ಈ ನಕ್ಷತ್ರದಲ್ಲಿ ಜನಿಸಿದವರು ಬುದ್ಧಿವಂತರು – ಸರ್ಕಾರಿ ಉದ್ಯೋಗ ಸಿಗುವ ಸಂಭವ ಹೆಚ್ಚು...!

By Suvarna News  |  First Published Jul 3, 2021, 1:34 PM IST

ಪರಿಶ್ರಮದ ಜೊತೆ ಅದೃಷ್ಟವು ಇರಬೇಕಾಗುತ್ತದೆ ಎಂಬ ಮಾತನ್ನು ಕೇಳಿರುತ್ತೇವೆ. ಕೆಲವರಿಗೆ ಹುಟ್ಟಿನಿಂದಲೇ ಅದೃಷ್ಟ ಜೊತೆಗಿರುತ್ತದೆ. ಹೆಚ್ಚಿನ ಶ್ರಮವಿಲ್ಲದೆ ಯಶಸ್ಸು ಮತ್ತು ಪರಿಶ್ರಮಕ್ಕೆ ತಕ್ಕ ಫಲ ಈ ನಕ್ಷತ್ರದಲ್ಲಿ ಜನಿಸಿದವರಿಗೆ ಸಿಗುತ್ತದೆ. ವಿಶಾಖಾ ನಕ್ಷತ್ರದಲ್ಲಿ ಜನಿಸಿದವರಿಗೆ ಅದೃಷ್ಟವು ಜೊತೆಗಿರುವುದಲ್ಲದೇ, ಸರ್ಕಾರಿ ಕೆಲಸ ದೊರೆಯುವ ಸಂಭವ ಹೆಚ್ಚಿರುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಹಾಗಾದರೆ ವಿಶಾಖಾ ನಕ್ಷತ್ರದವರ ಬಗ್ಗೆ ಇನ್ನಷ್ಟು ತಿಳಿಯೋಣ.


ವ್ಯಕ್ತಿಯ ವ್ಯಕ್ತಿತ್ವ ರೂಪುಗೊಳ್ಳುವುದಲ್ಲಿ ಜನಿಸಿದ ನಕ್ಷತ್ರದ ಪ್ರಭಾವ ಹೆಚ್ಚಿರುತ್ತದೆ. ನಕ್ಷತ್ರ ಗುಣವು ವ್ಯಕ್ತಿಯ ಸ್ವಭಾವದಲ್ಲಿ ಮೈಗೂಡಿರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ 27 ನಕ್ಷತ್ರಗಳಿವೆ. ಅದರಲ್ಲಿ ಪ್ರತಿಯೊಂದು ನಕ್ಷತ್ರವು ವಿಶೇಷ ಮತ್ತು ಭಿನ್ನವಾದ ಗುಣ-ಸ್ವಭಾವವನ್ನು ಹೊಂದಿರುತ್ತದೆ. ಹಾಗಾಗಿ ಸರ್ಕಾರಿ ಉದ್ಯೋಗ ಪಡೆಯುವ ಸಂಭವ ಹೆಚ್ಚಿರುವ ಈ ನಕ್ಷತ್ರದ ಬಗ್ಗೆ ತಿಳಿಯೋಣ..

ಹಲವು ಬಾರಿ ಎಷ್ಟೇ ಪರಿಶ್ರಮದಿಂದ ಕಾರ್ಯಗಳನ್ನು ಮಾಡಿದರೂ ಸಫಲತೆ ಪೂರ್ಣ ಪ್ರಮಾಣದಲ್ಲಿ ದೊರಕುವುದಿಲ್ಲ. ಅದೇ ಕೆಲವರಿಗೆ ಹೆಚ್ಚಿನ ಪರಿಶ್ರಮವಿಲ್ಲದೆ ಉತ್ತಮ ಉದ್ಯೋಗ, ಸಂಪತ್ತು, ಐಷಾರಾಮಿ ಜೀವನ ದೊರಕುತ್ತದೆ. ಅಂಥ ಕೆಲವರ ಪಟ್ಟಿಯಲ್ಲಿ ವಿಶಾಖಾ ನಕ್ಷತ್ರದಲ್ಲಿ ಜನಿಸಿದವರು ಇದ್ದಾರೆ.

