Vaastu Tips for Bedroom: ಬೆಡ್‌ ರೂಮಿನಲ್ಲಿ ಧನಾತ್ಮಕ ವಾತಾವರಣ ಇರ್ಬೇಕು ಅಂದ್ರೆ ಹೀಗ್ಮಾಡಿ

By Suvarna News  |  First Published Aug 10, 2022, 6:16 PM IST

ಕಾಸ್ಮಿಕ್‌ ಎನರ್ಜಿಯ ಧನಾತ್ಮಕ ಶಕ್ತಿ ಮನೆಯಲ್ಲಿ ತುಂಬಿರಲು ವಾಸ್ತು ಶಾಸ್ತ್ರ ಹಲವಾರು ಸಲಹೆ ನೀಡುತ್ತದೆ. ನಿಮ್ಮ ಬೆಡ್‌ ರೂಮನ್ನು ಧನಾತ್ಮಕವಾಗಿ ಇಟ್ಟುಕೊಳ್ಳಲು ಕೆಲವು ಮಾರ್ಗೋಪಾಯ ಅನುಸರಿಸಿ. ಇದರಿಂದ ಒತ್ತಡ ಕಡಿಮೆಯಾಗುವ ಜತೆಗೆ ಚೆನ್ನಾಗಿ ನಿದ್ರೆಯೂ ಬರುತ್ತದೆ.
 
 


ವಾತಾವರಣದಲ್ಲಿ ಅದ್ಭುತ ಶಕ್ತಿಯಿದೆ. ಅದನ್ನೇ ಕಾಸ್ಮಿಕ್‌ ಎನರ್ಜಿ ಎಂದು ಕರೆಯಲಾಗುತ್ತದೆ. ಆ ಶಕ್ತಿಯನ್ನು ಅನುಭವಿಸುವುದು ನಮ್ಮಿಂದ ಸಾಧ್ಯವಿದೆ ಎಂದು ತಜ್ಞರು ಹೇಳುತ್ತಾರೆ. ಅನುಭವಿಸುವುದು ಎಂದರೆ ಕಾಸ್ಮಿಕ್‌ ಎನರ್ಜಿಯ ಮೂಲಕ ನಮ್ಮ ಜೀವನವನ್ನು ಸುಗಮಗೊಳಿಸಿಕೊಳ್ಳುವುದು ಸಾಧ್ಯ ಎನ್ನಲಾಗುತ್ತದೆ. ಕಾಸ್ಮಿಕ್‌ ಎನರ್ಜಿಗೆ ಪೂರಕವಾಗಿ ಕೆಲವು ಕ್ರಮಗಳನ್ನು ಕೈಗೊಳ್ಳುವ ಮೂಲಕ ಮನೆಯಲ್ಲಿ, ಮನದಲ್ಲಿ ಶಾಂತಿ, ಸಮೃದ್ಧಿ ನೆಲೆಸುವಂತೆ ಮಾಡಿಕೊಳ್ಳಬಹುದು. ವಾಸ್ತು ಶಾಸ್ತ್ರ ಮತ್ತು ಖಗೋಳ ಶಾಸ್ತ್ರ ಈ ನಿಟ್ಟಿನಲ್ಲಿ ಸಾಕಷ್ಟು ಮಾಹಿತಿ ನೀಡುತ್ತವೆ. ವಾಸ್ತು ಶಾಸ್ತ್ರವು ಭಾರತದ ಪುರಾತನ ಅಧ್ಯಯನ ವಿಭಾಗವಾಗಿದ್ದು, ಇಂದಿಗೂ ದಿನದಿಂದ ದಿನಕ್ಕೆ ಮನ್ನಣೆ ಗಳಿಸುತ್ತಲೇ ಸಾಗಿದೆ. ಇದು ನಿರ್ಮಾಣಕ್ಕೆ ಸಂಬಂಧಿಸಿದ ವಿನ್ಯಾಸ ವ್ಯವಸ್ಥೆ. ಇದನ್ನು ಸರಿಯಾಗಿ ಅಳವಡಿಕೆ ಮಾಡುವ ಮೂಲಕ ಮನೆಯಲ್ಲಿ ಧನಾತ್ಮಕ ಶಕ್ತಿ ಪ್ರವಹಿಸುವಂತೆ ಮಾಡಬಹುದು. ನಮ್ಮ ಮನೆಯಲ್ಲಿನ ಪ್ರತಿಯೊಂದು ಭಾಗವೂ ಪ್ರಮುಖವಾಗಿರುತ್ತವೆ. ಎಲ್ಲ ಭಾಗಕ್ಕೂ ಅದರದ್ದೇ ಆದ ಮಹತ್ವ ಇರುತ್ತದೆ. ಹಾಗೆಯೇ ಮಲಗುವ ಕೋಣೆಗೂ ಅದರದ್ದೇ ಆದ ಮಹತ್ವ ಇದೆ. ಅದು ನಮ್ಮ ವಿಶ್ರಾಂತಿಯ ತಾಣ. ರಕ್ಷಣಾತ್ಮಕ, ಸುಭದ್ರ ಭಾವನೆ ಮೂಡಿಸುವ ಸ್ಥಳ. ಹೀಗಾಗಿ, ಅದನ್ನು ವಾಸ್ತು ಶಾಸ್ತ್ರದ ಕೆಲವು ವಿಧಾನಗಳನ್ನು ಅನುಭವಿಸುವ ಮೂಲಕ ಧನಾತ್ಮಕ ಶಕ್ತಿ ಇರುವಂತೆ ನೋಡಿಕೊಳ್ಳಬೇಕು.

