Vastu Tips : ಮನೆಯಲ್ಲಿ ಸಮಸ್ಯೆ ತರುವ ಈ ವಸ್ತುವನ್ನು ತಕ್ಷಣ ತೆಗೆದು ಹಾಕಿ

By Suvarna NewsFirst Published Aug 11, 2022, 4:55 PM IST
Highlights

ಪ್ರತಿಯೊಬ್ಬರೂ ಶ್ರೀಮಂತರಾಗಲು ಬಯಸ್ತಾರೆ. ಕೈತುಂಬ ಹಣ ಸಂಪಾದನೆ ಮಾಡುವ ಕನಸು ಕಾಣ್ತಾರೆ. ಆದ್ರೆ ಅನೇಕ ಬಾರಿ ಶ್ರೀಮಂತಿಕೆ ಕನಸು ನನಸಾಗೋದಿಲ್ಲ. ಇದಕ್ಕೆ ವಾಸ್ತು ದೋಷವೂ ಕಾರಣವಾಗುತ್ತೆ.
 

ದಿನವಿಡಿ ಕೆಲಸ ಮಾಡಿರ್ತೇವೆ. ಕೈ ತುಂಬ ಸಂಬಳ ಬಂದಿರುತ್ತೆ. ಆದ್ರೆ ದುಡಿದ ಹಣ ಕೈನಲ್ಲಿ ನಿಲ್ಲೋದಿಲ್ಲ. ಒಂದಲ್ಲ ಒಂದು ಕಾರಣಕ್ಕೆ ಆರ್ಥಿಕ ಮುಗ್ಗಟ್ಟು ಎದುರಾಗುತ್ತದೆ. ಇದು ಮನೆಯಲ್ಲಿ ಅನೇಕ ಬಿಕ್ಕಟ್ಟಿಗೆ ಕಾರಣವಾಗುತ್ತದೆ. ಕಷ್ಟಪಟ್ಟು ದುಡಿದ್ರೂ ನೆಮ್ಮದಿ ಜೀವನ ಇಲ್ಲ ಎನ್ನುವಂತಾಗುತ್ತದೆ. ಹಣದ ಕೊರತೆಯು ಮನೆಯ ಘರ್ಷಣೆ ಮತ್ತು ಅನೇಕ ಪರಸ್ಪರ ವಿವಾದಗಳಿಗೆ ಕಾರಣವಾಗಬಹುದು. ಹಣದ ಸಮಸ್ಯೆ, ಕೈನಲ್ಲಿ ಹಣ ನಿಲ್ಲದೆ ಇರುವುದು, ಆರ್ಥಿಕ ಸಮಸ್ಯೆ ಕಾರಣಕ್ಕೆ ಮನೆಯಲ್ಲಿ ಘರ್ಷಣೆ, ನೆಮ್ಮದಿ ಕಳೆದುಕೊಳ್ಳುವುದು ಇದೆಲ್ಲವಕ್ಕೂ ಮನೆಯ ವಾಸ್ತು ಕಾರಣವಾಗುತ್ತದೆ. ಮನೆಯಲ್ಲಿ ವಾಸ್ತು ಸರಿಯಿಲ್ಲವೆಂದ್ರೆ ಒಂದಲ್ಲ ಒಂದು ಸಮಸ್ಯೆ ಕಾಡುತ್ತದೆ. ವಾಸ್ತು ಅಂದ್ರೆ ಬರೀ ಮನೆಯ ಗೋಡೆ ಬದಲಿಸುವುದು, ಬಾಗಲು ಬದಲಿಸುವುದು ಎಂದರ್ಥವಲ್ಲ. ದಿಕ್ಕುಗಳ ಜೊತೆ ಮನೆಯಲ್ಲಿರುವ ಪ್ರತಿಯೊಂದು ವಸ್ತುವೂ ವಾಸ್ತುವಿನ ಅಡಿ ಬರುತ್ತದೆ. ಹಣದ ಸಮಸ್ಯೆ ಕಾಡಲು ಕಾರಣವೇನು ಎಂಬುದನ್ನು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಕೆಲ ವಸ್ತುಗಳು ನಿಮ್ಮ ಮನೆಗೆ ಹಣ ಬರುವುದನ್ನು ತಡೆಯುತ್ತದೆ. ಹಾಗಾಗಿ ಯಾವ ವಸ್ತುಗಳು ಆರ್ಥಿಕ ಸಮಸ್ಯೆ ಹೆಚ್ಚಿಸುತ್ತವೆ ಎಂಬುದನ್ನು ನಾವು ನೋಡೋಣ.

