
ಕೆಲವರು ಸೆಕ್ಸ್ (sex) ವಿಚಾರದಲ್ಲಿ ಬಹಳ ಚುರುಕಾಗಿರುತ್ತಾರೆ. ಎಲ್ಲೆಲ್ಲಿಂದಲೋ ಓದಿ, ನೋಡಿ, ಕೆಲವೊಮ್ಮೆ ಅಪಾಯಕಾರಿ ರೀತಿಯಲ್ಲಿ ಪ್ರಯೋಗ ಮಾಡಿಯೂ ಹೊಸ ವಿಚಾರಗಳನ್ನು ಕಲಿತಿರುತ್ತಾರೆ. ಇನ್ನು ಕೆಲವರು ಮೊದಲಿನಿಂದಲೂ ಸೆಕ್ಸ್ ಬಗ್ಗೆ ಪ್ರಯೋಗಾತ್ಮಕವಾಗಿರುವುದು ಅಷ್ಟಕ್ಕಷ್ಟೇ.
ಇವರು ವೃತ್ತಿ ಇತ್ಯಾದಿಗಳ ಬಗ್ಗೆ ಚುರುಕಾಗಿದ್ದಷ್ಟು ಪ್ರಣಯ (romance) ಸಂಗತಿಗಳ ಬಗ್ಗೆ ಜ್ಞಾನ ಉಳ್ಳವರಾಗಿರುವುದಿಲ್ಲ. ಅವರ ಪ್ರವೃತ್ತಿ ಸಹ ರೊಮ್ಯಾಂಟಿಕ್ ವರ್ತನೆಗಳಿಂದ ದೂರ. ಅಂಥವರನ್ನು ಅವರ ಸಂಗಾತಿಗಳೇ ಸೆಕ್ಸ್‌ನಲ್ಲಿ ಮುಂದೆ ಕೊಂಡೊಯ್ಯಬೇಕಾಗುತ್ತದೆ. ಅಂಥವರ್ಯಾರು, ನೀವೂ ಅವರಲ್ಲೊಬ್ಬರಾ ಎಂದು ನೋಡಿ.
ವೃಷಭ ರಾಶಿ (Taurus)
ಈ ರಾಶಿಯವರು ಸ್ವಲ್ಪ ಒರಟು. ಹೀಗಾಗಿ ನಾಜೂಕುತನ ಕಲಿಯುವ ಅಗತ್ಯವಿದೆ. ವಿಶೇಷವಾಗಿ ಸೆಕ್ಸ್ ಸಂದರ್ಭದಲ್ಲಿ ಇದು ವ್ಯಕ್ತವಾಗುತ್ತದೆ. ಇವರು ಗಂಡಸರಾಗಿದ್ದರೆ ಇನ್ನಷ್ಟು ಕಷ್ಟ. ಇವರನ್ನು ನಾಜೂಕು ಸ್ವಭಾವದ ಹೆಣ್ಣುಮಕ್ಕಳು ತಾಳಿಕೊಳ್ಳುವುದು ಕಷ್ಟ. ಎಲ್ಲವೂ ಇವರಿಗೆ ಬೇಗ ಬೇಗ ಆಗಿಬಿಡಬೇಕು. ಹಾಗೇ ರಫ್ ಆಂಡ್ ಟಫ್ ಆಗಿ ವರ್ತಿಸುತ್ತಾರೆ. ಆದರೆ ಶೃಂಗಾರಕ್ಕೆ ಇದೆಲ್ಲಾ ಹೇಳಿ ಮಾಡಿಸಿದ್ದಲ್ಲ. ಅಲ್ಲಿ ಏನಿದ್ದರೂ ನಯ ನಾಜೂಕೇ ಪ್ರಧಾನ. ನೀವು ಸಂಗಾತಿಯ ಬಟ್ಟೆಯನ್ನು ಎಷ್ಟು ಬೇಗ ಬಿಚ್ಚಿಹಾಕುತ್ತೀರಿ ಎಂಬುದಲ್ಲ ಇಲ್ಲಿ ಮುಖ್ಯ; ಎಷ್ಟು ಕಲಾತ್ಮಕವಾಗಿ ತೆರೆಯುತ್ತೀರಿ ಎಂಬುದು ಮುಖ್ಯ!
ದಾಂಪತ್ಯ ಎಂಬ ಯಜ್ಞಕುಂಡದಲ್ಲಿ ಪ್ರೇಮದ ಬೆಂಕಿ ಉರಿಯುತ್ತಲೇ ಇರಬೇಕು!
