Holy gangajal: ಗಂಗಾಜಲವನ್ನು ಮನೆಗೆ ತರುವ ಮುನ್ನ ಈ ವಿಷಯಗಳು ತಿಳಿದಿರಲಿ..

By Suvarna NewsFirst Published Dec 19, 2021, 4:36 PM IST
Highlights

ಗಂಗೆಯ ನೀರು ಹಿಂದೂಗಳಿಗೆ ಪರಮ ಪಾವನವಾದುದು. ಅದನ್ನು ಮನೆಯಲ್ಲಿಟ್ಟುಕೊಳ್ಳುವುದರಿಂದ ಹಲವು ಪ್ರಯೋಜನಗಳಿವೆ. ಹೀಗೆ ಗಂಗೆಯನ್ನು ಮನೆಗೆ ತರುವ ಮೊದಲು ಕೆಲ ನಿಯಮಗಳು ಗೊತ್ತಿರಲಿ.

ಗಂಗಾಜಲವೆಂದರೆ ಹಿಂದೂಗಳಿಗೆ ಅತಿ ಪವಿತ್ರವಾದುದು. ಸನಾತನ ಧರ್ಮದಲ್ಲಿ ಗಂಗಾ ನದಿಯ ಪಾತ್ರ ದೊಡ್ಡದು. ಪ್ರತಿ ಪೂಜೆಗೂ ಗಂಗೆಯಿದ್ದರೇನೇ ಶ್ರೇಷ್ಠ ಎನ್ನಲಾಗುತ್ತದೆ. ಗಂಗೆಯಲ್ಲಿ ಮಿಂದವರ ಸರ್ವ ಪಾಪಗಳೂ ಪರಿಹಾರ ಕಾಣುತ್ತವೆ, ಮೋಕ್ಷ ಸಿಗುತ್ತದೆ. ಮತ್ತೆ ಹುಟ್ಟು ಸಾವಿನ ಚಕ್ರಕ್ಕೆ ಸಿಕ್ಕಿಕೊಳ್ಳಬೇಕಿಲ್ಲ ಎಂಬ ನಂಬಿಕೆ ಇದೆ. ಅಲ್ಲದೆ, ಮನುಷ್ಯ ಜೀವನದ ಅಂತಿಮ ಪಯಣ ಆರಂಭಿಸುತ್ತಿದ್ದಾನೆಂಬ ಸುಳಿವು ಸಿಗುತ್ತಿದ್ದಂತೆ ಗಂಗಾ ಜಲ ಬಾಯಿಗೆ ಬಿಟ್ಟರೆ ಮೋಕ್ಷ ಪ್ರಾಪ್ತಿ ಎಂಬ ನಂಬಿಕೆಯೂ ಹಿಂದೂಗಳಲ್ಲಿದೆ. 

ಭಗೀರಥ ತಪಸ್ಸು
ರಾಜ ಭಗೀರಥನ ಪೂರ್ವಜರು ಸತ್ತು ಪಾತಾಳ ಸೇರಿರುತ್ತಾರೆ. ಆಗ ಪವಿತ್ರವಾದ ಗಂಗೆಯನ್ನು ಭೂಮಿಗೆ ತಂದು, ಪಾತಾಳದಲ್ಲಿರುವ ತನ್ನ ಪೂರ್ವಜರ ಬೂದಿಗೆ ಆಕೆಯ ಸ್ಪರ್ಶವಾಗುವಂತೆ ಮಾಡಿದರೆ ಅವರಿಗೆ ಮೋಕ್ಷ ದೊರಕುತ್ತದೆ ಎಂಬುದು ತಿಳಿಯುತ್ತದೆ. ನಂತರ ಭಗೀರಥ(Bhageerata) ಮಾಡಿದ ತಪಸ್ಸನ್ನು ಮೆಚ್ಚಿ ಸ್ವರ್ಗದಿಂದ ಭೂಮಿಗೆ ಇಳಿದು ಬಂದವಳು ಗಂಗೆ. ಶಿವನ ಪತ್ನಿ. ಅವಳನ್ನು ತಾಯಿ ಎಂದು ನಂಬಿ ನಡೆದವರನ್ನು ಎಂದಿಗೂ ಕೈ ಬಿಡುವವಳಲ್ಲ. 