•    ಹಾಸಿಗೆಯ ಸ್ಥಳ (Placement of Bed)
ವಾಸ್ತು (Vastu) ಪ್ರಕಾರ, ಹಾಸಿಗೆಯನ್ನು ಬಾಗಿಲಿಗೆ (Door) ಎದುರಾಗಿರುವಂತೆ ಜೋಡಿಸಬಾರದು. ಸುಖವಾದ ನಿದ್ರೆ (Sound Sleep) ಬರಲು ದಕ್ಷಿಣ (South) ಅಥವಾ ಪೂರ್ವ (East) ದಿಕ್ಕಿಗೆ ತಲೆ ಮಾಡಿ ಮಲಗಬೇಕು. ನಿಮ್ಮ ಮಲಗುವ ಮಂಚ ಅಥವಾ ಹಾಸಿಗೆಯ ತುದಿ ಓರೆಕೋರೆಯಾಗಿ ಇರದಂತೆ ನೋಡಿಕೊಳ್ಳಿ. ಹಾಗೆಯೇ ಮೇಲ್ಭಾಗದಲ್ಲೂ ಏನಾದರೂ ಕ್ರಾಸ್‌ ಆಗುವಂತೆ ಇರಬಾರದು. ಉತ್ತರ (North) ದಿಕ್ಕಿಗೆ ಮುಖ ಮಾಡಿ ಹಾಸಿಗೆಯನ್ನು ಇರಿಸಬೇಡಿ. ಇದರಿಂದ ವಾತಾವರಣದ ಬಿಗುವಿನಿಂದ, ಒತ್ತಡದಿಂದ (Stress) ಕೂಡಿದಂತೆ ಆಗುತ್ತದೆ.

Tap to resize

Latest Videos

undefined

•    ವಾರ್ಡ್‌ ರೋಬ್‌ (Wardrobe) ಮತ್ತು ಅಲ್ಮೆರಾ
ಭಾರವಾದ ವಸ್ತುಗಳಾದ ಆಲ್ಮೆರಾ ಮತ್ತು ಕಪ್‌ ಬೋರ್ಡ್‌ ಗಳು ಬೆಡ್‌ ರೂಮಿನ ದಕ್ಷಿಣ, ನೈರುತ್ಯ (South-West) ಅಥವಾ ಪಶ್ಮಿಮ (West) ದಿಕ್ಕಿಗೆ ಇರುವಂತೆ ನೋಡಿಕೊಳ್ಳಿ. ನೀವು ಮನೆಯಲ್ಲಿ ಸುರಕ್ಷಿತರಾಗಿ ಇರಬೇಕೆಂದರೆ ದಕ್ಷಿಣ ದಿಕ್ಕನ್ನು ಸುರಕ್ಷಿತವನ್ನಾಗಿ ನೋಡಿಕೊಳ್ಳಿ. ಹಾಗೂ ಇದು ಉತ್ತರ ದಿಕ್ಕನ್ನು ತೆರೆದಿರುವಂತೆಯೂ ಇರಲಿ. ವಾಸ್ತು ಪ್ರಕಾರ, ಮಲಗುವ ಕೋಣೆಯನ್ನು ಅತ್ಯಂತ ನೆಮ್ಮದಿಯ ತಾಣವನ್ನಾಗಿ ಇಟ್ಟುಕೊಳ್ಳುವುದು ಮುಖ್ಯ. ಹೀಗಾಗಿ, ವಾರ್ಡ್‌ ರೋಬ್‌ ಬಾಗಿಲಿಗೆ ಕನ್ನಡಿ ಅಳವಡಿಸುವುದನ್ನು ತಪ್ಪಿಸಿ. ಇದರಿಂದ ನೆಗೆಟಿವ್‌ ಎನರ್ಜಿ ಹೆಚ್ಚುತ್ತದೆ.

