Temple Special: ಶಿಲ್ಪಕಲೆಯ ಶ್ರೀವೀಡು ಬೇಲೂರು ಚೆನ್ನಕೇಶವ ದೇವಾಲಯ

By Suvarna NewsFirst Published Dec 19, 2021, 2:59 PM IST
Highlights

ಬಲ್ಲವರೇ ಬಲ್ಲರು ಬೆಲ್ಲದ ಸವಿಯ ಎಂಬಂತೆ ಬೇಲೂರು ದೇವಾಲಯವನ್ನು ನೋಡಿದವರಿಗೆ ಮಾತ್ರ ಅದರ ಅದ್ಧೂರಿ ಶಿಲ್ಪಕಲೆಯ ಆಕರ್ಷಣೆ ಅರಿವಾಗುವುದು. ಈ ಬೇಲೂರು ಚೆನ್ನಕೇಶವ ದೇವಾಲಯದ ವಿಶೇಷಗಳೇನು ಎಂಬ ವಿವರ ಇಲ್ಲಿದೆ..

ಈ ದೇವಾಲಯ ಕಟ್ಟಲೇ ಬರೋಬ್ಬರಿ 103 ವರ್ಷಗಳು ಬೇಕಾದವು. ಅಷ್ಟೂ ವರ್ಷದ ಶ್ರಮ, ಶಿಲ್ಪಿಗಳ ಬೆವರು ಎಲ್ಲವೂ ಇಂದಿಗೂ ಪ್ರತಿಫಲನವಾಗುವುದು ಈ ದೇವಾಲಯದ ಸೌಂದರ್ಯ ನೋಡಿದಾಗ. 
ಹೌದು, ಬೇಲೂರು ಚೆನ್ನಕೇಶವ ದೇವಾಲಯ(Belur Chennakeshava temple) ಎಂದರೆ ಹೊಯ್ಸಳ ಶಿಲ್ಪಕಲೆಯ ಅದ್ಧೂರಿತನದ ಪ್ರದರ್ಶನ. 12ನೇ ಶತಮಾನದಲ್ಲಿ ಹೊಯ್ಸಳ ಆಳ್ವಿಕೆ ನಡೆಸುತ್ತಿದ್ದ ರಾಜಾ ವಿಷ್ಣುವರ್ಧನನ ಕನಸಿನ ಕೂಸು ಈ ಬೇಲೂರು ಚೆನ್ನಕೇಶವ ದೇವಾಲಯ. ಆಗಿನ ಕಾಲದಲ್ಲಿ ಬೇಲೂರು ಹೊಯ್ಸಳ(Hoysala)ರ ರಾಜಧಾನಿ ಆಗಿತ್ತು. ಇಂದಿಗೂ ಕೂಡಾ ಅಂದಿನ ರಾಜವೈಭೋಗವನ್ನು ಸಾರುವಂತೆ ಆಡಂಬರದ ಶಿಲ್ಪಕಲೆ, ವಾಸ್ತುಶಿಲ್ಪ ಹೊತ್ತು ನಿಂತಿದೆ ದೇವಾಲಯ. ಈ ದೇವಾಲಯದ ಕುರಿತ ಕೆಲ ಆಸಕ್ತಿಕರ ವಿಷಯಗಳು ಇಲ್ಲಿವೆ..

ಕಲ್ಲಿನ ಆನೆಗಳು
ರಾಜ್ಯದ ಹಾಸನ ಜಿಲ್ಲೆಯಲ್ಲಿರುವ ಬೇಲೂರು ದೇವಾಲಯವು ಬೆಂಗಳೂರಿನಿಂದ 220 ಕಿಲೋಮೀಟರ್ ದೂರದಲ್ಲಿದೆ. ದೇವಾಲಯದ ಪ್ರವೇಶ ದ್ವಾರದಲ್ಲೇ ಸ್ವಾಗತಕ್ಕೆ ನಿಂತಿವೆ ಎರಡು ಸುಂದರ ಕಲ್ಲಿನ ಆನೆಗಳು(elephants). ಇದರ ವಾಸ್ತುಶಿಲ್ಪವು ಅದ್ಬುತವಾಗಿದೆ. ಈ ಪ್ರವೇಶ ಸ್ಥಳದಲ್ಲಿಯೇ ಸಣ್ಣ ಸಣ್ಣ ದೇಗುಲಗಳಿವೆ. ಪಕ್ಕದಲ್ಲೇ ಪುಷ್ಕರಣಿ ಇದೆ. ಹೊಯ್ಸಳರ ಆಡಳಿತ ಸಂದರ್ಭದಲ್ಲಿ ಜನರು ಈ ಪುಶ್ಕರಣಿಯಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದರು. 

