ಒಂದೊಂದು ರಾಶಿಯು ಒಂದೊಂದು ವಿಶೇಷ ಗುಣಗಳನ್ನು ಹೊಂದಿರುತ್ತದೆ. ಈ ಕೆಲವು ರಾಶಿಯನ್ನು ಹೊಂದಿರುವ ಜನರನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ. ಇವರು ಯಾವ ಸಮಯದಲ್ಲಿ ಯಾವ ರೀತಿ ಯೋಚನೆ ಮಾಡುತ್ತಾರೆ ಎಂದು ತಿಳಿಯುವುದೇ ಒಂದು ಸವಾಲು. ನಿಮ್ಮ ಸ್ನೇಹಿತರು ಈ ರಾಶಿಯನ್ನು ಹೊಂದಿದ್ದಾರೆಯೇ..?
ನಿಮ್ಮ ಸುತ್ತಮುತ್ತಲಿನ (Surrounding) ಕೆಲವು ಜನರನ್ನು ಅವರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು ಹೇಗೆ ಎಂದು ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಬಹುಶಹ ಅವರ ಈ ಸ್ವಭಾವ ಅವರ ರಾಶಿ ಇಂದಲೇ ಬಂದಿರಬಹುದು. ಇಲ್ಲಿರುವ ಕೆಲವು ರಾಶಿಯ (Zodiac) ಜನರನ್ನು ಅರ್ಥಮಾಡಿಕೊಳ್ಳುವುದು, ಅವರ ಮನಸ್ಸನ್ನು ಓದುವುದು ಬಹಳ ಕಷ್ಟ. ನಿಮ್ಮ ಎದುರಿಗಿರುವ ವ್ಯಕ್ತಿಗೆ ಏನು ಯೋಚಿಸುತ್ತಿದ್ದಾರೆ ಎಂಬುದನ್ನು ಓದಲು ನಿಮಗೆ ಸಾಧ್ಯವೇ ಆಗುತ್ತಿಲ್ಲ ಎನ್ನುವಂಥ ಪರಿಸ್ಥಿತಿಯನ್ನು ನೀವು ಕೆಲವೊಮ್ಮೆ ಅನುಭವಿಸಿರುತ್ತೀರಿ. ಹಾಗಾದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಂಥ ವ್ಯಕ್ತಿತ್ವ ಹೊಂದಿರುವ ಜನರು ಯಾವ ರಾಶಿಯವರಾಗಿರುತ್ತಾರೆ ಎಂದು ತಿಳಿಯೋಣ.
ಧನು ರಾಶಿ (Sagittarius)
undefined
ಧನು ರಾಶಿ ಹೊಂದಿರುವ ಜನರನ್ನು ನೀವು ಅರ್ಥ ಮಾಡಿಕೊಳ್ಳಲು ಬಹಳ ಕಷ್ಟ. ಇವರು ನಿಮ್ಮ ಎದುರಿಗೆ ಒಂದು ರೀತಿಯಲ್ಲಿ ವರ್ತಿಸಬಹುದು. ಆದರೆ ಮನಸ್ಸಿನ ಒಳಗೆ ಬೇರೆಯದೇ ಆಲೋಚನೆಯಲ್ಲಿ ಇರುತ್ತಾರೆ. ಎದುರಿಗೆ ನಿಮ್ಮ ಜೊತೆಗೆ ಸ್ನೇಹದಿಂದ ಇರುವಂತೆ ಕಾಣಿಸಿದರೂ ಮನದಾಳದಲ್ಲಿ ನಿಮ್ಮ ಬಗ್ಗೆ ಅಸೂಯೆ ಹೊಂದಿರಬಹುದು. ನೀವು ಎಷ್ಟೇ ಕಷ್ಟಪಟ್ಟರೂ ಇವರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಇವರು ಹೆಚ್ಚಿನ ಸಂದರ್ಭದಲ್ಲಿ ಸತ್ಯ ಸಂಗತಿಯನ್ನು ಮುಚ್ಚಿಡಲು ಬಯಸುತ್ತಾರೆ.
ನಿಮಗೆ ಟ್ರಾವೆಲಿಂಗ್ ಹುಚ್ಚಿದ್ಯಾ? ಈ ರಾಶಿಯವರ ಸ್ನೇಹ ಬೆಳೆಸಬಹುದು!
ಮೇಷ ರಾಶಿ (Aries)
ನಿಮ್ಮ ಸುತ್ತಮುತ್ತಲಿರುವ ಮೇಷ ರಾಶಿಯ ಜನರನ್ನು ನೀವು ಗಮನಿಸಿರಬಹುದು. ಇವರನ್ನು ಅಷ್ಟು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಸ್ವಲ್ಪ ಒಗಟು ಸ್ವಭಾವವನ್ನು ಹೊಂದಿರುತ್ತಾರೆ. ನೀವು ಇವರ ಬಗ್ಗೆ ಅರ್ಥ ಮಾಡಿಕೊಳ್ಳಬೇಕು ಎಂದರೆ ಇವರಿಗೆ ನೀವು ಬಹಳ ಹತ್ತಿರದವರಾಗಿರಬೇಕು, ಇಲ್ಲವಾದರೆ ನೀವು ಎಷ್ಟೇ ಪ್ರಯತ್ನ ಪಟ್ಟರೂ ಇವರು ತಮ್ಮ ಬಗ್ಗೆ ಒಂದು ಸ್ವಲ್ಪವೂ ವಿಷಯ ಬಿಟ್ಟು ಕೊಡುವುದಿಲ್ಲ. ಅಷ್ಟು ಸುಲಭವಾಗಿ ಯಾವುದೇ ವ್ಯಕ್ತಿಯನ್ನು ಇವರು ನಂಬುವುದಿಲ್ಲ.