ಗಂಗೆಯ ಉಪಯೋಗ
ಸನಾತನ ಧರ್ಮದ ಪ್ರಕಾರ, ಶತಶತಮಾನಗಳ ಹಿಂದಿನಿಂದಲೂ ಮನೆಯಲ್ಲಿ ಪ್ರತಿ ದಿನ ಬೆಳಗ್ಗೆ ಗಂಗೆಯ ನೀರನ್ನು ಸಿಂಪಡಿಸುವ ಕ್ರಮವಿದೆ. ಇದರಿಂದ ಮನೆಯಲ್ಲಿ ಸೇರಿರಬಹುದಾದ ನಕಾರಾತ್ಮಕ ಶಕ್ತಿಗಳು ಹಾಗೂ ವಾಸ್ತು ದೋಷಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. 

ಇಂಥ ಪವಿತ್ರ ಗಂಗೆಯಲ್ಲಿ ಎಲ್ಲರಿಗೂ ಸ್ನಾನ ಮಾಡುವ ಅವಕಾಶ ಸಿಗುವುದಿಲ್ಲ. ಹಾಗಾಗಿ, ಕಾಶಿ(Kashi)ಗೆ ಹೋಗಿ ಬಂದವರು ಗಂಗೆಯ ನೀರನ್ನು ತರುವುದಿದೆ. ಇದನ್ನು ಪ್ರತಿ ದಿನ ಸ್ನಾನ ಮಾಡುವ ನೀರಿನೊಂದಿಗೆ ಬೆರೆಸಿ ಉಪಯೋಗಿಸಲಾಗುತ್ತದೆ. ಅಲ್ಲದೆ, ದೇವರ ಕೋಣೆಯಲ್ಲಿಟ್ಟು ಪೂಜಿಸಿ, ಆಗಾಗ ಮನೆಯ ಎಲ್ಲೆಡೆ ಸಿಂಪಡಿಸಲಾಗುತ್ತದೆ. ಇದು ಮನೆಯನ್ನು ಶುದ್ಧ ಮಾಡುತ್ತದೆ. ಮನೆಯಲ್ಲಿ ವೃಥಾ ಜಗಳ, ಮುನಿಸುಗಳು ಹೆಚ್ಚಿದ್ದಾಗ, ವಾಸ್ತು ದೋಷದಿಂದ ಕೋಪ ಹೆಚ್ಚುತ್ತಿದ್ದರೆ, ನಕಾರಾತ್ಮಕ ಶಕ್ತಿಗಳಿಂದ ಮನೆಯ ಕಳೆ ಕಡಿಮೆಯಾಗಿದ್ದರೆ- ಗಂಗೆಯನ್ನು ಸಿಂಪಡಿಸಿದರೆ ಸಾಕು. 

Rudraksha guide: ರುದ್ರಾಕ್ಷಿ ಧರಿಸುವ ಮುನ್ನ ಈ ವಿಷಯಗಳು ಗೊತ್ತಿರಲಿ..

ಮಕ್ಕಳಿಗೆ ಭಯ ಬೀಳುವಂಥ ಕೆಟ್ಟ ಕನಸು(nightmare) ಪದೇ ಪದೆ ಬೀಳುತ್ತಿದ್ದರೆ, ಮಲಗುವ ಮೊದಲು ಹಾಸಿಗೆ ಮೇಲೆ ಗಂಗಾ ಜಲವನ್ನು ಸಿಂಪಡಿಸಿ. ಇದರಿಂದ ಮಗು(child) ಚೆನ್ನಾಗಿ ನಿದ್ರಿಸುತ್ತದೆ. 

