Zodiac sign: ಈ ರಾಶಿಗಳ ಮಂದಿಗೆ ಜನಸಮೂಹವೆಂದರೆ ಕಿರಿಕಿರಿ, ಅಲರ್ಜಿ

By Suvarna NewsFirst Published Sep 21, 2022, 6:05 PM IST
Highlights

ಜನರ ಒಡನಾಟ ಇಲ್ಲವಾದರೆ ಕೆಲವರು ಜನರಿಗೆ ತಲೆಚಿಟ್ಟು ಹಿಡಿಯಬಹುದು. ಆದರೆ, ಜನರೊಂದಿಗೆ ಒಡನಾಟವೇ ಕೆಲವರಿಗೆ ತಲೆನೋವಿನ ಕೆಲಸವಾಗಿರುತ್ತದೆ. ಕೆಲವು ಜನರಿಗೆ ಜನರೊಂದಿಗೆ ಬೆರೆಯಲು ಸಾಧ್ಯವಾಗುವುದಿಲ್ಲ. ಇದಕ್ಕೆ ಅವರ ರಾಶಿಗಳೇ ಕಾರಣ.
 

ಮನುಷ್ಯರು ಒಬ್ಬೊರು ಒಂದೊಂದು ವಿಧ. ಕೆಲವರು ಮೌನವನ್ನು ಇಷ್ಟಪಟ್ಟರೆ, ಕೆಲವರು ಮಾತನಾಡುತ್ತಲೇ ಇರುತ್ತಾರೆ. ತಮ್ಮ ಮಾತಿನಿಂದ, ಪ್ರಶ್ನೆಗಳಿಂದ ಮತ್ತೊಬ್ಬರನ್ನು ಸುಸ್ತು ಮಾಡುವವರು ಇರುವಂತೆಯೇ ಹೆಚ್ಚು ಜನರೊಂದಿಗೆ ಬೆರೆಯದೇ ತಮ್ಮದೇ ಸೀಮಿತ ವಲಯದಲ್ಲಿ ನೆಮ್ಮದಿಯಾಗಿರುವುದು ಹಲವರಿಗೆ ಇಷ್ಟ. ಇನ್ನು ಕೆಲವರಿಗೆ ಜನರೆಂದರೆ ಅಲರ್ಜಿ. ಹೆಚ್ಚು ಜನ ಸೇರುವಲ್ಲಿ ಇರುವುದೆಂದರೆ ಅವರಿಗೆ ಅಲರ್ಜಿ. ಅಂಥವರು ಜನರ ಮಧ್ಯೆ ಇರಲು ಏನೋ ಒಂದು ರೀತಿಯ ಆತಂಕ ಎದುರಿಸುತ್ತಾರೆ, ಕಂಫರ್ಟ್‌ ಆಗಿರುವುದಿಲ್ಲ. ಅವರು ಸಮಾರಂಭಗಳಿಗೆ ಹೋಗುವುದನ್ನು ಅವಾಯ್ಡ್‌ ಮಾಡುತ್ತಾರೆ. ಹಲವು ಜನರೊಂದಿಗೆ ಪ್ರವಾಸ ಹೋಗುವುದು ಅವರಿಗೆ ಇಷ್ಟವಾಗುವುದಿಲ್ಲ. ಸೀಮಿತ ಜನರೊಂದಿಗೆ ಮಾತ್ರ ಪ್ರವಾಸಕ್ಕೆ ಹೋಗಲು ಬಯಸುತ್ತಾರೆ. ಹಾಗೆಯೇ, ನೆಂಟರಿಷ್ಟರು, ಸ್ನೇಹಿತರ ವಲಯದಲ್ಲಿ ಆತ್ಮೀಯರ ಸಂಖ್ಯೆ ಕಡಿಮೆ ಇರುತ್ತದೆ. ಹೆಚ್ಚು ಜನ ಸೇರುವ ಸಂದರ್ಭದಲ್ಲಿ ಅವರು ಮಾನಸಿಕವಾಗಿ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ, ಸಿದ್ಧತೆ ಇಲ್ಲದೆ ಜನಜಂಗುಳಿಯಲ್ಲಿರಲು ಅವರಿಂದ ಸಾಧ್ಯವಾಗುವುದಿಲ್ಲ. ಅವರಿಗೆ ನಾಚಿಕೆ ಎಂದಲ್ಲ, ನಾಚಿಕೆಯನ್ನೂ ಮೀರಿದ ಅದೇನೋ ಹಿಂಸೆಯನ್ನು ಅವರು ಅನುಭವಿಸುತ್ತಾರೆ. ಈ ಸ್ವಭಾವದಿಂದಾಗಿ ಅವರ ದೈನಂದಿನ ಚಟುವಟಿಕೆ, ಆತ್ಮವಿಶ್ವಾಸ, ಉದ್ಯೋಗದ ಮೇಲೆ ಪರಿಣಾಮ ಉಂಟಾಗಬಹುದು. ಈ ಸ್ವಭಾವ ಕೆಲವು ರಾಶಿಗಳ ಜನರಲ್ಲಿ ಕಂಡುಬರುತ್ತದೆ. ಈ ರಾಶಿಗಳ ಮಂದಿ ಅಧಿಕ ಜನರೊಂದಿಗೆ ಬೆರೆಯುವುದಕ್ಕೆ ಆಸಕ್ತಿಯನ್ನೂ ತೋರುವುದಿಲ್ಲ, ಹಿಂಸೆಯನ್ನೂ ಅನುಭವಿಸುತ್ತಾರೆ. 

