ಈ ನಾಲ್ಕು ರಾಶಿಯವರು ಹೆಚ್ಚು ಸೂಕ್ಷ್ಮಮತಿಗಳು, ಯಾರಿವರು..?

By Suvarna News  |  First Published Jun 28, 2021, 12:36 PM IST

ರಾಶಿಚಕ್ರದ ಆಧಾರದ ಮೇಲೆ ಗುಣ, ಸ್ವಭಾವಗಳನ್ನು ತಿಳಿಯಬಹುದೆಂದು ಶಾಸ್ತ್ರ ಹೇಳುತ್ತದೆ. ವ್ಯಕ್ತಿಯ ಗುಣ ಮತ್ತು ಸ್ವಭಾವಗಳು ರಾಶಿಯ ಗುಣಗಳಿಂದ ಪ್ರಭಾವವನ್ನು ಪಡೆದಿರುತ್ತದೆ. ಕೆಲವು ರಾಶಿಯವರು ಕೋಪಿಷ್ಟರಾಗಿರುತ್ತಾರೆ. ಮತ್ತೆ ಕೆಲವರು ಅತ್ಯಂತ ಸೂಕ್ಷ್ಮ ಸ್ವಭಾವವನ್ನು ಹೊಂದಿರುತ್ತಾರೆ. ರಾಶಿ ಚಕ್ರದ ಹನ್ನೆರಡು ರಾಶಿಗಳಲ್ಲಿ ಈ ನಾಲ್ಕು ರಾಶಿಯವರು ಹೆಚ್ಚು ಸೂಕ್ಷ್ಮ ಸ್ವಭಾವವನ್ನು ಹೊಂದಿರುತ್ತಾರೆಂದು ಹೇಳಲಾಗುತ್ತದೆ. ಹಾಗಾದರೆ ಆ ರಾಶಿಗಳ ಬಗ್ಗೆ ತಿಳಿಯೋಣ...


ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿ ನಕ್ಷತ್ರ ಮತ್ತು ರಾಶಿಗಳಿಗೆ ವಿಶೇಷ ಗುಣಗಳಿರುತ್ತವೆ. ಅವುಗಳ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯ ಮತ್ತು ವರ್ತಮಾನದ ಆಗು-ಹೋಗುಗಳನ್ನು ತಿಳಿಯಬಹುದಾಗಿರುತ್ತದೆ.  ಒಂದು ಮಾರ್ಗವಾಗಿದೆ. ಹನ್ನೆರಡು ರಾಶಿಗಳು ಮತ್ತು ಇಪ್ಪತ್ತೇಳು ನಕ್ಷತ್ರಗಳ ಗುಣ- ಸ್ವಭಾವಗಳ  ಬಗ್ಗೆ ಶಾಸ್ತ್ರದಲ್ಲಿ ವರ್ಣಿಸಲಾಗಿದೆ. ಆಯಾ ರಾಶಿಗಳ ಗುಣ-ಸ್ವಭಾವಗಳು ವ್ಯಕ್ತಿಯ ವ್ಯಕ್ತಿತ್ವದಲ್ಲಿ ಪ್ರಭಾವವನ್ನು ಬೀರುತ್ತವೆ. ಕೆಲವು ರಾಶಿಯವರು ತುಂಬಾ ಜಿಪುಣರಾಗಿರುತ್ತಾರೆ, ಮತ್ತೆ ಕೆಲವರು ಹೆಚ್ಚು ಖರ್ಚು ಮಾಡುವ ಗುಣದವರಾಗಿರುತ್ತಾರೆ. 

ರಾಶಿಯ ಸ್ವಭಾವ ಅವುಗಳ ಅಧಿಪತಿ ಗ್ರಹಗಳಿಂದ ಸಹ ಪ್ರಭಾವಿತವಾಗಿರುತ್ತದೆ. ಹಾಗಾಗಿ ಕೆಲವು ರಾಶಿಯವರು ಒರಟು ಸ್ವಭಾವವನ್ನು ಹೊಂದಿದ್ದರೆ, ಇನ್ನು ಕೆಲವು ರಾಶಿಯವರು ಸೂಕ್ಷ್ಮಮತಿಗಳಾಗಿರುತ್ತಾರೆ. ಹಾಗಾದರೆ ಹೆಚ್ಚು ಸೂಕ್ಷ್ಮ ಸ್ವಭಾವವನ್ನು ಹೊಂದಿರುವ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ...