ಹೌದು. ವಿಶಾಖಾ ನಕ್ಷತ್ರದಲ್ಲಿ ಜನಿಸಿದವರು ಭಾಗ್ಯವಂತರಾಗಿರುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಧನ-ಧಾನ್ಯ, ಸುಖ-ಸಮೃದ್ಧಿ, ಉದ್ಯೋಗ ಮುಂತಾದ ವಿಷಯಗಳಲ್ಲಿ ಈ ನಕ್ಷತ್ರದಲ್ಲಿ ಜನಿಸಿದವರು ಅದೃಷ್ಟವಂತರಾಗಿರುತ್ತಾರೆ. ಜ್ಯೋತಿಷ್ಯದ 27 ನಕ್ಷತ್ರಗಳಲ್ಲಿ ವಿಶಾಖಾ ನಕ್ಷತ್ರವು 16ನೇ ನಕ್ಷತ್ರವಾಗಿದೆ. ಈ ನಕ್ಷತ್ರದ ಮೂರು ಚರಣಗಳು ತುಲಾ ರಾಶಿಗೆ ಮತ್ತು ಕೊನೆಯ ಚರಣ ವೃಶ್ಚಿಕ ರಾಶಿಗೆ ಬರುತ್ತದೆ. 

ಇದನ್ನು ಓದಿ: ಪತ್ನಿಯ ರಾಶಿ ಇದಾಗಿದ್ದರೆ ಪತಿಗೆ ಅದೃಷ್ಟ – ಮನೆಯಲ್ಲಿ ಧನ-ಧಾನ್ಯ ವೃದ್ಧಿ..! 

ಶಿಕ್ಷಣದಲ್ಲಿ ಮೊದಲಿಗರು
ಈ ನಕ್ಷತ್ರದಲ್ಲಿ ಜನಿಸಿದವರು ಹೆಚ್ಚು ಬುದ್ಧಿವಂತರಾಗಿರುತ್ತಾರೆ. ವಿದ್ಯಾಭ್ಯಾಸದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುವ ವರ್ಗದವರು ವಿಶಾಖಾ ನಕ್ಷತ್ರದವರು. ಈ ನಕ್ಷತ್ರದಲ್ಲಿ ಹುಟ್ಟಿದವರು ಉನ್ನತ ಶಿಕ್ಷಣವನ್ನು ಪಡೆಯುತ್ತಾರೆ. ಅಷ್ಟೇ ಅಲ್ಲದೆ ಸರ್ಕಾರಿ ಉದ್ಯೋಗ ಪಡೆಯುವ ಯೋಗವು ಇವರಿಗಿರುತ್ತದೆ.

ನಕ್ಷತ್ರದ ಅಧಿಪತಿ ಗುರು
ವಿಶಾಖಾ ನಕ್ಷತ್ರಕ್ಕೆ ಅಧಿಪತಿ ಗುರುಗ್ರಹವಾಗಿದೆ. ಹಾಗಾಗಿ ಈ ನಕ್ಷತ್ರದಲ್ಲಿ ಹುಟ್ಟಿದವರು ಬುದ್ಧಿ ಮತ್ತು ಜ್ಞಾನದ ಬಲದ ಮೇಲೆ ಯಶಸ್ಸನ್ನು ಗಳಿಸುತ್ತಾರೆ. ಈ ನಕ್ಷತ್ರದವರು ಹಣವನ್ನು ಗಳಿಸುವುದರ ಜೊತೆಗೆ ಅದನ್ನು ಖರ್ಚು ಮಾಡುವುದರ ಬಗ್ಗೆಯೂ ಅಷ್ಟೇ ಗಮನವನ್ನು ಇಟ್ಟಿರುತ್ತಾರೆ. ಕಷ್ಟ ಕಾಲಕ್ಕೆಂದು ಹಣವನ್ನು ಉಳಿಸಿಕೊಂಡಿರುತ್ತಾರೆ. ವಿಶಾಖಾ ನಕ್ಷತ್ರದವರು ಶೇರ್-ಮಾರ್ಕೆಟ್‌ನಲ್ಲಿ ಲಾಭ ಗಳಿಸುವ ಸಂಭವವಿರುತ್ತದೆ. ಅಷ್ಟೇ ಅಲ್ಲದೆ ಇವರಿಗೆ ವ್ಯಾಪರಕ್ಕಿಂತ ಉದ್ಯೋಗವನ್ನು ಮಾಡಿದಲ್ಲಿ ಹೆಚ್ಚು ಲಾಭ ಪಡೆಯುತ್ತಾರೆ. ಸಾಮಾನ್ಯವಾಗಿ ಸರ್ಕಾರಿ ಉದ್ಯೋಗದ ಮೇಲೆ ಈ ನಕ್ಷತ್ರದವರಿಗೆ ಆಸಕ್ತಿ ಹೆಚ್ಚು.