•    ಮೀನ (Pisces)
ಮೀನ ರಾಶಿಯ ಜನರು (People) ಹೊರಗೆ ಹೋಗಲು ಕೆಲವೊಮ್ಮೆ ಇಷ್ಟಪಡಬಹುದು. ಜನರೊಂದಿಗೆ ಬೆರೆಯಲೂಬಹುದು (Gathering). ಆದರೆ, ಇವರಿಗೆ ಸಾಮಾನ್ಯವಾಗಿ ಮನೆಯಲ್ಲಿ (Home) ಇರುವುದು ಇಷ್ಟವಾಗುತ್ತದೆ. ತಮ್ಮದೇ ಕಂಪೆನಿಯನ್ನು ಅವರು ಭಾರೀ ಎಂಜಾಯ್‌ (Enjoy) ಮಾಡುತ್ತಾರೆ. ಅಥವಾ ತಮ್ಮದೇ ನಿಗದಿತ ವಲಯದೊಂದಿಗೆ ಮಾತ್ರ ಒಡನಾಡಲು ಇಷ್ಟಪಡುತ್ತಾರೆ. ತಮ್ಮ ಆತ್ಮೀಯ ಸ್ನೇಹಿತರು (Friends) ಅಥವಾ ಕುಟುಂಬದ ಸದಸ್ಯರೊಂದಿಗೆ ತುಂಬ ಚೆನ್ನಾಗಿ ಬೆರೆಯುತ್ತಾರೆ. ಆದರೆ, ಒಂದೊಮ್ಮೆ ಆ ಗುಂಪಿಗೆ ಹೊಸಬರು ಪ್ರವೇಶಿಸಿದರೆ ಇವರು ಮುಕ್ತವಾಗಿ ಬೆರೆಯಲು ಹಿಂದೇಟು (Stay Away) ಹಾಕುತ್ತಾರೆ. ಆದರೆ, ಸಣ್ಣ ಸಣ್ಣ ವಿಚಾರಕ್ಕೂ ಬೇಸರವಾಗಲು ಆರಂಭವಾದಾಗ ಜನರೊಂದಿಗೆ ಒಡನಾಟ ಆರಂಭಿಸುತ್ತಾರೆ.

ಇದನ್ನೂ ಓದಿ: Zodiac Traits: ಜನರ ಗುಂಪಲ್ಲಿದ್ದಾಗ ವಿಲವಿಲ ಒದ್ದಾಡುವ ರಾಶಿಗಳಿವು..

•    ವೃಷಭ (Taurus)
ವೃಷಭ ರಾಶಿಯ (Zodiac Sign) ಜನ ಜನರೊಂದಿಗೆ ಬೆರೆಯುವುದನ್ನು ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನಿಸುತ್ತಾರೆ. ಸಮಾರಂಭಕ್ಕೆ ಹೊರಟು ನಿಂತಿದ್ದರೂ ಇದ್ದಕ್ಕಿದ್ದ ಹಾಗೆ ತಮ್ಮ ಪ್ಲಾನ್‌ ಬದಲಿಸಬಲ್ಲರು. ಸಮಾರಂಭಕ್ಕೆ ಹೋಗಲು ಆಸಕ್ತಿ ಇಲ್ಲವೆಂದಲ್ಲ, ಆದರೆ, ಅವರು ದೊಡ್ಡ ಜನಸಮೂಹ ಇದ್ದಾಗ ಒಂದು ರೀತಿಯ ಅಸ್ವಸ್ಥತೆ ಅನುಭವಿಸುತ್ತಾರೆ. ಇದರಿಂದಾಗಿ ಸಮಾರಂಭಗಳಿಗೆ ಹೋಗುವುದನ್ನು ಅವಾಯ್ಡ್‌ ಮಾಡುತ್ತಾರೆ. ತಾವು ಸಾಮಾಜಿಕವಾಗಿ ಮಾಡುವ ಎಡವಟ್ಟುಗಳಿಂದಾಗಿ ಜನಸಮೂಹದ ನಡುವೆ ಏಕಾಂಗಿತನ ಅನುಭವಿಸುತ್ತಾರೆ.