ಮಕರ (Capricorn)
ಇವರು ಆಗಾಗ ತಮ್ಮ ಬಣ್ಣ ಬದಲಾಯಿಸುತ್ತಾ ಇರುತ್ತಾರೆ. ಇವರು ತಮ್ಮ ನಿಜರೂಪದ ಬಗ್ಗೆ ಇತರರಿಗೆ ತೋರಿಸಿಕೊಳ್ಳುವುದಿಲ್ಲ. ಎದುರಿಗೆ ಮಾತನಾಡುವುದು ಒಂದು ರೀತಿಯಾದರೆ ಇವರ ಮನಸ್ಥಿತಿಯೇ ಬೇರೆ ರೀತಿಯಲ್ಲಿ ಇರುತ್ತದೆ. ಇವರನ್ನು ಅರ್ಥ ಮಾಡಿಕೊಳ್ಳಲು ನೀವು ತಲೆಕೆಳಗೆ ಮಾಡಿದರೂ ಸಾಧ್ಯವಿಲ್ಲ. ಆದರೆ ಅವರು ಒಮ್ಮೆ ನಿಮ್ಮ ಮೇಲೆ ನಂಬಿಕೆ (Trust) ಇಟ್ಟರೆ ಆಗ ಅವರ ನಿಜಸ್ವರೂಪವನ್ನು ನಿಮಗೆ ತೋರಿಸಿಕೊಡುತ್ತಾರೆ. ಹಾಗಂದ ಮಾತ್ರಕ್ಕೆ ಅವರು ಕೆಟ್ಟವರು ಎಂದರ್ಥವಲ್ಲ, ಅವರ ರಕ್ಷಣೆಗಾಗಿ (Protection) ಈ ಗುಣ ರೂಢಿಸಿಕೊಂಡಿರುತ್ತಾರೆ.
ವ್ಯಾಪಾರ, ವಿವಾಹ, ದೃಷ್ಟಿ ದೋಷ ನಿವಾಳಿಸಲು ಸರಳ Vastu Tips..
ಸಿಂಹ ರಾಶಿ (Leo)
ಸಿಂಹ ರಾಶಿಯ ಜನರು ನೀವು ಅವರೊಂದಿಗೆ ಹೇಗೆ ವರ್ತನೆ ಮಾಡಿದ್ದೀರಾ ಅದರ ಆಧಾರದ ಮೇಲೆ ನಿಮ್ಮ ಜೊತೆ ಅವರು ವರ್ತಿಸುತ್ತಾರೆ. ನೀವು ಅವರೊಂದಿಗೆ ಒಳ್ಳೆಯ ರೀತಿಯಲ್ಲಿ ಇದ್ದರೆ ಅವರು ನಿಮಗಿಂತ ಹೆಚ್ಚು ಒಳ್ಳೆತನ ತೋರಿಸುತ್ತಾರೆ, ಆದರೆ ನಿಮ್ಮಿಂದ ಅವರಿಗೆ ಕೇಡು ಕಾದಿದೆ ಎಂದು ತಿಳಿದರೆ ಅವರಷ್ಟು ಕೆಟ್ಟವರು ನಿನಗೆ ಬೇರೆ ಯಾರೂ ಸಿಗುವುದಿಲ್ಲ. ಒಂದು ಸಲಕ್ಕೆ ಅವರು ಹಲವಾರು ರೀತಿಯಲ್ಲಿ (Dimensions) ಯೋಚನೆ ಮಾಡುತ್ತಿರುತ್ತಾರೆ. ಅವರನ್ನು ಅರ್ಥ ಮಾಡಿಕೊಳ್ಳಲು ನಿಮ್ಮಿಂದ ಸಾಧ್ಯವಿಲ್ಲ. ಈ ರಾಶಿಯ ಜನರನ್ನು ಎದುರುಹಾಕಿಕೊಳ್ಳುವ ಮೊದಲು ಯೋಚಿಸಿ (Think) ನಿರ್ಧಾರ ತೆಗೆದುಕೊಳ್ಳಿ.
ಈ 4 ರಾಶಿಯವರು ಅಷ್ಟು ಸುಲಭವಾಗಿ ತಮ್ಮ ಮನಸ್ಸಿನ ಭಾವನೆಯನ್ನು ಇತರರಿಗೆ ಅರ್ಥವಾಗಲು ಬಿಡುವುದಿಲ್ಲ. ಇದು ಅವರು ಬೇರೆಯವರಿಗೆ ಕೆಡುಕು ಬಯಸುವ ಉದ್ದೇಶದಿಂದ ಮಾಡುವುದೆಲ್ಲ ಬದಲಿಕೆ ತಮ್ಮ ರಕ್ಷಣೆಗೆ ರೂಢಿಸಿಕೊಂಡಿರುವ ಸ್ವಭಾವವಾಗಿರುತ್ತದೆ. ಈ ರಾಶಿಯವರನ್ನು ಸ್ನೇಹಿತರನ್ನಾಗಿ (Friend) ಮಾಡಿಕೊಳ್ಳುವುದು ಹಾಗೂ ಶತ್ರುವನ್ನಾಗಿ (Enemy) ಮಾಡಿಕೊಳ್ಳುವುದು ನಿಮ್ಮ ವ್ಯಕ್ತಿತ್ವದ ಮೇಲೆ ನಿಂತಿರುತ್ತದೆ. ಸರಿಯಾಗಿ ಯೋಚಿಸಿ ನಿರ್ಧರಿಸಿ.