ಹಣ (Money) ದ ಸಮಸ್ಯೆಗೆ ಕಾರಣವಾಗುತ್ತೆ ಮನೆಯಲ್ಲಿರುವ ಈ ವಸ್ತು : 

ಒಣಗಿದ ಹೂವುಗಳು : ಹೂ (Flower) ಗಳು ಶುಭ ಸಂಕೇತ. ಪ್ರತಿಯೊಬ್ಬರ ಮನೆಯಲ್ಲೂ ದೇವರ ಪೂಜೆಗೆ ಹೂವನ್ನು ಬಳಸ್ತೇವೆ. ಅದು ಸೌಂದರ್ಯ ವರ್ಧಕವೂ ಹೌದು. ಮನೆ ಅಂದವಾಗಿ ಕಾಣಲಿ ಎನ್ನುವ ಕಾರಣಕ್ಕೆ ಅನೇಕರು ಮನೆಯಲ್ಲಿ ಹೂವನ್ನು ಅಲಂಕಾರದ ವಸ್ತುವಾಗಿ ಬಳಸ್ತಾರೆ. ತಾಜಾ ಹೂವಾಗಿದ್ದರೆ ಮಾತ್ರ ಅದು ಸೌಂದರ್ಯ ಹೆಚ್ಚಿಸುವ ಜೊತೆಗೆ ಶುಭ ಫಲ ನೀಡುತ್ತದೆ. ಅದೇ ಹೂವು ಒಣಗಿ ಹೋದರೆ  ಅವುಗಳನ್ನು ಮನೆಯಲ್ಲಿ ಇಡಬಾರದು. ಒಣಗಿದ ಹೂವುಗಳು ಅಶುಭದ ಸಂಕೇತವಾಗಿದೆ. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಂದು ವಾಸ್ತು ಶಾಸ್ತ್ರ (Vastu Shastra) ದಲ್ಲಿ ಹೇಳಲಾಗಿದೆ. 

Vaastu Tips for Bedroom: ಬೆಡ್‌ ರೂಮಿನಲ್ಲಿ ಧನಾತ್ಮಕ ವಾತಾವರಣ ಇರ್ಬೇಕು ಅಂದ್ರೆ ಹೀಗ್ಮಾಡಿ

ಮಹಾಭಾರತದ ಚಿತ್ರ :  ಮನೆಯಲ್ಲಿ ಮಹಾಭಾರತದ ಫೋಟೋ ಹಾಕುವುದು ತುಂಬಾ ಅಶುಭವೆಂದು ಪರಿಗಣಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಮಹಾಭಾರತದ ಚಿತ್ರವು ನಿಮ್ಮ ಮನೆಯಲ್ಲಿ ಉದ್ವಿಗ್ನತೆ, ಜಗಳ ಮತ್ತು ಚರ್ಚೆಯ ವಾತಾವರಣವನ್ನು ಸೃಷ್ಟಿಸುತ್ತದೆ. ಹಾಗಾಗಿ ಈ ಚಿತ್ರಗಳನ್ನು ನಿಮ್ಮ ಮನೆಯಲ್ಲಿ ಇಡಬೇಡಿ. ಮಲಗುವ ಕೋಣೆ, ಡ್ರಾಯಿಂಗ್ ಕೋಣೆಯಲ್ಲಿ ಅಂತಹ ಚಿತ್ರಗಳನ್ನು ಹಾಕಬಾರದು. ಇದು ಮನೆಯಲ್ಲಿ ಆರ್ಥಿಕ ಸಮಸ್ಯೆಯನ್ನೂ ಹೆಚ್ಚಿಸುತ್ತದೆ.