ಇದನ್ನು ಓದಿ: ಶುಕ್ರವಾರ ಇಂಥ ಕೆಲಸ ಮಾಡಲೇಬೇಡಿ, ಮಾಡಿದ್ರೆ ಧನ ಹಾನಿ..! 

ಮೇಷ ರಾಶಿ
ಪ್ರತಿ ವಿಷಯಕ್ಕೂ ಭಾವುಕರಾಗುವ ಸ್ವಭಾವ ಈ ರಾಶಿಯ ವ್ಯಕ್ತಿಗಳದ್ದು. ಮೇಷ ರಾಶಿಯವರು ಯಾವ ವಿಷಯಕ್ಕೆ ಭಾವುಕರಾಗುತ್ತಾರೆ ಎಂಬುದನ್ನು ಅರಿಯುವುದು ಹೆಚ್ಚು ಕಷ್ಟಕರವಾಗಿರುತ್ತದೆ. ಈ ವ್ಯಕ್ತಿ ತಮ್ಮ ಸಮಸ್ಯೆಗಳ ಬಗ್ಗೆ ಬೇಸರಿಸಿಕೊಳ್ಳುವುದಲ್ಲದೆ, ಇತರರ ತೊಂದರೆಗಳಿಗೂ ಮರುಗುತ್ತಾರೆ. ಮೇಷ ರಾಶಿಯ ವ್ಯಕ್ತಿಗಳು ಹತ್ತಿರದವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುತ್ತಾರೆ. ಹಾಗಾಗಿ ಅವರ ಕಷ್ಟಗಳನ್ನು ತಮ್ಮ ಕಷ್ಟಗಳೆಂದು ತಿಳಿದು ಸಹಾಯಕ್ಕೆ ಮುಂದಾಗುತ್ತಾರೆ. ಈ ರಾಶಿಯವರು ವ್ಯಕ್ತಿಗಳ ಕಷ್ಟ, ಕಾರ್ಪಣ್ಯಗಳಿಗೆ ಕರಗಿ ಬಿಡುತ್ತಾರೆ, ಇವರ ಈ ಸ್ವಭಾವವನ್ನು ಕೆಲವರು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾರೆ.

Tap to resize

Latest Videos


ಕರ್ಕಾಟಕ ರಾಶಿ
ಈ ರಾಶಿಯ ವ್ಯಕ್ತಿಗಳು ಹೆಚ್ಚು ಸೂಕ್ಷ್ಮ ಸ್ವಭಾವವನ್ನು ಹೊಂದಿರುತ್ತಾರೆ. ಹಾಗಾಗಿ ಕರ್ಕಾಟಕ ರಾಶಿಯವರ ಈ ಗುಣವನ್ನು ಹಲವರು ದುರುಪಯೋಗ ಪಡಿಸಿಕೊಳ್ಳುತ್ತಾರೆ. ನೋಡಲು ಹೆಚ್ಚು ಕಠಿಣ ಹೃದಯದವರಂತೆ ಕಂಡರೂ ಆಂತರ್ಯದಲ್ಲಿ ತುಂಬಾ ಮೃದು ಸ್ವಭಾವದವರು ಈ ವ್ಯಕ್ತಿಗಳು. ವ್ಯಕ್ತಿಗಳ ಯಾವ ಮಾತು ಇವರಿಗೆ ನೋವುಂಟು ಮಾಡುತ್ತದೆ ಎಂದು ತಿಳಿಯುವುದೇ ಕಷ್ಟವಾಗಿರುತ್ತದೆ. ಇತರರ ಮಾತಿನಿಂದ ಬೇಗ ಬೇಸರಗೊಳ್ಳುವ ವ್ಯಕ್ತಿತ್ವ ಇವರದ್ದು. ಕರ್ಕಾಟಕ ರಾಶಿಯವರು ತಮ್ಮವರಿಗಾಗಿ ಏನು ಬೇಕಾದರೂ ಮಾಡಲು ತಯಾರಿರುತ್ತಾರೆ. ಹನ್ನೆರಡು ರಾಶಿಗಳಲ್ಲಿ ಅತ್ಯಂತ ಹೆಚ್ಚು ಸೂಕ್ಷ್ಮ ಸ್ವಭಾವವನ್ನು ಹೊಂದಿರುವ ರಾಶಿಗಳಲ್ಲಿ ಕರ್ಕಾಟಕ ರಾಶಿಯು ಒಂದೆಂದು ಹೇಳಲಾಗುತ್ತದೆ.