•    ಕರ್ಕಾಟಕ (Cancer)
ಈ ರಾಶಿಯ ಜನ ಮನೆಯಲ್ಲೇ (Home) ಸಮಯ ಕಳೆಯಲು ಭಾರೀ ಇಷ್ಟಪಡುತ್ತಾರೆ. ಇವರೇನೂ ಅಂತರ್ಮುಖಿ (Introvert) ಸ್ವಭಾವ ಹೊಂದಿರುವುದಿಲ್ಲ. ಆದರೂ ಸಾಮಾಜಿಕವಾಗಿ (Socially) ಜನರೊಂದಿಗೆ ಒಡನಾಡಲು (Interact) ಹಿಂದೇಟು ಹಾಕುತ್ತಾರೆ. ಮನೆಯಲ್ಲೇ ಗೆಟ್‌ ಟು ಗೆದರ್‌ ಮಾಡುವುದು ಇವರಿಗೆ ಇಷ್ಟ. ಮನೆಯಲ್ಲಿ ಜನ ಸೇರಿದರೆ ಆರಾಮಾಗಿ ಕಂಫರ್ಟ್‌ (Comfort) ಆಗಿರುತ್ತಾರೆ. ದೊಡ್ಡ ಸಮೂಹದೆದುರು ಏನಾದರೂ ಪ್ರದರ್ಶನ ಮಾಡುವುದು ಇವರಿಗೆ ಆಗುವುದಿಲ್ಲ.

ಇದನ್ನೂ ಓದಿ: ZODIAC PSYCOLOGY: ಈ ರಾಶಿಯ ಜನರು ಇತರರನ್ನು ಕಾಪಿ ಮಾಡೋದ್ರಲ್ಲಿ ನಿಪುಣ್ರಂತೆ

•    ಕುಂಭ (Aquarius)
ಈ ರಾಶಿಯ ಜನ ಬೇರೆಯವರೊಂದಿಗೆ ದೂರವಿರಲು ಬಯಸುತ್ತಾರೆ. ಹನ್ನೆರಡು ರಾಶಿಗಳ ಪೈಕಿ ಜನರೊಂದಿಗೆ ಒಡನಾಡಲು ಅತಿ ಹೆಚ್ಚು ಹಿಂದೇಟು ಹಾಕುವ ಪೈಕಿ ಎಂದರೆ ಇವರೇ. ಸೀಮಿತ ಆದರೆ ಆತ್ಮೀಯ ಕುಟುಂಬದ ಸದಸ್ಯರು (Family Member), ಸ್ನೇಹಿತರೊಂದಿಗೆ ಮಾತ್ರ ಒಡನಾಡಬಲ್ಲರು. ಇತರರೊಂದಿಗೆ ಸಂವಹನ ನಡೆಸಲು ಕಷ್ಟಪಡುತ್ತಾರೆ. ಹಾಗೂ ಅವರೊಂದಿಗೆ ಅಂತರ ಉಳಿಸಿಕೊಳ್ಳುತ್ತಾರೆ. ಶಾಂತ ಸ್ವಭಾವ, ರಿಸರ್ವ್‌ ನೇಚರ್‌ (Reserve Nature) ಹೊಂದಿದ್ದು, ಸಂಕೀರ್ಣ ವ್ಯಕ್ತಿತ್ವ (Coplex Personality) ಹೊಂದಿರುತ್ತಾರೆ. ಹೀಗಾಗಿ, ಸದಾಕಾಲ ಜನರೊಂದಿಗೆ ಒಡನಾಡುವುದು ಇವರಿಗೆ ಸಾಧ್ಯವಾಗುವುದಿಲ್ಲ. 

click me!