ತಾಜ್ ಮಹಲ್ ಫೋಟೋ : ಅನೇಕ ಜನರು ಮನೆಯಲ್ಲಿ ತಾಜ್ ಮಹಲ್ನ ಪೇಂಟಿಂಗ್ ಅನ್ನು ಸಹ ಹಾಕುತ್ತಾರೆ. ಆದರೆ ವಾಸ್ತು ನಂಬಿಕೆಗಳ ಪ್ರಕಾರ, ಈ ಚಿತ್ರವನ್ನು ಎಂದಿಗೂ ಮನೆಯಲ್ಲಿ ಇಡಬಾರದು. ಇದು ಬೇಗಂ ಮುಮ್ತಾಜ್ ಅವರ ಸಮಾಧಿಯಾಗಿದೆ. ಮನೆಯಲ್ಲಿ ಗೋರಿ ಅಥವಾ ಅದರ ಪೇಂಟಿಂಗ್  ಇಡುವುದ್ರಿಂದ ನಕಾರಾತ್ಮಕ ಶಕ್ತಿ ಮನೆಯಲ್ಲಿ ಹೆಚ್ಚಾಗುತ್ತದೆ. 

ನಿಂತ ನೀರು : ನಿಮ್ಮ ಮನೆಯ ಸುತ್ತಮುತ್ತ ನೀರು ನಿಂತರೆ ಅಥವಾ ಮತ್ತೆ ಮತ್ತೆ ನೀರು ನಿಲ್ಲುವ ಸ್ಥಳವಿದ್ದರೆ ಕೂಡಲೇ ಸರಿಪಡಿಸಿ. ಅಡುಗೆಮನೆಯಲ್ಲಿ, ಮನೆಯ ಅಂಗಳದಲ್ಲಿ, ಸ್ನಾನಗೃಹದಲ್ಲಿ ನೀರು ನಿಲ್ಲುವುದು ತುಂಬಾ ಅಶುಭವೆಂದು ಪರಿಗಣಿಸಲಾಗಿದೆ. ಈ ಸ್ಥಳಗಳಲ್ಲಿ ನೀರು ನಿಂತಿರುವುದರಿಂದ ನೀವು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಮದ್ವೆಯಾಗ್ತಿಲ್ವಾ? ಬಯಸಿದ ಸಂಗಾತಿ ಪಡೆಯಲು ಈ ಮಂತ್ರಗಳನ್ನು ಹೇಳಿಕೊಳ್ಳಿ..

ನಲ್ಲಿ ನೀರು : ನಿಮ್ಮ ಮನೆಯ ಟ್ಯಾಪ್‌ನಿಂದ ನೀರು ಸೋರಿದರೆ, ಅದು ಹಾಳಾಗುವ ಸಂಕೇತವೂ ಆಗಿರಬಹುದು. ಅಡಿಗೆ, ಸ್ನಾನಗೃಹ ಅಥವಾ ಇನ್ನಾವುದೇ ಟ್ಯಾಪ್‌ನಿಂದ ನೀರು ಸೋರಿಕೆಯಾದರೆ  ಅದು ತುಂಬಾ ಅಶುಭಕರ ಸಂಕೇತವಾಗಿದೆ. ಆರ್ಥಿಕ ಸಮಸ್ಯೆ ಎದುರಾಗುತ್ತದೆ ಎನ್ನುವ ಸೂಚನೆಯಾಗಿದೆ. 
 

click me!