Lucky body feature: ಎಂಥ ಸಾಮಾನ್ಯನನ್ನೂ ಸಿರಿವಂತನಾಗಿಸುವ ಅದೃಷ್ಟದೇವತೆಗಳಿವರು..

By Suvarna News  |  First Published Dec 19, 2021, 5:43 PM IST

ಸಾಮುದ್ರಿಕ ಶಾಸ್ತ್ರದ ಪ್ರಕಾರ, ಕೆಲ ವಿಶೇಷ ಚಿಹ್ನೆಗಳನ್ನು ದೇಹದಲ್ಲಿ ಹೊಂದಿರುವ ಹುಡುಗಿಯರು ತಮ್ಮ ಸಂಗಾತಿಯ ಪಾಲಿಗೆ ಅದೃಷ್ಟ ದೇವತೆಗಳಾಗುತ್ತಾರೆ. ಅಂಥ ಚಿಹ್ನೆ, ಮಚ್ಚೆ, ಕಲೆಗಳೇನು ನೋಡೋಣ.


ಹೊರಗೆ ಮಗಳನ್ನು ಕರೆದುಕೊಂಡು ಹೋದಾಗ, ನೋಡಿದ ಹಿರಿಯರು 'ಇವಳು ನಿಮ್ಮ ಪಾಲಿಗೆ ಅದೃಷ್ಟ ತರುತ್ತಾಳೆ, ಒಳ್ಳೆ ಹುಟ್ಟು ಮಚ್ಚೆ ಇದೆ, ಸೇರಿದ ಮನೆಗೆ ಸಮೃದ್ಧಿ ತರುತ್ತಾಳೆ' ಎಂದೆಲ್ಲ ಹೇಳಿರುವುದನ್ನು ನೀವು ಕೇಳಿರಬಹುದು. ಹಾಗೆ ಹೇಳಿದವರು ಸಾಮುದ್ರಿಕ ಶಾಸ್ತ್ರದ ಬಗ್ಗೆ ಕೊಂಚ ತಿಳಿದವರೇ ಇರುತ್ತಾರೆ. 

ಸಮುದ್ರ ಶಾಸ್ತ್ರ(Samudra shastra)ವು ವೇದ ಜ್ಯೋತಿಷ್ಯದ ಒಂದು ಭಾಗ. ಇದರಂತೆ, ವ್ಯಕ್ತಿಯ ಸದ್ಗುಣ, ದುರ್ಗುಣ, ಭವಿಷ್ಯ, ಅದೃಷ್ಟ ಎಲ್ಲವನ್ನೂ ಅವರ ದೇಹರಚನೆ, ಬಣ್ಣ, ದೇಹದ ಮೇಲಿರುವ ಚಿಹ್ನೆಗಳ ಆಧಾರದ  ಮೇಲೆ ಹೇಳಲಾಗುತ್ತದೆ. 

Latest Videos

undefined

ಈ ಸಾಮುದ್ರಿಕ ಶಾಸ್ತ್ರದಲ್ಲಿ ಹೇಳಿರುವಂತೆ, ಹುಡುಗಿಯರಲ್ಲಿರಬಹುದಾದ ಕೆಲ ವಿಶೇಷ ದೈಹಿಕ ಚಿಹ್ನೆಗಳು, ರಚನೆಗಳ ಆಧಾರದ ಮೇಲೆ ಅವರನ್ನು ಅದೃಷ್ಟ ದೇವತೆಗಳೆಂದು ಹೇಳಬಹುದು. ಇವರು ಲಕ್ಷ್ಮೀ ದೇವಿಯ ಅನುಗ್ರಹ ಪಡೆದು ಹುಟ್ಟಿರುತ್ತಾರೆ. ಈ ಹುಡುಗಿಯರನ್ನು ವಿವಾಹವಾದವರು ಸಂತೋಷವಾಗಿರುವುದಲ್ಲದೆ, ಹಣಕಾಸಿನ ಸಮಸ್ಯೆ ಎಂದೂ ಕಾಡದೆ ಸುಖವಾಗಿರುವರು. ಹಾಗಿದ್ದರೆ ಅಂಥ ಚಿಹ್ನೆಗಳೇನೇನು ನೋಡೋಣ..