ಇದನ್ನು ಓದಿ: ಈ ನಾಲ್ಕು ರಾಶಿಯವರು ಮಾತಿನಿಂದಲೇ ಮೋಡಿ ಮಾಡುವರು…! 

ಕನ್ಯಾ ರಾಶಿ
ಕನ್ಯಾ ರಾಶಿಯ ವ್ಯಕ್ತಿಗಳು ಭಾವನಾತ್ಮಕ ಜೀವಿಗಳೆಂದು ಹೇಳಲಾಗುತ್ತದೆ. ಈ ವ್ಯಕ್ತಿಗಳು ಸೂಕ್ಷ್ಮ ಸ್ವಭಾವವನ್ನು ಹೊಂದಿರುತ್ತಾರೆ. ಆದರೂ ಇವರಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಪರಿ ತಿಳಿದಿರುವುದಿಲ್ಲ. ಇತರರ ಎದುರಿಗೆ ತಮ್ಮ ನೋವು ನಲಿವುಗಳನ್ನು ಹೇಳಿಕೊಳ್ಳುವುದು ಇವರಿಗೆ ಕಷ್ಟದ ಕೆಲಸ. ಸಣ್ಣ ಪುಟ್ಟ ವಿಷಯಗಳನ್ನು ಆಳವಾಗಿ ಯೋಚಿಸಿ ಬೇಸರಗೊಳ್ಳುತ್ತಾರೆ. ಅಷ್ಟೇ ಅಲ್ಲದೆ ಅದೇ ವಿಷಯವನ್ನು ಮತ್ತೆ ಮತ್ತೆ ಯೋಚಿಸಿ ಕೊರಗುತ್ತಾರೆ. ಸುಮ್ಮನೆ ಬೇಸರದಿಂದ ಇರುವುದು, ಖಿನ್ನರಾಗಿ ಕುಳಿತುಕೊಳ್ಳುವುದು, ಅಳುತ್ತಾ ಇರುವುದು ಈ ರಾಶಿಯವರ ಜೀವನದ ಒಂದು ಭಾಗವೇ ಆಗಿರುತ್ತದೆ. ಈ ರಾಶಿಯ ಹಲವರು ಈ ಗುಣಗಳನ್ನು ಬೇರೆಯವರ ಅನುಕಂಪವನ್ನು ಪಡೆಯಲು ಮತ್ತು ತಮ್ಮ ವಿಚಾರಗಳನ್ನು ಇತರರಿಗೆ ಒಪ್ಪಿಸುವ ಪ್ರಯತ್ನಕ್ಕೆ ಸಹ ಬಳಸಿಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ.

ಇದನ್ನು ಓದಿ: ಗುರುವಾರ ಹೀಗೆ ಮಾಡಿ ಜೀವನ-ಉದ್ಯೋಗದಲ್ಲಿ ಯಶಸ್ಸು ಗಳಿಸಿ..! 

ಮೀನ ರಾಶಿ
ಈ ರಾಶಿಯ ವ್ಯಕ್ತಿಗಳು ಅಗತ್ಯಕ್ಕಿಂತ ಹೆಚ್ಚು ಸೂಕ್ಷ್ಮವಾಗಿರುತ್ತಾರೆ. ಹೃದಯದಲ್ಲಿ ಯಾರಿಗಾದರೂ ಜಾಗ ಕೊಟ್ಟರೆಂದರೆ ಮುಗಿಯಿತು, ಪೂರ್ತಿ ಜೀವನ ಆ ವ್ಯಕ್ತಿಯ ಬಗ್ಗೆಯೇ ಯೋಚಿಸುತ್ತಿರುತ್ತಾರೆ. ಸಂಬಂಧಗಳ ಬಾಂಧವ್ಯ ಗಟ್ಟಿಯಾಗಿರಲು ಪ್ರಯತ್ನಿಸುತ್ತಲೇ ಇರುತ್ತಾರೆ. ಮೀನ ರಾಶಿಯವರ  ಉತ್ತಮ ಗುಣಗಳಿಗೆ ಬೆಲೆ ಕೊಡದೆ, ಇವರ ಮನಸ್ಸಿಗೆ ನೋವುಂಟು ಮಾಡಿದರೆಂದರೆ, ಅದೇ ಯೋಚನೆಯಲ್ಲಿ ಖಿನ್ನರಾಗುವ ಸ್ವಭಾವ ಇವರದ್ದಾಗಿರುತ್ತದೆ.

click me!