Lord Shiva facts: ಶಿವನಿಗೆ ಇಬ್ಬರಲ್ಲ, ಒಂಬತ್ತು ಮಕ್ಕಳು, ಅದರಲ್ಲೊಬ್ಬಳು ಮಗಳು!

ಆಕರ್ಷಕ ಧ್ವಜಸ್ಥಂಭ(High Lamp Post)
ದೇವಾಲಯದ ಆವರಣದ ಮಧ್ಯಭಾಗದಲ್ಲಿ 42 ಮೀಟರ್ ಎತ್ತರದ ಕಲ್ಲಿನ ಧ್ವಜಸ್ಥಂಭವಿದ್ದು, ನಕ್ಷತ್ರಾಕಾರದ ಬುಡವನ್ನು ಹೊಂದಿದೆ. ಈ ಸ್ಥಂಭದ ವಿಶೇಷ ಎಂದರೆ, ಇದರ ಬುಡಕ್ಕೆ ಯಾವುದೇ ಆಧಾರಗಳಿಲ್ಲ. ಪಾಯ ಇಲ್ಲದೆ ನಿಂತಿದ್ದರೂ ಸಾವಿರಾರು ವರ್ಷಗಳ ಕಾಲದ ಪ್ರಕೃತಿ ಏರುಪೇರಿಗೆ ಕೊಂಚವೂ ವಿಚಲಿತವಾಗದೆ ನಿಂತಿರುವುದು ವಿಶೇಷ. 

ನಕ್ಷತ್ರಾಕಾರ(Star Shape)
ಕೇವಲ ಧ್ವಜಸ್ಥಂಭದ ಬುಡವಲ್ಲ, ಇಡೀ ದೇವಾಲಯವನ್ನೇ ನಕ್ಷತ್ರಾಕಾರದ ಅಡಿಗಟ್ಟಿನ ಮೇಲೆ ನಿರ್ಮಿಸಲಾಗಿದೆ. ಈ ನಕ್ಷತ್ರಾಕಾರವು ಹೊಯ್ಸಳ ವಾಸ್ತುಶಿಲ್ಪದ ಪ್ರತಿನಿಧಿಯಾಗಿದೆ. 

Government Job ಬೇಕಂದ್ರೆ ಹೀಗ್ ಮಾಡಿ..

ಪ್ರಾಣಿಗಳ ಕೆತ್ತನೆ(Carvings Of Animals)
ದೇವಾಲಯದ ಹೊರಾಂಗಣದಲ್ಲಿ ಕಲ್ಲಿನ ಕೆತ್ತನೆಗಳ ಸೌಂದರ್ಯ ವರ್ಣಿಸಲಸದಳವಾಗಿವೆ. ಬಹಳಷ್ಟು ಪ್ರಾಣಿಗಳನ್ನು ಈ ಕಲ್ಲಿನಲ್ಲಿ ಕಾಣಬಹುದು. ಇಲ್ಲಿ ಆನೆಗಳು, ಸಿಂಹಗಳು, ಕುದುರೆಗಳು ಬಲ, ಧೈರ್ಯ ಹಾಗೂ ವೇಗದ ಪ್ರತೀಕವಾಗಿ ಬಹಳಷ್ಟು ಕಡೆ ಕೆತ್ತನೆ ಕಂಡಿವೆ. ಇದಲ್ಲದೆ, ಪ್ರಾಣಿಗಳಿಗೆ ಸಂಬಂಧಿಸಿದ ಮಹಾಭಾರತ ಹಾಗೂ ರಾಮಾಯಣದ ಸನ್ನಿವೇಶಗಳನ್ನು ಕೂಡಾ ಚಿತ್ರಿಸಲಾಗಿದೆ. ಕೇವಲ ಆನೆಯ ಕೆತ್ತನೆಯೇ 600ಕ್ಕಿಂತ ಹೆಚ್ಚು ಇವೆ. 

