟ್ಟವನ್ನು ತಲುಪುತ್ತಾರೆ.

ಇದನ್ನು ಓದಿ: ಪತ್ನಿಯ ರಾಶಿ ಇದಾಗಿದ್ದರೆ ಪತಿಗೆ ಅದೃಷ್ಟ – ಮನೆಯಲ್ಲಿ ಧನ-ಧಾನ್ಯ ವೃದ್ಧಿ..! 

ಮಕರ ರಾಶಿ
ಈ ರಾಶಿಯ ಅಧಿಪತಿ ಗ್ರಹ ಶನಿಗ್ರಹವಾಗಿದೆ. ಮಕರ ರಾಶಿಯವರು ಶ್ರಮದಿಂದ ಕೆಲಸವನ್ನು ನಿರ್ವಹಿಸುವುದರ ಜೊತೆಗೆ ನಿಯಮಗಳಿಗೆ  ಬದ್ಧರಾಗಿರುತ್ತಾರೆ. ಈ ರಾಶಿಯ ವ್ಯಕ್ತಿಗಳು ಉತ್ತಮ ನಿರ್ವಹಣೆ ಮಾಡುವ ಕಲೆಯನ್ನು ಹೊಂದಿರುತ್ತಾರೆ. ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸುವ ಗುಣ ಇವರಲ್ಲಿರುತ್ತದೆ. ಮಕರ ರಾಶಿಯವರು ಮಹತ್ವಾಕಾಂಕ್ಷೆಯುಳ್ಳವರಾಗಿರುತ್ತಾರೆ. ಹಾಗಾಗಿ ಈ ರಾಶಿಯವರು ಆರಿಸಿಕೊಂಡ ಕೆಲಸವನ್ನು ಪರಿಶ್ರಮದಿಂದ ನಿರ್ವಹಿಸಿ ಯಶಸ್ಸಿನ ಶಿಖರವನ್ನು ಏರುತ್ತಾರೆ. ಶನಿ ಗ್ರಹದ ಕೃಪೆಯನ್ನು ಹೊಂದಿರುವ ಕಾರಣ ಕೆಲಸಕ್ಕೆ ತಕ್ಕ ಪ್ರತಿಫಲವನ್ನು ಪಡೆಯುವುದಲ್ಲದೆ, ಉತ್ತವ ಜೀವನವನ್ನು ನಡೆಸುವಲ್ಲಿ ಸಫಲರಾಗುತ್ತಾರೆ.                 

ಇದನ್ನು ಓದಿ: ಸಂಖ್ಯಾಶಾಸ್ತ್ರದ ಈ ನಂಬರ್‌ಗೆ ಇವರು ಸೂಪರ್ ಜೋಡಿ..! 

ಕುಂಭ ರಾಶಿ
ಈ ರಾಶಿಯ ವ್ಯಕ್ತಿಗಳಿಗೆ ಶನಿದೇವನ ಕೃಪೆ ಸದಾ ಇರುತ್ತದೆ. ಶನಿಯು ಕುಂಭ ರಾಶಿಯ ಅಧಿಪತಿ ದೇವನಾಗಿದ್ದಾನೆ. ಈ ರಾಶಿಯ ವ್ಯಕ್ತಿಗಳ ವ್ಯಕ್ತಿತ್ವ ವಿಭಿನ್ನ ಮತ್ತು ಆಕರ್ಷಕವಾಗಿರುತ್ತದೆ. ಸಮಾಜದ ಇತರರಿಗಿಂತ ಭಿನ್ನವಾಗಿರುತ್ತದೆ ಇವರ ಸ್ವಭಾವ, ಗುಣ ಮತ್ತು ವ್ಯಕ್ತಿತ್ವ. ಹಾಗಾಗಿ ಈ ರಾಶಿಯವರು ಇತರರಿಗಿಂತ ವಿಶೇಷವೆಂದು ಗುರುತಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಹೊಸತನ್ನು ಮಾಡುವ ಮೂಲಕ ಸಮಾಜದ ಗೌರವಾದರಗಳನ್ನು ಪಡೆಯಲು ಉತ್ಸುಕರಾಗಿರುತ್ತಾರೆ. ಕುಂಭ ರಾಶಿಯವರು ಉತ್ತಮ ನಾಯಕತ್ವದ ಗುಣವನ್ನು ಹೊಂದಿರುತ್ತಾರೆ. ದೂರದರ್ಶಿತ್ವವನ್ನು ಹೊಂದಿರುವ ಇವರು ಸಮಯಕ್ಕೆ ಮೊದಲೇ ವಿಷಯಗಳನ್ನು ಗ್ರಹಿಸಿಕೊಳ್ಳುವ ಸೂಕ್ಷ್ಮ ಸ್ವಭಾವವನ್ನು ಹೊಂದಿರುತ್ತಾರೆ. ಸತತರ ಪರಿಶ್ರಮದಿಂದ ಜೀವನದಲ್ಲಿ ಉನ್ನತ ಮಟ್ಟವನ್ನು ತಲುಪುವಲ್ಲಿ ಯಶಸ್ವಿಯಾಗುತ್ತಾರೆ. 

click me!