ಹಣೆ(forehead)
ಯಾವ ಹುಡುಗಿಯ ಹಣೆಯು 3 ಬೆರಳುಗಳಿಗಿಂತಲೂ ಅಗಲವಾಗಿರುತ್ತದೋ, ಅರ್ಧ ಚಂದ್ರಾಕೃತಿಯಲ್ಲಿದ್ದು, ಬಹಳ ಮೃದುವಾಗಿರುತ್ತದೋ-  ಆ ಹುಡುಗಿ ಅದೃಷ್ಟವಂತೆ. ಅಂಥ ಹಣೆಯಿರುವ ಹುಡುಗಿ ತಾನು ಹೋದ ಮನೆಗೆ ಸಂತೋಷ, ಸಮೃದ್ಧಿಯನ್ನು ತರುತ್ತಾಳೆ. ಅವರ ಬುದ್ಧಿವಂತಿಕೆ ಹಾಗೂ ಪರಿಶ್ರಮ(hard work)ದ ಫಲ ಕುಟುಂಬದ ಹೆಸರನ್ನು ಬೆಳಗುತ್ತದೆ. 

ಕಣ್ಣಿನ ಬಣ್ಣ(eyes colour)
ಕಣ್ಣಿನ ಮೇಲೆ ಹಾಗೂ ಕೆಳಗಿನ ಭಾಗ ತಿಳಿ ಕೆಂಪು ಬಣ್ಣದಲ್ಲಿದ್ದು, ಕಣ್ಣಿನ ಪಾಪೆಯು ಸ್ವಚ್ಛ ಬಿಳುಪು ಹಾಗೂ ಕಪ್ಪನ್ನು ಹೊಂದಿದ್ದರೆ ಆ ಹುಡುಗಿ ನಿಜಕ್ಕೂ ಅದೃಷ್ಟ ದೇವತೆಯೇ. ಅದರಲ್ಲೂ ಆಕೆಯ ನಡು ಬಹಳ ತೆಳ್ಳಗಿದ್ದು, ವೇಗದಲ್ಲಿ ಹಕ್ಕಿಯಂತೆ ಚಾಲಾಕಿಯಾಗಿದ್ದರೆ, ಅವಳು ಎಲ್ಲ ರೀತಿಯ ಸುಖಸಂತೋಷವನ್ನೂ ಪಡೆಯುತ್ತಾಳೆ. 

2022 Horoscope: ಹೊಸ ವರ್ಷದಲ್ಲಿ ನಿಮ್ಮ ರಾಶಿಗೆ ಭವಿಷ್ಯ ಏನಿದೆ ನೋಡಿ..

ಉದ್ದನೆಯ ಕೊರಳು(long neck)
ಸಾಮಾನ್ಯವಾಗಿ ಉದ್ದ ಕತ್ತಿನ ಹುಡುಗಿ ಎಂದರೆ ಅತ್ತೆ ಮಾವಗೆ ಬೇಗದ ಓಕೆಯಾಗುತ್ತಾಳೆ, ಇದಕ್ಕೆ ಕಾರಣ ಉದ್ದ ಕೊರಳಿನ ಹುಡುಗಿಯರು ಅದೃಷ್ಟವಂತೆಯರು ಎಂಬ ನಂಬಿಕೆ. ಆಕೆ ಗಂಡನಿಗೆ ಬಹಳಷ್ಟು ಶುಭ ತರುವುದಲ್ಲದೆ, ಅವಳ ಅದೃಷ್ಟದ ಬಲದ ಮೇಲೆ ಆತ ತುಂಬಾ ಸಂಪಾದಿಸುತ್ತಾನೆ.

