Vastu tips: ಈ ಐದು ವಸ್ತುಗಳನ್ನು ಮುಖ್ಯ ದ್ವಾರದ ಬಳಿ ಇಟ್ಟರೆ ಮನೆಗೆ ಸಂಪತ್ತು ಖಚಿತ!

Published : Aug 10, 2022, 04:14 PM IST
Vastu tips: ಈ ಐದು ವಸ್ತುಗಳನ್ನು ಮುಖ್ಯ ದ್ವಾರದ ಬಳಿ ಇಟ್ಟರೆ ಮನೆಗೆ ಸಂಪತ್ತು ಖಚಿತ!

ಸಾರಾಂಶ

ನಿಮ್ಮ ಮನೆ ಮುಖ್ಯ ಪ್ರವೇಶ ದ್ವಾರದಲ್ಲಿ ಈ 6 ವಸ್ತುಗಳನ್ನು ಇರಿಸಿದರೆ, ಅವು ನಿಮ್ಮ ಜೀವನದಲ್ಲಿ ಸಮೃದ್ಧಿ, ಆರ್ಥಿಕ ಬೆಳವಣಿಗೆ ಮತ್ತು ಸಂಪತ್ತನ್ನು ಖಚಿತಪಡಿಸುತ್ತವೆ. 

ವಾಸ್ತು ನಮ್ಮ ಮನೆ ಮತ್ತು ಜೀವನದಲ್ಲಿ ಉತ್ತಮ ಕಂಪನಗಳನ್ನು ಖಾತ್ರಿಪಡಿಸುವ ವಿಜ್ಞಾನವಾಗಿದೆ. ಮತ್ತು ಇದು ಕಾರ್ಯಗತಗೊಳಿಸಲು ತುಂಬಾ ಪ್ರಾಯೋಗಿಕ ಮತ್ತು ತಾರ್ಕಿಕವಾಗಿದೆ. ಜನರಂತೆ ಶಕ್ತಿಯು ನಿಮ್ಮ ಮನೆಗೆ ಮುಖ್ಯ ಬಾಗಿಲಿನ ಮೂಲಕ ಪ್ರವೇಶಿಸುತ್ತದೆ ಎಂದು ಹೇಳಲಾಗುತ್ತದೆ. ವಾಸ್ತು ತತ್ವಗಳನ್ನು ಅನುಸರಿಸಲು ವಿನ್ಯಾಸಗೊಳಿಸಲಾದ ಪ್ರವೇಶ ದ್ವಾರವು ಉತ್ತಮ ಶಕ್ತಿಯ ಚಲನೆಯನ್ನು ಸುಗಮಗೊಳಿಸುತ್ತದೆ ಮತ್ತು ನಿಮ್ಮ ಮನೆಗೆ ಸಮೃದ್ಧಿಯನ್ನು ತರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಮನೆಯ ಮುಖ್ಯ ಪ್ರವೇಶ ದ್ವಾರದಲ್ಲಿ ಈ 6 ವಸ್ತುಗಳನ್ನು ಇರಿಸಿದರೆ, ಅವು ನಿಮ್ಮ ಜೀವನದಲ್ಲಿ ಸಮೃದ್ಧಿ, ಆರ್ಥಿಕ ಬೆಳವಣಿಗೆ ಮತ್ತು ಸಂಪತ್ತನ್ನು ಖಚಿತಪಡಿಸುತ್ತವೆ.

ಅಲಂಕಾರಿಕ ನೀರು ಮತ್ತು ಹೂವಿನ ಮಡಿಕೆ
ವಾಸ್ತು ಪ್ರಕಾರ ನೀರು ತುಂಬಿದ ಗಾಜಿನ ಮಡಕೆ ಮತ್ತು ಕೆಲವು ಹೂವಿನ ದಳಗಳನ್ನು ಅದರ ಮೇಲೆ ಹಾಕಿಡುವುದು ತುಂಬಾ ಒಳ್ಳೆಯದು. ಈ ವ್ಯವಸ್ಥೆಯು ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತದೆ ಮತ್ತು ನಿಮ್ಮ ಮನೆಯ ಪ್ರವೇಶದ್ವಾರವೂ ಉತ್ತಮವಾಗಿ ಕಾಣುತ್ತದೆ. ನೀರು ನಿಮ್ಮ ಮನೆ ಮತ್ತು ಕುಟುಂಬದ ಸದಸ್ಯರನ್ನು ಉತ್ತಮ ಆರೋಗ್ಯದಲ್ಲಿಡಲು ಸಹಾಯ ಮಾಡುತ್ತದೆ.

ತೋರಣ
ವಿಶೇಷವಾಗಿ ಹಬ್ಬಗಳು ಮತ್ತು ಆಚರಣೆಗಳಲ್ಲಿ ತೋರಣವನ್ನು ನೇತು ಹಾಕುವುದು ಭಾರತೀಯ ಮನೆಗಳಲ್ಲಿ ಬೆಳೆದು ಬಂದ ಸಂಪ್ರದಾಯವಾಗಿದೆ. ಋಣಾತ್ಮಕತೆಯನ್ನು ದೂರವಿರಿಸಲು ಮಾವು, ಅಶ್ವತ್ಥ ಅಥವಾ ಅಶೋಕ ಮರದ ಎಲೆಗಳಿಂದ ಮಾಡಿದ ತೋರಣವನ್ನು ನೇತು ಹಾಕಲಾಗುತ್ತದೆ. ಎಲೆಗಳು ಒಣಗಿದ ನಂತರ, ನೀವು ಅವುಗಳನ್ನು ಹೊಸದರೊಂದಿಗೆ ಬದಲಾಯಿಸಬಹುದು. ಈ ಎಲೆಗಳು ನಕಾರಾತ್ಮಕ ಕಂಪನಗಳನ್ನು ಹೀರಿಕೊಳ್ಳುತ್ತವೆ ಮತ್ತು ನಿಮ್ಮ ಮನೆಯನ್ನು ದುಷ್ಟ ಕಣ್ಣುಗಳಿಂದ ರಕ್ಷಿಸಲು ಸೂಕ್ತವಾಗಿರುತ್ತದೆ.