•    ಕನ್ನಡಿ (Mirror) ಅಳವಡಿಕೆಯ ಕುರಿತು ಗಮನವಿರಲಿ
ನೀವು ಮಲಗಿರುವುದು ಕಾಣುವಂತೆ ಕನ್ನಡಿ ಇರುವುದು ಬೆಡ್‌ ರೂಮಿಗೆ ಶೋಭೆಯಲ್ಲ. ಇದರಿಂದ ನಿದ್ರಾಹೀನತೆ (Disturbed Sleep) ಉಂಟಾಗುತ್ತದೆ. ಉತ್ಪಾದಕ ಶಕ್ತಿ ಕುಸಿದು ನಿಮ್ಮ ಎನರ್ಜಿಗೆ (Energy) ಧಕ್ಕೆ ಆಗುತ್ತದೆ. ಒತ್ತಡ ಹೆಚ್ಚಾಗುತ್ತದೆ. ನೀವು ಯಾವ ಎನರ್ಜಿಯನ್ನು ಹೊಂದಿದ್ದೀರೋ ಅದನ್ನು ಕನ್ನಡಿಗಳು ಪ್ರತಿಫಲಿಸುತ್ತವೆ. ಹೀಗಾಗಿ, ವಾರ್ಡ್‌ ರೋಬಿಗೆ ಕನ್ನಡಿ ಇದ್ದರೆ ಅದು ಮುಚ್ಚಿರುವಂತೆ ನೋಡಿಕೊಳ್ಳಿ. ಅಥವಾ ಬೇರೆ ಮೂಲೆಗೆ ಸ್ಥಳಾಂತರ ಮಾಡಿ. ನಿಮ್ಮ ಡ್ರೆಸಿಂಗ್‌ ಟೇಬಲ್‌ ಹಾಸಿಗೆಗೆ ತಾಗಿರುವಂತೆ ಇರಬಹುದು. ಆದರೆ, ಅದರಲ್ಲಿರುವ ಕನ್ನಡಿ ನೆಲಕ್ಕೆ ತಾಗಿರದಂತೆ ನೋಡಿಕೊಳ್ಳಿ. ಕನ್ನಡಿ ನೆಲದಿಂದ ಐದು ಅಡಿ ಎತ್ತರದಲ್ಲಿ ಇರುವಂತೆ ನೋಡಿಕೊಳ್ಳಿ. ಹಾಗೆಯೇ ಎರಡು ಕನ್ನಡಿಗಳನ್ನು ಪರಸ್ಪರ ಎದುರಾಗಿರುವಂತೆಯೂ ಜೋಡಿಸಬೇಡಿ. ಇದರಿಂದ ಋಣಾತ್ಮಕ (Negative) ಶಕ್ತಿ ಹರಿದಾಡುತ್ತದೆ.

•    ಕೇಸರಿ ಬಣ್ಣ (Orange Color) ಆಯ್ಕೆ ಮಾಡಿ
ಕೇಸರಿ ಬಣ್ಣವು ಶಾಂತಿ (Peace) ಮತ್ತು ಸೌಹಾರ್ದತೆಯನ್ನು (Harmony) ಸೂಚಿಸುತ್ತದೆ. ಬೆಡ್‌ ರೂಮಿನಲ್ಲಿ ಕೇಸರಿ ಬಣ್ಣದ ವಸ್ತುಗಳನ್ನು, ಬಣ್ಣವನ್ನು ಅಲ್ಲಲ್ಲಿ ಇರುವಂತೆ ನೋಡಿಕೊಂಡರೆ ಉತ್ತಮ ನಿದ್ರೆ ಬರುತ್ತದೆ. ಹಾಗೂ ಆಶಾವಾದದ (Optimistic) ಪರಿಸರ ನಿರ್ಮಾಣವಾಗುತ್ತದೆ. ಕೇಸರಿ ಬಣ್ಣದ ಕುಶನ್‌ ಸೀಟ್‌, ಟೇಬಲ್‌ ಟಾಪ್‌ ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರೊಂದಿಗೆ ನೀಲಿ, ನೇರಳೆ, ಬಿಳಿ, ಹಸಿರು ಬಣ್ಣಗಳನ್ನು ಮಿಕ್ಸ್‌ ಮಾಡಿಕೊಳ್ಳಬಹುದು.

•    ಗ್ಯಾಜೆಟ್‌ ಅಥವಾ ಟಿವಿ (TV) ಬೇಡ
ಬೆಡ್‌ ರೂಮಿನಲ್ಲಿ ಟಿವಿ ಹಾಗೂ ಮೊಬೈಲ್‌ ಗೆ ಪ್ರವೇಶ ನೀಡಬಾರದು. ಇದರಿಂದ ನಿದ್ರೆಗೆ ಹಾನಿಯಾಗುತ್ತದೆ. ಒಟ್ಟಾರೆ ಎನರ್ಜಿಗೆ ಧಕ್ಕೆ ತರುತ್ತವೆ. ಒಂದೊಮ್ಮೆ ಈಗಾಗಲೇ ನಿಮ್ಮ ಕೋಣೆಯಲ್ಲಿ ಯಾವುದಾದರೂ ಗ್ಯಾಜೆಟ್‌ (Gadget) ಇದ್ದರೆ ಅದನ್ನು ಆಗ್ನೇಯ (South-East) ದಿಕ್ಕಿಗೆ ಮುಖ ಮಾಡಿ ಇಡಿ. 

click me!