ಇದನ್ನು ಓದಿ: ಸಂಖ್ಯಾಶಾಸ್ತ್ರದ ಈ ನಂಬರ್‌ಗೆ ಇವರು ಸೂಪರ್ ಜೋಡಿ..! 

ಮಾತಿನಲ್ಲಿ ಮಧುರತೆ
ವಿಶಾಖಾ ನಕ್ಷತ್ರದಲ್ಲಿ ಜನಿಸಿದವರು ಮೃದುವಾಗಿ ಮಾತನಾಡುವವರಾಗಿರುತ್ತಾರೆ. ಇನರ ಮಾತಿನಲ್ಲಿ ಮಧುರತೆ ಇರುತ್ತದೆ. ಹಾಗಾಗಿ ಇವರಿಗೆ ಹೆಚ್ಚು ಜನ ಸ್ನೇಹಿತರಿರುತ್ತಾರೆ. ಈ ನಕ್ಷತ್ರದವರು ಮಹತ್ವಾಕಾಂಕ್ಷಿಗಳು ಮತ್ತು ತಮ್ಮ ಗುರಿಯನ್ನು ಸಾಧಿಸಲು ನಿರಂತರವಾಗಿ ಶ್ರಮಿಸುತ್ತಾರೆ. ಇವರ ಶ್ರಮಕ್ಕೆ ಅದೃಷ್ಟವು ಸಾಥ್ ಕೊಡುತ್ತದೆ. ಕುಟುಂಬದ ಬಗ್ಗೆ ಉತ್ತಮ ಕಾಳಜಿಯನ್ನು ಹೊಂದಿರುತ್ತಾರೆ. ಮನೆಯವರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ಇಚ್ಛಿಸುತ್ತಾರೆ.
 

Tap to resize

Latest Videos

ಆರ್ಥಿಕ ಸ್ಥಿತಿ ಉತ್ತಮ
ವಿಶಾಖಾ ನಕ್ಷತ್ರದಲ್ಲಿ ಜನಿಸಿದವರು ಗುರಿ ತಲುಪಲು ದೃಢಸಂಕಲ್ಪದೊಂದಿಗೆ ಕೆಲಸಗಳನ್ನು ಮಾಡುತ್ತಾರೆ. ಅಂದುಕೊಂಡ ಲಕ್ಷ್ಯವನ್ನು ಸಾಧಿಸುವ ತನಕ ಸುಮ್ಮನೆ ಕೂರುವುದಿಲ್ಲ. ಹೆಚ್ಚು ಸಂಪಾದಿಸಬೇಕು, ಮತ್ತಷ್ಟು ಆಸ್ತಿ ಗಳಿಸಬೇಕೆಂಬ ಆಸೆ ಈ ನಕ್ಷತ್ರದವರಲ್ಲಿರುತ್ತದೆ. ಜನರ ಜೊತೆ ಉತ್ತಮವಾಗಿ ನಡೆದುಕೊಳ್ಳುವ ವಿಶಾಖಾ ನಕ್ಷತ್ರದವರು ಸಹಾಯ ಮಾಡಲು ಸದಾ ಸಿದ್ಧರಿರುತ್ತಾರೆ. ಹಾಗಾಗಿ ಇವರ ಕಷ್ಟದ ಸಮಯದಲ್ಲಿ ಸಹಾಯ ಸಿಗುತ್ತದೆ. ವಿಶಾಖಾ ನಕ್ಷತ್ರದವರ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಅಷ್ಟೇ ಅಲ್ಲದೆ ಆಕಸ್ಮಿಕ ಧನಲಾಭವಾಗುವ ಸಾಧ್ಯತೆ ಇರುತ್ತದೆ.

ಇದನ್ನು ಓದಿ: ಕಾಳ ಸರ್ಪ ಎಂಬುದು ದೋಷವೇ, ಯೋಗವೇ...? 

ಈ ಕ್ಷೇತ್ರಗಳು ಉತ್ತಮ
ವಿಶಾಖಾ ನಕ್ಷತ್ರದಲ್ಲಿ ಜನಿಸಿದವರಿಗೆ ಫ್ಯಾಶನ್ ಡಿಸೈನಿಂಗ್, ಮಾಡೆಲಿಂಗ್, ರೇಡಿಯೋ ಅಥವಾ ದೂರದರ್ಶನ, ರಾಜಕೀಯ,ನೃತ್ಯ, ಆರಕ್ಷಕ ಇತ್ಯಾದಿ ಕ್ಷೇತ್ರಗಳು ಲಾಭವನ್ನು ತಂದುಕೊಡುತ್ತದೆ.

click me!