ಸಿಂಹ ರಾಶಿ (Leo)
ನೀವು ಮೂಲತಃ ನಾಚಿಕೆಯ ಸ್ವಭಾವದವರು. ಮೊದಲಾಗಿ ನೀವು ಏನನ್ನೂ ಹೇಳುವುದೇ ಇಲ್ಲ. ಪ್ರಪೋಸ್ ಮಾಡುವಾಗಲೂ ಅಷ್ಟೆ. ನೀವು ಹಿಂದೇ ಉಳಿಯುವವರು. ಸಂಗಾತಿಯೇ ಮೊದಲು ಪ್ರಪೋಸ್ ಮಾಡಲಿ ಎಂದು ಕಾಯುವವರು. ಹೀಗಾಗಿ ನೀವು ಸೆಕ್ಸ್‌ನಲ್ಲೂ ಹಿಂದುಳಿಯುವ ಸಂಭವ ಹೆಚ್ಚು. ಆದರೆ ಪ್ರೀತಿ ಪ್ರೇಮ ಪ್ರಣಯದಲ್ಲಿ ನಾಚಿಕೆಗೆ ಹೆಚ್ಚಿನ ಪ್ರಾಧಾನ್ಯವಿಲ್ಲ. ಅವು ಸ್ವಲ್ಪ ಮಾತ್ರವೇ ಇದ್ದರೆ ಚೆನ್ನ. ಇಲ್ಲಿ ನೀವು ಎಷ್ಟು ಚೆನ್ನಾಗಿ ನಿಮ್ಮ ಆಸಕ್ತಿ, ಆಸೆ, ಬಯಕೆಗಳನ್ನು ಹಾಗೂ ಸೆಕ್ಷಯುಲ್ ಫ್ಯಾಂಟಸಿಗಳನ್ನು ಹೇಳಿಕೊಳ್ಳುತ್ತೀರಿ ಎಂಬುದು ಮುಖ್ಯ. ಬಾಯಿ ಬಿಡದೆ ಇಲ್ಲಿ ಏನೂ ಸಿಗದು!
ತುಲಾ ರಾಶಿ (Libra)
ನಿಮ್ಮಲಿ ಇಗೋ ತುಂಬಾ ಇದೆ. ಈ ಇಗೋ ಅಥವಾ ಅಹಂಕಾರ ಅಥವಾ ಧಿಮಾಕು, ಅನೇಕರ ಬದುಕನ್ನು ಹಾಳುಗೆಡವಿದೆ. ಸಾರಿ ಕೇಳಬೇಕಾದಲ್ಲಿ ಕೇಳುವುದಿಲ್ಲ. ಪ್ರೀತಿ ಅಭಿವ್ಯಕ್ತಪಡಿಸಬೇಕಾದಲ್ಲಿ ಅಭಿವ್ಯಕ್ತಿ ಮಾಡುವುದೇ ಇಲ್ಲ. ಬದಲಾಗಿ ಪ್ರೀತಿ ಕಾಣಿಸಬೇಕಾದಲ್ಲಿಯೂ ಒರಟಾಗಿ ಸಿಟ್ಟು ತೋರಿಸುತ್ತ ಓಡಾಡುವುದು ನಿಮ್ಮ ಪ್ರೀತಿ ಹಾಗೂ ಸೆಕ್ಸ್ ಲೈಫನ್ನು ಹಾಳು ಮಾಡುತ್ತದೆ. ನೀವು ಹೊರಗಿನ ಲೋಕದಲ್ಲಿ ಹೇಗಿದ್ದರೂ ಸರಿ. ಸಂಗಾತಿಯ ಜೊತೆಗೆ ಮಾತ್ರ ತಗ್ಗಿಬಗ್ಗಿಯೇ ವ್ಯವಹರಿಸಬೇಕು. ನೀವು ಎಷ್ಟೇ ದೊಡ್ಡ ಅಧಿಕಾರಿಯೇ ಆಗಿರಿ, ಸೆಕ್ಸ್ ವಿಚಾರದಲ್ಲಿ ಸಂಗಾತಿಗೆ ಅಡಿಯಾಳು ಆಗಿದ್ದರೇನೇ ಸುಖ ಸಿಗುವುದು!
ನವ ವಧುವರರಿಗೆ ಎದುರಾಗುವ ಶೃಂಗಾರ ಸಮಸ್ಯೆಗಳಿವು!