ಕೃಷ್ಣ ಜನ್ಮಾಷ್ಟಮಿ 2022: ಮನೆಯಲ್ಲಿ ಬಾಲ ಗೋಪಾಲನಿದ್ದರೆ, ಈ 6 ಕೆಲಸ ದಿನಾ ಮಾಡಬೇಕು!

ಲಕ್ಷ್ಮಿ ಪಾದಗಳು
ದೇವಿಯ ಆಶೀರ್ವಾದ ಪಡೆಯಲು ನಿಮ್ಮ ಮನೆಯ ಪ್ರವೇಶದ್ವಾರದಲ್ಲಿ ಲಕ್ಷ್ಮಿ ಪಾದಗಳ ಸ್ಟಿಕ್ಕರ್‌ಗಳನ್ನು ಅಂಟಿಸುವುದು ಅಥವಾ ರಂಗೋಲಿಯಲ್ಲಿ ಹಾಕುವುದು ಒಂದು ಆಚರಣೆಯಾಗಿದೆ. ಇದು ಸಂಪತ್ತಿನ ಬೆಳವಣಿಗೆ ಮತ್ತು ಮನೆಯ ಸಮೃದ್ಧಿಯನ್ನು ಖಾತ್ರಿಗೊಳಿಸುತ್ತದೆ. ಈ ಪಾದಗಳನ್ನು ಮಾಡುವುದರಿಂದ ದೇವತೆಗಳ ಗಮನವನ್ನು ಸೆಳೆಯಬಹುದಾಗಿದೆ. ಇದು ಗ್ರಹಗಳ ಚಲನೆಯ ದುಷ್ಪರಿಣಾಮಗಳನ್ನು ಕಡಿಮೆ ಮಾಡುತ್ತದೆ.

ಸ್ವಸ್ತಿಕ್ 
ಮನೆಯ ಪ್ರವೇಶದ್ವಾರದಲ್ಲಿ ಅರಿಶಿನದಿಂದ ಸ್ವಸ್ತಿಕ್ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ. ಸ್ವಸ್ತಿಕ್ ರೋಗ ಮತ್ತು ಶೋಕವನ್ನು ಕಡಿಮೆ ಮಾಡುತ್ತದೆ. ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ.

ದೊಡ್ಡ ಪ್ರವೇಶ ಬಾಗಿಲು
ನಿಮ್ಮ ಮನೆಯ ಮುಖ್ಯ ಪ್ರವೇಶ ದ್ವಾರವು ಮನೆಯ ಇತರ ಬಾಗಿಲುಗಳಿಗಿಂತ ದೊಡ್ಡದಾಗಿದ್ದರೆ, ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮತ್ತು ಬಾಗಿಲು ಪ್ರದಕ್ಷಿಣಾಕಾರವಾಗಿ ತೆರೆದರೆ, ಅದು ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಮನೆಯೊಳಗೆ ಬೆಳಕು ಪ್ರವೇಶಿಸಲು ಬಾಗಿಲಿನ ಎತ್ತರವನ್ನು ನೆಲದಿಂದ ಇರಿಸಿ.

ಶ್ರಾವಣ ಪೌರ್ಣಿಮೆ: ಲಕ್ಷ್ಮೀ ಒಲುಮೆಗಾಗಿ ಮಾಡಿ ಈ 5 ಕೆಲಸ

ಸಸ್ಯಗಳು
ಮುಖ್ಯ ಬಾಗಿಲಿನ ಎದುರು ಯಾವುದೇ ಕನ್ನಡಿಯನ್ನು ಇಡದಿರುವುದು ಉತ್ತಮ, ಏಕೆಂದರೆ ಅದು ಶಕ್ತಿಯು ಹಿಂತಿರುಗಲು ಕಾರಣವಾಗುತ್ತದೆ. ಕುಂಡದಲ್ಲಿ ಹಾಕಲಾದ ಹಸಿರು ಸಸ್ಯಗಳಿಂದ ಪ್ರವೇಶ ದ್ವಾರವನ್ನು ಅಲಂಕರಿಸಿ. ಇದು ಮನೆಗೆ ಧನಾತ್ಮಕತೆ ಆಕರ್ಷಿಸುತ್ತದೆ. ಇಲ್ಲಿ ತುಳಸಿ, ಅಪರಾಜಿತಾ ಗಿಡ, ತುಂಬೆ ಮುಂತಾದ ಸಸ್ಯಗಳು ಹೆಚ್ಚು ಶುಭಕರವಾಗಿವೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

PREV
Read more Articles on
click me!

Recommended Stories

Vastu for Wealth: ಈ 5 ವಸ್ತು ನಿಮ್ಮ ಮನೆಯಲ್ಲಿದ್ದರೆ ಸದಾ ತಿಜೋರಿ ತುಂಬಿರುತ್ತೆ
Vastu Tips: ಇವನ್ನೆಲ್ಲಾ ಫ್ರಿಡ್ಜ್ ಮೇಲಿಟ್ಟರೆ ನಿಮ್ಮ ಪರ್ಸ್ ಖಾಲಿಯಾಗೋದು ಗ್ಯಾರಂಟಿ, ಹುಷಾರು