ಮೂಗಿನ ಮೇಲೆ ಮಚ್ಚೆ(mole on nose)
ಮೂಗಿನ ಮೇಲೆ ನೋಡಿದ ಕೂಡಲೇ ಕಾಣುವಂತೆ ಮಚ್ಚೆ ಇರುವವರು ಬಹಳ ಲಕ್ಕಿ. ಅಂಥ ಹುಡುಗಿಯರು ಲಕ್ಷ್ಮೀ ದೇವಿಯ ಅವತಾರದಂತೆಯೇ ಸರಿ. ಏಕೆಂದರೆ ಆಕೆ ಹೋದಲ್ಲೆಲ್ಲ ಸಂಪತ್ತು ತುಂಬುತ್ತದೆ. ಮೂಗಿನ ಮೇಲಿನ ಮಚ್ಚೆ ಸಂಪತ್ತು ಹಾಗೂ ಸಮೃದ್ಧಿಯ ಸೂಚಕವಾಗಿದೆ. 

Vaastu for Couple Bedroom: ದಾಂಪತ್ಯ ಸುಖ ಸದಾ ಇರಬೇಕೆಂದ್ರೆ ನವವಿವಾಹಿತರ ಕೋಣೆ ಹೀಗಿರಲಿ

ಕಾಲ್ಬೆರಳ ವಿನ್ಯಾಸ(toe texture)
ಸಾಮುದ್ರಿಕ ಶಾಸ್ತ್ರದಂತೆ, ಯಾವ ಹುಡುಗಿಯ ಕಾಲ್ಬೆರಳುಗಳು ಗೋಲಾಕಾರದಲ್ಲಿದ್ದು, ಸ್ವಲ್ಪ ಕೆಂಪಾಗಿರುತ್ತದೋ ಆಕೆ ಅದೃಷ್ಟವಂತೆ. ಪತಿಗೆ ಕೂಡಾ ಅದೃಷ್ಟವನ್ನು ತರುವವಳು. 

ಉದ್ದ ಬೆರಳು(long fingers)
ಹುಡುಗಿಯ ಕೈ ಬೆರಳುಗಳು ಉದ್ದುದ್ದ ಇದ್ದರೆ ನೋಡಲೆಷ್ಟು ಚೆನ್ನವೋ, ಅಷ್ಟೇ ಅದೃಷ್ಟ ಕೂಡಾ. ಅವಳ ಪತಿ ತನ್ನ ಉದ್ಯೋಗ, ವ್ಯಾಪಾರ, ವ್ಯವಹಾರ ಏನೇ ಇರಲಿ, ಅದರಲ್ಲಿ ಬಹಳಷ್ಟು ಪ್ರಗತಿ ಸಾಧಿಸುತ್ತಾನೆ. 

ಎಡಮಚ್ಚೆ(left mole)
ದೇಹದೆಲ್ಲೆಡೆ ಇರುವ ಮಚ್ಚೆಗಳಿಗೂ ಬೇರೆ ಬೇರೆ ಪ್ರಾಮುಖ್ಯತೆಗಳಿವೆ. ದೇಹದಲ್ಲಿ ಬಲಕ್ಕಿಂತ ಎಡಭಾಗದಲ್ಲಿ ಮಚ್ಚೆ ಹೆಚ್ಚಿದ್ದರೆ ಅದೃಷ್ಟ ಎನ್ನಲಾಗುತ್ತದೆ. ಮತ್ತು ಮುಖದಲ್ಲಿ ಬಲ ಭಾಗದಲ್ಲಿ ಮಚ್ಚೆ ಇದ್ದರೆ ಹೋದ ಮನೆಗೆ ಅದೃಷ್ಟ ತರುತ್ತಾಳೆ. 

ಪಾದದಲ್ಲಿ ಕಮಲ
ಪಾದದ ಅಡಿಯಲ್ಲಿ ಶಂಕ, ಚಕ್ರ, ಕಮಲದ ಚಿಹ್ನೆಗಳಿದ್ದರೆ ಅಂಥ ಮಹಿಳೆ ಉನ್ನತ ಹುದ್ದೆ ಗಳಿಸುವುದಷ್ಟೇ ಅಲ್ಲ, ಮನೆಯವರನ್ನು ಸುಖವಾಗಿಟ್ಟುಕೊಳ್ಳಬಲ್ಲಳು. 

click me!