ಮಕರ ರಾಶಿ (Capricorn)
ನೀವು ಅನುಮಾನ ಪ್ರವೃತ್ತಿಯವರು. ಇದನ್ನು ಮಾಡಲೋ ಅದನ್ನು ಮಾಡಲೋ ಎಂದು ಸದಾ ಕಾಲ ದ್ವಂದ್ವದಲ್ಲಿಯೇ ಬಿದ್ದಿರುತ್ತೀರಿ. ಈ ದ್ವಂದ್ವ ಕೆಲವೊಮ್ಮೆ ಒಳ್ಳೆಯದು, ಆದರೆ ಸದಾಕಾಲ ಒಳ್ಳೆಯದೇನಲ್ಲ. ಇದರಿಂದಾಗಿ ಈ ಕ್ಷಣದ ಸುಖದಿಂದ ವಂಚಿತರಾಗುತ್ತೀರಿ. ಉದಾಹರಣೆಗೆ, ನಿಮ್ಮ ಗೆಳತಿ ನಿಮ್ಮನ್ನು ಪಾರ್ಕ್‌ನಲ್ಲಿ ಕಿಸ್ ಕೊಡಲು ಆಹ್ವಾನಿಸುತ್ತಾಳೆ ಎಂದಿಟ್ಟುಕೊಳ್ಳಿ. ನೀವು, ಯಾರಾದರೂ ನೋಡಿಬಿಟ್ಟಾರೆ ಎಂದು ಆತಂಕದಿಂದ ತಬ್ಬಿಬ್ಬಾಗಿ ಆ ಅವಕಾಶವನ್ನು ಬಳಸಿಕೊಳ್ಳುವುದೇ ಇಲ್ಲ. ಇದರಿಂದ ಸುಖದಿಂದ ನೀವೂ ವಂಚಿತರಾಗುವುದಲ್ಲದೆ, ಸಂಗಾತಿಯನ್ನೂ ವಂಚಿತರನ್ನಾಗಿಸುತ್ತೀರಿ. ಇಂಥ ದ್ವಂದ್ವ ಅನುಮಾನ ಬಿಟ್ಟುಬಿಡಬೇಕು.
ಕುಂಭ ರಾಶಿ (Aquarius)
ನೀವು ಆರೋಗ್ಯದ ವಿಚಾರದಲ್ಲಿ ಹೆಚ್ಚು ಭೀತಿ ಆತಂಕ ಹೊಂದಿರುವವರು. ನೀವು ಹೆಣ್ಣು ಆಗಿದ್ದರೆ, ಸೆಕ್ಸ್‌ನಿಂದಾಗಿ ಗರ್ಭ ಧರಿಸಬಹುದಾ ಎಂಬ ಆತಂಕದಲ್ಲೇ ಹೊತ್ತು ಕಳೆಯುತ್ತಿರುತ್ತೀರಿ. ಇದರಿಂದಾಗಿ, ಪಡೆಯಬೇಕಾದ ಸುಖದಿಂದ ವಂಚಿತರಾಗುತ್ತೀರಿ. ಸುರಕ್ಷಿತ ಸೆಕ್ಸ್‌ನಿಂದ ಯಾರಿಗೂ ಯಾವ ಸಮಸ್ಯೆಯೂ ಇಲ್ಲ.
ಲವ್ ಮ್ಯಾರೇಜ್ ಆಗಲು ಯೋಚ್ನೆ ಮಾಡ್ತಿದ್ದೀರಾ? ಹಾಗಿದ್ರೆ ಈ ವಿಷ್ಯ ನೆನಪಲ್ಲಿರಲಿ
ಈ ಅಂಶವನ್ನು ನೀವು ಕಲಿತುಕೊಳ್ಳಬೇಕಿದೆ. ಹಾಗೇ ಕೆಲವೊಮ್ಮೆ ಸೆಕ್ಸ್ ಕುರಿತ ಸಣ್ಣ ಸಣ್ಣ ಅಂಶಗಳೂ ನಿಮಗೆ ಗೊತ್ತಿಲ್ಲದೆ ಇರಬಹುದು. ಉದಾಹರಣೆಗೆ, ಸಂಭೋಗಿಸುವುದು ಹೇಗೆ ಎಂಬ ಒಂದು ಸರ್ವೇಸಾಮಾನ್ಯ ಮಾಹಿತಿಯೂ ನಿಮ್ಮಲ್ಲಿ ಇಲ್ಲದಿರಬಹುದು. ಇದನ್ನು ನೀವು ಕಲಿಯುವುದು ಇದೆ!