ಹೊಯ್ಸಳ
ಸಿಂಹದೊಂದಿಗೆ ಹೋರಾಡುತ್ತಿರುವ ವ್ಯಕ್ತಿಯ ಚಿತ್ರ ಹೊಯ್ಸಳರ ಲಾಂಛನವಾಗಿದೆ. ಈ ಲಾಂಛನದ ಇತಿಹಾಸ ಹೀಗಿದೆ. ಒಂದು ದಿನ ಸಿಂಹವು ಹಳ್ಳಿಯೊಂದಕ್ಕೆ ನುಗ್ಗಿ ಜನರನ್ನು ಕೊಲ್ಲಲು ಬಂದಾಗ ಸಳನೆಂಬ ಸಾಮಾನ್ಯ ವ್ಯಕ್ತಿಯೊಬ್ಬ ಅದರೊಂದಿಗೆ ಹೋರಾಡಿ ಜಯಿಸುತ್ತಾನೆ. ಈ ಸಂದರ್ಭದಲ್ಲಿ ಅಲ್ಲಿ ಸೇರಿದ್ದ ಜನರೆಲ್ಲ ಹೊಯ್ ಸಳ ಎಂದು ಕೂಗುತ್ತಿರುತ್ತಾರೆ. ಅಂದರೆ ಅದನ್ನು ಕೊಲ್ಲು ಸಳ ಎಂದರ್ಥ. ಈ ಘಟನೆಯಿಂದಲೇ ಹೊಯ್ಸಳ ಸಾಮ್ರಾಜ್ಯ ಸೃಷ್ಟಿಯಾಯಿತು. 

ಮದನಿಕೆಯರು(Madanaikas)
ಬೇಲೂರು ಇಲ್ಲಿನ ಶಿಲಾಬಾಲಿಕೆಯರಿಗಾಗಿಯೇ ಹೆಚ್ಚು ಜನಪ್ರಿಯ. ದೇವಾಲಯದ ಗೋಡೆಗಳ ಮೇಲೆ ಬಹಳಷ್ಟು ಮದನಿಕೆಯರಿದ್ದು ಕಣ್ಮನ ಸೆಳೆಯುತ್ತಾರೆ. ಇವುಗಳಲ್ಲಿ ಅತಿ ಪ್ರಸಿದ್ಧಿ ಪಡೆದಾಕೆ ದರ್ಪಣ ಸುಂದರಿ. ಇದೇ ಅಲ್ಲದೆ, ನೃತ್ಯ ಮಾಡುತ್ತಿರುವ ಬಾಲೆಯರು, ಸಂಗೀತ ಪರಿಕರಗಳನ್ನು ನುಡಿಸುತ್ತಿರುವ ಯುವತಿಯರ ಶಿಲೆಗಳನ್ನು ಕಾಣಬಹುದಾಗಿದೆ. 

ಮೋಹಿನಿ
ಚೆನ್ನಕೇಶವ ಎಂದರ ಸುಂದರನಾದ ವಿಷ್ಣು ಎಂದರ್ಥ. ಇದು ವಿಷ್ಣುವಿನ ದೇವಾಲಯವಾಗಿದೆ. ಇಲ್ಲಿ ವಿಷ್ಣುವಿನ ಹೆಣ್ಣಿನ ರೂಪವಾದ ಮೋಹಿನಿಯ ಶಿಲಾಕೆತ್ತನೆ ಇದೆ. ಮೋಹಿನಿ ರೂಪದ ಸಣ್ಣ ಸಣ್ಣ ವಿವರಗಳನ್ನೂ ಕೆತ್ತನೆಯಲ್ಲಿ ಸೆರೆ ಹಿಡಿದಿರುವುದು ಇದರ ವಿಶೇಷ. 

click me!