ಮನೆಯಲ್ಲಿ ಪೂಜೆ ನಡೆಯುವಾಗ ದೇವರಿಗೆ ಜಲಾಭಿಷೇಕ ಮಾಡಲು ಗಂಗೆಯ ನೀರೇ ಸರ್ವಶ್ರೇಷ್ಠ. ಅದರಲ್ಲೂ ಪರಶಿವನ ಪೂಜೆಗೆ ಗಂಗೆ ಬೇಕೇಬೇಕು. ಗಂಗೆಯಿಂದ ಪೂಜಿಸಿ ಪರಶಿವನನ್ನು ಪ್ರಾರ್ಥಿಸಿದಾಗ ಆತ ಬೇಗ ಒಲಿಯುತ್ತಾನೆ, ಇಷ್ಟಾರ್ಥಗಳು ಸಿದ್ಧಿಸುತ್ತವೆ. 

ಈ ಎಲ್ಲ ಕಾರಣಗಳಿಗಾಗಿ ಗಂಗೆಯನ್ನು ಬಹಳಷ್ಟು ಜನರು ತಂದು ಮನೆಯಲ್ಲಿಟ್ಟುಕೊಳ್ಳುತ್ತಾರೆ. ಇಷ್ಟಕ್ಕೂ ಗಂಗಾಜಲದ ವಿಶೇಷ ಗುಣಗಳನ್ನು ವೈಜ್ಞಾನಿಕ ಸಂಶೋಧನೆಗಳೂ ಸಾಬೀತು ಪಡಿಸಿವೆ. ಇದರಲ್ಲಿರುವ ವಿಶೇಷ ವೈರಾಣುಗಳು ಹಲವು ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯಕವಾಗಿವೆ ಎಂದಿದ್ದಾರೆ ವಿಜ್ಞಾನಿಗಳು.  

Health Horoscope 2022: ಹೊಸ ವರ್ಷದಲ್ಲಿ ನಿಮ್ಮ ಆರೋಗ್ಯ ಹೀಗಿರಲಿದೆ..

ಇಷ್ಟೆಲ್ಲ ವಿಶೇಷವಾದ ಗಂಗೆಯನ್ನು ಮನೆಗೆ ತರುವ ಮುನ್ನ ಒಂದಿಷ್ಟು ನಿಯಮಗಳ ಕಡೆ ಗಮನ ಹರಿಸಬೇಕಿದೆ. ಅವೆಂದರೆ, 

  • ಗಂಗೆಯಲ್ಲಿ ಸ್ನಾನ ಮಾಡಲು ಹೋದರೆ ಅಥವಾ ಮನೆಯ ನೀರಿಗೆ ಗಂಗೆಯ ನೀರಿನ ಹನಿಗಳನ್ನು ಸೇರಿಸಿಕೊಂಡು ಸ್ನಾನ(bath) ಮಾಡುವುದಾದರೆ ಚಪ್ಪಲಿ ಧರಿಸಿರಕೂಡದು. 
  • ಗಂಗೆಯಲ್ಲಿ ನಿಂತು ಕೆಟ್ಟ ಮಾತುಗಳನ್ನಾಡಬಾರದು. ಕೆಟ್ಟ ಯೋಚನೆ ಮಾಡಬಾರದು. ಮತ್ತೊಬ್ಬರಿಗೆ ಬೈಯ್ಯಬಾರದು. 
  • ಗಂಗೆಯ ನೀರಲ್ಲಿ ಬಟ್ಟೆ ಒಗೆಯುವುದು ಸಲ್ಲದು.
  • ಗಂಗಾಜಲವನ್ನು ಮನೆಗೆ ತಂದ ಮೇಲೆ ಅಶುದ್ಧ ಸ್ಥಳಗಳಲ್ಲಿ ಇಡಬಾರದು. ಯಾವಾಗಲೂ ದೇವರ ಕೋಣೆಯಲ್ಲಿಯೇ ಇಡಬೇಕು. 
  • ಗಂಗೆಯ ನೀರನ್ನು ಮೆಟಲ್ ಪಾತ್ರೆ(metal container)ಯಲ್ಲಿಯೇ ಇಟ್ಟುಕೊಳ್ಳಬೇಕು. ಪ್ಲ್ಯಾಸ್ಟಿಕ್ ಬಾಟಲ್‌ನಲ್ಲಿಡುವುದು ಸಲ್ಲದು. 
click me!